ಮೆಟಾ ಕಂಪೆನಿಯಿಂದ ಫೇಸ್‌ಬುಕ್‌ನಲ್ಲಿ ‘ರಿವೆಂಜ್ ಪೋರ್ನ್’ ತಡೆಯಲು ಹೊಸ ಹೆಜ್ಜೆ!

|

ಕಳೆದ ಕೆಲವು ದಿನಗಳಿಂದ ಮೆಟಾ ಕಂಪೆನಿ ತನ್ನ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿದೆ. ಅದರಂತೆ ಭಾರತದಲ್ಲಿಯೂ ಕೂಡ ಫೇಸ್‌ಬುಕ್‌ನಲ್ಲಿ ಸಾಕಷ್ಟು ಹೊಸ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಇನ್ನು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 'ರೆವೆಂಜ್ ಪೋರ್ನ್' ಪೋಸ್ಟ್‌ಗಳನ್ನು ಶೇರ್‌ ಮಾಡುವುದು ದೊಡ್ಡ ಸಮಸ್ಯೆಯಾಗಿ ಗುರುತಿಸಿಕೊಂಡಿದೆ. ಸದ್ಯ ಇದಿಗ ಮೆಟಾ ಭಾರತದಲ್ಲಿ ಮಹಿಳೆಯರ ಕುರಿತ ಅಸಹ್ಯಕರ ಚಿತ್ರಗಳನ್ನು ಪೊಸ್ಟ್‌ ಮಾಡುವುದನ್ನು ತಪ್ಪಿಸಲು StopNCII.org ಎಂಬ ಹೊಸ ಪ್ಲಾಟ್‌ಫಾರ್ಮ್‌ ಪರಿಚಯಿಸಲು ಮುಂದಾಗಿದೆ.

ಮೆಟಾ

ಹೌದು, ಮೆಟಾ ಫೇಸ್‌ಬುಕ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ಶೇರ್‌ ಮಾಡುವುದನ್ನು ತಪ್ಪಿಸಲು ಮುಂದಾಗಿದೆ. ಇದಕ್ಕಾಗಿ 'ರಿವೆಂಜ್ ಪೋರ್ನ್ ಹೆಲ್ಪ್‌ಲೈನ್' ಸಹಭಾಗಿತ್ವದಲ್ಲಿ ಹೊಸ ಪ್ಲಾಟ್‌ಫಾರ್ಮ್ ಪರಿಚಯಿಸಿದೆ. ಇದು ಮಹಿಳೆಯರ ಒಪ್ಪಿಗೆಯಿಲ್ಲದೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗೆ ಅಪ್‌ಲೋಡ್ ಮಾಡಬಹುದಾದ ಚಿತ್ರಗಳು, ವೀಡಿಯೊಗಳನ್ನು ಫ್ಲ್ಯಾಗ್ ಮಾಡಲು ಅನುಮತಿಸುತ್ತದೆ. ಇದರಿಂದ ಸೊಶೀಯಲ್‌ ಮೀಡಿಯಾದಲ್ಲಿ ನಡೆಯುವ ಬ್ಲಾಕ್‌ಮೇಲ್‌ಗಳನ್ನು ತಡೆಯಲು ಮುಂದಾಗಿದೆ. ಹಾಗಾದ್ರೆ ಮೆಟಾ ಕಂಪೆನಿ ಜಾರಿಗೊಳಿಸಿರುವ ಹೊಸ ಪ್ಲಾಟ್‌ಫಾರ್ಮ್‌ನ ವಿಶೇಷತೆ ಏನು ಅನ್ನೊದನ್ನೋ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ಲಾಟ್‌ಫಾರ್ಮ್‌

ಮೆಟಾ ಪರಿಚಯಿಸಿರುವ ಹೊಸ ಪ್ಲಾಟ್‌ಫಾರ್ಮ್‌ StopNCII.org ಒಂದು ರೀತಿಯ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಬ್ಲಾಕ್‌ಮೇಲ್‌ಗಳಿಗೆ ಒಳಗಾದ ಬಲಿಪಶುಗಳು ತಮ್ಮ ಫೋಟೋಗಳು, ವೀಡಿಯೊಗಳ 'ಹ್ಯಾಶ್'ಗಳನ್ನು ಹಂಚಿಕೊಳ್ಳಬಹುದು. ಇದರಿಂದ ಬೆದರಿಕೆಯಿದೆ ಇಲ್ಲವೇ ಈ ರೀತಿಯ ವೀಡಿಯೋ ಬಹಿರಂಗವಾಗಿದೆ ಅನ್ನೊ ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದೆ. ಇದರಲ್ಲಿ ಹ್ಯಾಶ್ ಎನ್ನುವುದು ಶೇರ್‌ ಮಾಡಲಾದ ಪ್ರತಿ ಫೋಟೋ ಅಥವಾ ವೀಡಿಯೊಗೆ ಲಗತ್ತಿಸಲಾದ ಡಿಜಿಟಲ್ ಫಿಂಗರ್‌ಪ್ರಿಂಟ್ ಆಗಿರಲಿದೆ. ನೀವು ಹ್ಯಾಶ್‌ ಮಾಡಿರುವ ವೀಡಿಯೋ ಅಥವಾ ಇಮೇಜ್‌ ಅನ್ನು ಯಾರಾದರೂ ಅಪ್‌ಲೋಡ್ ಮಾಡಲು ಪ್ರಯತ್ನಿಸಿದರೆ, ಆ ವಿಡಿಯೊ ಅಪ್‌ಲೋಡ್‌ ಆಗದಂತೆ ತಡೆಯುತ್ತದೆ. ಈ ಅಪ್‌ಲೋಡ್ ಕಂಪನಿಯ ವಿಷಯ ನೀತಿಯನ್ನು ಉಲ್ಲಂಘಿಸುತ್ತದೆ ಎಂದು ಫ್ಲ್ಯಾಗ್ ಮಾಡಲಾಗುತ್ತದೆ.

ಅಪ್‌ಲೋಡ್

ಇನ್ನು ರಿವೆಂಜ್ ಪೋರ್ನ್ ಬಲಿಯಾದ ಬಲಿಪಶು ಹ್ಯಾಶ್‌ ಮಾಡಿದ ವೀಡಿಯೋಗಳನ್ನು ಬೇರೆ ಯಾರು ಕುಡ ಅಪ್‌ಲೋಡ್‌ ಮಾಡಲು ಸಾದ್ಯವಾಗುವುದಿಲ್ಲ. ಅವುಗಳನ್ನು ಅಪ್‌ಲೋಡ್ ಮಾಡುವಾಗ ಚಿತ್ರಗಳು ಅಥವಾ ವೀಡಿಯೊಗಳು ಡಿವೈಸ್‌ ಅನ್ನು ಬಿಡುವುದಿಲ್ಲ ಎಂದು ಮೆಟಾ ಹೇಳುತ್ತದೆ. ಇದಕ್ಕಾಗಿ ಹೊಸ ಪ್ಲಾಟ್‌ಫಾರ್ಮ್ ಚಿತ್ರ ದುರ್ಬಳಕೆಯನ್ನು ಉತ್ತಮವಾಗಿ ನಿಭಾಯಿಸಲು ಅವರಿಗೆ ಸಹಾಯ ಮಾಡುತ್ತದೆ. ಇನ್ನು StopNCII.org ನ ವೆಬ್‌ಸೈಟ್ ಪ್ರಶ್ನೆಯಲ್ಲಿರುವ ಚಿತ್ರಗಳು ನಿಕಟ ಸೆಟ್ಟಿಂಗ್‌ನಲ್ಲಿರಬೇಕೆಂದು ಸ್ಪಷ್ಟವಾಗಿ ಹೇಳಾಗಿದೆ. ಇದು ಬಲಿಪಶು ಬೆತ್ತಲೆಯಾಗಿರುವ ಚಿತ್ರಗಳು ಮತ್ತು ವೀಡಿಯೊಗಳಾಗಿರಬಹುದು, ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುವುದು ಯಾವುದೇ ಅಶ್ಲೀಲ ಚಿತ್ರಗಳನ್ನು ಅಪ್‌ಲೋಡ್‌ ಮಾಡದಂತೆ ತಡೆಯಲಿದೆ.

ಮೆಟಾ

ಮೆಟಾ ಕಂಪೆನಿ ಪರಿಚಯಿಸಿರುವ ಈ ಹೊಸ ಪ್ಲಾಟ್‌ಫಾರ್ಮ್‌ 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕ ಮಹಿಳೆಯರಿಗೆ ಮಾತ್ರ ಸೀಮಿತವಾಗಿದೆ. ಅಂದರೆ ಮಕ್ಕಳ ಅಶ್ಲೀಲತೆಯ ವೀಡಿಯೋಗಳ ಅಪ್‌ಲೋಡ್‌ ಅಗದಂತೆ ತಡೆಯಲು ಈ ಪ್ಲಾಟ್‌ಫಾರ್ಮ್‌ ಕಾರ್ಯನಿರ್ವಹಿಸಲಿದೆ. ಬಲಿಪಶುಗಳು ಈ ವೇದಿಕೆಯನ್ನು ಸಮೀಪಿಸಲು ಅಥವಾ ಅವಲಂಬಿಸಲು ಸಾಧ್ಯವಿಲ್ಲ. ನೈನ್ ಪ್ರಕಾರ, ಮಕ್ಕಳ ಲೈಂಗಿಕ ನಿಂದನೆಯ ಚಿತ್ರಗಳಿಗೆ, ಕಾನೂನು ರಕ್ಷಣೆ ಹೊಂದಿರುವ ಆಯ್ದ ಎನ್‌ಜಿಒಗಳೊಂದಿಗೆ ಮಾತ್ರ ಕೆಲಸ ಮಾಡಬಹುದು. ಇದಕ್ಕಾಗಿಯೇ StopNCII 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಸೀಮಿತವಾಗಿದೆ.

ಅಪ್‌ಲೋಡ್

ಆದರೆ ಯಾರಾದರೂ ಇದನ್ನು ಅಪ್‌ಲೋಡ್ ಮಾಡುವ ಮೊದಲು ನಿಕಟ ಚಿತ್ರವನ್ನು ಬದಲಾಯಿಸಿದರೆ, ನಿಖರವಾಗದ ಚಿತ್ರಗಳು ಅಪ್‌ಲೋಡ್‌ ಆಗುವ ಸಾದ್ಯತೆ ಇರಲಿದೆ. "ಆದ್ದರಿಂದ ಆ ಫೋಟೋ ಅಥವಾ ವೀಡಿಯೊದ ಕೆಲವು ತೀವ್ರ ಬದಲಾವಣೆಗಳನ್ನು ಮಾಡುವುದಾದರೆ ವ್ಯಕ್ತಿಯು ಲುಕ್ಔಟ್ ಅನ್ನು ಇಟ್ಟುಕೊಳ್ಳಬೇಕಾಗುತ್ತದೆ. ಬದಲಾದ ವಿಷಯದ ಹ್ಯಾಶ್ ಅನ್ನು ಅಪ್ಲೋಡ್ ಮಾಡಲು ಸಿಸ್ಟಮ್ ಅನ್ನು ಮತ್ತೆ ಬಳಸಲು ಬಯಸಬಹುದಾಗಿದೆ.

ಫೇಸ್‌ಬುಕ್

ಸದ್ಯ ಇದೀಗ StopNCII.org ಫೇಸ್‌ಬುಕ್ ಮತ್ತು Instagram ಗೆ ಮಾತ್ರ ಸೀಮಿತವಾಗಿದೆ. ಬಲಿಪಶುಗಳಿಗೆ ಸುಲಭವಾಗಿಸಲು ಇತರ ಟೆಕ್ ಪ್ಲೇಯರ್‌ ಗಳು ಕೂಡ ಬರುವ ಸಾದ್ಯತೆ ಇದೆ ಎಂದು ಮೆಟಾ ಹೇಳಿಕೊಂಡಿದೆದ. ಏಕೆಂದರೆ ಇದೀಗ ಚಿತ್ರವು ಮಲ್ಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಕೊನೆಗೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲಿದೆ. ಮೆಟಾ ಕಂಪೆನಿಯ ಈ ಹೊಸ ನಿರ್ಧಾರ ಮುಂದಿನ ದಿನಗಳಲ್ಲಿ ಸೊಶೀಯಲ್‌ಮೀಡಿಯಾಗಳಲ್ಲಿ ಅಶ್ಲೀಲತೆ ಕಡಿಮೆ ಮಾಡುವ ಸಾಧ್ಯತೆ ಇದೆ.

Best Mobiles in India

English summary
Meta is now tackling revenge porn with a new platform in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X