ಮೊಟೊರೊಲಾದ ಈ ಫೋನ್‌ ಮೇಲೆ ಬಿಡುಗಡೆಗೂ ಮುನ್ನವೇ ಯಾಕಿಷ್ಟು ನಿರೀಕ್ಷೆ?

|

ಮೊಟೊರೊಲಾ ಕಂಪೆನಿ ಶೀಘ್ರದಲ್ಲೇ ತನ್ನ ಹೊಸ ಎಂಟ್ರಿ ಲೆವೆಲ್‌ ಸ್ಮಾರ್ಟ್‌ಫೋನ್‌ನೊಂದಿಗೆ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ. ಇದನ್ನು ಮೊಟೊ E13 ಎಂದು ಹೆಸರಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ ಡಿಸೈನ್‌ ಹೇಗಿರಲಿದೆ ಎಂದು ಸೂಚಿಸುವ ಇಮೇಜ್‌ಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಈ ಇಮೇಜ್‌ಗಳ ಪ್ರಕಾರ ಈ ಸ್ಮಾರ್ಟ್‌ಫೋನ್‌ ಎಲ್‌ಇಡಿ ಫ್ಲ್ಯಾಷ್‌ಲೈಟ್‌ ಬೆಂಬಲಿಸುವ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿರಲಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ ವಾಟರ್‌ ಡ್ರಾಪ್‌ ಶೈಲಿಯ ನಾಚ್‌ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಮೊಟೊರೊಲಾ

ಹೌದು, ಮೊಟೊರೊಲಾ ಕಂಪೆನಿಯ ಮೊಟೊ E13 ಸ್ಮಾರ್ಟ್‌ಫೋನ್‌ ಇಮೇಜ್‌ ಫೀಚರ್ಸ್‌ ಬಹಿರಂಗವಾಗಿದೆ. ಅದರಂತೆ ಈ ಸ್ಮಾರ್ಟ್‌ಫೋನ್‌ ಎಂಟ್ರಿ ಲೆವೆಲ್‌ ಪ್ರೈಸ್‌ಟ್ಯಾಗ್‌ನಲ್ಲಿ ಬರೋದು ಕನ್ಫರ್ಮ್‌ ಆಗಿದೆ. ಇದಲ್ಲೆ ಸ್ಮಾರ್ಟ್‌ಫೋನ್‌ ಯುಎಸ್‌ಬಿ ಸಿ ಪೋರ್ಟ್‌ನೊಂದಿಗೆ ಬರಲಿದೆ ಎಂದು ಇಮೇಜ್‌ಗಳಲ್ಲಿ ಕಾಣಬಹುದಾಗಿದೆ. ಬಲಭಾಗದಲ್ಲಿ ಸ್ಪೀಕರ್‌ ಗ್ರಿಲ್‌ ಮತ್ತು ಎಡಭಾಗದಲ್ಲಿ ಮೈಕ್ರೋಫೋಣ್‌ ಅನ್ನು ಸಹ ಹೊಂದಿರಲಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ನಲ್ಲಿ ನೀವು ನಿರೀಕ್ಷಿಸಬಹುದಾದ ಫೀಚರ್ಸ್‌ಗಳು ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೀಚರ್ಸ್‌ ನಿರೀಕ್ಷೆ ಏನು?

ಫೀಚರ್ಸ್‌ ನಿರೀಕ್ಷೆ ಏನು?

ಮೊಟೊ E13 ಸ್ಮಾರ್ಟ್‌ಫೋನ್‌ ಎಂಟ್ರಿ ಲೆವೆಲ್‌ ಸ್ಮಾರ್ಟ್‌ಫೋನ್‌ ಆಗಿರುವುದರಿಂದ ಇದು 6.73 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಡಿಸ್‌ಪ್ಲೇ 20.5:9 ರಚನೆಯ ಅನುಪಾತವನ್ನು ಪಡೆದಿರಬಹುದು ಅನ್ನೊದನ್ನ ಸೋರಿಕೆಯ ಇಮೇಜ್‌ಗಳಲ್ಲಿ ಕಾಣಬಹುದು. ಅಲ್ಲದೆ ಡಿಸ್‌ಪ್ಲೇ ವಾಟರ್‌ಡ್ರಾಪ್-ಶೈಲಿಯ ನಾಚ್ ವಿನ್ಯಾಸವನ್ನು ಪಡೆದುಕೊಂಡಿರಬಹುದು.

ಕಾರ್ಯದಕ್ಷತೆ ಏನಿರಬಹುದು?

ಕಾರ್ಯದಕ್ಷತೆ ಏನಿರಬಹುದು?

ಮೊಟೊ E13 ಸ್ಮಾರ್ಟ್‌ಫೋನ್‌ ಯುನಿಸೊಕ್ ಟಿ606 ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿರಬಹುದು. ಅಲ್ಲದೆ ಇದು ಆಂಡ್ರಾಯ್ಡ್ 13 (ಗೋ ಆವೃತ್ತಿ) ಅನ್ನು ರನ್ ಮಾಡುವ ಸಾಧ್ಯತೆಯಿದೆ. ಹಾಗೆಯೇ 2GB RAM ಮತ್ತು 32GB ಇನ್‌ಬಿಲ್ಟ್‌ ಸ್ಟೋರೇಜ್‌ ಪಡೆದಿರಲಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 1TB ವೆರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಏನಿರಲಿದೆ?

ಕ್ಯಾಮೆರಾ ಏನಿರಲಿದೆ?

ಈ ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಕಟೌಟ್‌ಗಳನ್ನು ಹೊಂದಿದೆ. ಆದರೆ ಇದರಲ್ಲಿ ಒಂದು ಮಾತ್ರ ಕ್ಯಾಮೆರಾ ಸೆನ್ಸಾರ್‌ ಇರಲಿದೆ. ಇನ್ನೊಂದು ಎಲ್‌ಇಡಿ ಫ್ಲ್ಯಾಷ್‌ ಲೈಟ್‌ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಸಹ ನಿರೀಕ್ಷಿಸಲಾಗಿದೆ.

ಬ್ಯಾಟರಿ ಬ್ಯಾಕ್‌ಅಪ್‌

ಬ್ಯಾಟರಿ ಬ್ಯಾಕ್‌ಅಪ್‌

ಮೊಟೊ E13 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯ ಹೊಂದಿರುವ ನಿರೀಕ್ಷೆಯಿದೆ. ಇದು ವೇಗದ ಚಾಜಿಂಗ್‌ ಬೆಂಬಲಿಸುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಜೊತೆಗೆ ಫೋನ್‌ ಕೆಳಭಾಗದಲ್ಲಿ USB-C ಪೋರ್ಟ್‌ನೊಂದಿಗೆ ಬರುತ್ತದೆ ಎಂದು ರೆಂಡರ್‌ಗಳು ತೋರಿಸುತ್ತವೆ. ಹಾಗೆಯೇ ಪೋರ್ಟ್ ಪಕ್ಕದಲ್ಲಿ ಬಲಭಾಗದಲ್ಲಿ ಸ್ಪೀಕರ್ ಗ್ರಿಲ್ ಮತ್ತು ಎಡಭಾಗದಲ್ಲಿ ಮೈಕ್ರೊಫೋನ್ ಇದೆ. ಇದು ಫೋನ್‌ಗಳಲ್ಲಿ OTT ವಿಷಯವನ್ನು ಹೆಚ್ಚು ಸೇವಿಸಲು ಇಷ್ಟಪಡುವ ಬಳಕೆದಾರರನ್ನು ಆಕರ್ಷಿಸುತ್ತದೆ.

ಬೆಲೆ ಮತ್ತು ಇತರೆ

ಬೆಲೆ ಮತ್ತು ಇತರೆ

ಈ ಸ್ಮಾರ್ಟ್‌ಫೋನ್‌ ಎಂಟ್ರಿ ಲೆವೆಲ್‌ ಆಗಿರುವುದರಿಂದ ಇದು ಹತ್ತು ಸಾವಿರ ರೂ. ಒಳಗೆ ಲಭ್ಯವಾಗುವ ಸಾದ್ಯತೆಯಿದೆ.

ಮೊಟೊರೊಲಾ

ಇದಲ್ಲದೆ ಮೊಟೊರೊಲಾ ಕಂಪೆನಿ ಇತ್ತೀಚಿಗೆ ಮೊಟೊರೊಲಾ ಕಂಪೆನಿ ಹೊಸ ಮೊಟೊ X40 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಇನ್ನು ಮೊಟೊ X40 ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ 60 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಹೊಂದಿರುವುದು ಇದರ ದೊಡ್ಡ ಪ್ಲಸ್‌ ಪಾಯಿಂಟ್‌ ಆಗಿದೆ. ಜೊತೆಗೆ 4,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 125W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಒಳಗೊಂಡಿದೆ.

Best Mobiles in India

English summary
Moto E13 smartphone has been spotted in an alleged official render

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X