ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಜಾಹೀರಾತು ನೀಡಲು ಮುಂದಾದ ಮೆಟಾ

|

ತಂತ್ರಜ್ಞಾನ ಯುಗದಲ್ಲಿ ತನ್ನದೇ ಆದ ವಿಶೇಷ ಫೀಚರ್ಸ್‌ಗಳ ಮೂಲಕ ಹೆಚ್ಚು ಜನರನ್ನು ಆಕರ್ಷಿಸಿರುವ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಮೆಟಾ ಸಂಸ್ಥೆಯ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ ಪ್ರಮುಖವಾಗಿವೆ. ಈಗಂತೂ ನೆಟ್ಟಿಗರು ಹೆಚ್ಚಾಗಿ ರೀಲ್ಸ್ ಮಾಡಲು, ವೀಕ್ಷಿಸಲು ಇವನ್ನು ಬಳಕೆ ಮಾಡುತ್ತಿದ್ದಾರೆ. ಇದನ್ನು ಸೂಕ್ಷ್ಮವಾಗಿ ಅರಿತಿರುವ ಮೆಟಾ ಸಂಸ್ಥೆ ಈ ಮೂಲಕ ಹಣ ಗಳಿಸಲು ಮುಂದಾಗಿದೆ.

ಫೇಸ್‌ಬುಕ್‌

ಹೌದು, ಇನ್ಮುಂದೆ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ ರೀಲ್ಸ್‌ ಮೂಲಕ ಮೆಟಾ ಸಂಸ್ಥೆ ಹಾಗೂ ಬಳಕೆದಾರರು ಹಣ ಗಳಿಸಬಹುದಾಗಿದೆ. ಇದಕ್ಕೆಂದೇ ಹೊಸ ಯೋಜನೆಗೆ ಮೆಟಾ ಮುಂದಾಗಿದೆ. ಇನ್ನು ಮುಂದೆ ಈ ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್‌ಲೋಡ್‌ ಆಗುವ ರೀಲ್ಸ್‌ನಲ್ಲಿ ಜಾಹೀರಾತು ಪ್ರದರ್ಶನ ಮಾಡಲು ಮೆಟಾ ಮುಂದಾಗಿದ್ದು, ಈ ಜಾಹೀರಾತು ಸಾಮಾನ್ಯ ಜಾಹೀರಾತಿನಂತೆ ಕಿರಿಕಿರಿ ನೀಡದೆ ಸ್ಕಿಪ್‌ ಮಾಡಬಹುದಾದ ಆಯ್ಕೆಯನ್ನು ಒಳಗೊಂಡಿದೆ.

ಇನ್‌ಸ್ಟಾಗ್ರಾಮ್

ಮೆಟಾ ಸಂಸ್ಥೆಯು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಜಾಹೀರಾತು ಗಳನ್ನು ಪ್ರದರ್ಶಿಸಿ ಪರೀಕ್ಷಿಸುತ್ತಿದೆ. ಈ ಫಾರ್ಮ್ಯಾಟ್ ಸ್ಕಿಪ್ ಮಾಡಬಹುದಾದ ಆಯ್ಕೆ ಒಳಗೊಂಡಿದೆ. ಜೊತೆಗೆ ರೀಲ್ಸ್‌ನ ಕೊನೆಯಲ್ಲಿ ಇದು ಪ್ಲೇ ಆಗಲಿದೆ. ಇದರೊಂದಿಗೆ ಮೆಟಾ ಹೇಳಿಕೆಯೊಂದನ್ನು ನೀಡಿದ್ದು, ಇಂದು ನಾವು ಈ ಫೀಚರ್ಸ್‌ ಬಗ್ಗೆ ಘೋಷಣೆ ಮಾಡಿದ್ದೇವೆ. ಇದರಲ್ಲಿ ಹೊಸ ರೀತಿಯ ಜಾಹೀರಾತುಗಳ ಮೂಲಕ ಗ್ರಾಹಕರನ್ನು ತಲುಪಲಿದ್ದೇವೆ. ಇದು ಗ್ರಾಹಕರು ಹೇಗೆ ಈ ಪ್ಲಾಟ್‌ಫಾರ್ಮ್‌ನಲ್ಲಿ ಸಮಯ ಕಳೆಯಲಿದ್ದಾರೆ ಎಂಬುದನ್ನು ಆಧರಿಸಿರುತ್ತದೆ. ಜೊತೆಗೆ ಜಾಹೀರಾತುಗಳು ಅಥವಾ AI- ವರ್ಧಿತ ಅನುಭವಗಳ ನವೀಕರಣಗಳು ನಮ್ಮ ನಿರಂತರ ಪ್ರಯತ್ನಗಳ ಮೂಲಕವೇ ಆಗಲಿದೆ ಎಂದು ಹೇಳಿದೆ.

ಹೇಗೆಲ್ಲಾ ಜಾಹೀರಾತು ಪ್ರಸಾರ ಆಗಲಿವೆ?

ಹೇಗೆಲ್ಲಾ ಜಾಹೀರಾತು ಪ್ರಸಾರ ಆಗಲಿವೆ?

ಯಾವುದೇ ಬ್ರ್ಯಾಂಡ್‌ಗಳು ಈಗ ಎಕ್ಸ್‌ಪ್ಲೋರ್ ಫೀಡ್‌ನಲ್ಲಿ ಜಾಹೀರಾತುಗಳನ್ನು ನೀಡಬಹುದಾಗಿದೆ. ಇದಿಷ್ಟೇ ಅಲ್ಲದೆ, ಕೆಲವು ರಚನೆಕಾರರ ಪ್ರೊಫೈಲ್‌ನಲ್ಲೂ ಜಾಹೀರಾತು ನೀಡಲಾಗುತ್ತದೆಯಂತೆ. ಮೆಟಾ ಪ್ರಕಾರ, ನಾವು ಪ್ರೊಫೈಲ್ ಫೀಡ್‌ನಲ್ಲಿ ಜಾಹೀರಾತುಗಳನ್ನು ಪರೀಕ್ಷಿಸಲು ಮುಂದಾಗಿದ್ದೇವೆ. ಮೆಟಾ ಸಂಸ್ಥೆಯು ಪ್ರೊಫೈಲ್‌ಗಳು, ಫೀಡ್‌ನಲ್ಲಿ ಜಾಹೀರಾತುಗಳನ್ನು ಪರೀಕ್ಷಿಸಲು ಪ್ರಾರಂಭಿಸುತ್ತಿವೆ, ಮತ್ತೊಂದು ಖಾತೆಯ ಪ್ರೊಫೈಲ್‌ಗೆ ಭೇಟಿ ನೀಡಿದ ನಂತರ ಪೋಸ್ಟ್ ಅನ್ನು ಟ್ಯಾಪ್ ಮಾಡಿ ಜನರು ಸ್ಕ್ರಾಲ್ ಮಾಡಬಹುದಾದ ಫೀಡ್ ಅನುಭವ ಪಡೆಯಬಹುದು ಎಂದು ಹೇಳಿದೆ. ಹಾಗೆಯೇ ಈ ಫೀಚರ್ಸ್‌ ಪರೀಕ್ಷಾರ್ಥವಾಗಿ ಯುಎಸ್‌ನಲ್ಲಿ ಮಾತ್ರ ಇದೆ ಎಂದು ತಿಳಿಸಿದೆ. ಇದರೊಂದಿಗೆ ಅಸ್ತಿತ್ವದಲ್ಲಿರುವ ಇನ್‌ಸ್ಟಾ ಫೀಡ್ ಜಾಹೀರಾತುಗಳಿಗೆ ಈಗ ಮತ್ತೇ ಸಂದರ್ಭೋಚಿತ ಹೆಚ್ಚಿನ ಜಾಹೀರಾತುಗಳನ್ನು ಸೇರಿಸಲಾಗುತ್ತದೆ ಎಂದು ಮೆಟಾ ಘೋಷಣೆ ಮಾಡಿದೆ. ಇದು ಬಳಕೆದಾರರ ಆಸಕ್ತಿಯೊಂದಿಗೆ ಕೆಲಸ ಮಾಡುತ್ತದಂತೆ.

ಜಾಹೀರಾತನ್ನು ಸ್ಕಿಪ್‌ ಮಾಡಬಹುದು

ಜಾಹೀರಾತನ್ನು ಸ್ಕಿಪ್‌ ಮಾಡಬಹುದು

ಮೆಟಾ ಸಂಸ್ಥೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ರೀಲ್ಸ್ ಎರಡರಲ್ಲೂ ಹೊಸ ಜಾಹೀರಾತುಗಳ ಪ್ರದರ್ಶನವನ್ನು ಪರೀಕ್ಷಿಸುತ್ತಿದ್ದು, ಈ ಜಾಹೀರಾತುಗಳನ್ನು ಸ್ಕಿಪ್ ಮಾಡಬಹುದಾಗಿದೆ. ಇವು 4 ರಿಂದ 10 ಸೆಕೆಂಡುಗಳವರೆಗೆ ಇದ್ದು, ರೀಲ್ ಮುಗಿದ ನಂತರವಷ್ಟೇ ಪ್ಲೇ ಆಗುತ್ತವೆ. ಇಂದಿನಿಂದಲೇ ಮೆಟಾ ಸಂಸ್ಥೆ ರೀಲ್ಸ್‌ಗಾಗಿ ಇಮೇಜ್ ಏರಿಳಿಕೆ ಇರುವ ಜಾಹೀರಾತುಗಳನ್ನು ಪರೀಕ್ಷಿಸುತ್ತಿದೆ. ಅಡ್ಡಲಾಗಿ ಸ್ಕ್ರೋಲ್ ಮಾಡಬಹುದಾದ ಜಾಹೀರಾತುಗಳು 2 ರಿಂದ 10 ಇಮೇಜ್ ಜಾಹೀರಾತುಗಳನ್ನು ಒಳಗೊಂಡಿರುತ್ತದೆ ಹಾಗೆಯೇ ಫೇಸ್‌ಬುಕ್ ರೀಲ್ಸ್‌ನಲ್ಲಿ ಕೆಳಭಾಗದಲ್ಲಿ ಈ ಜಾಹೀರಾತುಗಳು ಪ್ರದರ್ಶನ ಆಗುತ್ತವೆ ಎಂದು ಮೆಟಾ ಹೇಳಿದೆ.

ಉಚಿತ ಮ್ಯೂಸಿಕ್‌

ಉಚಿತ ಮ್ಯೂಸಿಕ್‌

ಇನ್ನು ಮೆಟಾ ಸಂಸ್ಥೆಯು ಈ ಫೀಚರ್ಸ್‌ನಲ್ಲಿ ರಚನೆಕಾರನನ್ನು ಹೆಚ್ಚಾಗಿ ಆಕರ್ಷಣೆ ಮಾಡಲು ಉಚಿತ ಮ್ಯೂಸಿಕ್‌ ಲೈಬ್ರರಿ ಆಯ್ಕೆಯನ್ನೂ ನೀಡಿದೆ. ಇದರ ಮೂಲಕ ಸುಲಭವಾಗಿ ಹಿನ್ನೆಲೆ ಸಂಗೀತವನ್ನು ಬಳಕೆ ಮಾಡಿಕೊಂಡು ರಚನೆಕಾರರನು ಇನ್ನಷ್ಟು ಅಭಿಮಾನಿಗಳನ್ನು ಗಳಿಸಿಕೊಳ್ಳಬಹುದಾಗಿದೆ. ಹಾಗೆಯೇ ಇನ್‌ಸ್ಟಾದಲ್ಲಿ ರೀಲ್ಸ್‌ ಗಳಿಗೆ ಮಾತ್ರವಲ್ಲದೇ ಫೀಡ್‌ನಲ್ಲೂ ಸಹ ಈ ಫೀಚರ್ಸ್‌ ಅಳವಡಿಸುವ ಬಗ್ಗೆ ಸಿದ್ಧತೆ ನಡೆಸಲಾಗಿದೆ.

Best Mobiles in India

English summary
Meta agency is now offering a new style of advertising. advertisements will be displayed on Instagram and Facebook reels.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X