ಆಪಲ್ ಕುರಿತ ಈ ಸುದ್ದಿಗಳು ನಿಮಗೆ ತಿಳಿದಿದೆಯೇ?

Written By:

ಆಪಲ್ ಕಂಪೆನಿಯನ್ನು ಫೋನ್ ದೈತ್ಯ ಎಂದು ಪರಿಗಣಿಸಲಾಗುತ್ತದೆ ಅದಕ್ಕೆ ಕಾರಣ ಅದು ರೂಪಿಸಿಕೊಂಡಿರುವ ತನ್ನ ಖ್ಯಾತಿ ಮತ್ತು ಗುಣಮಟ್ಟ. ಒಂದು ಕಾಲದಲ್ಲಿ ಆಪಲ್ ಉತ್ಪನ್ನಗಳೆಂದರೆ ಜನರು ಮುಗಿಬಿದ್ದು ಖರೀದಿಸುವ ಧಾವಂತದಲ್ಲಿದ್ದರು. ಆಪಲ್ ಉತ್ಪನ್ನ ತಮ್ಮ ಕೈಯಲ್ಲಿದೆ ಎಂದರೆ ಅದೊಂದು ಸ್ಟ್ಯಾಂಡರ್ಡ್ ಅಷ್ಟಲ್ಲದೇ ಒಂದು ಸಾಮರ್ಥ್ಯ ಎಂದಾಗಿತ್ತು.

ಆಪಲ್ ಐಪಾಡ್ ಜನರಲ್ಲಿ ಮಾಡಿದ ಮೋಡಿಯಂತೂ ಈಗಲೂ ಇತಿಹಾಸದ ಮಡಿಲಲ್ಲಿ ಹಸಿರಾಗಿದೆ. ಆದರೆ ಕಾಲ ಇದ್ದಂತೆ ಇರುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಈ ಮೇರು ಕಂಪೆನಿಯ ಉತ್ಪನ್ನಗಳು ಒಂದೊಂದಾಗಿ ಸ್ಯಾಮ್‌ಸಂಗ್ ಎಂಬ ಇನ್ನೊಂದು ಕಂಪೆನಿಯ ಉತ್ಪನ್ನಗಳಿಗೆ ತಲೆಬಾಗಲೇ ಬೇಕಾಯಿತು, ತನಗೆ ಯಾರೂ ಪೈಪೋಟಿ ನೀಡಲು ಸಾಧ್ಯವಿಲ್ಲ ಎಂದು ನಂಬಿದ್ದ ಆಪಲ್ ಸ್ಯಾಮ್‌ಸಂಗ್‌ನ ಖ್ಯಾತಿಯಿಂದ ತಳಮಟ್ಟಕ್ಕೆ ಕುಸಿಯಿತು.

ಸ್ಯಾಮ್‌ಸಂಗ್‌ನ ದೊಡ್ಡ ಪರದೆಗಳ ಸ್ಮಾರ್ಟ್‌ಸ್ಕ್ರೀನ್ ಜನರಲ್ಲಿ ಹೊಸ ಬದಲಾವಣೆಯ ಗಾಳಿಯನ್ನೇ ಬೀಸಿತು. ಆಪಲ್ ಹಂತ ಹಂತವಾಗಿ ಒಂದಂಕಿಗೆ ಇಳಿಯಿತು. ಈ ಸಮಯದಲ್ಲಿ ಜನರ ಮನದಲ್ಲಿ ಮೂಡಿದ್ದ ಪ್ರಶ್ನೆ ಆಪಲ್ ಕಂಪೆನಿಗೆ ಏನಾಯಿತು? ಇಷ್ಟು ದೊಡ್ಡ ಹೊಡೆತ ಆ ಕಂಪೆನಿಗೆ ಬೀಳಲು ಕಾರಣವಾದರೂ ಏನು ಎಂಬುದು ಆ ಸಮಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಆದರೂ ಆಪಲ್‌ ತನ್ನ ಸೋಲನ್ನು ಒಪ್ಪಿಕೊಂಡಿಲ್ಲ. ತನ್ನ ಕ್ಷೇತ್ರದಲ್ಲಿ ಒಂದೊಂದೇ ಆವಿಷ್ಕಾರವನ್ನು ಮಾಡುತ್ತಾ ಬರುತ್ತಿದೆ. ಅಂತೂ ಎಲ್ಲಾ ಹಿನ್ನಡೆಗಳನ್ನು ಸಾಧಿಸಿ ಒಂದಲ್ಲಾ ಒಂದು ದಿನ ತನ್ನ ಹಿಂದಿನ ಖ್ಯಾತಿಯನ್ನು ಪುನಃ ಪಡೆದುಕೊಳ್ಳುವ ಧೀಮಂತಿಕೆ ಕಂಪೆನಿಗಿದೆ ಎಂದೇ ಅದರ ಗ್ರಾಹಕರ ನಂಬಿಕೆಯಾಗಿದೆ. ಅದಕ್ಕೂ ಮುಂಚೆ ನಾವು ನಿಮಗಿಲ್ಲಿ ಕಂಪೆನಿಯ ಕೆಲವೊಂದು ವಿಷಯಗಳನ್ನು ತಿಳಿಸಲು ಉತ್ಸುಕರಾಗಿದ್ದೇವೆ. ಒಂದು ಉನ್ನತ ಹಂತಕ್ಕೆ ತಲುಪಲು ಆಪಲ್ ಕಂಪೆನಿಗೆ ಹೇಗೆ ಸಾಧ್ಯವಾಯಿತು? ಅದು ಅಡೆತಡೆಗಳನ್ನು ಹೇಗೆ ನಿವಾರಿಸಿಕೊಂಡಿತು ಮತ್ತು ಉಳಿದ ಕಂಪೆನಿಗಳಿಗೆ ಹೋಲಿಸಿದಾಗ ಇದರ ಗಳಿಕೆ ಹೇಗಿದೆ ಇವೇ ಆ ಪ್ರಮುಖ ಸುದ್ದಿಗಳು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್‌ನ ಜಾಗತಿಕ ಹಣಕಾಸು ಮಟ್ಟ

ಆಪಲ್‌ನ ಜಾಗತಿಕ ಹಣಕಾಸು ಮಟ್ಟ

#1

2014 ರ ಮೊದಲ ಮೂರು ತಿಂಗಳಲ್ಲೇ $43.7 ಬಿಲಿಯನ್ ಅಂದರೆ ನಮ್ಮ ಭಾರತೀಯ ದರದಲ್ಲಿ ಇದು ಅದ್ಭುತವಾದ ಎಣಿಕೆಯಾಗಿದೆ. ಇದು ಗೂಗಲ್, ಅಮೆಜಾನ್,ಫೇಸ್‌ಬುಕ್ ಮೂರನ್ನೂ ಹೊಂದಿಸಿದಾಗ ದೊರಕುವ ಮೌಲ್ಯಕ್ಕಿಂತಲೂ ಹೆಚ್ಚು ಅಂದರೆ ನೀವು ನಂಬಲೇಬೇಕು.

ಮೈಕ್ರೋಸಾಫ್ಟ್‌ಗಿಂತಲೂ ಹೆಚ್ಚು

ಮೈಕ್ರೋಸಾಫ್ಟ್‌ಗಿಂತಲೂ ಹೆಚ್ಚು

#2

ಆಪಲ್‌ನ ಐಫೋನ್ ಹಣಕಾಸು ಕ್ಷೇತ್ರದಲ್ಲೇ ನವ ಅಲೆಯನ್ನೇ ಎಬ್ಬಿಸಿತು. ಅಂದರೆ $26 ಬಿಲಿಯನ್ ಆದರೆ ಮೈಕ್ರೋಸಾಫ್ಟ್ ಇದೇ ಸಮಯದಲ್ಲಿ ಗಳಿಸಿದ ಮೊತ್ತ $20.04 ಬಿಲಿಯನ್. ಆದ್ದರಿಂದ ಐಪೋನ್ ಮೈಕ್ರೋಸಾಫ್ಟ್‌ಗಿಂತ ಹೆಚ್ಚು ಮುಂಚೂಣಿಯಲ್ಲಿದೆ.

ಫೇಸ್‌ಬುಕ್ ಆಪಲ್ ಪೈಪೋಟಿ

ಫೇಸ್‌ಬುಕ್ ಆಪಲ್ ಪೈಪೋಟಿ

#3

ಕಳೆದ ಹನ್ನೆರಡು ತಿಂಗಳಿನಿಂದ ಆಪಲ್‌ನ ಹಣಕಾಸು ಮೌಲ್ಯವನ್ನು ಬದಿಗೊತ್ತಿ ಫೇಸ್‌ಬುಕ್ $8.9 ಬಿಲಿಯನ್ ಅನ್ನು ಗಳಿಸಿಕೊಂಡಿದೆ.

ಆಪಲ್ ಕ್ರಮಾಂಕ

ಆಪಲ್ ಕ್ರಮಾಂಕ

#4

ಆಪಲ್‌ನ ಐಟ್ಯೂನ್ ಸಾಫ್ಟ್‌ವೇರ್ $4.57 ಬಿಲಿಯನ್ ಮಾರುಕಟ್ಟೆ ಮೌಲ್ಯವನ್ನು ಗಳಿಸಿಕೊಂಡಿತು. ಆದರೆ ಕಳೆದ ಹನ್ನೆರಡು ತಿಂಗಳಿನಿಂದ ನೆಟ್‌ಫಿಕ್ಸ್ $4.37 ಬಿಲಿಯನ್ ಮಾರಾಟ ಮೌಲ್ಯವನ್ನು ಗಳಿಸಿಕೊಂಡಿದೆ.

ಸಾಧನೆಯ ಹರಿಕಾರ

ಸಾಧನೆಯ ಹರಿಕಾರ

#5

ಮೊದಲ ತ್ರೈ ಮಾಸಿಕದಲ್ಲಿ ಆಪಲ್‌ನ ನಿವ್ವಳ ಲಾಭ $ 10.2 ಶತಕೋಟಿ. ತನ್ನ 20 ವರ್ಷದ ಪ್ರಸ್ತುತತೆಯಲ್ಲಿ ಅಮೆಜಾನ್ ಕಂಪೆನಿ ಮಾಡಿಕೊಂಡ ಲಾಭಕ್ಕಿಂತ ಹೆಚ್ಚು ಆಪಲ್‌ನದ್ದಾಗಿದೆ.

ಆಪಲ್ ಸಾಧನೆ

ಆಪಲ್ ಸಾಧನೆ

#6

ಆಪಲ್‌ನ ನಿವ್ವಳ ಲಾಭವನ್ನು ಇತಿಹಾಸದಲ್ಲೇ 14 ನೇ ಅತ್ಯುನ್ನತ ಎಂದು ಪರಿಗಣಿಸಲಾಗಿದೆ. ಎಕ್ಸನ್‌ನ ನಾಲ್ಕನೇ ತ್ರೈಮಾಸಿಕ ಲಾಭಕ್ಕಿಂತ ಹೆಚ್ಚಿನದ್ದು.

ವ್ಯವಹಾರ ಸಾಮರ್ಥ್ಯ

ವ್ಯವಹಾರ ಸಾಮರ್ಥ್ಯ

#7

ಆಪಲ್ ತನ್ನಲ್ಲಿ $ 150,6 ಶತಕೋಟಿ ಉಳಿಕೆಯನ್ನು ಹೊಂದಿದೆ ಇದರಿಂದ ಅದು ಫೇಸ್‌ಬುಕ್, ನೆಟ್‌ಫಿಕ್ಸ್, ತೆಸ್ಲಾ, ಟ್ವಿಟ್ಟರ್, ಡ್ರಾಪ್‌ಬಾಕ್ಸ್, ಪಂಡೋರಾ ಮತ್ತು ಸ್ಪೋಟಿಫೈಯನ್ನು ಖರೀದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಂಪೆನಿಗಳನ್ನು ಅದು ಖರೀದಿಸಿದಾಗ ತನ್ನಲ್ಲಿ ಅದು ಇನ್ನೂ $59 ಬಿಲಿಯನ್ ಅನ್ನು ಹೊಂದಿರುತ್ತದೆ ಮತ್ತು ಅದಕ್ಕೆ ಬೇಕಾಗಿರುವುದರ ಮೇಲೆ ಈ ಮೊತ್ತವನ್ನು ಕಂಪೆನಿಗೆ ಹೂಡಬಹುದಾಗಿದೆ.

ಚತುರತೆ

ಚತುರತೆ

#8

ಆಪಲ್ ಈ ರೀತಿಯ ಖರೀದಿಗೆ ಹೋಗುತ್ತಿಲ್ಲ ಆದರೆ ಅದು $ 130 ಬಿಲಿಯನ್ ಷೇರು ಮರುಖರೀದಿಯ ಕಾರ್ಯಕ್ರಮದಲ್ಲಿ ಅಧಿಕಾರವನ್ನು ಹೊಂದಿದೆ. ಅಮೆಜಾನ್‌ನ ಮಾರುಕಟ್ಟೆ ಮಿತಿ ಇದೀಗ $ 137 ಬಿಲಿಯನ್ ಆಗಿದೆ.

ದಂತಕಥೆ

ದಂತಕಥೆ

#9

ಚೀನಾದ ಹಣಕಾಸಿನಲ್ಲಿ ಆಪಲ್ $9.3 ಬಿಲಿಯನ್ ಮಾಡಿಕೊಂಡಿದೆ. ಮೂರು ವರ್ಷದ ಹಿಂದೆ ಯುಎಸ್‌ನಲ್ಲಿ ಅದು ಮಾಡುತ್ತಿದ್ದ ಮೊತ್ತವಾಗಿದೆ. ಮುಂದಿನ ತ್ರೈ ಮಾಸಿಕದಲ್ಲಿ ಚೀನಾದಲ್ಲೂ ಯುರೋಪ್‌ನಲ್ಲಿ ಮಾಡಿದಂತೆ ಹೆಚ್ಚಿನ ಸಾಧನೆಯನ್ನು ಮಾಡಲಿದೆ.

ಆಪಲ್ ಯಶೋಗಾಥೆ

ಆಪಲ್ ಯಶೋಗಾಥೆ

#10

ಆಪಲ್ ಇದೀಗ 800 ಮಿಲಿಯನ್ ಐಟ್ಯೂನ್‌ಗಳನ್ನು ಹೊಂದಿದೆ. ಅಂದರೆ 800 ಮಿಲಿಯನ್ ಕ್ರೆಡಿಟ್ ಕಾರ್ಡ್‌ಗಳನ್ನು ತನ್ನ ಫೈಲ್‌ಗಳಲ್ಲಿ ಹೊಂದಿದೆ. ಜಗತ್ತಿನಲ್ಲಿ ಹೀಗೆ ಕ್ರೆಡಿಟ್ ಕಾರ್ಡ್‌ಗಳನ್ನು ಸಂಗ್ರಹಿಸಿಟ್ಟ ಮತ್ತೊಂದು ಕಂಪೆನಿ ಇನ್ನೊಂದಿಲ್ಲ ಎಂದೇ ಹೇಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot