ಫೇಸ್‌ಬುಕ್‌ನಲ್ಲಿ ಡೇಟಿಂಗ್‌ ಮಾಡುವ ಮುನ್ನ ಈ ವಿಧಾನವನ್ನು ಅನುಸರಿಸಿ!

|

ಇಂದಿನ ದಿನಗಳಲ್ಲಿ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಡೇಟಿಂಗ್‌ ಮಾಡೋರು ಸಂಖ್ಯೆ ಹೆಚ್ಚುತ್ತಲೇ ಇದೆ. ಯುವಜನತೆ ಹೆಚ್ಚಿನ ಪ್ರಮಾಣದಲ್ಲಿ ಡೇಟಿಂಗ್‌ ಸೇವೆಗೆಳಿಗೆ ಮಾರುಹೋಗುತ್ತಿದ್ದಾರೆ. ಆದರೆ ಡೇಟಿಂಗ್‌ ಮಾಡೋರಲ್ಲಿ ಅಪ್ರಾಪ್ತ ವಯಸ್ಕರು ಕೂಡ ಸಿಲುಕಿಕೊಳ್ಳುತ್ತಿರುವ ಅಘಾತಕಾರಿಯಾಗಿದೆ. ಇದೇ ಕಾರಣಕ್ಕೆ ಇದೀಗ ಸೊಶೀಯಲ್‌ ಮೀಡಿಯಾ ದೈತ್ಯ ಫೇಸ್‌ಬುಕ್‌ ಹೊಸ ವಿಧಾನವನ್ನು ಪರಿಚಯಿಸಲು ಮುಂದಾಗಿದೆ. ಇದರಿಂದ ಅಪ್ರಾಪ್ತರು ಫೇಸ್‌ಬುಕ್‌ನಲ್ಲಿ ಡೇಟಿಂಗ್‌ ಮಾಡೋದನ್ನು ತಡೆಯಲು ಮುಂದಾಗಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ನಲ್ಲಿ ಡೇಟಿಂಗ್‌ ಮಾಡೋರಿಗೆ ಮೆಟಾ ಕಂಪೆನಿ ಹೊಸ ವಿಧಾನವನ್ನು ಪರಿಚಯಿಸಿದೆ. ಅದರಂತೆ ಫೇಸ್‌ಬುಕ್‌ ಡೇಟಿಂಗ್‌ ಸೇವೆ ನೀಡಲು ಫೇಸ್‌ಬುಕ್‌ AI ಫೇಸ್ ಸ್ಕ್ಯಾನರ್ ಮೂಲಕ ಬಳಕೆದಾರರ ವಯಸ್ಸನ್ನು ಪರಿಶೀಲಿಸುತ್ತದೆ ಎನ್ನಲಾಗಿದೆ. ಇದರಲ್ಲಿ ಅಪ್ರಾಪ್ತರು ಎಂದು ಕಂಡು ಬಂದರೆ ಫೇಸ್‌ಬುಕ್‌ ಡೇಟಿಂಗ್‌ ಸೇವೆಯಿಂದ ನಿಮಗೆ ಗೇಟ್‌ಪಾಸ್‌ ನೀಡಲಿದೆ. ಹಾಗಾದ್ರೆ ಫೇಸ್‌ಬುಕ್‌ನ ಈ ಹೊಸ ಆಯ್ಕೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್

ಮೆಟಾ ಕಂಪೆನಿ ತನ್ನ ಫೇಸ್‌ಬುಕ್ ಡೇಟಿಂಗ್ ಸೇವೆಯಲ್ಲಿ ಬಳಕೆದಾರರ ವಯಸ್ಸನ್ನು ಪರಿಶೀಲಿಸಲು ಹೊಸ ಆಯ್ಕೆಯನ್ನು ಪರಿಚಯಿಸಿದೆ. ಇದಕ್ಕಾಗಿ ಫೇಸ್‌ಬುಕ್ AI ಫೇಸ್ ಸ್ಕ್ಯಾನರ್ ಅನ್ನು ಬಳಸುವಂತಹ ವಿಧಾನಗಳನ್ನು ಪ್ರಯೋಗಿಸುತ್ತಿದೆ ಎನ್ನಲಾಗಿದೆ. ಅದರಂತೆ ಫೇಸ್‌ಬುಕ್ ಡೇಟಿಂಗ್‌ನಲ್ಲಿ ಬಳಕೆದಾರರು 18 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಪ್ಲಾಟ್‌ಫಾರ್ಮ್ ಗುರುತಿಸಿದರೆ ಅದನ್ನು ಪರಿಶೀಲಿಸಲು ಬಳಕೆದಾರರನ್ನು ಪ್ರೇರೇಪಿಸುತ್ತದೆ ಎಂದು ಹೇಳಿದೆ.

ಸೆಲ್ಫಿ

ಇದಲ್ಲದೆ ಬಳಕೆದಾರರು ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಮೂಲಕ ಫೇಸ್‌ಬುಕ್‌ನಲ್ಲಿ ಸೆಲ್ಫಿ ವೀಡಿಯೋವನ್ನು ಶೇರ್‌ ಮಾಡುವ ಮೂಲಕ ಅಥವಾ ನಿಮ್ಮ ID ಅನ್ನು ಅಪ್‌ಲೋಡ್ ಮಾಡುವ ಮೂಲಕ ನಿಮ್ಮ ವಯಸ್ಸನ್ನು ಪರಿಶೀಲಿಸಬಹುದು. ಮೆಟಾ ಕಂಪೆನಿಯ ಪ್ರಕಾರ, ಯೋಟಿ ಎಂಬ ಕಂಪನಿಯು ಬಳಕೆದಾರರ ವಯಸ್ಸನ್ನು ಗುರುತಿಸದೆಯೇ, ಬಳಕೆದಾರರ ವಯಸ್ಸನ್ನು ನಿರ್ಧರಿಸಲು ಫೇಸ್‌ ಕ್ಲೂಗಳನ್ನು ಬಳಸಲಿದೆ ಎನ್ನಲಾಗಿದೆ.

ಫೇಸ್‌ಬುಕ್‌

ಇನ್ನು ಫೇಸ್‌ಬುಕ್‌ ಪರಿಚಯಿಸಿರುವ ಹೊಸ ವಯಸ್ಸಿನ ಪರಿಶೀಲನಾ ವ್ಯವಸ್ಥೆಯು ವಯಸ್ಕರಲ್ಲದವರಿಗೆ ಡೇಟಿಂಗ್‌ ಸೇವೆಗೆ ಅವಕಾಶವನ್ನು ನಿರಾಕರಿಸಲಿದೆ. ಫೇಸ್‌ಬುಕ್‌ ಡೇಟಿಂಗ್‌ನಲ್ಲಿ ವಯಸ್ಕರು ತಮ್ಮ ವಯಸ್ಸನ್ನು ಪರಿಶೀಲಿಸುವುದು ಸೂಕ್ತವಾಗಲಿದೆ. ಏಕೆಂದರೆ ವಯಸ್ಕರಲ್ಲದವರು ಡೇಟಿಂಗ್‌ ಸೇವೆ ಬಳಸುವುದು ಅವರ ಮಾನಿಸಕತೆಯ ಮೇಲೆ ಪ್ರಭಾವ ಬೀರಲಿದೆ. ಇದರ ನಡುವೆ ಇನ್‌ಸ್ಟಾಗ್ರಾಮ್‌ ಕೂಡ ಕಳೆದ ವರ್ಷ ಬಳಕೆದಾರರ ವಯಸ್ಸನ್ನು ಪರಿಶೀಲಿಸಲು ಹೊಸ ಪ್ರಾಂಪ್ಟ್‌ಗಳನ್ನು ಡಿಸೈನ್‌ ಮಾಡಿತ್ತು. ಇದರ ಮೂಲಕ ಯುವ ಜನರು ತಮ್ಮ ಫೀಡ್‌ನಲ್ಲಿ ಕಾಣಿಸಿಕೊಳ್ಳಲು ಸೂಕ್ತವಲ್ಲದ ವಿಷಯವನ್ನು ತಡೆಯಲು ಈ ಪ್ರಾಂಪ್ಟ್‌ಗಳು ಅನುಕೂಲಕರವಾಗಿವೆ.

ಮಿಲಿಯನ್

ಇತ್ತೀಚಿಗೆ ಫೇಸ್‌ಬುಕ್‌ ಕಳೆದ ಅಕ್ಟೋಬರ್‌ ತಿಂಗಳಲ್ಲಿ ಭಾರತದಲ್ಲಿ 29.2 ಮಿಲಿಯನ್ ಬ್ಯಾಡ್‌ ಕಂಟೆಂಟ್‌ ಅನ್ನು ತೆಗೆದುಹಾಕಿದೆ. ಅಲ್ಲದೆ ಇನ್‌ಸ್ಟಾಗ್ರಾಮ್‌ನಲ್ಲಿ 2.7 ಮಿಲಿಯನ್‌ ಬ್ಯಾಡ್‌ ಕಂಟೆಂಟ್‌ ತೆಗೆದುಹಾಕಿದೆ. ಬಳಕೆದಾರರು ಮಾಡಿದ ರಿಪೋರ್ಟ್‌ ಆಧಾರದ ಮೇಲೆ ಅಕ್ಟೋಬರ್‌ ತಿಂಗಳಿನಲ್ಲಿ ಫೇಸ್‌ಬುಕ್‌ 29.2 ಮಿಲಿಯನ್ ಬ್ಯಾಡ್‌ ಕಂಟೆಂಟ್‌ ರಿಮೂವ್‌ ಮಾಡಿದೆ. ಇದು ಅಕ್ಟೋಬರ್ 1 ರಿಂದ 31ರ ವರೆಗಿನ ವರದಿಯಾಗಿದೆ. ಇದರಲ್ಲಿ ಮೆಟಾ ಕಂಪೆನಿ ಭಾರತೀಯ ಕುಂದುಕೊರತೆ ಕಾರ್ಯವಿಧಾನದ ಮೂಲಕ 703 ರಿಪೋರ್ಟ್‌ಗಳನ್ನು ಸ್ವೀಕರಿಸಿದೆ. ಈ ರಿಪೋರ್ಟ್‌ಗಳಲ್ಲಿ 516 ಪ್ರಕರಣಗಳ ಸಮಸ್ಯೆಯನ್ನು ಬಗೆಹರಿಸಿದೆ. ಸಮಸ್ಯೆಗಳನ್ನು ಬಗೆ ಹರಿಸುವುದಕ್ಕಾಗಿ ಬಳಕೆದಾರರಿಗೆ ಸಾಧನಗಳನ್ನು ಒದಗಿಸಿದೆ ಎಂದು ಕಂಪನಿ ಹೇಳಿದೆ

ಫೇಸ್‌ಬುಕ್‌

ಇದಲ್ಲದೆ ವಿಶೇಷ ಪರಿಶೀಲನೆಯ ಅಗತ್ಯವಿರುವ ಇತರ 187 ವರದಿಗಳಲ್ಲಿ, ನಾವು ನಮ್ಮ ನೀತಿಗಳ ಪ್ರಕಾರ ವಿಷಯವನ್ನು ಪರಿಶೀಲಿಸಿದ್ದೇವೆ ಎಂದು ಫೇಸ್‌ಬುಕ್‌ ಹೇಳಿದೆ. ಅದರಂತೆ ಒಟ್ಟು 120 ವರದಿಗಳ ಮೇಲೆ ನಾವು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿಕೊಂಡಿದೆ. ಉಳಿದ 67 ವರದಿಗಳನ್ನು ಪರಿಶೀಲಿಸಲಾಗಿದೆ ಆದರೆ ಕ್ರಮ ಕೈಗೊಂಡಿಲ್ಲ ಎಂದು ಮೆಟಾ ಹೇಳಿದೆ. ಇದೇ ಸಂದರ್ಭದಲ್ಲಿ ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಕೂಡ 2.7 ಮಿಲಿಯನ್‌ ಬ್ಯಾಡ್‌ ಕಂಟೆಂಟ್‌ ರಿಮೂವ್‌ ಮಾಡಿರುವುದು ವರದಿಯಾಗಿದೆ.

Best Mobiles in India

English summary
Meta has introduced a new method for users to verify their age on its Facebook Dating service

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X