ಬರಾಕ್‌ ಒಬಾಮ ಸೇರಿ ವಿಶ್ವದ ಹಲವು ಗಣ್ಯರ ಟ್ವಿಟರ್‌ ಖಾತೆ ಹ್ಯಾಕ್‌!

|

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಸೇರಿದಂತೆ ಅಮೆರಿಕದ ಹಲವು ಗಣ್ಯರು ಹಾಗೂ ಕಾರ್ಪೋರೇಟ್‌ ವಲಯದ ಉದ್ಯಮಿಗಳ ಟ್ವಿಟ್ಟರ್‌ ಅಕೌಂಟ್‌ ಅನ್ನು ಹ್ಯಾಕ್‌ ಮಾಡಿ ಬಿಟ್‌ಕಾಯಿನ್‌ಗಾಗಿ ಬೇಡಿಕೆ ಇಟ್ಟ ಘಟನೆ ಬುದವಾರ ತಡರಾತ್ರಿ ನಡೆದಿದೆ. ಸದ್ಯ ಇದು ಅಮೆರಿಕ ಮಾತ್ರವಲ್ಲದೇ ಇಡೀ ವಿಶ್ವದೆಲ್ಲೆಡೆ ಚರ್ಚಗೆ ಕಾರಣವಾಗಿದೆ. ಜನಪ್ರಿಯ ಸೊಶೀಯಲ್‌ ಮೀಡಿಯಾಗಳಲ್ಲಿ ಒಂದಾಗಿರುವ ಟ್ವಿಟ್ಟರ್‌ ಕೂಡ ಹ್ಯಾಕರ್ಸ್‌ ದಾಳಿಗೆ ಸುಲಭ ತುತ್ತಾಗಿರುವುದು ನಿಜಕ್ಕೂ ಟ್ವಿಟ್ಟರ್‌ನಲ್ಲಿ ಡೇಟಾ ಸುರಕ್ಷತೆಯ ಬಗ್ಗೆ ಅನುಮಾನಗಳು ಮೂಡವಂತೆ ಮಾಡಿದೆ.

ಹ್ಯಾಕರ್ಸ್

ಹೌದು, ಇದು ವಿಶ್ವದ ಅತಿದೊಡ್ಡ ಬಿಟ್‌ಕಾಯಿನ್ ಹಗರಣಕ್ಕೆ ಕಾರಣವಾಗುತ್ತಿದ್ದ, ಹ್ಯಾಕರ್ಸ್‌ ದಾಳಿ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮರಿಂದ ಹಿಡಿದು ಮುಂಬರುವ ಚುನಾವಣೆಯಲ್ಲಿ ಅಧ್ಯಕ್ಷಿಯ ಚುನಾವಣೆಗೆ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬಿಡನ್ ಟ್ವಿಟರ್‌ ಅಕೌಂಟ್‌ ಅನ್ನು ಹ್ಯಾಕ್‌ ಮಾಡಲಾಗಿದೆ. ಅಷ್ಟೇ ಅಲ್ಲ ಟ್ವಿಟ್‌ ಅಕೌಂಟ್‌ಗಳನ್ನ ಹ್ಯಾಕ್ ಮಾಡಿದ ನಕಲಿ ಟ್ವೀಟ್‌ಗಳನ್ನ ಹರಿಬಿಡಲಾಗಿದ್ದು, ಪ್ರಮುಖವಾಗಿ ನಾನು ಹೇಳುವ ವಿಳಾಸಕ್ಕೆ $ 1,000 ಬಿಟ್‌ಕಾಯಿನ್‌ ಕಳಹುಸಿದರೆ $ 2,000 ವಾಪಾಸ್‌ ನೀಡುತ್ತೇ ಎಂದು ಬರೆಯಲಾಗಿದೆ. ಈ ಮೂಲಕ ಅತಿದೊಡ್ಡ ಬಿಟ್‌ಕಾಯಿನ್‌ ಹಗರಣಕ್ಕೆ ಹ್ಯಾಕರ್ಸ್‌ಗಳು ಸಂಚು ರೂಪಿಸಿದ್ದರು ಎಂದು ಹೇಳಲಾಗ್ತಿದೆ.

ಟ್ವಿಟರ್‌

ಇನ್ನು ಟ್ವಿಟರ್‌ ಹ್ಯಾಕ್‌ ಆದವರ ಪಟ್ಟಿಯಲ್ಲಿ ಬರಾಕ್ ಒಬಾಮ, ಜೋ ಬಿಡನ್, ಜೆಫ್ ಬೆಜೋಸ್, ಕಿಮ್ ಕಾರ್ಡಶಿಯಾನ್, ಮತ್ತು ಬಿಲ್ ಗೇಟ್ಸ್‌ರಂತಹ ಉನ್ನತ ವ್ಯಕ್ತಿಗಳ ಟ್ವಿಟ್ಟರ್ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ. ಈ ಪಟ್ಟಿಯಲ್ಲಿ ಮೈಕ್ ಬ್ಲೂಮ್‌ಬರ್ಗ್, ಎಲೋನ್ ಮಸ್ಕ್, ಆಪಲ್, ಜೋ ಬಿಡನ್, ಕಾನ್ಯೆ ವೆಸ್ಟ್, ವಾರೆನ್ ಬಫೆಟ್ ಮತ್ತು ಇತರರ ಖಾತೆಗಳೂ ಸೇರಿವೆ. ಇನ್ನು ಟ್ವಿಟರ್‌ನ ಅಕೌಂಟ್‌ ಅನ್ನು ಹ್ಯಾಕ್‌ ಮಾಡುವುದಕ್ಕಾಗಿ ಹ್ಯಾಕರ್ಸ್‌ಗಳು ಟ್ವಿಟರ್‌ನ ನೆಟ್‌ವರ್ಕ್‌ನಲ್ಲಿ ಟ್ವಿಟರ್ "ನಿರ್ವಾಹಕ" ಡಿವೈಸ್‌ಗೆ ಎಂಟ್ರಿ ನೀಡಿದ್ದಾರೆ ಎಂದು ವರದಿಯಾಗಿದೆ.

ಟ್ವಿಟರ್

ಅಲ್ಲದೆ ಕ್ರಿಪ್ಟೋಕರೆನ್ಸಿ ಹಗರಣವನ್ನು ಇನ್ನಷ್ಟು ಹರಡುವುದಕ್ಕಾಗಿಯೇ ಹ್ಯಾಕರ್‌ಗಳು ಉನ್ನತ ವ್ಯಕ್ತಿಗಳ ಪ್ರೊಫೈಲ್ ಟ್ವಿಟರ್ ಖಾತೆಗಳನ್ನು ಹ್ಯಾಕ್‌ ಮಾಡಿ ಡೇಟಾವನ್ನು ನಕಲು ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಇನ್ನು ಈ ಘಟನೆಯ ಸಂಬಂಧ ಟ್ವಿಟರ್ ಬುಧವಾರ ಪ್ರತಿಕ್ರಿಯೆ ನೀಡಿದ್ದು, ಹ್ಯಾಕರ್ಸ್‌ಗಳ ದಾಳಿಯ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಮತ್ತು ಅದನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದಿದೆ. ಅಲ್ಲದೆ ಎಲ್ಲರ ಅಕೌಂಟ್‌ಗಳನ್ನ ಅಪ್ಡೇಟ್‌ ಮಾಡಲಿದ್ದೇವೆ ಎಂದು ಟ್ವಿಟರ್ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.

ಹ್ಯಾಕರ್ಸ್‌

ಇನ್ನು ಈಗಾಗಲೇ ಹ್ಯಾಕರ್ಸ್‌ಗಳು ಹ್ಯಾಕ್‌ ಮಾಡಿರುವ ಟಿಟ್ಟರ್‌ ಖಾತೆಗಳನ್ನ ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಅಲ್ಲದೆ ಈ ಖಾತೆಗಳ ನಿಜವಾದ ಬಳಕೆದಾರರಿಗೆ ಖಾತೆಗೆ ಪ್ರವೇಶವನ್ನು ಮರಳಿ ಪಡೆಯಲು ಕಷ್ಟವಾಗುವಂತೆ ಅವರ ಟ್ವಿಟರ್ ಖಾತೆಗೆ ಸಂಬಂಧಿಸಿದ ಇಮೇಲ್ ವಿಳಾಸವನ್ನು ಸಹ ಬದಲಾಯಿಸಿ ಬಿಟ್ಟಿದ್ದಾರೆ. ಇದಲ್ಲದೆ ಹ್ಯಾಕರ್ಸ್‌ಗಳು ಈಗಾಗಲೇ ಉಲ್ಲೇಖ ಮಾಡಿರುವ ಇಮೇಲ್ ವಿಳಾಸಕ್ಕೆ ಒಟ್ಟು 12.58 ಬಿಟ್‌ಕಾಯಿನ್‌ಗಳನ್ನು ($ 1,00,000 ಕ್ಕಿಂತ ಹೆಚ್ಚು ಮೌಲ್ಯದ) ರವಾನೆ ಮಾಡಲಾಗಿದೆ ಎಂದು ಸಹ ಹೇಳಲಾಗ್ತಿದೆ. ಇದೆಲ್ಲವನ್ನ ಗಮನಿಸಿದರೆ ಇದೊಂದು ದೊಡ್ಡ ಬಿಟ್‌ ಕಾಯಿನ್‌ ಹಗರಣ ಎಂದು ಹೇಳಲಾಗ್ತಿದೆ.

Best Mobiles in India

English summary
The Twitter accounts of high-profile personalities like Barack Obama, Joe Biden, Jeff Bezos, Kim Kardashian, and Bill Gates were hacked.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X