ಲಕ್ಷಾಂತರ ಭಾರತೀಯರು ಬಳಸುವ 'ಪಾಸ್‌ವರ್ಡ್' ಇದು; ಹೀಗೂ ಇರ್ತಾರಾ ಜನ!

|

ಟೆಕ್‌ ವಲಯಕ್ಕೆ ಸಂಬಂಧಿಸಿದಂತೆ ಹಲವಾರು ಹಾಸ್ಯದ ವಿಷಯವನ್ನು ನೀವು ಕೇಳಿರಬಹುದು. ಅದರಲ್ಲೂ ಪ್ರಮುಖವಾಗಿ ಫೇಸ್‌ಬುಕ್‌ ಖಾತೆಗೆ ಓರ್ವ ಲಾಗ್‌ ಇನ್‌ ಆಗುವಾಗ ಅದರಲ್ಲಿ 'ಟೈಪ್‌ ಪಾಸ್‌ವರ್ಡ್‌' ಎಂದು ಕೇಳಿದೆ. ಅದಕ್ಕೆ ಆತ 'ಪಾಸ್‌ವರ್ಡ್‌' ಎಂದು ನಮೂದು ಮಾಡಿದ್ದಾನೆ. ನಂತರ 'ಯುವರ್‌ ಪಾಸ್‌ವರ್ಡ್‌ ಇಸ್‌ ಇನ್‌ಕರಕ್ಟ್‌' ಎಂದು ತೋರಿಸಿದೆ ಅದಕ್ಕೆ ಆ ಆಸಾಮಿ 'ಇನ್‌ಕರಕ್ಟ್‌' ಎಂದೇ ನಮೂದು ಮಾಡಿದ್ದಾನೆ. ಇದೂ ಸಾಲದು ಅಂತಾ ಫೇಸ್‌ಬುಕ್‌ 'ಟ್ರೈ ಎಗೈನ್‌' ಎಂದು ಹೇಳಿದೆ. ಅದಕ್ಕೆ ಆತ ಮತ್ತೆ ಪಾಸ್‌ವರ್ಡ್‌ ನಮೂದು ಮಾಡುವ ಜಾಗದಲ್ಲಿ 'ಟ್ರೈ ಎಗೈನ್' ಎಂದು ಬರೆದಿದ್ದಾನೆ. ಈ ವಿಷಯ ನಿಮಗೆ ನಗು ತರಿಸಬಹುದು. ಆದರೆ, ಪಾಸ್‌ವರ್ಡ್‌ ಎಂಬ ವಿಷಯ ನಮ್ಮ ಜೀವನದಲ್ಲಿ ಎಷ್ಟು ಮುಖ್ಯ ಗೊತ್ತಾ?

ಪಾಸ್‌ವರ್ಡ್‌

ಹೌದು, ಭಾರತದಲ್ಲಿ ಈ ಪಾಸ್‌ವರ್ಡ್‌ ವಿಷಯಕ್ಕೆ ಬಂದಾಗ ತುಂಬಾ ಸುಲಭವಾದ ಪಾಸ್‌ವರ್ಡ್‌ ರಚಿಸುತ್ತಾರೆ ಎಂದು ವರದಿಗಳಿಂದ ತಿಳಿದುಬಂದಿದೆ. ಅದರಲ್ಲೂ ಬ್ಯಾಂಕ್‌ನ ಎಟಿಎಂಗಳಿಗೆ, ಸಾಮಾಜಿಕ ಖಾತೆಗಳಿಗೆ ಹೆಚ್ಚಾಗಿ ಒಂದೇ ರೀತಿಯ ಪಾಸ್‌ವರ್ಡ್‌ಗಳನ್ನು ರಚಿಸುವುದುಂಟು. ಹೀಗಾಗಿ ಯಾರಾದರೂ ನಮ್ಮ ಸ್ಮಾರ್ಟ್‌ಫೋನ್‌ ಅನ್ನು ಕದ್ದರೆ ಅಥವಾ ಎಲ್ಲಾದರೂ ನಾವು ಎಟಿಎಂ ಕಳೆದುಕೊಂಡರೆ ಹಾಗೂ ಹ್ಯಾಕರ್‌ಗಳು ನಮ್ಮ ಖಾತೆಗೆ ಕನ್ನ ಹಾಕಲು ಮುಂದಾದರೆ ಇದು ಅವರಿಗೆ ಸಹಕಾರಿಯಾಗಲಿದೆ.

'ಪಾಸ್‌ವರ್ಡ್‌ಗೆ password'

'ಪಾಸ್‌ವರ್ಡ್‌ಗೆ password'

ನಾರ್ಡ್‌ ಪಾಸ್‌ ಸಂಸ್ಥೆಯು ತನ್ನ ಅಧ್ಯಯನದ ವರದಿಯನ್ನು ಬಿಡುಗಡೆ ಮಾಡಿದ್ದು, 2022 ರಲ್ಲಿ 75,000 ಕ್ಕೂ ಹೆಚ್ಚು ಭಾರತೀಯರು 'ಬಿಗ್‌ಬಾಸ್ಕೆಟ್' ಎಂಬುದನ್ನು ಪಾಸ್‌ವರ್ಡ್ ಆಗಿ ಬಳಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ಇನ್ನೂ ಒಂದು ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದ್ದು, ಸುಮಾರು 3.5 ಲಕ್ಷ ಜನರು ಪಾಸ್‌ವರ್ಡ್ ಆಗಿ 'ಪಾಸ್‌ವರ್ಡ್ (password)' ಅನ್ನು ಬಳಕೆ ಮಾಡುತ್ತಿದ್ದಾರಂತೆ.

NordPass

ಇನ್ನು ಪ್ರಮುಖ ವಿಷಯಕ್ಕೆ ಬರೋಣ, ನಾರ್ಡ್‌ ಪಾಸ್‌ (NordPass) ಈ ಈ ವರ್ಷದ ವಾರ್ಷಿಕ ಸಾಮಾನ್ಯ ಪಾಸ್‌ವರ್ಡ್‌ಗಳ ಪಟ್ಟಿಯನ್ನು ಹಂಚಿಕೊಂಡಿದೆ. ಅದರಂತೆ ಹೆಚ್ಚಾಗಿ ಬಳಕೆ ಮಾಡುವ ಪಾಸ್‌ವರ್ಡ್‌ಗಳಲ್ಲಿ ಟಾಪ್ 10 ಸಾಮಾನ್ಯ ಪಾಸ್‌ವರ್ಡ್‌ಗಳ ಬಗ್ಗೆ ಉಲ್ಲೇಖ ಮಾಡಿದೆ. ಇದರಲ್ಲಿ '123456, ಬಿಗ್‌ಬಾಸ್ಕೆಟ್, ಪಾಸ್‌ವರ್ಡ್, 12345678, 123456789, pass@123, 1234567890, anmol123, abcd1234, ಹಾಗೂ googledummy'. ಇವು ಹೆಚ್ಚು ಜನರು ಬಳಕೆ ಮಾಡುತ್ತಿರುವ ಪಾಸ್‌ವರ್ಡ್‌ ಆಗಿವೆ.

guest

ಈ ಸಂಶೋಧನೆಯನ್ನು ಭಾರತವೂ ಸೇರಿದಂತೆ ಜಾಗತಿಕವಾಗಿ ಹಲವಾರು ದೇಶಗಳಲ್ಲಿ ನಡೆಸಲಾಗಿದೆ. ಅದರಲ್ಲೂ 30 ದೇಶಗಳಲ್ಲಿ ಈ ಕಾರ್ಯ ಜರುಗಿದ್ದು, ಅಲ್ಲಿ 'guest, vip, 123456' ಎಂಬ ಪಾಸ್‌ವರ್ಡ್‌ ಅನ್ನು ಹೆಚ್ಚಾಗಿ ಬಳಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಗಮನಾರ್ಹ ವಿಷಯ ಎಂದರೆ ಪ್ರತಿವರ್ಷವೂ ಸಹ ನಾರ್ಡ್‌ ಪಾಸ್‌ ಸಂಶೋಧಕರು ಈ ವಿಷಯದ ಬಗ್ಗೆ ಸಂಶೋಧನೆ ನಡೆಸಿಕೊಂಡು ಬರುತ್ತಿದ್ದಾರೆ.

ಸಿನಿಮಾದಲ್ಲಿನ ಹೆಸರುಗಳ ಬಳಕೆ

ಸಿನಿಮಾದಲ್ಲಿನ ಹೆಸರುಗಳ ಬಳಕೆ

ಪ್ರತಿ ವರ್ಷದಲ್ಲಿ ವರದಿಯಾದಂತೆ ಈ ವರ್ಷವೂ ಸಹ ಕ್ರೀಡಾ ತಂಡಗಳು, ಚಲನಚಿತ್ರದ ಪಾತ್ರದ ಹೆಸರುಗಳು ಹಾಗೂ ಆಹಾರ ಪದಾರ್ಥಗಳ ಹೆಸರು ಹೆಚ್ಚಾಗಿ ಪಾಸ್‌ವರ್ಡ್‌ ಆಗಿ ಬಳಕೆ ಆಗಿವೆ. ಅದರಂತೆ ಬಳಕೆದಾರರು ಇಲ್ಲಿ ತಿಳಿಸಲಾದ ವರ್ಗಗಳಲ್ಲಿ ಜನಪ್ರಿಯ ಹೆಸರುಗಳನ್ನು ಬಳಕೆ ಮಾಡುತ್ತಿದ್ದು, ಇವು ಸಾಕಷ್ಟು ದುರ್ಬಲ ಪಾಸ್‌ವರ್ಡ್‌ಗಳಾಗಿವೆ ಮತ್ತು ಹ್ಯಾಕರ್‌ನ ಕೆಲಸವನ್ನು ಮತ್ತಷ್ಟು ಸುಲಭಗೊಳಿಸಲಿವೆ ಎಂದು ಸಂಸ್ಥೆ ತಿಳಿಸಿದೆ.

ಹಾಗಿದ್ರೆ, ಯಾವ ರೀತಿ ಪಾಸ್‌ವರ್ಡ್‌ ರಚನೆ ಮಾಡಬೇಕು?

ಹಾಗಿದ್ರೆ, ಯಾವ ರೀತಿ ಪಾಸ್‌ವರ್ಡ್‌ ರಚನೆ ಮಾಡಬೇಕು?

ನೀವು ಪಾಸ್‌ವರ್ಡ್‌ ರಚನೆ ಮಾಡಬೇಕಾದಾಗ ತಲೆಗೆ ಸ್ವಲ್ಪ ಕೆಲಸ ಕೊಡಬೇಕಿದೆ. ಅಕಸ್ಮಾತ್‌ ನೀವು ಕಠಿಣವಾದ ಪಾಸ್‌ವರ್ಡ್‌ ಮರೆಯುತ್ತೀರಿ ಎಂದರೆ ಎಲ್ಲಾದರೂ ಬರೆದಿಟ್ಟುಕೊಳ್ಳಿ. ಇನ್ನು ನೀವು ರಚಿಸುವ ಪಾಸ್‌ವರ್ಡ್‌ನಲ್ಲಿ ವಿಭಿನ್ನ ವರ್ಣಮಾಲೆಗಳು, ಚಿಹ್ನೆಗಳು, ಸಂಖ್ಯೆ ಇರಬೇಕು ಹಾಗೂ ಇವು ದೀರ್ಘವಾಗಿದ್ದರೆ ಇನ್ನಷ್ಟು ಅನುಕೂಲವಾಗಲಿದೆ. ಉದಾಹರಣೆ ಸಹಿತ ಹೇಳುವುದಾದರೆ 'Ra1Q0#+Ga@os' ಎಂದು ನೀವು ಪಾಸ್‌ವರ್ಡ್‌ ರಚಿಸಬಹುದು.

ಎಲ್ಲಾ ಖಾತೆಗೂ ಭಿನ್ನ ಪಾಸ್‌ವರ್ಡ್‌ ಬಳಸಿ

ಎಲ್ಲಾ ಖಾತೆಗೂ ಭಿನ್ನ ಪಾಸ್‌ವರ್ಡ್‌ ಬಳಸಿ

ಬಳಕೆದಾರರು ಸಾಮಾನ್ಯವಾಗಿ ಎಲ್ಲಾ ರೀತಿಯ ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡುತ್ತಿರುತ್ತಾರೆ. ಆ ವೇಳೆ ಸುಲಭವಾಗಲಿ ಎಂದು ಒಂದೇ ರೀತಿಯ ಪಾಸ್‌ವರ್ಡ್‌ ರಚಿಸುವುದು ಸರ್ವೇ ಸಾಮಾನ್ಯ. ಆದರೆ, ಇದೂ ಸಹ ತಪ್ಪು. ಯಾಕೆಂದರೆ ಹ್ಯಾಕರ್‌ ಒಂದು ಖಾತೆಯನ್ನು ಮಾತ್ರ ಹ್ಯಾಕ್‌ ಮಾಡಬೇಕು ಎಂದು ಬಂದರೆ, ಒಂದೇ ಯಾಕೆ ಎಲ್ಲಾ ಖಾತೆಗಳನ್ನೂ ಹ್ಯಾಕ್‌ ಮಾಡಿ ಎಂದು ನೀವೇ ದಾರಿ ತೋರಿಸಿಕೊಟ್ಟಂತೆ ಆಗುತ್ತದೆ.

 ಎರಡು ಹಂತದ ಪರಿಶೀಲನೆ ಇರಲಿ

ಎರಡು ಹಂತದ ಪರಿಶೀಲನೆ ಇರಲಿ

ಸಾಮಾನ್ಯವಾಗಿ ಈಗಂತೂ ಎಲ್ಲಾ ಸಾಮಾಜಿಕ ಜಾಲತಾಣದ ಖಾತೆಗೆ ಈ ಎರಡು ಹಂತದ ಪರಿಶೀಲನೆ ಆಯ್ಕೆ ನೀಡಲಾಗಿದೆ (two-step verification). ಆ ಮೂಲಕ ನಿಮ್ಮ ಖಾತೆಗೆ ಯಾರೇ ಆದರೂ ಸಹ ಕನ್ನ ಹಾಕಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಇದರಲ್ಲಿ ಎರಡು ಬಗೆಯ ಪಿನ್‌ ರಚಿಸಿಕೊಳ್ಳಬಹುದು. ಹಾಗೂ ಯಾರಾದರೂ ನಿಮ್ಮ ಖಾತೆಗೆ ಪ್ರವೇಶ ಪಡೆಯಲು ಮುಂದಾದರೆ ನಿಮ್ಮ ಮೊಬೈಲ್‌ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ. ಅದರಲ್ಲೂ ನೀವು ಪ್ರಮುಖವಾಗಿ ಮಾಡಬೇಕಾದ ಕಾರ್ಯ ಎಂದರೆ ಪ್ರತಿ ಮೂರು ತಿಂಗಳಿಗೊಮ್ಮೆ ಪಾಸ್‌ವರ್ಡ್‌ ಬದಲಾಯಿಸಿದರೆ ನಿಮಗೆ ತುಂಬಾ ಅನುಕೂಲ ಆಗಲಿದೆ. ಇದನ್ನು ಒಂದು ಅಭ್ಯಾಸದಂತೆ ರೂಢಿಸಿಕೊಂಡರೆ ಇನ್ನು ಉತ್ತಮ.

Best Mobiles in India

English summary
password is usually mandatory for all accounts. But it is known that Indians are creating very weak passwords.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X