ಪ್ರಿಯತಮೆಯನ್ನೇ ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟ ಭೂಪ..! ಶಾಕಿಂಗ್ ಟ್ವಿಸ್ಟ್‌ ಏನು ಗೊತ್ತಾ..?

|

ಪ್ರೀತಿ ನಿರಾಕರಿಸದಳೆಂದು ಪ್ರಿಯತಮೆಯನ್ನು ಕೊಂದಿರುವ, ಹಲ್ಲೆ ಮಾಡಿರುವ, ಮದುವೆ ನಿಲ್ಲಿಸಿರುವ ಘಟನೆಗಳನ್ನು ನಾವೆಲ್ಲಾ ಬಹಳಷ್ಟು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಭೂಪ ಪ್ರಿಯತಮೆಯನ್ನು ಆನ್‌ಲೈನ್‌ನ ಇಕಾಮರ್ಸ್‌ ಸೈಟ್‌ ಒಂದರಲ್ಲಿ ಮಾರಾಟಕ್ಕಿಟ್ಟಿದ್ದಾನೆ. ಆದರೆ, ಈ ವ್ಯಾಪಾರಕ್ಕೆ ಪ್ರೀತಿಯ ನಿರಾಕರಣೆಯಂತೂ ಕಾರಣ ಅಲ್ಲ. ಆಗಿದ್ರೇ ಯಾವುದು ಕಾರಣ ಅಂತಿರಾ ಮುಂದೆ ನೋಡಿ.

ಪ್ರಿಯತಮೆಯನ್ನೇ ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟ ಭೂಪ, ಟ್ವಿಸ್ಟ್‌ ಏನು ಗೊತ್ತಾ..?

ಹೌದು, Metro UK ವರದಿ ಮಾಡಿರುವಂತೆ ಡೇಲ್‌ ಲೀಕ್ಸ್‌ ಎಂಬಾತ ತನ್ನ ಗೆಳತಿ ಕೆಲ್ಲಿ ಗ್ರೀವ್ಸ್‌ eBay ಸೈಟ್‌ನಲ್ಲಿ ಮಾರಾಟಕ್ಕಿಟ್ಟಿದ್ದ. ಸೈಟ್‌ನಲ್ಲಿ ಮಾರಾಟದ ಕುರಿತು ಅಪ್‌ಡೇಟ್‌ ಮಾಡಿದ 24 ಗಂಟೆಗಳಲ್ಲಿ 81,000 ವೀಕ್ಷಣೆಯನ್ನು ಪಡೆದಿದೆ. ಮತ್ತು 100 ಬಿಡ್‌ಗಳಿಂದ, 70,200 ಯುರೋ ಮೌಲ್ಯವನ್ನು ಕೆಲ್ಲಿ ಗ್ರೀವ್ಸ್‌ ತಲುಪಿದ್ದಾಳೆ.

ವಿವರಣೆಯಲ್ಲಿ ಏನೀತ್ತು ಗೊತ್ತಾ..?

ವಿವರಣೆಯಲ್ಲಿ ಏನೀತ್ತು ಗೊತ್ತಾ..?

ಡೇಲ್‌ ಲೀಕ್ಸ್‌ ಕೆಲ್ಲಿ ಗ್ರೀವ್ಸ್‌ನ್ನು eBay ಸೈಟ್‌ನಲ್ಲಿ ಮಾರಾಟಕ್ಕಿಟ್ಟಿದ್ದು ಒಂದೇಡೆಯಾದರೆ, ಅಲ್ಲಿ ಬರೆದಿರುವ ವಿವರಣೆ ಮತ್ತೊಂದು ರೀತಿಯದ್ದಾಗಿತ್ತು. ಸೇಕೆಂಡ್‌ ಹ್ಯಾಂಡ್‌ ಕಾರನ್ನು ಮಾರಾಟಕ್ಕಿಟ್ಟಂತೆ ವಿವರಣೆಯನ್ನು ಡೇಲ್‌ ಲೀಕ್ಸ್‌ ಬರೆದಿದ್ದ. ಅಚ್ಚುಕಟ್ಟಾಗಿದ್ದು, ಯಾವುದೇ ಗಂಭೀರ ಹಾನಿಯುಂಟಾಗಿಲ್ಲ. ಆದರೆ, ಬಳಸಲ್ಪಟ್ಟಿದ್ದಾಳೆ ಎಂದು ಬರೆದಿರುವುದು ಕಾಣುತ್ತದೆ. ["Fairly tidy but close up shows signs of wear. The rear end leaks a bit but nothing that can't be plugged. No serious damage but you can see she's been used,"]

ಸಾವಿರಾರು ಮೆಸೇಜ್‌ಗಳು

ಸಾವಿರಾರು ಮೆಸೇಜ್‌ಗಳು

eBay ಸೈಟ್‌ನಲ್ಲಿ ಕೆಲ್ಲಿ ಗ್ರೀವ್ಸ್‌ ಕುರಿತು ಅಪ್‌ಡೇಟ್‌ ಮಾಡಿದ ನಂತರ ಡೇಲ್‌ ಲೀಕ್ಸ್‌ಗೆ ಸಾವಿರಕ್ಕಿಂತಲೂ ಹೆಚ್ಚು ಸಂದೇಶಗಳು ಬಂದಿವೆ. ಕೆಲವೊಂದು ಖರೀದಿದಾರರು ಕೆಲ್ಲಿಯನ್ನು ಡ್ರೈವ್‌ಗೆ ತೆಗೆದುಕೊಂಡು ಹೋಗಬಹುದಾ ಎಂದು ಸಹ ಕೇಳಿರುವುದು ನೆಟ್ಟಿಗರ ಉತ್ಸಾಹವನ್ನು ತೋರಿಸುತ್ತದೆ.

ಹಿಂದೆ ಎಷ್ಟು ಮಾಲೀಕರಿದ್ದರು..?

ಹಿಂದೆ ಎಷ್ಟು ಮಾಲೀಕರಿದ್ದರು..?

ಒಬ್ಬ ಖರೀದಿದಾರ "ನಾನು ಬಿಡ್ ಸೈನ್ ಇನ್ ಮಾಡಲು ಸಾಕಷ್ಟು ಆಸಕ್ತಿ ಹೊಂದಿದ್ದೇನೆ. ಆದರೆ, ಅವಳು ಹಿಂದೆ ಎಷ್ಟು ಮಾಲೀಕರನ್ನು ಹೊಂದಿದ್ದಾಳೆ ಎಂದು ನೀವು ಹೇಳುತ್ತೀರಾ..? ಮತ್ತು ಅವಳ ಸೇವೆಯ ಇತಿಹಾಸ ಯಾವುದು?" ಎಂದು ಕೇಳಿದ್ದಾನೆ.

ಎಚ್ಚರಿಕೆಯನ್ನು ನೀಡಿದ ನೆಟ್ಟಿಗರು

ಎಚ್ಚರಿಕೆಯನ್ನು ನೀಡಿದ ನೆಟ್ಟಿಗರು

ಕೆಲವು ಸಾಮಾಜಿಕ ಮಾಧ್ಯಮದ ಬಳಕೆದಾರರು ಇದನ್ನು ಗಂಭೀರ ಅಪರಾಧ ಎಂದು ಎಚ್ಚರಿಕೆಯನ್ನು ಸಹ ನೀಡಿದ್ದಾರೆ. ಆದರೆ, ಇದಕ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಡೇಲ್ ಮತ್ತು ಕೆಲ್ಲಿ ಈ ವಿಷಯದ ಮೂಲಕ ಬಹಳ ಸಂತಸ ಪಟ್ಟಿದ್ದಾರೆ ಎಂಬುದು ಸಹ ನಿಜ.

ಪೋಸ್ಟ್‌ ಅಳಿಸಿದ eBay

ಪೋಸ್ಟ್‌ ಅಳಿಸಿದ eBay

ಮಾನವನ ದೇಹ ಭಾಗಗಳು ಮತ್ತು ಅವಶೇಷಗಳನ್ನು ಮಾರಾಟ ಮಾಡಲು ಅನುಮತಿಯಿಲ್ಲದ ಕಾರಣ eBay ಸೈಟ್‌ ಡೆಲ್‌ ಲೀಕ್ಸ್‌ ಹಾಕಿದ ಪೋಸ್ಟ್‌ನ್ನು ಶೀಘ್ರದಲ್ಲಿಯೇ ತೆಗೆದುಹಾಕಿದೆ.

ಕಾರಣ ಏನು ಗೊತ್ತಾ..?

ಕಾರಣ ಏನು ಗೊತ್ತಾ..?

ಡೇಲ್‌ ತನ್ನ ಗೆಳತಿ ಕೆಲ್ಲಿ ಗ್ರೀವ್ಸ್‌ನ್ನು eBay ಸೈಟ್‌ನಲ್ಲಿ ಮಾರಾಟಕ್ಕಿಟ್ಟಿದ್ದು, ಯಾಕೆಂದರೆ ಸವಾರಿ ಅಂಗಡಿಯಲ್ಲಿ ಏನೋ ಸಣ್ಣ ಅಸಮಧಾನ ಉಂಟಾಗಿದೆ. ಅದಕ್ಕೆ ಪ್ರತಿಕಾರ ತೆಗೆದುಕೊಳ್ಳಲು ಡೇಲ್‌ ಗೆಳತಿ ಕೆಲ್ಲಿಯನ್ನು eBay ಸೈಟ್‌ನಲ್ಲಿ ಮಾರಾಟಕ್ಕಿಟ್ಟು, ವಿವರಣೆಯಲ್ಲಿ ಬಳಸಿದ ಕಾರು ಎಂದು ಬರೆದಿದ್ದನು.

ಮಾರಾಟಕ್ಕಿಟ್ಟು ನಗುತ್ತಿದ್ದ ಡೇಲ್‌

ಮಾರಾಟಕ್ಕಿಟ್ಟು ನಗುತ್ತಿದ್ದ ಡೇಲ್‌

"ಕೆಲ್ಲಿಯನ್ನು eBayನಲ್ಲಿ ಮಾರಾಟಕ್ಕಿಟ್ಟ ನಂತರ ನಾನು ನಗುತ್ತಿದ್ದೆ. ಆಗ ಕೆಲ್ಲಿ ಯಾಕೆ ನಗುತ್ತಿದಿಯಾ ಎಂದು ಕೇಳಿದಳು. ನಾನು ನಿನ್ನನ್ನು eBay ಸೈಟ್‌ನಲ್ಲಿ ಮಾರಾಟ ಮಾಡಲು ಬಯಸುತ್ತಿದ್ದೇನೆ ಎಂದು ಹೇಳಿದೆ. ಅವಳು, ಮೊದಲಿಗೆ ನನ್ನನ್ನು ಯಾರು ನೋಡಲ್ಲ ಎಂದುಕೊಂಡಿದ್ದಳು" ಎಂದು ಡೇಲ್‌ ಹೇಳಿದ್ದಾನೆ.

ಮಧ್ಯಾಹ್ನ ಮಾರಾಟ, ಸಂಜೆ ಭೋಜನ

ಮಧ್ಯಾಹ್ನ ಮಾರಾಟ, ಸಂಜೆ ಭೋಜನ

ಮಧ್ಯಾಹ್ನ eBay ಸೈಟ್‌ನಲ್ಲಿ ಕೆಲ್ಲಿಯನ್ನ ಮಾರಾಟಕ್ಕಿಟ್ಟಿದ್ದ ಡೇಲ್. ಇಬ್ಬರೂ ಸೇರಿ ಸಂಜೆ ಭೋಜನಕ್ಕೆ ತೆರಳಿದ್ದಾರೆ. ಇದರಿಂದ ಇಬ್ಬರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದಿದ್ದಾರೆ. ಆದರೆ, ಯುರೋಪ್‌, ಅಮೇರಿಕಾ, ಆಸ್ಟ್ರೇಲಿಯಾ ಮತ್ತೀತರ ಕಡೆಗಳಿಂದ ಸಂದೇಶಗಳು ಬಹಳಷ್ಟು ಬಂದಿವೆ ಎಂದು ಡೇಲ್ ಹೇಳಿದ್ದಾನೆ.

Most Read Articles
Best Mobiles in India

English summary
Man puts up girlfriend for sale on eBay and her price reaches £70,200. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more