ಮೈಕ್ರೋಸಾಫ್ಟ್ ಲಾಂಚರ್ ಡಾರ್ಕ್ ಮೋಡ್ ಆಂಡ್ರಾಯ್ಡ್‌ನಲ್ಲಿ ಲಭ್ಯ!

|

ಸಾಪ್ಟವೇರ್‌ ವಲಯದ ದಿಗ್ಗಜ ಮೈಕ್ರೋಸಾಫ್ಟ್‌ ಕಂಪೆನಿ ತನ್ನ ಮೈಕ್ರೋಸಾಫ್ಟ್‌ ಲಾಂಚರ್‌ನ ಹೊಸ ಆವೃತ್ತಿಯನ್ನ ಬಿಡುಗಡೆ ಮಾಡಿದೆ. ಹಲವು ವಿವಿಧ ಬೀಟಾ ವರ್ಷನ್‌ಗಳಲ್ಲಿ ಪರೀಕ್ಷಿಸಿದ ನಂತರ ಅಂತಿಮವಾಗಿ ಮೈಕ್ರೋಸಾಫ್ಟ್ ಲಾಂಚರ್ ವಿ 6.0 ನ ಸ್ಥಿರ ಆವೃತ್ತಿಯನ್ನು ಪರಿಚಯಿಸಿದೆ. ಸದ್ಯ ಕಂಪನಿಯ ಪ್ರಕಾರ, ಈ ಆವೃತ್ತಿಯು ಅಪ್ಲಿಕೇಶನ್‌ನ ಇಂಟರ್ಫೇಸ್ ಮತ್ತು ಕಾರ್ಯಕ್ಷಮತೆಯಲ್ಲಿ ಕೆಲವು ಸುಧಾರಣೆಗಳನ್ನ ಒಳಗೊಂಡಿದೆ. ನಿಮಗೆಲ್ಲಾ ತಿಳಿದಿರುವ ಹಾಗೇ ಮೈಕ್ರೋಸಾಫ್ಟ್ ಲಾಂಚರ್‌ನ ಮೊದಲ ಆವೃತ್ತಿಯನ್ನು 2017 ರಲ್ಲಿ ಬಿಡುಗಡೆ ಮಾಡಲಾಗಿತ್ತು, ಸದ್ಯ ಇದೀಗ ಹೊಸ ಆಪ್ಡೇಟ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಹೊಸ ಮಾದರಿಯಲ್ಲಿ ಲಭ್ಯವಾಗಲಿದೆ.

ಮೈಕ್ರೋಸಾಫ್ಟ್‌

ಹೌದು, ಮೈಕ್ರೋಸಾಫ್ಟ್‌ ಲಾಂಚರ್‌ ಹೊಸ ಆಪ್ಡೇಟ್‌ನಲ್ಲಿ ಲಭ್ಯವಾಗಲಿದೆ. ಆಂಡ್ರಾಯ್ಡ್‌ ಡಿವೈಸ್‌ಗಳಿಗಾಗಿ ಮೈಕ್ರೋಸಾಫ್ಟ್ ಲಾಂಚರ್ V6.0 ಹೊಸ ಐಕಾನ್ ಅನ್ನು ತನ್ನ ಅಪ್ಲಿಕೇಶನ್‌ನಲ್ಲಿ ಪರಿಚಯಿಸಿದೆ. ಅಲ್ಲದೆ ಈ ಹೊಸ ಅಪ್ಡೇಟ್‌ನಲ್ಲಿ ಡಾರ್ಕ್ ಮೋಡ್, ಬಿಂಗ್ ಆಧಾರಿತ ಫೀಚರ್ಸ್‌ ಪ್ರತಿದಿನ ವಿಭಿನ್ನ ಬ್ಯಾಕ್‌ಗ್ರೌಂಡ್‌ ಅನ್ನು ಡಿಸ್‌ಪ್ಲೇ ಮಾಡಲಿದೆ. ಇದಲ್ಲದೆ ಇದು ಕಸ್ಟಮೈಸ್ಡ್‌ಮಾಡಬಹುದಾದ ಐಕಾನ್‌ಗಳಿಗಾಗಿ ಹೊಸ ಫೀಚರ್ಸ್‌ಗಳನ್ನ ಮತ್ತು ಸಮತಲ ಸ್ಥಾನದಲ್ಲಿ ಬಳಸಲು ಬೆಂಬಲವನ್ನು ಸಹ ನೀಡಲಿದೆ. ಹಾಗಾದ್ರೆ ಮೈಕ್ರೋಸಾಫ್ಟ್‌ ಲಾಂಚರ್‌ V6.0 ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೈಕ್ರೋಸಾಫ್ಟ್‌

ಇನ್ನು ಮೈಕ್ರೋಸಾಫ್ಟ್‌ ಲಾಂಚರ್‌ ನ ಹೊಸ ಆಪ್ಡೇಟ್‌ ಬಿಡುಗಡೆ ಆಗಿರುವುದರಿಂದ ಇನ್ಮುಂದೆ ಆಂಡ್ರಾಯ್ಡ್‌ ನಲ್ಲಿ ಮೈಕ್ರೋಸಾಫ್ಟ್‌ ಲಾಂಚರ್‌ ಡಾರ್ಕ್‌ ಮೊಡ್‌ ಲಭ್ಯವಾಗಲಿದೆ. ಇದಲ್ಲದೆ ಮೈಕ್ರೋಸಾಫ್ಟ್‌ ಲಾಂಚರ್‌ನಲ್ಲಿ ಹೊಸ ಮಾದರಿಯ ಕಾರ್ಯಕ್ಷಮತೆ ಸುಧಾರಣೆಗಳನ್ನು ಮಾಡಲಾಗಿದೆ. ಜೊತೆಗೆ ಕಸ್ಟಮ್ ಐಕಾನ್‌ಗಳ ಬೆಂಬಲದೊಂದಿಗೆ, ಬಳಕೆದಾರರು ಈಗ ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಕಸ್ಟಮ್ ಐಕಾನ್ ಪ್ಯಾಕ್‌ಗಳು ಮತ್ತು ಹೊಂದಾಣಿಕೆಯ ಐಕಾನ್‌ಗಳನ್ನ ಹೊಂದಿಸಬಹುದಾಗಿದೆ.

ಆಂಡ್ರಾಯ್ಡ್‌

ಸದ್ಯ ಆಂಡ್ರಾಯ್ಡ್‌ ಡಿವೈಸ್‌ಗಳಿಗಾಗಿ ಮೈಕ್ರೋಸಾಫ್ಟ್ ಲಾಂಚರ್ ವಿ 6.0 ಅನ್ನು ಪರಿಚಯಿಸಲಾಗಿದೆ. ಇದು ಗೂಗಲ್ ಪ್ಲೇಸ್ಟೋರ್‌ ಮಾಡಬಹುದಾಗಿದೆ. ಆದರೆ ಇದಕ್ಕೆ ಆಂಡ್ರಾಯ್ಡ್ 7.0 ಓಎಸ್ ಅಥವಾ ಅದಕ್ಕಿಂತ ಹೆಚ್ಚಿನ ಒಎಸ್‌ ನ ಬೆಂಬಲದ ಅವಶ್ಯಕತೆ ಇದೆ. ಅಗತ್ಯಕ್ಕೆ ತಕ್ಕಂತೆ ಸ್ಟ್ಯಾಂಡರ್ಡ್ ಆಂಡ್ರಾಯ್ಡ್ ಲಾಂಚರ್ ಅನ್ನು ಬದಲಾಯಿಸುತ್ತದೆ. ಆದಾಗ್ಯೂ, ಇದು ಮೈಕ್ರೋಸಾಫ್ಟ್ ಅಪ್ಲಿಕೇಶನ್‌ಗಳೊಂದಿಗೆ ಹೊಂದಾಣಿಕೆಯನ್ನು ನೀಡುತ್ತದೆ. ಇದರೊಂದಿಗೆ, ಬಳಕೆದಾರರು ಲಾಂಚರ್ ಅನ್ನು ಪಿಸಿಯಲ್ಲಿರುವಂತೆಯೇ ಅದೇ ಕ್ಯಾಲೆಂಡರ್ ಅಥವಾ ಟಿಪ್ಪಣಿಗಳ ಅಪ್ಲಿಕೇಶನ್‌ಗಳೊಂದಿಗೆ ಆಂಡ್ರಾಯ್ಡ್‌ನಲ್ಲಿಯೂ ಕಾನ್ಫಿಗರ್ ಮಾಡಬಹುದು.

ಡಾರ್ಕ್ ಥೀಮ್

ಇದಲ್ಲದೆ ಈ ಆವೃತ್ತಿಯೊಂದಿಗೆ ಪರಿಚಯಿಸಲಾದ ಡಾರ್ಕ್ ಥೀಮ್ ಆಂಡ್ರಾಯ್ಡ್‌ನ ಡಾರ್ಕ್ ಮೋಡ್‌ಗೆ ಹೊಂದಿಕೊಳ್ಳುತ್ತದೆ. ಅಲ್ಲದೆ ಈ ಆಪ್ಡೇಟ್‌ನಿಂದಾಗಿ ಮೈಕ್ರೋಸಾಫ್ಟ್‌ ಲಾಂಚರ್‌ ಕಡಿಮೆ ಮೆಮೊರಿ ಮತ್ತು ಬ್ಯಾಟರಿ ಶಕ್ತಿಯನ್ನು ಬಳಸುತ್ತದೆ ಎಂದು ಹೇಳಲಾಗ್ತಿದೆ. ಜೊತೆಗೆ ಆವೃತ್ತಿ 6 ಬಿಡುಗಡೆಯೊಂದಿಗೆ, ಮೈಕ್ರೋಸಾಫ್ಟ್ ಸರ್ಫೇಸ್ ಡ್ಯುಯೊ ಬಿಡುಗಡೆಗೂ ಕೂಡ ಸಿದ್ದತೆ ನಡೆಸಿದೆ. ಡ್ಯುಯೆಲ್‌ ಸ್ಕ್ರೀನ್‌ ಮತ್ತು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಡಿವೈಸ್‌ ಅನ್ನು 2020 ರ ಅಂತ್ಯದ ವೇಳೆಗೆ ಬಿಡುಗಡೆ ಮಾಡುವ ಸಾದ್ಯತೆ ಇದೆ ಎಂದು ಹೇಳಲಾಗ್ತಿದೆ.

Best Mobiles in India

English summary
Microsoft Launcher is updated to a new version and adds several features such as a new dark mode, landscape mode, and a news feed.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X