Subscribe to Gizbot

21 ನೇ ತಂತ್ರಜ್ಞಾನಕ್ಕೆ ಟೆಕ್ ಯುಗದ ಅದ್ಭುತ ಕೊಡುಗೆಗಳು

Written By:

ತಂತ್ರಜ್ಞಾನ ಯುಗದಲ್ಲಿ ಎಲ್ಲವೂ ಹೊಸತಾಗುವುದು ಅನ್ವೇಷಣೆಯಿಂದ ಮಾತ್ರವೇ. ಒಂದು ಉತ್ಪನ್ನ ಮಾರುಕಟ್ಟೆಗೆ ಪ್ರವೇಶಿಸಿದರೆ ಸಾಕು ಅದರ ನಂತರದ ಅಪ್‌ಡೇಟ್ ಆವೃತ್ತಿ ಹಳೆಯದಕ್ಕೆ ಪೈಪೋಟಿ ನೀಡುವಂತೆ ಹೊಸತನದ ಮೆರುಗಿನಿಂದ ಕಣ್ಸೆಳೆಯುತ್ತದೆ.

ಟೆಕ್ ಕ್ಷೇತ್ರದಲ್ಲಿ ಭಾರೀ ಪೈಪೋಟಿಯನ್ನು ನೀಡುವ ಆಪಲ್, ಸ್ಯಾಮ್‌ಸಂಗ್, ಶ್ಯೋಮಿ, ಮೋಟೋರೋಲಾ ಹೀಗೆ ಪ್ರಸಿದ್ಧಿಯ ತುತ್ತತುದಿಯಲ್ಲಿರುವ ಉತ್ಪನ್ನಗಳನ್ನು ಪಟ್ಟಿ ಮಾಡುತ್ತಾ ಹೋದರೆ ಟೆಕ್ ಕ್ಷೇತ್ರ ಎಷ್ಟು ಅಭಿವೃದ್ಧಿಯನ್ನು ಪಡೆದುಕೊಂಡಿದೆ ಎಂಬುದನ್ನು ಕಾಣಬಹುದಾಗಿದೆ. ಇಂದಿನ ಲೇಖನದಲ್ಲಿ 21 ನೇ ಶತಮಾನದ ಅನ್ವೇಷಣೆಗಳು ಎಂದೇ ಕರೆಯಲಾದ ಉತ್ಪನ್ನಗಳನ್ನು ಕೆಳಗೆ ನಾವು ನೀಡುತ್ತಿದ್ದು ನಿಮಗಿದು ಅಚ್ಚರಿಯನ್ನುಂಟು ಮಾಡುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್ ಐಪೋಡ್

21 ನೇ ತಂತ್ರಜ್ಞಾನಕ್ಕೆ ಟೆಕ್ ಯುಗದ ಅದ್ಭುತ ಕೊಡುಗೆಗಳು

ಎಮ್‌ಪಿ3 ಪ್ಲೇಯರ್ ಇದಾಗಿದ್ದು ಆಪಲ್ ಇದನ್ನು 2001 ರಲ್ಲಿ ಲಾಂಚ್ ಮಾಡಿದೆ. ಆಪಲ್‌ನ ಐಟ್ಯೂನ್ಸ್ ಸಾಫ್ಟ್‌ವೇರ್‌ನೊಂದಿಗೆ ಈ ಐಪೋಡ್ ಬಂದಿದೆ. ಇದರ ಕಣ್ಸೆಳೆಯುವ ವಿನ್ಯಾಸ ನಿಜಕ್ಕೂ ಆಪಲ್ ಐಪೋಡ್ ಅನ್ನು ಇನ್ನಷ್ಟು ತುತ್ತತುದಿಗೇರಿಸಿದೆ.

ಮೊಜೈಲಾ ಫೈರ್‌ಫಾಕ್ಸ್

21 ನೇ ತಂತ್ರಜ್ಞಾನಕ್ಕೆ ಟೆಕ್ ಯುಗದ ಅದ್ಭುತ ಕೊಡುಗೆಗಳು

ಫೈರ್‌ಫಾಕ್ಸ್ ಪ್ರಥಮ ವೆಬ್ ಬ್ರೌಸರ್ ಆಗಿದ್ದು ಮೈಕ್ರೋಸಾಫ್ಟ್ ಇಂಟರ್ನೆಟ್ ಎಕ್ಸ್‌ಪ್ಲೋರರ್‌ಗೆ ಇದು ತೀವ್ರ ಪೈಪೋಟಿಯನ್ನು ನೀಡಿತ್ತು. 2002 ರಲ್ಲಿ ಅಸ್ತಿತ್ವಕ್ಕೆ ಬಂದ ಈ ವೆಬ್ ಬ್ರೌಸರ್ ಉಚಿತ ಮತ್ತು ಓಪನ್ ಸೋರ್ಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಸ್ಕೈಪ್

21 ನೇ ತಂತ್ರಜ್ಞಾನಕ್ಕೆ ಟೆಕ್ ಯುಗದ ಅದ್ಭುತ ಕೊಡುಗೆಗಳು

ಬೇರೆ ಬೇರೆ ದೇಶಗಳಲ್ಲಿ ಜನರ ಸಂವಹನ ವಿಧಾನವನ್ನೇ ಬದಲಾಯಿಸಿದ ಹೆಗ್ಗಳಿಕೆಗೆ ಸ್ಕೈಪ್ ಕಾರಣವಾಯಿತು. ವೈಫೈ ಸಂಪರ್ಕವನ್ನು ಪಡೆದುಕೊಂಡು ಕರೆ ಮಾಡುವುದು, ಚಾಟ್ ಮಾಡುವುದು ಮೊದಲಾದ ಚಟುವಟಿಕೆಗಳನ್ನು ಹೊರದೇಶದವರೆಗೂ ಮಾಡಬಹುದಾಗಿದೆ. ಮೊದಲಿಗೆ ಇದು ಡೆಸ್ಕ್‌ಟಾಪ್‌ನಲ್ಲಿ ಉಗಮ ಕಂಡುಕೊಂಡಿತಾದರೂ ನಂತರ ಮೊಬೈಲ್‌ಗೂ ಅಡಿಇಟ್ಟಿತು.

ಫೇಸ್‌ಬುಕ್

21 ನೇ ತಂತ್ರಜ್ಞಾನಕ್ಕೆ ಟೆಕ್ ಯುಗದ ಅದ್ಭುತ ಕೊಡುಗೆಗಳು

2004 ರಲ್ಲಿ ಫೇಸ್‌ಬುಕ್ ಪ್ರಥಮ ಸೋಶಿಯಲ್ ನೆಟ್‌ವರ್ಕ್ ಆಗಿ ಕಾಲಿರಿಸಿದ ಫೇಸ್‌ಬುಕ್ ಕಡಿಮೆ ಸಮಯದಲ್ಲೇ ಬಳಕೆದಾರರ ಮನಗೆದ್ದಿತು. ಇಂದು ಈ ವೆಬ್‌ಸೈಟ್ ಜಗತ್ತಿನಾದ್ಯಂತ 1.3 ಬಿಲಿಯನ್ ಜನರನ್ನು ಸಂಪರ್ಕಿಸುತ್ತದೆ.

ಯೂಟ್ಯೂಬ್

21 ನೇ ತಂತ್ರಜ್ಞಾನಕ್ಕೆ ಟೆಕ್ ಯುಗದ ಅದ್ಭುತ ಕೊಡುಗೆಗಳು

ಮಾಜಿ ಪೇಪಾಲ್ ಉದ್ಯೋಗಿಯೊಬ್ಬರಿಂದ 2005 ರಲ್ಲಿ ಜನ್ಮತಾಳಿದ ಯೂಟ್ಯೂಬ್, ಜಗತ್ತಿನ ಹೆಚ್ಚು ಜನಪ್ರಿಯ ವೀಡಿಯೊ ಶೇರಿಂಗ್ ವೆಬ್‌ಸೈಟ್ ಆಗಿ ಜನಮನ ಗೆದ್ದಿತು.

ನಿನಿಟೆಂಡೋ ವೈ

21 ನೇ ತಂತ್ರಜ್ಞಾನಕ್ಕೆ ಟೆಕ್ ಯುಗದ ಅದ್ಭುತ ಕೊಡುಗೆಗಳು

ಗೇಮ್ ಕನ್ಸೋಲ್ ಕ್ಷೇತ್ರದಲ್ಲಿ ಸೋನಿಯ ಪ್ಲೇ ಸ್ಟೇಶನ್ ಹಾಗೂ ಮೈಕ್ರೋಸಾಫ್ಟ್ ಎಕ್ಸ್‌ಬಾಕ್ಸ್ ಇದು ತೀವ್ರ ಪೈಪೋಟಿಯನ್ನು ನೀಡಿತ್ತು. ದೈಹಿಕವಾಗಿ ಆಟಗಾರರನ್ನು ಆಟದಲ್ಲಿ ತೊಡಗಿಸುವಂತೆ ಈ ಕನ್ಸೋಲ್ ಮಾಡಿತು.

ಆಪಲ್ ಐಫೋನ್

21 ನೇ ತಂತ್ರಜ್ಞಾನಕ್ಕೆ ಟೆಕ್ ಯುಗದ ಅದ್ಭುತ ಕೊಡುಗೆಗಳು

ಆಪಲ್ ಐಫೋನ್ 2007 ರಲ್ಲಿ ಉಗಮಗೊಂಡಿತು. ಮೊದಲ ಟಚ್‌ಸ್ಕ್ರೀನ್ ಸ್ಮಾರ್ಟ್‌ಫೋನ್ ಆಗಿ ಖ್ಯಾತಿಯನ್ನು ಪಡೆದುಕೊಂಡ ಸ್ಮಾರ್ಟ್‌ಫೋನ್ ಇದಾಗಿದೆ. ಸ್ಟೈಲಸ್‌ನ ಅಗತ್ಯವಿಲ್ಲದೆ ಬೆರಳು ಬಳಸಿ ಇದನ್ನು ಹ್ಯಾಂಡಲ್ ಮಾಡಬಹುದಾಗಿತ್ತು.

ಬಿಬಿಸಿ ಐಪ್ಲೇಯರ್

21 ನೇ ತಂತ್ರಜ್ಞಾನಕ್ಕೆ ಟೆಕ್ ಯುಗದ ಅದ್ಭುತ ಕೊಡುಗೆಗಳು

ಬಿಬಿಸಿಯ ಇಂಟರ್ನೆಟ್ ಟಿವಿ ಸಿರೀಸ್, 2007 ರಲ್ಲಿ ಆರಂಭಗೊಂಡಿತು. ಇದು ಪೂರ್ಣ ಉದ್ದದ ಫಿಲ್ಮ್ ಮತ್ತು ಟಿವಿ ಪ್ರೊಗ್ರಾಮ್‌ಗಳನ್ನು ವೀಕ್ಷಕರಿಗೆ ಉಣಬಡಿಸಿತು.

ಅಮೆಜಾನ್ ಕಿಂಡಲ್

21 ನೇ ತಂತ್ರಜ್ಞಾನಕ್ಕೆ ಟೆಕ್ ಯುಗದ ಅದ್ಭುತ ಕೊಡುಗೆಗಳು

ಮಾರುಕಟ್ಟೆಗೆ 2007 ರಲ್ಲಿ ಬಂದಿಳಿದ ಪ್ರಥಮ ಇ ರೀಡರ್ ಇದಾಗಿದೆ. ಕಡಿಮೆ ದರದಲ್ಲಿ ಅಮೆಜಾನ್ ಕಿಂಡಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಯುಕೆನಲ್ಲಿ 80 ಶೇಕಡದಷ್ಟು ಇಬುಕ್ ಮಾರುಕಟ್ಟೆಯನ್ನು ಅಮೆಜಾನ್ ಇದೀಗ ನಿಯಂತ್ರಿಸುತ್ತಿದೆ.

ಗೂಗಲ್ ಆಂಡ್ರಾಯ್ಡ್

21 ನೇ ತಂತ್ರಜ್ಞಾನಕ್ಕೆ ಟೆಕ್ ಯುಗದ ಅದ್ಭುತ ಕೊಡುಗೆಗಳು

ಐಓಎಸ್‌ನೊಂದಿಗೆ ಸರಿಸಮನಾಗಿ ನಿಲ್ಲುವ ಪ್ಲಾಟ್‌ಫಾರ್ಮ್ ಆಗಿ ಹೊಮ್ಮಿದ ಆಂಡ್ರಾಯ್ಡ್ 2008 ರಲ್ಲಿ ಬೆಳಕಿಗೆ ಬಂದಿತು. ಕ್ಯಾಮೆರಾಗಳಿಗಾಗಿ ಆಂಡ್ರಾಯ್ಡ್ ಅನ್ನು ಮೊದಲು ನಿರ್ಮಿಸಿದ್ದಾದರೂ, ನಂತರ ಮೊಬೈಲ್‌ಗಳಿಗೆ 2008 ರಲ್ಲಿ ಲಾಂಚ್ ಮಾಡಲಾಯಿತು. ಈ ಪ್ಲಾಟ್‌ಫಾರ್ಮ್ ಜಗತ್ತಿನಾದ್ಯಂತ 80 ಶೇಕಡದಷ್ಟು ಮಾರುಕಟ್ಟೆ ಷೇರನ್ನು ಪಡೆದುಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Most important inventions of the 21st Century: in pictures.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot