ಸದ್ಯದಲ್ಲೇ ವಾಟ್ಸಾಪ್‌ ಸೇರಲಿರುವ ಈ ಫೀಚರ್ಸ್‌ಗಳ ಬಗ್ಗೆ ನಿಮಗೆ ತಿಳಿದಿದೆಯಾ?

|

ವಾಟ್ಸಾಪ್‌ ಅಪ್ಲಿಕೇಶನ್‌ ಎಲ್ಲಾ ವಯೋಮಾನದವರನ್ನು ಸೆಳೆದಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ನೀಡುವ ಮೂಲಕ ಎಲ್ಲರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಬಳಕೆದಾರರ ಗೌಪ್ಯತೆಗೆ ಸಂಬಂಧಿಸಿದಂತೆ ಅನೇಕ ಆಯ್ಕೆಗಳನ್ನು ನೀಡಿರುವ ವಾಟ್ಸಾಪ್‌ ಸುರಕ್ಷತೆಗೆ ಹೆಚ್ಚಿನ ಅಧ್ಯತೆ ನೀಡುತ್ತಾ ಬಂದಿದೆದ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪ್ರತಿಯೊಂದು ಹಂತದಲ್ಲಿಯೂ ಬಳಕೆದಾರರ ಅನುಕೂಲ ಕಲ್ಪಿಸುವ ಪ್ರಯತ್ನವನ್ನು ವಾಟ್ಸಾಪ್‌ ಮಾಡುತ್ತಲೇ ಬಂದಿದೆ.

ಸದ್ಯದಲ್ಲೇ ವಾಟ್ಸಾಪ್‌ ಸೇರಲಿರುವ ಈ ಫೀಚರ್ಸ್‌ಗಳ ಬಗ್ಗೆ ನಿಮಗೆ ತಿಳಿದಿದೆಯಾ?

ಹೌದು, ವಾಟ್ಸಾಪ್‌ ಪ್ರತಿನಿತ್ಯವೂ ಒಂದಲ್ಲ ಒಂದು ಫೀಚರ್ಸ್‌ ಬಗ್ಗೆ ವರದಿ ನೀಡುತ್ತಲೇ ಬಂದಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತನ್ನ ಜನಪ್ರಿಯತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇನ್ನು ಅನೇಕ ಹೊಸ ಪ್ರಯೋಗಗಳನ್ನು ನಡೆಸುತ್ತಲೇ ಇದೆ. ಇದಕ್ಕೆ ಪೂರಕವೆಂಬಂತೆ ವಾಟ್ಸಾಪ್‌ ಇನ್ನಷ್ಟು ಫೀಚರ್ಸ್‌ ಪರಿಚಯಿಸುವುದಕ್ಕೆ ಮುಂದಾಗಿದೆ. ಸದ್ಯ ವಾಟ್ಸಾಪ್‌ ಶೀಘ್ರದಲ್ಲೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಯಾವೆಲ್ಲಾ ಫೀಚರ್ಸ್‌ಗಳನ್ನು ಪರಿಚಯಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಣಮಟ್ಟದ ಫೋಟೋ ಕಳುಹಿಸುವ ಆಯ್ಕೆ
ವಾಟ್ಸಾಪ್‌ ಬಳಕೆದಾರರ ಬಹು ದಿನಗಳ ಕೊರಿಕೆಯಂತೆ ವಾಟ್ಸಾಪ್‌ ಶೀಘ್ರದಲ್ಲೇ ಗುಣಮಟ್ಟದ ಫೋಟೋವನ್ನು ಸೆಂಡ್‌ ಮಾಡುವ ಆಯ್ಕೆ ನೀಡಲು ಮುಂದಾಗಿದೆ. ಈ ಫೀಚರ್ಸ್‌ನಿಂದಾಗಿ ಬಳಕೆದಾರರು ವಾಟ್ಸಾಪ್‌ ಮೂಲಕ ಸೆಂಡ್‌ ಮಾಡುವ ಫೋಟೋದ ರೆಸಲ್ಯೂಶನ್‌ನಲ್ಲಿ ಯಾವುದೇ ರೀತಿಯ ಗುಣಮಟ್ಟ ಕಡಿಮೆಯಾಗುವುದಿಲ್ಲ ಎನ್ನಲಾಗಿದೆ. ಇದಕ್ಕಾಗಿ ತನ್ನ ಡ್ರಾಯಿಂಗ್ ಟೂಲ್ ಹೆಡರ್‌ಗೆ ಹೊಸ ಸೆಟ್ಟಿಂಗ್ ಐಕಾನ್ ಅನ್ನು ಸೇರ್ಪಡೆ ಮಾಡಲಿದೆ. ಪ್ರಸ್ತುತ ಈ ಫೀಚರ್ಸ್‌ ಅಭಿವೃದ್ಧಿಯ ಹಂತದಲ್ಲಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ಸದ್ಯದಲ್ಲೇ ವಾಟ್ಸಾಪ್‌ ಸೇರಲಿರುವ ಈ ಫೀಚರ್ಸ್‌ಗಳ ಬಗ್ಗೆ ನಿಮಗೆ ತಿಳಿದಿದೆಯಾ?

ಲಾಂಗರ್‌ ಗ್ರೂಪ್‌ ಸಬ್ಜೆಕ್ಟ್ಸ್‌ ಮತ್ತು ಡಿಸ್ಕ್ರಿಪ್ಶನ್‌
ವಾಟ್ಸಾಪ್‌ ತನ್ನ ಆಂಡ್ರಾಯ್ಡ್‌ ಆವೃತ್ತಿಯಲ್ಲಿ ಪರಿಚಯಿಸಲಿರುವ ಪ್ರಮುಖ ಫೀಚರ್ಸ್‌ಗಳಲ್ಲಿ ಇದು ಕೂಡ ಒಂದಾಗಿದೆ. ಈ ಫೀಚರ್ಸ್‌ನಿಂದಾಗಿ ಆಂಡ್ರಾಯ್ಡ್ ಬಳಕೆದಾರರು ತಮ್ಮ ಲಾಂಗರ್‌ ಗ್ರೂಪ್‌ ಸಬ್ಜೆಕ್ಟ್ಸ್‌ ಮತ್ತು ಡಿಸ್ಕ್ರಿಪ್ಶನ್‌ ಕ್ಯಾರೆಕ್ಟರ್‌ ಲಿಮಿಟ್‌ ಅನ್ನು ಹೆಚ್ಚಿಸುವುದಕ್ಕೆ ಮುಂದಾಗಿದೆ. ಇದರಿಂದ ಈ ಹಿಂದೆ ಲಭ್ಯವಿದ್ದ ವಾಟ್ಸಾಪ್ ಗ್ರೂಪ್ ಸಬ್ಜೆಕ್ಟ್ ಡಿಸ್ಕ್ರಿಪ್ಶನ್‌ 25 ಕ್ಯಾರೆಕ್ಟರ್‌ ಲಿಮಿಟ್‌ ಇದೀಗ 100 ಕ್ಯಾರೆಕ್ಟರ್‌ಗೆ ವಿಸ್ತರಣೆಯಾಗಲಿದೆ. ಇದಲ್ಲದೆ ವಾಟ್ಸಾಪ್‌ 512 ರಿಂದ 2048 ರವರೆಗೆ ಕ್ಯಾರೆಕ್ಟರ್‌ ಲಿಮಿಟ್‌ ಅನ್ನು ಹೆಚ್ಚಿಸಲಿದೆ.

ಟೆಕ್ಸ್ಟ್ ಎಡಿಟರ್
ವಾಟ್ಸಾಪ್‌ ತನ್ನ ಡ್ರಾಯಿಂಗ್‌ ಟೂಲ್‌ನಲ್ಲಿ ಹೊಸ ಟೆಕ್ಸ್ಟ್ ಎಡಿಟರ್‌ ಅನ್ನು ಪರಿಚಯಿಸುವುದಕ್ಕೆ ಮುಂದಾಗಿದೆ. ಟೆಕ್ಸ್ಟ್‌ ಎಡಿಟರ್‌ ಟೂಲ್ಸ್‌ ಜೊತೆಗೆ ಡ್ರಾಯಿಂಗ್‌ ಟೂಲ್‌ನಲ್ಲಿ ಹೊಸದಾಗಿ ಮೂರು ಆಯ್ಕೆಗಳು ಕೂಡ ಲಭ್ಯವಾಗಲಿವೆ. ಇವುಗಳ ಮೂಲಕ ನೀವು ಕೀಬೋರ್ಡ್‌ ಮೇಲಿನ ಫಾಂಟ್‌ ಆಯ್ಕೆಗಳಲ್ಲಿ ವಿವಿಧ ಫಾಂಟ್‌ ಆಯ್ಕೆಗಳನ್ನು ಬದಲಾಯಿಸಬಹುದಾಗಿದೆ. ಇದಲ್ಲದೆ ಟೆಕ್ಸ್ಟ್‌ ಲೈನ್‌ ಅನ್ನು ಕೂಡ ಎಡ ಬಲ ಮಧ್ಯದಲ್ಲಿ ಬದಲಾಯಿಸಬಹುದಾಗಿದೆ. ಜೊತೆಗೆ ಟೆಕ್ಸ್ಟ್‌ ಬ್ಯಾಕ್‌ಗ್ರೌಂಡ್‌ನಲ್ಲಿ ಕಲರ್‌ ಅನ್ನು ಬದಲಾಯಿಸುವುದಕ್ಕೆ ಕೂಡ ಅವಕಾಶ ಲಭ್ಯವಾಗಲಿದೆ.

ಸದ್ಯದಲ್ಲೇ ವಾಟ್ಸಾಪ್‌ ಸೇರಲಿರುವ ಈ ಫೀಚರ್ಸ್‌ಗಳ ಬಗ್ಗೆ ನಿಮಗೆ ತಿಳಿದಿದೆಯಾ?

ಹೊಸ ಫಾಂಟ್‌ಗಳು
ಇನ್ನು ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಫಾಂಟ್‌ಗಳನ್ನು ಪರಿಚಯಿಸುವುದಕ್ಕೆ ಸಿದ್ಧತೆ ನಡೆಸಿದೆ. ಇದರಿಂದ ಬಳಕೆದಾರರು ಇಮೇಜ್‌ಗಳು ಮತ್ತು ವೀಡಿಯೊಗಳು ಹಾಘೂ ಜಿಫ್‌ನಲ್ಲಿ ಟೆಕ್ಟ್ಸ್‌ ಅನ್ನು ಎಡಿಟ್‌ ಮಾಡುವ ಮತ್ತು ವಿವಿಧ ಫಾಂಟ್‌ ಆಯ್ಕೆಗಳಲ್ಲಿ ಟೆಕ್ಸ್ಟ್‌ ಆಯ್ಕೆಯನ್ನು ಸೇರಿಸಲು ಅನುಮತಿಸಲಿದೆ. ಇದಲ್ಲದೆ ವಾಟ್ಸಾಫ್‌ ತನ್ನ ಟೆಕ್ಸ್ಟ್‌ ಎಡಿಟರ್‌ನಲ್ಲಿ Calistoga, Courier Prime, Damion, Exo 2 ಮತ್ತು ಮಾರ್ನಿಂಗ್ ಬ್ರೀಜ್ ಫಾಂಟ್‌ಗಳನ್ನು ಸೇರಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಗ್ರೂಪ್‌ ಮೆಸೇಜ್‌ ರಿಯಾಕ್ಷನ್‌
ವಾಟ್ಸಾಪ್‌ ತನ್ನ ಐಒಎಸ್‌ ಆವೃತ್ತಿಯಲ್ಲಿ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ. ಅದರಂತೆ ಐಒಎಸ್‌ ಬಳಕೆದಾರರು ಅನೌನ್ಸ್‌ಮೆಂಟ್‌ ಗ್ರೂಪ್‌ ಸಂದೇಶಗಳಿಗೆ ರಿಯಾಕ್ಷನ್‌ ನೀಡುವ ಅವಕಾಶ ಸಿಗಲಿದೆ. ಈ ಅವಕಾಶವನ್ನು ಬಳಸಿಕೊಂಡು ಬಳಕೆದಾರರು ಅನೌನ್ಸ್‌ಮೆಂಟ್‌ ಗ್ರೂಪ್‌ಗಳಲ್ಲಿ ಸಂದೇಶಗಳಿಗೆ ರಿಯಾಕ್ಷನ್‌ ನೀಡಬಹುದಾಗಿದೆ. ಪ್ರಸ್ತುತ ಈ ಫೀಚರ್ಸ್‌ ಇನ್ನು ಕೂಡ ಅಭಿವೃದ್ಧಿ ಹಂತದಲ್ಲಿದ್ದು, ಶೀಘ್ರದಲ್ಲೇ ಎಲ್ಲಾ ಐಒಎಸ್‌ ಬಳಕೆದಾರರಿಗೂ ಲಭ್ಯವಾಗುವ ನಿರೀಕ್ಷೆಯಿದೆ.

Best Mobiles in India

English summary
The new updates of WhatsApp always include some exciting updates which are targeted at enhancing the user interface and privacy on the platform.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X