Subscribe to Gizbot

ಮನೆಯಲ್ಲಿ ಕುಳಿತು 2 ನಿಮಿಷದಲ್ಲಿ ಆಧಾರ್-ಸಿಮ್ ಲಿಂಕ್ ಮಾಡಿ! ಆಧಾರ್ ಹೇಳಿಕೊಟ್ಟ ಸಿಂಪಲ್ ಸ್ಟೆಪ್ಸ್!

Posted By:

ಕೇಂದ್ರ ಸರಕಾರವೂ ತನ್ನ ಎಲ್ಲಾ ಸೇವೆಗಳನ್ನು ಪಡೆದುಕೊಳ್ಳುವ ಸಲುವಾಗಿ ಆಧಾರ್ ಪಡೆಯುವುದನ್ನು ಕಡ್ಡಾಯ ಮಾಡುವುದರೊಂದಿಗೆ ಈಗಾಗಲೇ ಪಡೆದುಕೊಂಡಿರುವ ಸೇವೆಗಳಿಗೂ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡುತ್ತಿದೆ. ಇದೇ ಮಾದರಿಯಲ್ಲಿ ಮೊಬೈಲ್ ನಂಬರ್ ನೊಂದಿಗೆ ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡುತ್ತಿದೆ.

ಮನೆಯಲ್ಲಿ ಕುಳಿತು 2 ನಿಮಿಷದಲ್ಲಿ ಆಧಾರ್-ಸಿಮ್ ಲಿಂಕ್ ಮಾಡಿ..! ಹೇಗೆ..?

ಓದಿರಿ: ಹೋಟೆಲ್-ಮಾಲ್‌ಗಳಲ್ಲಿ ಸ್ಪೈ ಕ್ಯಾಮೆರಾ ಇದ್ರೆ ಕಂಡುಹಿಡಿಯುವುದು ಹೇಗೆ.?

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?

ಮೊಬೈಲ್ ಆಧಾರ್ ಲಿಂಕ್ ಮಾಡುವ ಸಲುವಾಗಿ ಈ ಮೊದಲು ಟೆಲಿಕಾಂ ಆಪರೇಟರ್ ಗಳ ಔಟ್ ಲೈಟ್‌ಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಇದಕ್ಕೆ ಕಡಿವಾಣ ಹಾಕಿ ಅತ್ಯಂತ ಸುಲಭವಾಗಿ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಲು, ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ ಮಾಡುವ ಅವಕಾಶವನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮಾಡಿಕೊಟ್ಟಿದೆ. ಈ ಹಿನ್ನಲೆಯಲ್ಲಿ ಮೊಬೈಲ್ ಮೂಲಕವೇ ಆಧಾರ್ ಲಿಂಕ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಧಾರ್ ಲಿಂಕ್ ಮಾಡಲು:

ಆಧಾರ್ ಲಿಂಕ್ ಮಾಡಲು:

ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ನೀವು ಎಲ್ಲಿಯೂ ಹೋಗಬೇಕಾದ ಅವಶ್ಯಕತೆ ಇಲ್ಲ. ಇದಕ್ಕಾಗಿ ನಿಮ್ಮ ಮೊಬೈಲ್ ನಿಂದ ಒಂದು ಕರೆಯನ್ನು ಮಾಡಬೇಕಾಗದೆ ಅಷ್ಟೆ. 14546 ಸಂಖ್ಯೆಗೆ ಕರೆ ಮಾಡಬೇಕಾಗಿದ್ದು, ಇದು ಉಚಿತ ಸೇವೆಯಾಗಿದೆ.

ಹಂತ 01:

ಹಂತ 01:

ನಿಮ್ಮ ಫೋನಿಂದ 14546 ಸಂಖ್ಯೆಗೆ ಕರೆಯನ್ನು ಮಾಡಬೇಕಾಗಿದೆ. ಮಾಡಿದ ನಂತರದಲ್ಲಿ IVR ದ್ವನಿಯೂ ಕೇಳುವವರೆಗೂ ಕಾಯಬೇಕಾಗಿದೆ.

ಹಂತ 02:

ಹಂತ 02:

ನಿಮ್ಮ ಕರೆಯೂ ಕನೆಕ್ಟ್ ಆದ ನಂತರದಲ್ಲಿ ನೀವು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೆಕಾಗಿದೆ. ಅಲ್ಲಿ ಹೇಳುವ ಮಾದರಿಯಲ್ಲಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ.

ಹಂತ 04:

ಹಂತ 04:

ಇದಾದ ನಂತರದಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಎಂಟ್ರಿ ಮಾಡುವಂತೆ ತಿಳಿಸಲಾಗುತ್ತದೆ. ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಎಂಟ್ರಿ ಮಾಡಿರಿ. ಹೀಗೆ ಮಾಡಿದ ನಂತರಲ್ಲಿ ಟೆಲಿಕಾಂ ಆಪರೇಟರ್ ನಿಮ್ಮ ಆಧಾರ್ ಮಾಹಿತಿಯನ್ನು UIDAIಗೆ ವೆರಿಫಿಕೇಷನ್‌ಗೆ ವರ್ಗಾಹಿಸುತ್ತದೆ.

ಹಂತ 05:

ಹಂತ 05:

ಇದಾದ ನಂತರದಲ್ಲಿ ಟೆಲಿಕಾಂ ಆಪರೇಟರ್ ನಿಮಗೊಂದು OTPಯನ್ನು ಕಳುಹಿಸಲಿದ್ದು, ನೀವು ಕರೆಯಲ್ಲಿ ಇರುವ ಸಂದರ್ಭದಲ್ಲಿಯೇ ಈ OTPಯನ್ನು ಡಯಲ್ ಮಾಡಬೇಕಾಗಿದೆ. ಹೀಗೆ ಮಾಡಿದ ನಂತರದಲ್ಲಿ ನಿಮ್ಮ ಮೊಬೈಲ್ ಲಿಂಕ್ ಆಗಿರುದಕ್ಕೆ ಧೃಡೀಕರಣ SMS ಬರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Customers in India Can Now Reverify their Mobile Connection With Aadhaar by Just Calling Toll-Free Number 14546. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot