ಫೇಸ್‌ಬುಕ್‌ನಲ್ಲಿ ಮುಖ್ಯಮಂತ್ರಿಯನ್ನು ನಿಂಧಿಸಿದಕ್ಕೆ ಬಂಧನ!..ನೀವು ಹುಷಾರು!!

|

ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕುಡ್ಲಾ ಟ್ರೋಲ್ಸ್ ಎಂಬ ಫೇಸ್‌ಬುಕ್ ಪೇಜ್ ಅಡ್ಮಿನ್ ಪ್ರಶಾಂತ್ ಪೂಜಾರಿ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆತನ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುತಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ನಿಂದಿಸಿ ಕೆಟ್ಟ ಬರಹವಿರುವ ಪೋಸ್ಟ್ ಹಾಕಿದ್ದ ಆರೋಪದ ಮೇರೆಗೆ ಈತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಭಾರತೀಯ ಅಪರಾಧ ಕಾಯ್ದೆ ಸೆಕ್ಷನ್ 153 ಹಾಗೂ 504ರ ಅಡಿಯಲ್ಲಿ ಯುವಕನ ಮೇಲೆ ಪ್ರಕರಣ ದಾಖಲಿಸಿದ್ದು, ಸಾಮಾಜಿಕ ಮಾಧ್ಯಮಗಳು ಅವಹೇಳನ ಮಾಡುವುದಕ್ಕಲ್ಲ ಎಂಬುದನ್ನು ಪೊಲೀಸರು ತಿಳಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಮುಖ್ಯಮಂತ್ರಿಯನ್ನು ನಿಂಧಿಸಿದಕ್ಕೆ ಬಂಧನ!..ನೀವು ಹುಷಾರು!!

ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ನಿಂದನೆ, ಕೆಸರಾಟದಂತಹ ಘಟನೆಗಳು ಹೆಚ್ಚಾಗುತ್ತಿರುವ ವೇಳೆಯಲ್ಲಿಯೇ ಈ ಯುವಕನ ಬಂಧನ ಎಲ್ಲರಿಗೂ ಒಂದು ಪಾಠವಾಗಿದೆ. ಜಾಲತಾಣಗಳನ್ನು ಎಚ್ಚರಿಕೆಯಿಂದ ಬಳಸದೆ ಹೋದರೆ ಹೀಗೆ ಪೊಲೀಸರ ಸೆರೆಗೆ ಸಿಲುಕಬೇಕಾಗುತ್ತದೆ. ಹಾಗಾಗಿ, ಫೇಸ್‌ಬುಕ್‌ ಬಳಸುವಾಗ ಯಾವ ರೀತಿ ಎಚ್ಚರದಲ್ಲಿರಬೇಕು ಎಂಬುದನ್ನು ಮುಂದೆ ತಿಳಿಯಿರಿ.

ಸೂಕ್ಷ್ಮ ವಿಷಯದ ಚರ್ಚೆ!

ಸೂಕ್ಷ್ಮ ವಿಷಯದ ಚರ್ಚೆ!

ಸೂಕ್ಷ್ಮ ವಿಷಯದ ಮೇಲೆ ಸಾರ್ವಜನಿಕ ಚರ್ಚೆ ನಡೆಯುತ್ತಿದ್ದರೆ, ಪ್ರಚೋದನಾಕಾರಿ ಕಾಮೆಂಟ್‌ಗಳನ್ನು ಲೈಕ್ ಮಾಡದಿರಿ. ಯಾಕೆಂದರೆ, ಬೇರೆಯವರು ಮಾಡುತ್ತಿದ್ದರೆ ಅದನ್ನು ಬಿಟ್ಟುಬಿಡಿ. ಒಂದು ಕಾಮೆಂಟ್ ವ್ಯಕ್ತಿಯನ್ನು ಕಂಬಿ ಹಿಂದೆ ತಳ್ಳಬಹುದು ಎಂಬುದನ್ನು ಮರೆಯಬೇಡಿ. ಒಂದು ಲೈಕ್ ನಿಂದಾಗಿ ಪೊಲೀಸರು ನಿಮ್ಮ ಮನೆಗೆ ಸಹ ಬರಬಹುದು.

ಧರ್ಮ, ಜಾತಿಯ ವಿಷಯಗಳು!

ಧರ್ಮ, ಜಾತಿಯ ವಿಷಯಗಳು!

ಫೇಸ್‌ಬುಕ್ ಅಥವಾ ಬೇರೆ ಯಾವುದೇ ಜಾಲತಾಣಗಳಲ್ಲಿ ಯಾವುದೇ ಧರ್ಮ, ಜಾತಿಯ ವಿಷಯಗಳ ಬಗ್ಗೆ ತೆಗಳಿ, ಅವಮಾನಿಸುವ ಫೋಟೋ ಅಥವಾ ಕಮೆಂಟ್ ಹಾಕದಿರಿ. ಬಾರತದಂತಹ ವೈವಿಧ್ಯಮಯ ದೇಶದಲ್ಲಿ ಇಂತಹ ಸೂಕ್ಷ್ಮ ವಿಚಾರಗಳು ಪ್ರಭಾವ ಬೀರುತ್ತವೆ. ಇದರಿಂದ ನೀವು ಜೈಲು ಪಾಲಾಗುವುದು ಆಶ್ಚರ್ಯವೇನಿಲ್ಲ.

ಮಾನಸಿಕವಾಗಿ ಗಟ್ಟಿಯಾಗಿರಿ.!

ಮಾನಸಿಕವಾಗಿ ಗಟ್ಟಿಯಾಗಿರಿ.!

ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತ ವ್ಯಕ್ತಿ ನಿಮ್ಮ ಮನಸ್ಸನ್ನು ಹಾಳುಮಾಡುವಂತಹ ಬರವಣಿಗೆಗಳನ್ನು ಹಾಕಬಹುದು. ಅಂತಹುಗಳನ್ನು ನಿರ್ಲಕ್ಷಿಸಿ ಅವರನ್ನು ಬ್ಲಾಕ್ ಮಾಡಿಬಿಡಿ. ನಿಮ್ಮನ್ನು ಪ್ರಚೋದಿಸುವ ವಿಷಯಗಳಿಂದ ದೂರವಿದ್ದುಬಿಡಿ. ನೀವು ಪೋಸ್ಟ್ ಮಾಡುವಾಗ ಸ್ವಲ್ಪ ಆಲೋಚನೆ ಮಾಡಿ ಪೋಸ್ಟ್‌ ಮಾಡಿ.

ಫೇಸ್‌ಬುಕ್‌ನಲ್ಲಿ ವ್ಯಕ್ತಿತ್ವ

ಫೇಸ್‌ಬುಕ್‌ನಲ್ಲಿ ವ್ಯಕ್ತಿತ್ವ

ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿ ಬದಲಾಗುತ್ತಿರುವ ಈ ಫೇಸ್‌ಬುಕ್‌ನ್ನು ಎಷ್ಟು ಎಚ್ಚರದಿಂದ ಬಳಸುತ್ತೇವೋ ಅಷ್ಟು ಒಳ್ಳೆಯದು.ಫೇಸ್‌ಬುಕ್‌ ನಮ್ಮ ಜೀವನದಲ್ಲಿ ಭಾರೀ ಪ್ರಭಾವ ಬೀರುವ ಹೊಸ ಮಾಧ್ಯಮವಾಗಿ ರೂಪುಗೊಂಡಿದೆ. ಫೇಸ್‌ಬುಕ್‌ ಮೂಲಕ ಎಲ್ಲರಿಗೂ ನಿಮ್ಮ ವ್ಯಕ್ತಿತ್ವದ ದರ್ಶನವಾಗುತ್ತದೆ. ಹಾಗಾಗಿ, ಮಾನ ಕಳೆದುಕೊಳ್ಳುವ ಕೆಲಸ ಮಾಡಬೇಡಿ.

ಅನ್‌ಫ್ರೆಂಡ್‌ ಆಗಿಬಿಡಿ!

ಅನ್‌ಫ್ರೆಂಡ್‌ ಆಗಿಬಿಡಿ!

ಒಬ್ಬ ವ್ಯಕ್ತಿಯ ಮನಸ್ಥಿತಿ, ಗುಣ, ವರ್ತನೆ, ಜ್ಞಾನ ಎಂಥದ್ದು ಎಂದು ನೋಡಲು ಅವರ ಫೇಸ್‌ಬುಕ್ ಅಕೌಂಟ್ ನೋಡಿದರೆ ಸಾಕು. ಹಾಗಾಗಿ, ನಿಮ್ಮ ಫೇಸ್‌ಬುಕ್ ಗೆಳೆಯರಲ್ಲಿ ಯಾರಾದರೂ ನಿಮ್ಮನ್ನು ಪ್ರಚೋದಿಸುವಂತವರು ಇದ್ದರೆ ಅವರನ್ನು ಅನ್‌ಫ್ರೆಂಡ್ ಮಾಡಿಬಿಡಿ. ಆಗ ಅವರು ಮಾಡುತ್ತಿರುವ ಫೇಸ್‌ಬುಕ್ ಕಮೆಂಟ್‌ಗಳು ನಿಮಗೆ ಕಾಣಿಸುವುದಿಲ್ಲ.

ಫೇಸ್‌ಬುಕ್ ಅಂದರೆ ನೀವೇ!!

ಫೇಸ್‌ಬುಕ್ ಅಂದರೆ ನೀವೇ!!

ಇಂದಿನ ದಿನದಲ್ಲಿ ಹೊಸದಾಗಿ ಕೆಲಸ ಕೊಡುವವರು ಫೇಸ್‌ಬುಕ್‌ ಅಕೌಂಟ್‌ನ್ನು ನೋಡಿ ಕೆಲಸ ಕೊಡಬಹುದು. ಮದುವೆ ಸಂದರ್ಭದಲ್ಲಿ ಹುಡುಗ ಅಥವಾ ಹುಡುಗಿಯ ಮನೆಯವರು ಫೇಸ್‌ಬುಕ್‌ ನೋಡಿ ನಿರ್ಧಾರ ಕೈಗೊಳ್ಳಬಹುದು. ಇಂತಹ ಕಾಲದಲ್ಲಿ ನೀವು ಫೇಸ್‌ಬುಕ್‌ನ್ನು ಬಳಸುವಾಗ ಎಚ್ಚರದಿಂದ ಬಳಸುವುದು ಕೂಡ ಅತಿಮುಖ್ಯ.!

Best Mobiles in India

English summary
Karnataka: Mangaluru Man Arrested For 'Trolling' CM Kumaraswamy. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X