ವಿಶ್ವದ 3ನೇ ಶ್ರೀಮಂತನ ಸ್ಥಾನಕ್ಕೆ ಜಿಗಿದ ಫೇಸ್​ಬುಕ್ ಸಂಸ್ಥಾಪಕ!..ಈಗ 'ಮಾರ್ಕ್' ಆಸ್ತಿ ಎಷ್ಟು ಗೊತ್ತಾ?

|

ಕಳೆದ ಕೆಲ ದಿನಗಳಿಂದಲೂ ಕಷ್ಟಗಳ ದಿನಗಳನ್ನು ಎದುರಿಸುತ್ತಿದ್ದರೂ ಸಹ ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್​ಬುಕ್​ ಸಹ ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್​ ಜುಗರ್​ಬರ್ಗ್​​​​ ವಿಶ್ವದ 3ನೇ ಅತಿ ಶ್ರೀಮಂತ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಮೆರಿಕದ ಉದ್ಯಮ ಕ್ಷೇತ್ರದ ದಿಗ್ಗಜ ವಾರೆನ್ ಬಫೆಟ್ ಅವರನ್ನ ಹಿಂದಿಕ್ಕಿ ಜುಕರ್​ಬರ್ಗ್ ಈ ಸ್ಥಾನವನ್ನು ಅಲಂಕರಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಕೇಂಬ್ರಿಡ್ಜ್ ಅನಾಲಿಟಿಕಾಗೆ ಬಳಕೆದಾರರ ಮಾಹಿತಿ ಸೋರಿಕೆ ಆರೋಪದ ಬಳಿಕ ಮಾರ್ಚ್​ನಲ್ಲಿ ಕುಸಿದಿದ್ದ ಫೇಸ್​ಬುಕ್​ ಷೇರು ಪ್ರಮಾಣ ಭಾರೀ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ. ಮಾರ್ಚ್ ನಂತರ ಫೇಸ್​ಬುಕ್​ ಷೇರುಗಳ ಪ್ರಮಾಣ ಶೇ.15ರಷ್ಟು ಏರಿಕೆ ಕಂಡಿರುವುದರಿಂದ, ಜುಗರ್​ಬರ್ಗ್ ಅವರ ಆಸ್ತಿಯಲ್ಲಿ ಭಾರಿ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ವಿಶ್ವದ 3ನೇ ಶ್ರೀಮಂತನ ಸ್ಥಾನಕ್ಕೆ ಜಿಗಿದ ಫೇಸ್​ಬುಕ್ ಸಂಸ್ಥಾಪಕ!!

ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ವರದಿ ಮಾಡಿರುವ ಪ್ರಕಾರ, ಮಾರ್ಕ್ ಜುಕರ್​ಬರ್ಗ್ ಈಗ​​ ಒಟ್ಟು 81.6 ಬಿಲಿಯನ್​ ಡಾಲರ್​ ಮೌಲ್ಯದ ಆಸ್ತಿ ಹೊಂದಿದ್ದಾರೆ. ಭಾರತೀಯ ರೂಪಾಯಿಗಳ ಲೆಕ್ಕದಲ್ಲಿ ಇದರ ಮೌಲ್ಯ ಅಂದಾಜು 5 ಲಕ್ಷದ 61 ಸಾವಿರ ಕೋಟಿ ರೂಪಾಯಿಗಳಾಗಲಿದೆ. ಇದು ಜೆಫ್ ಬೆಜೋಸ್ ಮತ್ತು ಬಿಲ್‌ಗೆಟ್ಸ್ ನಂತರದ ಸ್ಥಾನದಲ್ಲಿರುವ ಗಳಿಕೆಯ ಪ್ರಮಾಣವಾಗಿದೆ.

ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಅಮೆಜಾನ್ ಡಾಟ್ ಕಾಮ್ ಸಂಸ್ಥಾಪಕ ಜೆಫ್ ಬೆಜೋಸ್, ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ಗೆಟ್ಸ್ ನಂತರದ ಸ್ಥಾನದಲ್ಲಿ ಜೂಕರ್​ ಬರ್ಗ್​ ಸ್ಥಾನ ಪಡೆದಿದ್ದಾರೆ. ಈ ಮೂಲಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳ ಮಾಲಿಕರು ವಿಶ್ವದ ಟಾಪ್ ಶ್ರೀಮಂತರ 3 ಸ್ಥಾನಗಳನ್ನು ಅಲಂಕರಿಸಿದ್ದಾರೆ.

ವಿಶ್ವದ 3ನೇ ಶ್ರೀಮಂತನ ಸ್ಥಾನಕ್ಕೆ ಜಿಗಿದ ಫೇಸ್​ಬುಕ್ ಸಂಸ್ಥಾಪಕ!!

ಇಷ್ಟು ಮಾತ್ರವಲ್ಲದೇ, ವಿಶ್ವದ ಶ್ರೀಮಂತರ ಇಂಡೆಕ್ಸ್​ನಲ್ಲಿ ಈಗ ಟೆಕ್ ಕಂಪನಿಗಳ ಆಸ್ತಿಯೇ ಶೇ.20ರಷ್ಟು ಅಂದರೆ 5 ಟ್ರಿಲಿಯನ್ ಡಾಲರ್​​ನಷ್ಟು ಇದೆ. ಈಗ ವಿಶ್ವದ 500 ಅತ್ಯಂತ ಶ್ರೀಮಂತ ಜನರನ್ನು ಗುರುತಿಸಿದರೆ ಟೆಕ್ ಕಂಪನಿಗಳ ಅಸ್ತಿ ಮೌಲ್ಯವು ಯಾವುದೇ ಕ್ಷೇತ್ರಕ್ಕಿಂತ ಹೆಚ್ಚಾಗಿದೆ. ಹಾಗಾಗಿ, ಇದು ತಂತ್ರಜ್ಞಾನದ ಶಕ್ತಿಯನ್ನು ಜಗತ್ತಿಗೆ ಸಾರುತ್ತಿದೆ ಎಂದರೆ ತಪ್ಪಾಗದು.

ಓದಿರಿ: ಆಂಡ್ರಾಯ್ಡ್ ಪೋನ್ ಬಳಕೆದಾರರು ಈಗಲೂ ಮಾಡುತ್ತಿರುವ 10 ಗಂಭೀರ ತಪ್ಪುಗಳು!!

Best Mobiles in India

English summary
Facebook's Mark Zuckerberg Becomes the World’s 3rd Richest Person, Passing Warren Buffett. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X