ಮೆಟಾ ಪೇ ಡಿಜಿಟಲ್ ವ್ಯಾಲೆಟ್ ಪರಿಚಯಿಸಿದ ಜುಕರ್‌ ಬರ್ಗ್‌! ಉಪಯೋಗ ಏನು?

|

ಪ್ರಸ್ತುತ ದಿನಗಳಲ್ಲಿ ವರ್ಚುವಲ್‌ ಜಗತ್ತಿನ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ವರ್ಚುವಲ್‌ ಜಗತ್ತಿನ ಪರಿಕಲ್ಪನೆಯಾದ ಮೆಟಾವರ್ಸ್‌ ಬಗ್ಗೆ ಒಂದಿಲ್ಲೊಂದು ಸುದ್ದಿ ಹೊರಬರುತ್ತಿದೆ. ಈಗಾಗಲೇ ವರ್ಚುವಲ್‌ ಜಗತ್ತಿನಲ್ಲಿ ಬಟ್ಟೆಯನ್ನು ಸಹ ಖರೀದಿಸುವುದಕ್ಕೆ ಅವಕಾಶ ನೀಡಲಾಗಿದೆ. ಈ ನಿಟ್ಟಿನಲ್ಲಿ ಮೆಟಾ ಕಂಪೆನಿ ಸಾಕಷ್ಟು ಮುಂದಿದೆ. ಮೆಟಾ ಕಂಪೆನಿ ಮೆಟಾವರ್ಸ್‌ ಮತ್ತು ವೆಬ್‌ 3 ಜಗತ್ತಿನಲ್ಲಿ ಆಳವಾಗಿ ತೊಡಗಿಸಿಕೊಂಡಿದೆ. ಮೆಟಾವರ್ಸ್‌ ನಲ್ಲಿ ಏನೆಲ್ಲಾ ಲಭ್ಯವಾಗಲಿದೆ ಅನ್ನೊದನ್ನ ಮೆಟಾ ಕಂಪೆನಿ ಈಗಾಗಲೇ ಹಂತಹಂತವಾಗಿ ಪರಿಚಯಿಸುತ್ತಾ ಬಂದಿದೆ.

ಮೆಟಾ

ಹೌದು, ಮೆಟಾ ಕಂಪೆನಿ ವರ್ಚುವಲ್‌ ಜಗತ್ತಿನ ಬಗ್ಗೆ ಸಾಕಷ್ಟು ಆಸಕ್ತಿಯನ್ನು ಹೊಂದಿದೆ. ಇದೇ ಕಾರಣಕ್ಕೆ ಮೆಟಾವರ್ಸ್‌ಗೆ ಸಂಬಂಧಿಸಿದ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಲ್ಲದೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಮೆಟಾವರ್ಸ್‌ನಲ್ಲಿ ಡಿಜಿಟಲ್‌ ಪ್ರಾಡಕ್ಟ್‌ಗಳನ್ನು ಖರೀದಿಸುವುದಕ್ಕೆ ಅನುಕೂಲ ಮಾಡಿಕೊಡುವ ಹೊಸ ಮೆಟಾ ಪೇ ಡಿಜಿಟಲ್‌ ವ್ಯಾಲೆಟ್‌ ಅನ್ನು ಪರಿಚಯಿಸಿದೆ. ಇದನ್ನು ಬಳಸುವ ಮೂಲಕ ಮೆಟಾವರ್ಸ್‌ನ ವರ್ಚುವಲ್‌ ಜಗತ್ತಿನಲ್ಲಿ ನೀವು ಏನು ಬೇಕಾದರೂ ಖರೀದಿಸಬಹುದಾಗಿದೆ.

ಮೆಟಾವರ್ಸ್‌

ಮೆಟಾವರ್ಸ್‌ ವರ್ಚುವಲ್‌ ಜಗತ್ತು ನಿಜ. ಈ ವರ್ಚುವಲ್‌ ಜಗತ್ತಿನಲ್ಲಿ ನಿಮಗೆ ಬೇಕಾದ ಪ್ರಾಡಕ್ಟ್‌ಗಳನ್ನು ಖರೀದಿಸಬೇಕಾದರೆ ಡಿಜಿಟಲ್‌ ಪೇಮೆಂಟ್‌ ಅತ್ಯಗತ್ಯವಾಗಿದೆ. ಇದೇ ಕಾರಣಕ್ಕೆ ಮೆಟಾ ಕಂಪೆನಿ ಹೊಸ ಮೆಟಾ ಪೇ ಅನ್ನು ಪರಿಚಯಿಸಿದೆ. ಮೆಟಾ ಪೇ ಅನ್ನು ಬಳಸುವುದರಿಂದ ಡಿಜಿಟಲ್ ಸರಕುಗಳ ವ್ಯಾಪಕ ಶ್ರೇಣಿಗೆ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ವರ್ಚುವಲ್‌ ಜಗತ್ತಿನಲ್ಲಿ ನೀವು ಖರೀದಿಸುವ ವಸ್ತುಗಳ ಮೇಲೆ ಮಾಲೀಕತ್ವವನ್ನು ಸಾಧಿಸಬಹುದಾಗಿದೆ. ಹಾಗಾದ್ರೆ ಮೆಟಾ ಪೇ ಮೂಲಕ ವರ್ಚುವಲ್‌ ಜಗತ್ತಿನಲ್ಲಿ ಖರೀದಿ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೆಟಾ

ಮೆಟಾ ಕಂಪೆನಿ ಮೆಟಾವರ್ಸ್‌ಗಾಗಿಯೇ ಮೆಟಾ ಪೇ ಡಿಜಿಟಲ್‌ ವ್ಯಾಲೆಟ್‌ ಅನ್ನು ಲಾಂಚ್‌ ಮಾಡಿದೆ. ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಮೆಟಾ ಪೇ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ''ಪ್ರಸ್ತುತ ಫೀಚರ್ಸ್‌ಗಳನ್ನು ಮೀರಿ, ನಾವು ಹೊಸದರಲ್ಲಿ ಕೆಲಸ ಮಾಡುತ್ತಿದ್ದೇವೆ: ಮೆಟಾವರ್ಸ್‌ಗಾಗಿ ಪರಿಚಯಿಸಿರುವ ವಾಲೆಟ್ ನಿಮ್ಮ ಗುರುತನ್ನು ಸುರಕ್ಷಿತವಾಗಿ ನಿರ್ವಹಿಸಲು ಅನುಮತಿಸುತ್ತದೆ, ನೀವು ಏನು ಹೊಂದಿದ್ದೀರಿ ಮತ್ತು ನೀವು ಹೇಗೆ ಪಾವತಿಸುತ್ತೀರಿ" ಎಂದು ಜುಕರ್‌ಬರ್ಗ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ವರ್ಚುವಲ್‌

ವರ್ಚುವಲ್‌ ಜಗತ್ತಿನಲ್ಲಿ ಈಗಾಗಲೇ ಡಿಜಿಟಲ್ ಕ್ಲಾತ್‌, ಆರ್ಟ್ಸ್‌ ಮತ್ತು ವೀಡಿಯೊಗಳಲ್ಲಿ ತಲ್ಲೀನಗೊಳಿಸುವ ಅನುಭವಕ್ಕೆ ತಕ್ಕಂತೆ ಕೆಲಸ ಮಾಡಲು ಮುಂದಾಗಿದ್ದೆವೆ. ಇದರಿಂದ ಮುಂದಿನ ದಿನಗಳಲ್ಲಿ ಮಾಲೀಕತ್ವದ ಪುರಾವೆಯು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತದೆ ಎಂದು ಜುಕರ್‌ಬರ್ಗ್ ಹೇಳಿದ್ದಾರೆ. ಅಲ್ಲದೆ ಭವಿಷ್ಯದಲ್ಲಿ, ಮೆಟಾವರ್ಸ್‌ನ ಒಂದು ಭಾಗದಲ್ಲಿ ನೀವು ಖರೀದಿಸಿದ ಎಲ್ಲವೂ ಅದೇ ಕಾರ್ಯಗಳು ಮತ್ತು ಗುಣಲಕ್ಷಣಗಳೊಂದಿಗೆ ಮತ್ತೊಂದು ವೇದಿಕೆಯಲ್ಲಿ ಕೂಡ ಲಭ್ಯವಾಗಲಿದೆ.

ಮೆಟಾವರ್ಸ್‌

ಮೆಟಾವರ್ಸ್‌ ಜಗತ್ತಿನಲ್ಲಿ ಎಲ್ಲರೂ ಕೂಡ ತೊಡಗಿಸಿಕೊಳ್ಳುವ ದಿನ ಬಹಳ ದೂರವಿದೆ. ಆದರೆ ಈ ರೀತಿಯ ಪರಸ್ಪರ ಕಾರ್ಯಸಾಧ್ಯತೆಯು ಜನರಿಗೆ ಉತ್ತಮ ಅನುಭವಗಳನ್ನು ನೀಡಲಿದೆ. ಅಂದರೆ ವರ್ಚುವಲ್‌ ಜಗತ್ತಿನ್ಲಿ ನೀವು ಖರೀದಿಸುವ ಸ್ಥಳ, ಪ್ರಾಡಕ್ಟ್‌ಗಳು ಮುಂದಿನ ದಿನಗಳಲ್ಲಿ ಹೆಚ್ಚಿನ ಮೌಲ್ಯವನ್ನು ಪಡೆದುಕೊಳ್ಳಲಿದೆ. ನಿಮ್ಮ ಡಿಜಿಟಲ್‌ ಸರಕುಗಳನ್ನು ಬಳಸುವ ಸ್ಥಳ ಕೂಡ ಹೆಚ್ಚಿನ ಮೌಲ್ಯ ಪಡೆದುಕೊಳ್ಳುತ್ತದೆ. ಇದರಿಂದ ವರ್ಚುವಲ್‌ ಜಗತ್ತಿನಲ್ಲಿ ಸರಕು ಖರೀದಿಸಿದವರಿಗೆ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗಲಿದೆ ಎನ್ನಲಾಗಿದೆ.

ಸ್ಟೀಫನ್

ಇನ್ನು ಮೆಟಾದಲ್ಲಿ ವಾಣಿಜ್ಯ ಮತ್ತು ಹಣಕಾಸು ತಂತ್ರಜ್ಞಾನಗಳ ಮುಖ್ಯಸ್ಥರಾದ ಸ್ಟೀಫನ್ ಕ್ಯಾಸ್ರಿಯೆಲ್ ಅವರು ಟ್ವಿಟರ್‌ನಲ್ಲಿ ಮೆಟಾ ಪೇ ಇಂಟರ್‌ಫೇಸ್‌ನ ಗ್ಲಿಂಪ್‌ಗಳನ್ನು ಹಂಚಿಕೊಂಡಿದ್ದಾರೆ. ಅದರಂತೆ ಮೆಟಾ ಪೇ ಪ್ರಸ್ತುತ ಯುಎಸ್‌ನಲ್ಲಿ ಲಾಂಚ್‌ ಆಗಲಿದೆ. ಮುಂದಿನ ದಿನಗಳಲ್ಲಿ ಇದು ಜಾಗತಿಕವಾಗಿ ಎಲ್ಲರಿಗೂ ಲಭ್ಯವಾಗುವ ಸಾಧ್ಯತೆಯಿದೆ. ತನ್ನ ಭವಿಷ್ಯದ ಯೋಜನೆಗಳ ಭಾಗವಾಗಿ, ಮೆಟಾ ಡಿಜಿಟಲ್ ವ್ಯಾಲೆಟ್‌ಗಳಿಗೆ ಲಾಗ್ ಇನ್ ಮಾಡಲು ಮತ್ತು ವರ್ಚುವಲ್ ರಿಯಾಲಿಟಿ (VR) ನಲ್ಲಿ ಹೆಚ್ಚು ಅನುಕೂಲಕರ ವಾತಾವರಣ ಕಲ್ಪಿಸಲು ಮುಂದಾಗಿದೆ.

ಮೆಟಾವರ್ಸ್‌ ಎಂದರೇನು?

ಮೆಟಾವರ್ಸ್‌ ಎಂದರೇನು?

ಮೆಟಾವರ್ಸ್‌ ಅಂದರೆ ಒಂದು ವರ್ಚುವಲ್‌ ಜಗತ್ತು. ಅಂದರೆ ನೀವು ಬಳಸುವ ಇಂಟರ್‌ನೆಟ್‌ಗೆ ಜೀವ ಬಂದಿದೆ ಎಂದು ಊಹಿಸಿಕೊಳ್ಳಿ ಇದನ್ನು "ವರ್ಚುವಲ್ ಪರಿಸರ" ಎಂದು ಹೇಳಬಹುದು. ನೀವು ಇಂಟರ್‌ನೆಟ್‌ ಅನ್ನು ಪರದೆಯ ಮೇಲೆ ನೋಡುವ ಬದಲು ನಿಮ್ಮ ಸುತ್ತಲೂ ಇಂಟರ್‌ನೆಟ್‌ ಇದ್ದು, ನೀವೆ ಇಂಟರ್‌ನೆಟ್‌ ಪರಿಸರ ಒಳಗೆ ಪ್ರವೇಶಿಸುವ ಆಯ್ಕೆಯನ್ನು ನೀಡಲಿದೆ. ಇದು ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ಗಳು, ವರ್ಧಿತ ರಿಯಾಲಿಟಿ ಗ್ಲಾಸ್‌ಗಳು, ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳು ಅಥವಾ ಇತರ ಸಾಧನಗಳನ್ನು ಬಳಸಿಕೊಂಡು ಜನರು ಭೇಟಿಯಾಗಲು ಬಳಸಬಹುದಾಗಿದೆ. ಅಂದರೆ ವರ್ಚುವಲ್‌ ಪ್ರಂಪಚದಲ್ಲಿ ಇಂಟರ್‌ನೆಟ್‌ ಮೂಲಕವೇ ಎಲ್ಲರನ್ನೂ ಸಂಪರ್ಕಿಸಬಹುದು. ವರ್ಚುವಲ್‌ ವರ್ಲ್ಡ್‌ನಲ್ಲಿ ನಿಮಗೆ ಬೇಕಾದ ಎಲ್ಲವನ್ನು ಸುಲಭವಾಗಿ ಸಾದಿಸಬಹುದು.

ಮೆಟಾವರ್ಸ್‌ನಲ್ಲಿ ಏನೆಲ್ಲಾ ಸಾಧ್ಯ?

ಮೆಟಾವರ್ಸ್‌ನಲ್ಲಿ ಏನೆಲ್ಲಾ ಸಾಧ್ಯ?

ಮೆಟಾವರ್ಸ್‌ನಲ್ಲಿ ವರ್ಚುವಲ್ ಕನ್ಸರ್ಟ್‌ಗೆ ಹೋಗುವುದು, ಆನ್‌ಲೈನ್‌ನಲ್ಲಿ ಟೂರಿಸಂ, ಕಲಾಕೃತಿಗಳ ವಿಕ್ಷಣೆ ಅಥವಾ ಇಲ್ಲವೇ ಕಲಾಕೃತಿಗಳನ್ನು ಕ್ರಿಯೆಟ್‌ ಮಾಡುವುದು. ಹಾಗೂ ಡಿಜಿಟಲ್ ಉಡುಪುಗಳನ್ನು ಪ್ರಯತ್ನಿಸಬಹುದು. ಇದಲ್ಲದೆ ವೀಡಿಯೊ ಕರೆ ಗ್ರಿಡ್‌ನಲ್ಲಿ ಸಹೋದ್ಯೋಗಿಗಳನ್ನು ನೋಡುವ ಬದಲು, ಉದ್ಯೋಗಿಗಳು ಅವರನ್ನು ವರ್ಚುವಲ್ ಆಫೀಸ್‌ನಲ್ಲಿ ಸೇರಿಕೊಳ್ಳಬಹುದಾಗಿದೆ. ಇದಕ್ಕಾಗಿ ಫೇಸ್‌ಬುಕ್ ತನ್ನ Oculus VR ಹೆಡ್‌ಸೆಟ್‌ಗಳನ್ನು ಬಳಸುವುದಕ್ಕಾಗಿ ಕಂಪನಿಗಳಿಗೆ Horizon Workrooms ಎಂಬ ಮೀಟಿಂಗ್ ಸಾಫ್ಟ್‌ವೇರ್ ಅನ್ನು ಪ್ರಾರಂಭಿಸಿದೆ. ಇನ್ನು ಈ ಹೆಡ್‌ಸೆಟ್‌ಗಳ ಬೆಲೆ $300 ಆಗಿದೆ.

ಮೆಟಾವರ್ಸ್ ಕೇವಲ ಫೇಸ್‌ಬುಕ್‌ಗೆ ಸೀಮಿತನಾ?

ಮೆಟಾವರ್ಸ್ ಕೇವಲ ಫೇಸ್‌ಬುಕ್‌ಗೆ ಸೀಮಿತನಾ?

ಮೆಟಾವರ್ಸ್‌ನಲ್ಲಿ ಸಾಕಷ್ಟು ಕಂಪನಿಗಳು ವರ್ಚುವಲ್ ವರ್ಲ್ಡ್‌ ಮತ್ತು ಪರಿಸರವನ್ನು ನಿರ್ಮಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದೇ ರೀತಿಯಲ್ಲಿ ವರ್ಲ್ಡ್ ವೈಡ್ ವೆಬ್‌ನಲ್ಲಿ ಸಾಕಷ್ಟು ಕಂಪನಿಗಳು ಕೆಲಸಗಳನ್ನು ಮಾಡುತ್ತಿವೆ ಎಂದು ಎನ್‌ವಿಡಿಯಾದ ಓಮ್ನಿವರ್ಸ್ ಪ್ಲಾಟ್‌ಫಾರ್ಮ್‌ನ ಉಪಾಧ್ಯಕ್ಷ ರಿಚರ್ಡ್ ಕೆರಿಸ್ ಅಭಿಪ್ರಾಯ ಪಟ್ಟಿದ್ದಾರೆ. ಆದ್ದರಿಂದ ನೀವು ಒಂದು ಕಂಪನಿ ಅಥವಾ ಇನ್ನೊಂದು ಕಂಪನಿಯಿಂದ ಬೇರೆ ಬೇರೆ ವರ್ಚುವಲ್‌ ವರ್ಲ್ಡ್‌ಗೆ ಪ್ರವೇಶಿಸಬಹುದು ಎಂದು ಹೇಳಲಾಗಿದೆ.

Best Mobiles in India

Read more about:
English summary
Meta Pay Digital wallet launched by Facebook's founder Mark Zuckerberg

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X