ಇಸ್ರೋ ಸಹಕಾರದೊಂದಿಗೆ ಮ್ಯಾಪ್‌ಮೈ ಇಂಡಿಯಾದಲ್ಲಿ ಸಿಗಲಿದೆ 3D ಮ್ಯಾಪಿಂಗ್‌!

|

ಭಾರತ ಮೂಲದ MapmyIndia ಜನಪ್ರಿಯ ನ್ಯಾವಿಗೇ‍ನ್‌ ಸೇವೆ ನೀಡುವ ಅಪ್ಲಿಕೇಶನ್‌ ಆಗಿದೆ. ಇದೀಗ ಮ್ಯಾಪ್‌ಮೈಇಂಡಿಯಾ ಭಾರತದಲ್ಲಿ ಮ್ಯಾಪಿಂಗ್ ಗುಣಮಟ್ಟವನ್ನು 3D ಮ್ಯಾಪ್‌ ಮೂಲಕ ತೋರಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಮ್ಯಾಪ್‌ಮೈಇಂಡಿಯಾ ಕಂಪನಿಯು ಮೆಟಾವರ್ಸ್‌ಗೆ ಪ್ರವೇಶಿಸಲು ಪ್ಲಾನ್‌ ಮಾಡುತ್ತಿರುವುದರಿಂದ 3D ಮ್ಯಾಪಿಂಗ್ ಅನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಮ್ಯಾಪ್‌ಮೈಇಂಡಿಯಾ

ಹೌದು, ಮ್ಯಾಪ್‌ಮೈಇಂಡಿಯಾ ಭಾರತದಲ್ಲಿ 3D ಮ್ಯಾಪಿಂಗ್‌ ನ್ಯಾವಿಗೇ‍ಷನ್‌ ನೀಡುವುದಕ್ಕಾಗಿ ಇಸ್ರೋ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ. ಇಸ್ರೋ ಜೊತೆಗಿನ ಪಾಲುದಾರಿಕೆಯು ಜಿಯೋಸ್ಪೇಷಿಯಲ್ ಮ್ಯಾಪಿಂಗ್, ಸ್ಯಾಟ್‌ಲೈಟ್‌ ಡೇಟಾ, ಅರ್ಥ್‌ ಅಬ್‌ಸರ್ವೇಶನ್‌, ಆನಾಲಿಟಿಕಲ್‌ ಮತ್ತು ಗ್ರಾಹಕ ಕೇಂದ್ರಿತ ಲೋಕೇಶನ್‌ ಆಧಾರಿತ ಸೇವೆಗಳಂತಹ ಪ್ರಯೋಜನಗಳನ್ನು ಪರಿಚಯಿಸುತ್ತದೆ ಎಂದು ಹೇಳಲಾಗಿದೆ. ಹಾಗಾದ್ರೆ ಮ್ಯಾಪ್‌ಮೈ ಇಂಡಿಯಾ ಮತ್ತು ಇಸ್ರೋ ನಡುವಿನ ಪಾಲುದಾರಿಕೆಯಿಂದಾಗುವ ಉಪಯೋಗ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮ್ಯಾಪ್‌ಮೈ ಇಂಡಿಯಾ

ಮ್ಯಾಪ್‌ಮೈ ಇಂಡಿಯಾ ಭಾರತದಲ್ಲಿ 3D ಮ್ಯಾಪಿಂಗ್ ಅನ್ನು ನೀಡಲು ಮುಂದಾಗಿದೆ. ಇದಕ್ಕಾಗಿ ಇಸ್ರೋ ಜೊತೆಗೆ ಕೈ ಜೋಡಿಸಿದೆ. ಇದರಿಂದ ಮೆಟಾವರ್ಸ್‌ ಪ್ರವೇಶಿಸಲು ಉದ್ದೇಶಿಸಿರುವ ಮ್ಯಾಪ್‌ಮೈ ಇಂಡಿಯಾ ಪ್ಲಾನ್‌ಗೆ ಸಹಾಯವಾಗಲಿದೆ. ಇದರಿಂದ ಭಾರತದಲ್ಲಿ ಮ್ಯಾಪ್‌ ಅನ್ನು ಸಾಕಷ್ಟು ನಿಖರವಾಗಿ ರಿಯಲ್‌ ಟೈಂನಲ್ಲಿ 3D ರೂಪದಲ್ಲಿ ನೀಡುವುದಕ್ಕೆ ಸಾಧ್ಯವಾಗಲಿದೆ. ಇದಕ್ಕಾಗಿ ಇಸ್ರೋದ ಡೇಟಾವನ್ನು ಬಳಸಿಕೊಳ್ಳುವುದಕ್ಕೆ ಅವಕಾಶ ಸಿಗಲಿದೆ. ಹವಾಮಾನದ ಕಾರಣದಿಂದಾಗಿ ಕೆಲವು ಹಿಮದಿಂದ ಆವೃತವಾದ ಮಾರ್ಗಗಳು ಹೇಗೆ ಬದಲಾಗುತ್ತವೆ ಮತ್ತು ಹಿಮದ ಹೊದಿಕೆಯ ವಿಸ್ತಾರವನ್ನು ನಿರ್ಧರಿಸಲು ಇಸ್ರೋ ನೀಡುವ ಡೇಟಾ ಸಹಾಯ ಮಾಡುತ್ತದೆ ಎನ್ನಲಾಗಿದೆ.

ಮ್ಯಾಪ್‌ಮೈ ಇಂಡಿಯಾ

ಇನ್ನು ಮ್ಯಾಪ್‌ಮೈ ಇಂಡಿಯಾ ಸಿಇಒ ರೋಹನ್‌ ವರ್ಮಾ ಅವರು, ಈ ಒಪ್ಪಂದದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮ್ಯಾಪ್‌ಮೈ ಇಂಡಿಯಾದ ಮ್ಯಾಪ್ಲ್ಸ್ ಪೋರ್ಟಲ್ ಅಥವಾ ಮ್ಯಾಪ್ಲ್ಸ್ ಅಪ್ಲಿಕೇಶನ್ ಅನ್ನು ಬಳಸುವುದರಿಂದ, ನೈಜ ಸಮಯದಲ್ಲಿ ಹಿಮದ ಹೊದಿಕೆ ಇದೆಯೇ ಮತ್ತು ಎಲ್ಲಾ ಹಿಮದ ಹೊದಿಕೆ ಎಲ್ಲಿದೆ ಎಂಬುದನ್ನು ನೋಡಬಹುದು. ಇದಕ್ಕೆ ಇಸ್ರೋದಿಂದ ಭೂಮಿಯ ವೀಕ್ಷಣೆಯ ಡೇಟಾ ಸಹಾಯ ಮಾಡಲಿದೆ ಎಂದಿದ್ದಾರೆ.

ಮ್ಯಾಪ್ಸ್‌

ಇನ್ನು ಹೆಚ್ಚುವರಿಯಾಗಿ, ಸಸ್ಯವರ್ಗದ ಮ್ಯಾಪ್ಸ್‌ ಅಥವಾ ಶಾಖದ ನಕ್ಷೆಗಳು, ಗಾಳಿಯ ಗುಣಮಟ್ಟದ ನಕ್ಷೆಗಳು ಮತ್ತು ಜನರು ಹುಡುಕುವ ನಿಖರವಾದ ಸ್ಥಳಗಳ ಕುರಿತು 3D ಮ್ಯಾಪಿಂಗ್ ಅನ್ನು ಕಾಣಬಹುದು. ಸದ್ಯ 3D ಮ್ಯಾಪಿಂಗ್ ಅನ್ನು ರಿಯಲ್‌ ವ್ಯೂ ಎಂದು ಹೆಸರಿಸಲಾಗಿದ್ದು, ಇಸ್ರೋದ ಉಪಗ್ರಹ ಚಿತ್ರಣವನ್ನು ಬಳಸಿಕೊಂಡು ಆಕಾಶದಿಂದ ಅಥವಾ ಬಾಹ್ಯಾಕಾಶದಿಂದ ಮಾರುಕಟ್ಟೆಗೆ ತರುತ್ತಿದ್ದೇವೆ ಎಂದಿದ್ದಾರೆ.

Best Mobiles in India

Read more about:
English summary
MapmyIndia and Indian Space Research Organisation join hands to provide detailed 3D maps of India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X