ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ದೆಹಲಿ ಪೊಲೀಸರಿಂದ ಅರೆಸ್ಟ್ ಆದ ಬೆಂಗಳೂರಿನ ವ್ಯಕ್ತಿ!!

|

ಫೇಸ್‌ಬುಕ್‌ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ನಿಂದಿಸಿದ್ದಕ್ಕೆ ಪೊಲೀಸ್ ಠಾಣೆ ಹತ್ತಿದ ಪ್ರಕರಣ ಮಾಸುವ ವೇಳೆಗೆ ಇಂತಹುದೇ ಮತ್ತೊಂದು ಪ್ರಕರಣ ದೇಶದಲ್ಲಿ ನಡೆದಿದೆ. ಫೇಸ್‌ಬುಕ್‌ನಲ್ಲಿ ರಾಷ್ಟ್ರಪತಿಗಳ ನಕಲಿ ಪತ್ರವೊಂದನ್ನು ಪೋಸ್ಟ್ ಮಾಡಿದ್ದಕ್ಕಾಗಿ ಪೊಲೀಸರು ಬೆಂಗಳೂರಿನ ಮ್ಯಾನೇಜ್‌ಮೆಂಟ್ ಕಾಲೇಜಿನ ನಿರ್ದೇಶಕನೋರ್ವರ್ವನನ್ನು ಬಂಧಿಸಿದ್ದಾರೆ.

ಕೆಲವೇ ದಿನಗಳ ಅಂತರದಲ್ಲಿ ಫೇಸ್‌ಬುಕ್ ಕಾರ್ಯಚಟುವಟಿಕೆಯಿಂದಾಗಿ ಜೈಲು ಸೇರರುತ್ತಿರುವ ಎರಡನೇ ಪ್ರಕರಣ ಇದಾಗಿದ್ದು, 40 ರಿಂದ 45ನೇ ವಯಸ್ಸಿನ ಹರಿ ಕೃಷ್ಣ ಮಾರಮ್ ಎಂಬುವವರನ್ನು ದೆಹಲಿ ಸೈಬರ್ ಕ್ರೈಮ್ ಪೊಲೀಸರು ಬಂದಿಸಿದ್ದಾರೆ. ಈ ಪ್ರಕರಣದ ಮತ್ತೊಂದು ಅಚ್ಚರಿ ವಿಷಯ ಎಂದರೆ, ಈ ಪ್ರಕರಣ ದಾಖಲಾಗಿ ಇಲ್ಲಿಗೆ ಒಂದು ವರ್ಷ ಕಳೆದಿದೆ.

ಫೇಸ್‌ಬುಕ್‌ನಲ್ಲಿ ಪೋಸ್ಟ್:  ದೆಹಲಿ ಪೊಲೀಸರಿಂದ ಅರೆಸ್ಟ್ ಆದ ಬೆಂಗಳೂರಿನ ವ್ಯಕ್ತಿ!

ಕಳೆದ ವರ್ಷವೇ ರಾಷ್ಟ್ರಪತಿಗಳ ಪತ್ರಿಕಾ ಕಾರ್ಯದರ್ಶಿ ಈ ಬಗ್ಗೆ ದೂರು ದಾಖಲಿಸಿದ್ದರೂ ಸಹ, ಹರಿ ಕೃಷ್ಣ ಮಾರಮ್ ಅಮೆರಿಕಾದಲ್ಲಿ ವಾಸವಾಗಿದ್ದರಿಂದ ಅವನನ್ನು ಬಂಧಿಸಲು ವಿಳಂಭವಾಗಿತ್ತು. ಆದರೆ,ಮಾರಮ್ ಈ ತಿಂಗಳು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿದೆ. ಹಾಗಾಗಿ, ಫೇಸ್‌ಬುಕ್ ಬಳಸುವ ಮುನ್ನ ನೀವು ಈ ಎಚ್ಚರಿಕೆಗಳನ್ನು ಪಾಲಿಸುವುದನ್ನು ಮರೆಯದಿರಿ.

ಸೂಕ್ಷ್ಮ ವಿಷಯದ ಚರ್ಚೆ!

ಸೂಕ್ಷ್ಮ ವಿಷಯದ ಚರ್ಚೆ!

ಸೂಕ್ಷ್ಮ ವಿಷಯದ ಮೇಲೆ ಸಾರ್ವಜನಿಕ ಚರ್ಚೆ ನಡೆಯುತ್ತಿದ್ದರೆ, ಪ್ರಚೋದನಾಕಾರಿ ಕಾಮೆಂಟ್‌ಗಳನ್ನು ಲೈಕ್ ಮಾಡದಿರಿ. ಯಾಕೆಂದರೆ, ಬೇರೆಯವರು ಮಾಡುತ್ತಿದ್ದರೆ ಅದನ್ನು ಬಿಟ್ಟುಬಿಡಿ. ಒಂದು ಕಾಮೆಂಟ್ ವ್ಯಕ್ತಿಯನ್ನು ಕಂಬಿ ಹಿಂದೆ ತಳ್ಳಬಹುದು ಎಂಬುದನ್ನು ಮರೆಯಬೇಡಿ. ಒಂದು ಲೈಕ್ ನಿಂದಾಗಿ ಪೊಲೀಸರು ನಿಮ್ಮ ಮನೆಗೆ ಸಹ ಬರಬಹುದು.

ಧರ್ಮ, ಜಾತಿಯ ವಿಷಯಗಳು!

ಧರ್ಮ, ಜಾತಿಯ ವಿಷಯಗಳು!

ಫೇಸ್‌ಬುಕ್ ಅಥವಾ ಬೇರೆ ಯಾವುದೇ ಜಾಲತಾಣಗಳಲ್ಲಿ ಯಾವುದೇ ಧರ್ಮ, ಜಾತಿಯ ವಿಷಯಗಳ ಬಗ್ಗೆ ತೆಗಳಿ, ಅವಮಾನಿಸುವ ಫೋಟೋ ಅಥವಾ ಕಮೆಂಟ್ ಹಾಕದಿರಿ. ಬಾರತದಂತಹ ವೈವಿಧ್ಯಮಯ ದೇಶದಲ್ಲಿ ಇಂತಹ ಸೂಕ್ಷ್ಮ ವಿಚಾರಗಳು ಪ್ರಭಾವ ಬೀರುತ್ತವೆ. ಇದರಿಂದ ನೀವು ಜೈಲು ಪಾಲಾಗುವುದು ಆಶ್ಚರ್ಯವೇನಿಲ್ಲ.

ಮಾನಸಿಕವಾಗಿ ಗಟ್ಟಿಯಾಗಿರಿ.!

ಮಾನಸಿಕವಾಗಿ ಗಟ್ಟಿಯಾಗಿರಿ.!

ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತ ವ್ಯಕ್ತಿ ನಿಮ್ಮ ಮನಸ್ಸನ್ನು ಹಾಳುಮಾಡುವಂತಹ ಬರವಣಿಗೆಗಳನ್ನು ಹಾಕಬಹುದು. ಅಂತಹುಗಳನ್ನು ನಿರ್ಲಕ್ಷಿಸಿ ಅವರನ್ನು ಬ್ಲಾಕ್ ಮಾಡಿಬಿಡಿ. ನಿಮ್ಮನ್ನು ಪ್ರಚೋದಿಸುವ ವಿಷಯಗಳಿಂದ ದೂರವಿದ್ದುಬಿಡಿ. ನೀವು ಪೋಸ್ಟ್ ಮಾಡುವಾಗ ಸ್ವಲ್ಪ ಆಲೋಚನೆ ಮಾಡಿ ಪೋಸ್ಟ್‌ ಮಾಡಿ.

ಫೇಸ್‌ಬುಕ್‌ನಲ್ಲಿ ವ್ಯಕ್ತಿತ್ವ

ಫೇಸ್‌ಬುಕ್‌ನಲ್ಲಿ ವ್ಯಕ್ತಿತ್ವ

ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿ ಬದಲಾಗುತ್ತಿರುವ ಈ ಫೇಸ್‌ಬುಕ್‌ನ್ನು ಎಷ್ಟು ಎಚ್ಚರದಿಂದ ಬಳಸುತ್ತೇವೋ ಅಷ್ಟು ಒಳ್ಳೆಯದು.ಫೇಸ್‌ಬುಕ್‌ ನಮ್ಮ ಜೀವನದಲ್ಲಿ ಭಾರೀ ಪ್ರಭಾವ ಬೀರುವ ಹೊಸ ಮಾಧ್ಯಮವಾಗಿ ರೂಪುಗೊಂಡಿದೆ. ಫೇಸ್‌ಬುಕ್‌ ಮೂಲಕ ಎಲ್ಲರಿಗೂ ನಿಮ್ಮ ವ್ಯಕ್ತಿತ್ವದ ದರ್ಶನವಾಗುತ್ತದೆ. ಹಾಗಾಗಿ, ಮಾನ ಕಳೆದುಕೊಳ್ಳುವ ಕೆಲಸ ಮಾಡಬೇಡಿ.

ಅನ್‌ಫ್ರೆಂಡ್‌ ಆಗಿಬಿಡಿ!

ಅನ್‌ಫ್ರೆಂಡ್‌ ಆಗಿಬಿಡಿ!

ಒಬ್ಬ ವ್ಯಕ್ತಿಯ ಮನಸ್ಥಿತಿ, ಗುಣ, ವರ್ತನೆ, ಜ್ಞಾನ ಎಂಥದ್ದು ಎಂದು ನೋಡಲು ಅವರ ಫೇಸ್‌ಬುಕ್ ಅಕೌಂಟ್ ನೋಡಿದರೆ ಸಾಕು. ಹಾಗಾಗಿ, ನಿಮ್ಮ ಫೇಸ್‌ಬುಕ್ ಗೆಳೆಯರಲ್ಲಿ ಯಾರಾದರೂ ನಿಮ್ಮನ್ನು ಪ್ರಚೋದಿಸುವಂತವರು ಇದ್ದರೆ ಅವರನ್ನು ಅನ್‌ಫ್ರೆಂಡ್ ಮಾಡಿಬಿಡಿ. ಆಗ ಅವರು ಮಾಡುತ್ತಿರುವ ಫೇಸ್‌ಬುಕ್ ಕಮೆಂಟ್‌ಗಳು ನಿಮಗೆ ಕಾಣಿಸುವುದಿಲ್ಲ.

 ಫೇಸ್‌ಬುಕ್ ಅಂದರೆ ನೀವೇ!!

ಫೇಸ್‌ಬುಕ್ ಅಂದರೆ ನೀವೇ!!

ಇಂದಿನ ದಿನದಲ್ಲಿ ಹೊಸದಾಗಿ ಕೆಲಸ ಕೊಡುವವರು ಫೇಸ್‌ಬುಕ್‌ ಅಕೌಂಟ್‌ನ್ನು ನೋಡಿ ಕೆಲಸ ಕೊಡಬಹುದು. ಮದುವೆ ಸಂದರ್ಭದಲ್ಲಿ ಹುಡುಗ ಅಥವಾ ಹುಡುಗಿಯ ಮನೆಯವರು ಫೇಸ್‌ಬುಕ್‌ ನೋಡಿ ನಿರ್ಧಾರ ಕೈಗೊಳ್ಳಬಹುದು. ಇಂತಹ ಕಾಲದಲ್ಲಿ ನೀವು ಫೇಸ್‌ಬುಕ್‌ನ್ನು ಬಳಸುವಾಗ ಎಚ್ಚರದಿಂದ ಬಳಸುವುದು ಕೂಡ ಅತಿಮುಖ್ಯ.!

Most Read Articles
Best Mobiles in India

English summary
The accused, Hari Krishna Maram, aged between 45-50, was in the US for more than a year but returned to Bengaluru this month and was arrested by Cyber Crime Cell of Delhi Police. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more