ಹೊಸ ವರ್ಷಕ್ಕೆ ಭಾರತಕ್ಕೆ ಬರಲಿದೆ ಮೀಜು M6 ನೋಟ್!

By Tejaswini P G
|

ಮೀಜು ಇತ್ತೀಚೆಗಷ್ಟೇ ಹೊಸ ಸ್ಮಾರ್ಟ್ಫೋನ್ ಒಂದರ ಲಾಂಚ್ ಕುರಿತು ಟೀಸರ್ ಹೊರತಂದಿದೆ. ಬಹುಶಃ ನೂತನ ಫ್ಲ್ಯಾಗ್ಶಿಪ್ ಪ್ರೋ 7 ನ ಲಾಂಚ್ ಕುರಿತು ಅದು ಸೂಚನೆ ನೀಡುತ್ತಿದೆ.ಆದರೆ ಇದರ ಮಧ್ಯೆ ಕಂಪೆನಿಯು ಇನ್ನೊಂದು ಹೊಸ ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ.

ಹೊಸ ವರ್ಷಕ್ಕೆ ಭಾರತಕ್ಕೆ ಬರಲಿದೆ ಮೀಜು M6 ನೋಟ್!

ಮೀಜು ಪ್ರೋ 7 ನ ಟೀಸರ್ನಂತೆಯೇ, ಮೀಜು ಕಂಪೆನಿಯು 6 ಸಂಖ್ಯೆ ಹೊಂದಿರುವ ಇನ್ನೊಂದು ಟೀಸರ್ ಪೋಸ್ಟರ್ ಒಂದನ್ನು ಟ್ವೀಟ್ ಮಾಡಿದೆ. ಆ ಪೋಸ್ಟರ್ನಲ್ಲಿ " ಕ್ವಾಲಿಟಿ ಫಾರ್ ಯಂಗ್" ಎಂದು ಬರೆದಿದೆ. ಅಲ್ಲದೆ ಆ ಟ್ವೀಟ್ನಲ್ಲಿ "ನಾವು ನಿಮ್ಮ ಮಾತನ್ನು ಆಲಿಸಿದ್ದೇವೆ, ಆಕರ್ಷಕ ಹೊಸ ಸಂವತ್ಸರಕ್ಕೆ ತಯಾರಾಗಿ" ಎಂದು ಬರೆದಿದೆ. ಅಲ್ಲದೆ ಈ ಪೋಸ್ಟ್ ಗೆ "ಸ್ಟೇ ಟ್ರೂ" ಎಂಬ ಹ್ಯಾಶ್ಟ್ಯಾಗ್ ಕೂಡ ಇದೆ.ಈ ಪೋಸ್ಟರ್ ನಲ್ಲಿ ಸ್ಮಾರ್ಟ್ಫೋನಿನ ಹೆಸರನ್ನು ತಿಳಿಸಿಲ್ಲವಾದರೂ, ಅದು ಮೀಜು M6 ನೋಟ್ ಇರಬಹುದೆಂಬ ಸಂದೇಹವಿದೆ.

ಇಂತಹದೇ ಹ್ಯಾಶ್ಟ್ಯಾಗ್ ಅನ್ನು M6 ನೋಟ್ ಚೀನಾದಲ್ಲಿ ಬಿಡುಗಡೆಯಾಗುವ ಸಂದರ್ಭದಲ್ಲಿ ಬಳಸಲಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳೋಣ. ಮೀಜು ಪೋಸ್ಟ್ ಮಾಡಿದ ಇನ್ನೊಂದು ಚಿತ್ರದಲ್ಲಿ ಕ್ವಾಡ್ LED ಫ್ಲ್ಯಾಶ್ ಇದ್ದು, ಅದು M6 ನೋಟ್ ಎಂಬುದನ್ನು ಖಚಿತಪಡಿಸುತ್ತಿದೆ.ಹಾಗೆಯೇ ಮೀಜು ತನ್ನ ಪೋಸ್ಟ್ ಗೆ ಮಾಡಿದ ಕಮೆಂಟ್ನಲ್ಲಿ ಮೀಜು ಪ್ರೋ 7 ಮತ್ತು M6 ನೋಟ್ ಎರಡೂ ಹೊಸ ವರ್ಷದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ.

ಇನ್ನು ಮೀಜು M6 ನೋಟ್ ನ ಫೀಚರ್ಗಳನ್ನು ಹೇಳುವುದಾದರೆ, ಇದರಲ್ಲಿದೆ 5.5 ಇಂಚ್ ಡಿಸ್‍ಪ್ಲೇ 1920x1080 ಪಿಕ್ಸೆಲ್ ರೆಸೊಲ್ಯೂಶನ್ ಮತ್ತು 1080p ಪಿಕ್ಸೆಲ್ ಡೆನ್ಸಿಟಿ ಜೊತೆಗೆ. ಹೆಚ್ಚಿನ ರಕ್ಷಣೆಗೆ 2.5D ಕರ್ವ್ಡ್ ಗ್ಲಾಸ್ ನ ಮೇಲ್ಕವಚ ಇದೆ. 2.0GHz ಒಕ್ಟಾ-ಕೋರ್ ಕ್ವಾಲ್ಕಮ್ ಸ್ನಾಪ್ಡ್ರಾಗನ್ 625 ಪ್ರಾಸೆಸರ್ ಇದ್ದು ಎಡ್ರೀನೋ 506 GPUಕೂಡ ಇದೆ.

ಹೆಚ್ಚು ಸುಧಾರಿತ ವೈಶಿಷ್ಟ್ತೆಗಳೊಂದಿಗೆ ಒನ್ ಪ್ಲಸ್ 5 ಟಿ ಚಾಲನೆಹೆಚ್ಚು ಸುಧಾರಿತ ವೈಶಿಷ್ಟ್ತೆಗಳೊಂದಿಗೆ ಒನ್ ಪ್ಲಸ್ 5 ಟಿ ಚಾಲನೆ

M6 ನೋಟ್ 3 ವಿಭಿನ್ನ ಆವೃತ್ತಿಗಳಲ್ಲಿ ಲಭ್ಯವಿದ್ದು, ಅದರ ಮೂಲ ಆವೃತ್ತಿ 3GB RAM ಮತ್ತು 16GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಎರಡನೆ ಆವೃತ್ತಿ 3GB RAM ಮತ್ತು 32GB ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದರೆ, ಅದರ ಉನ್ನತ ಆವೃತ್ತಿ 4GB RAM ಮತ್ತು 64GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಈ ಎಲ್ಲಾ ಆವೃತ್ತಿಗಳ ಸ್ಟೋರೇಜ್ ಸಾಮರ್ಥ್ಯವನ್ನು ಮೈಕ್ರೋSD ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ.

ಇನ್ನು ಇದರ ಆಪ್ಟಿಕ್ಸ್ ಕುರಿತು ಹೇಳುವುದಾದರೆ ಈ ಸ್ಮಾರ್ಟ್ಫೋನ್ ಹೊಂದಿದೆ ರೇರ್ ಡ್ಯುಯಲ್ ಕ್ಯಾಮೆರಾ. ಒಂದು 12MP ಸೋನಿ IMX362 ಸೆನ್ಸರ್ ಆಗಿದ್ದು f/1.9 ಅಪರ್ಚರ್, ಡ್ಯುಯಲ್ ಟೋನ್ ಕ್ವಾಡ್-LED ಫ್ಲ್ಯಾಶ್ ಆಂಟೆನಾ ಲೈನ್ಸ್ ನಲ್ಲಿ ಹೊಂದಿದೆ. ಅಲ್ಲದೆ ಫಾಸ್ಟ್ ಫೋಕಸ್ಗಾಗಿ ಡ್ಯುಯಲ್ PD ಫೋಕಸ್ ಟೆಕ್ನಾಲಜಿ ಇದ್ದು ಕೇವಲ 0.03 ಸೆಕೆಂಡ್ಗಳಲ್ಲಿ ಫೋಕಸ್ ಮಾಡುವ ಸಾಮರ್ಥ್ಯವಿದೆ. ಇದರ ಸೆಕೆಂಡರಿ ಲೆನ್ಸ್ ಸ್ಯಾಮ್ಸಂಗ್ 2L7 ಸೆನ್ಸರ್ ಆಗಿದ್ದು 5MP ರೆಸೊಲ್ಯೂಶನ್ ಹೊಂದಿದೆ.

ಮೀಜು ವಿನ ಅನುಸಾರ, ಈ ಕ್ಯಾಮೆರಾಗಳು ಮಲ್ಟಿ-ಫ್ರೇಮ್ ನಾಯ್ಸ್ ರಿಡಕ್ಷನ್ ತಂತ್ರಜ್ಞಾನ ಹೊಂದಿದ್ದು, ಇದರ HDR ಅಲ್ಗೋರಿದಮ್ಗಳು ಉತ್ತಮ ಗುಣಮಟ್ಟದ ಚಿತ್ರಗಳನ್ನು ನೀಡುತ್ತದೆ. ಅಲ್ಲದೆ 16MP ಸೆಲ್ಫೀ ಕ್ಯಾಮೆರಾ ಕೂಡ ಇದ್ದು f/2.0 ಅಪರ್ಚರ್ ಹೊಂದಿದೆ. ಮೀಜು M6 ನೋಟ್ ಆಂಡ್ರಾಯ್ಡ್ 7.1.2 ನುಗಾಟ್ ಹೊಂದಿದ್ದು, ಅದರ ಮೇಲೆ ಫ್ಲೈಮ್ OS 6 ಹೊಂದಿದೆ.

4000mAh ನಂತಹ ಹೆಚ್ಚಿನ ಸಾಮರ್ಥ್ಯವುಳ್ಳ ಬ್ಯಾಟರಿ ಇದ್ದು, 18D ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡ ಇದೆ. ಇದರ ಕನೆಕ್ಟಿವಿಟಿ ಫೀಚರ್ಗಳ ಕುರಿತು ಹೇಳುವುದಾದರೆ ಇದರಲ್ಲಿದೆ ಹೈಬ್ರಿಡ್ ಡ್ಯುಯಲ್ ಸಿಮ್( ನ್ಯಾನೋ+ನ್ಯಾನೋ/ಮೈಕ್ರೋSD) ಸಪೋರ್ಟ್, 4ಜಿ VoLTE, ವೈಫೈ 802.11 ac(2.4 GHz& 5GHz), ಬ್ಲೂಟೂತ್ 4.1 ಮತ್ತು ಜಿಪಿಎಸ್. ಅಲ್ಲದೆ ಇದರ ಹೋಮ್ ಬಟನ್ ನಲ್ಲಿ ಎಮ್ಟಚ್ 2.1 ಫಿಂಗರ್ಪ್ರಿಂಟ್ ಸೆನ್ಸರ್ ಎಮ್ಬೆಡ್ ಆಗಿದ್ದು, ಕೇವಲ 0.2 ಸೆಕೆಂಡ್ಗಳಲ್ಲಿ ಫೋನ್ ಅನ್ಲಾಕ್ ಮಾಡುವ ಸಾಮರ್ಥ್ಯ ಹೊಂದಿದೆ.

Best Mobiles in India

Read more about:
English summary
The Meizu M6 Note features rear dual cameras with quad LED flash.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X