Subscribe to Gizbot

ಹೋಟೆಲ್-ಮಾಲ್‌ಗಳಲ್ಲಿ ಸ್ಪೈ ಕ್ಯಾಮೆರಾ ಇದ್ರೆ ಕಂಡುಹಿಡಿಯುವುದು ಹೇಗೆ.?

Written By:

ಇಂದಿನ ದಿನದಲ್ಲಿ ತಂತ್ರಜ್ಞಾನ ಮುಂದುವರೆದಂತೆ ಅದರಿಂದ ಉಪಯೋಗವು ಹೆಚ್ಚಾಗುತ್ತಿದೆ. ಅದರೊಂದಿಗೆ ಇನ್ನು ಹೆಚ್ಚಿನ ಪ್ರಮಾಣದ ತೊಂದರೆಗಳು ಎದುರಾಗುತ್ತಿದೆ. ಇದೇ ಮಾದರಿಯಲ್ಲಿ ಸುರಕ್ಷತೆಯ ದೃಷ್ಠಿಯಿಂದ ಸಿಸಿಟಿವಿ ಮತ್ತು ಸ್ಪೈಕ್ಯಾಮೆರಾಗಳು ಹೆಚ್ಚು ಖ್ಯಾತಿಯನ್ನು ಪಡೆದುಕೊಳ್ಳುತ್ತಿವೆ, ಆದರೆ ಇವೇ ಕೆಟ್ಟ ಕಾರ್ಯಕ್ಕೂ ಬಳಕೆಯಾಗುತ್ತಿರುವುದು ವಿಪರಿಯಾಸ.

ಹೋಟೆಲ್-ಮಾಲ್‌ಗಳಲ್ಲಿ ಸ್ಪೈ ಕ್ಯಾಮೆರಾ ಇದ್ರೆ ಕಂಡುಹಿಡಿಯುವುದು ಹೇಗೆ.?

ಓದಿರಿ: ಅಮೆಜಾನ್-ಫ್ಲಿಪ್‌ಕಾರ್ಟ್‌ಗೆ ಸರ್ಕಾರದಿಂದ ನೋಟಿಸ್: ಆಫರ್ ಹೆಸರಿನಲ್ಲಿ ಮೋಸ ಮಾಡೋಕೆ ಆಗಲ್ಲ..!

ಇಂದಿನ ಮಾಲ್‌ ಸಂಸ್ಕ್ರತಿಯಲ್ಲಿ ಎಲ್ಲಾ ಬಟ್ಟೆಗಳನ್ನು ಹಾಕಿ ನೋಡಿ ನಂತರವೇ ಕೊಂಡುಕೊಳ್ಳುವ ಹವ್ಯಾಸವು ಬೆಳೆಯುತ್ತಿದೆ. ಆದರೆ ಇದು ಮಹಿಳೆಯ ವಿಚಾರದಲ್ಲಿ ಹೆಚ್ಚಾಗುತ್ತಿದೆ. ಹೀಗೆ ಬಟ್ಟೆ ಬದಲಾಯಿಸುವ ಜಾಗಗಳಲ್ಲಿ ಕಿಡಿಗೇಡಿಗಳು ಯಾರಿಗೂ ಕಾಣದ ರೀತಿಯಲ್ಲಿ ಸ್ಪೈ ಕ್ಯಾಮೆರಾಗಳನ್ನು ಅಳವಡಿಸುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಇದನ್ನು ಕಂಡು ಹಿಡಿಯುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್‌ನಿಂದಲೇ ಪತ್ತೆ ಹಚ್ಚಬಹುದು:

ಮೊಬೈಲ್‌ನಿಂದಲೇ ಪತ್ತೆ ಹಚ್ಚಬಹುದು:

ನೀವು ಬಟ್ಟೆ ಬದಲಾಯಿಸಲು ಮುಂಚೆ ನಿಮ್ಮ ಬಳಿ ಇರುವ ಸ್ಮಾರ್ಟ್‌ಫೋನ್‌ನಿಂದಲೇ ನೀವು ಅಲ್ಲಿ ಕ್ಯಾಮೆರಾ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಬಹುದಾಗಿದೆ. ಇದಕ್ಕಾಗಿಯೇ ಕೆಲವು ಆಪ್‌ಗಳು ಇದೇ ಇಲ್ಲವೇ ಮತ್ತೊಂದು ಸರಳ ವಿಧಾನವೊಂದು ನಿಮ್ಮ ಸಹಾಯಕ್ಕೆ ಬರಲಿದೆ.

ವೈಫೈ ಆನಲೈಸರ್:

ವೈಫೈ ಆನಲೈಸರ್:

ಈ ರೀತಿಯಲ್ಲಿ ಅಡಗಿಸಿ ಇಡುವ ಕ್ಯಾಮೆರಾಗಳು ವೈಫೈ ಮೂಲಕ ಕಾರ್ಯನಿರ್ವಹಿಸಲಿದ್ದು, ವೈಫೈ ಆನಲೈಸರ್ ಆಪ್ ಹಾಕಿಕೊಂಡರೆ ನಿಮ್ಮ ಸುತ್ತಲೂ ಇರುವ ಕಳ್ಳ ಕ್ಯಾಮೆರಾ ಮೇಲೆ ನೀವು ಕಣ್ಣಿಡಬಹುದಾಗಿದೆ. ಆಪ್ ನಲ್ಲಿ ಸ್ಕ್ಯಾನ್ ಮಾಡಬಹುದಾಗಿದೆ. ಇದರಿಂದ ನೀವು ಅಡಗಿಸಿಟ್ಟಿರುವ ಕ್ಯಾಮೆರಾವನ್ನು ಹುಡುಕಬಹುದಾಗಿದೆ.

ಸರಳ ವಿಧಾನವೊಂದಿದೆ:

ಸರಳ ವಿಧಾನವೊಂದಿದೆ:

ನಿಮ್ಮ ಫೋನಿನಲ್ಲಿ ಮತ್ತೊಬ್ಬರಿಗೆ ಕಾಲ್ ಮಾಡಿದ ಸಂದರ್ಭದಲ್ಲಿ ನಿಮ್ಮ ಬಳಿ ಯಾವುದಾರರು ಈ ರೀತಿಯ ಕಳ್ಳ ಕ್ಯಾಮೆರಾಗಳು ಇದ್ದರೇ ನಿಮ್ಮ ಕ್ಯಾಮೆರಾ ಸ್ಪೀಕರ್ ಕರ್ಕಶವಾಗಿ ಸದ್ದು ಮಾಡಲಿದೆ. ಅದರಲ್ಲೂ ಕ್ಯಾಮೆರಾ ಬಳಿಗೆ ಹೊದರೆ ಸದ್ದು ಇನ್ನಷ್ಟು ಹೆಚ್ಚಳವಾಗುತ್ತದೆ. ಇದಕ್ಕೇ ಕಾರಣ ರೇಡಿಯೋ ತರಂಗಾಂತರಗಳು ಎನ್ನಲಾಗಿದೆ. ಈ ರೀತಿಯಲ್ಲಿಯೂ ಕಂಡುಹಿಡಿಯಬಹುದು.

Aadhaar Number ವೈರಿಫಿಕೇಷನ್ ಮಾಡುವುದು ಹೇಗೆ..?
ರೆಸ್ಟ್‌ ರೂಮ್-ಟ್ರಯಲ್ ರೂಮ್‌ನಲ್ಲಿ ಹೆಚ್ಚು:

ರೆಸ್ಟ್‌ ರೂಮ್-ಟ್ರಯಲ್ ರೂಮ್‌ನಲ್ಲಿ ಹೆಚ್ಚು:

ಈ ರೀತಿಯ ಕ್ಯಾಮೆರಾಗಳನ್ನು ಟ್ರಯಲ್ ರೂಮ್ ಇಲ್ಲವೇ ರೆಸ್ಟ್ ರೂಮ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಡಗಿಸಿಟ್ಟಿದ್ದ ಪ್ರಕರಣಗಳು ವರದಿಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ನೀವು ಒಮ್ಮೆ ನಿಮ್ಮ ಸುತ್ತ ಮುತ್ತ ಪರೀಕ್ಷೇ ಮಾಡುವುದು ಉತ್ತಮ ಕಾರ್ಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
how to find hidden cameras. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot