ಮೊಟೊ E22 ಮತ್ತು E22i ಫೋನ್‌ ಬಿಡುಗಡೆ! ಡ್ಯುಯಲ್ ಕ್ಯಾಪ್ಚರ್‌ ವಿಶೇಷ!

|

ಜಾಗತಿಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಮೊಟೊರೊಲಾ ತನ್ನದೇ ಆದ ಪ್ರಭಾವವನ್ನು ಹೊಂದಿದೆ. ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಪ್ರತಿಭಾರಿಯೂ ಹೊಸ ಮಾದರಿಯ ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿರುವ ಮೊಟೊ ಇದೀಗ ಹೊಸ ಮೊಟೊ E22 ಮತ್ತು ಮೊಟೊ E22i ಫೋನ್‌ ಪರಿಚಯಿಸಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಮೀಡಿಯಾಟೆಕ್‌ ಹೆಲಿಯೋ G37 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಮೊಟೊರೊಲಾ

ಹೌದು, ಮೊಟೊರೊಲಾ ಕಂಪೆನಿ ಹೊಸದಾಗಿ ಮೊಟೊ E22 ಮತ್ತು ಮೊಟೊ E22i ಫೋನ್‌ ಅನಾವರಣಗೊಳಿಸಿದೆ. ಈ ಸ್ಮಾರ್ಟ್‌ಫೋನ್‌ಗಳು 90Hz ರಿಫ್ರೆಶ್‌ ರೇಟ್‌ ಅನ್ನು ಬೆಂಬಲಿಸುವ ಡಿಸ್‌ಪ್ಲೇ ಹೊಂದಿವೆ. ಈ ಫೋನ್‌ಗಳು ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಪಡೆದಿವೆ. ಜೊತೆಗೆ 4,020mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 10W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ಗಳ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಮೊಟೊ E22 ಮತ್ತು ಮೊಟೊ E22i ಸ್ಮಾರ್ಟ್‌ಫೋನ್‌ಗಳು 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿವೆ. ಈ ಡಿಸ್‌ಪ್ಲೇ 90Hz ರಿಫ್ರೆಶ್‌ ರೇಟ್‌ ಅನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ ಆಟೋ ಮೋಡ್‌ ಆನ್‌ ಆಗಿರುವಾಗ ರಿಪ್ರೆಶ್‌ ರೇಟ್‌ ಆಟೋಮ್ಯಾಟಿಕ್‌ 90Hz ಮತ್ತು 60Hz ನಡುವೆ ಸರಿ ಹೊಂದಿಸುತ್ತದೆ.

ಪ್ರೊಸೆಸರ್‌ ಕಾರ್ಯವೈಖರಿ ಏನಿದೆ?

ಪ್ರೊಸೆಸರ್‌ ಕಾರ್ಯವೈಖರಿ ಏನಿದೆ?

ಈ ಎರಡು ಸ್ಮಾರ್ಟ್‌ಫೋನ್‌ಗಳು ಮೀಡಿಯಾಟೆಕ್‌ ಹೆಲಿಯೋ G37 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಆದರೆ ಮೊಟೊ E22 ಆಂಡ್ರಾಯ್ಡ್‌ 12ನಲ್ಲಿ ರನ್‌ ಆಗಲಿದೆ. ಮೊಟೊ E22i ಫೋನ್‌ ಆಂಡ್ರಾಯ್ಡ್‌ 12 (Go ಆವೃತ್ತಿ)ಯಲ್ಲಿ ರನ್‌ ಆಗಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಅನ್ನು ಪಡೆದುಕೊಂಡಿವೆ. ಈ ಫೋನ್‌ಗಳು ಮೆಮೊರಿ ಕಾರ್ಡ್‌ ಬೆಂಬಲಿಸುವ ಸಾಧ್ಯತೆಯ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಮೊಟೊ E22 ಮತ್ತು ಮೊಟೊ E22i ಸ್ಮಾರ್ಟ್‌ಫೋನ್‌ಗಳು ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿವೆ. ಇದರಲ್ಲಿ ಮುಖ್ಯ ಕ್ಯಾಮೆರಾ 16 ಮೆಗಾಪಿಕ್ಸೆಲ್ AI ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಪಡೆದಿದೆ. ಇದಲ್ಲದೆ ಈ ಎರಡೂ ಫೋನ್‌ಗಳು ಕೂಡ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ?

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ?

ಮೊಟೊ E22 ಮತ್ತು ಮೊಟೊ E22i ಎರಡೂ ಸ್ಮಾರ್ಟ್‌ಫೋನ್‌ಗಳು ಕೂಡ 4,020mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 10W ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತವೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳು ಡಾಲ್ಬಿ ಅಟ್ಮಾಸ್‌ನೊಂದಿಗೆ ಸ್ಟೀರಿಯೋ ಸ್ಪೀಕರ್‌ಗಳನ್ನು ಒಳಗೊಂಡಿವೆ. ಈ ಫೋನ್‌ಗಳು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಅನ್ನು ಹೊಂದಿವೆ.

ವಿಶೇಷ ಫೀಚರ್ಸ್‌

ವಿಶೇಷ ಫೀಚರ್ಸ್‌

ಮೊಟೊ E22 ಸ್ಮಾರ್ಟ್‌ಫೋನ್‌ ಡ್ಯುಯಲ್ ಕ್ಯಾಪ್ಚರ್‌ ಹೊಂದಿದೆ. ಇದರಿಂದ ಬಳಕೆದಾರರು ಏಕಕಾಲದಲ್ಲಿ ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳಲ್ಲಿ ಫೋಟೋ ಅಥವಾ ವೀಡಿಯೊ ಸೆರೆಹಿಡಿಯಲು ಸಾಧ್ಯವಾಗಲಿದೆ. ಇನ್ನು ಮೊಟೊ e22i ಫೋನ್‌ ಟೈಮ್ ಲ್ಯಾಪ್ಸ್‌ನಂತಹ ಸಾಫ್ಟ್‌ವೇರ್ ಫೀಚರ್ಸ್‌ಗಳನ್ನು ಹೊಂದಿದೆ. ಇದಲ್ಲದೆ ಫಿಂಗರ್‌ಪ್ರಿಂಟ್ ರೀಡರ್‌ನಲ್ಲಿ ಡಬಲ್ ಟ್ಯಾಪ್ ಮಾಡುವ ಮೂಲಕ ಅಪ್ಲಿಕೇಶನ್ ಶಾರ್ಟ್‌ಕಟ್‌ಗಳನ್ನು ತೆರೆಯುವ ಆಕ್ಟಿವೇಟ್ ಪವರ್ ಟಚ್ ಫೀಚರ್ಸ್‌ ಅನ್ನು ಒಳಗೊಂಡಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಮೊಟೊ E22 ಸ್ಮಾರ್ಟ್‌ಫೋನ್‌ ಯುರೋಪ್‌ನಲ್ಲಿ EUR 139.99 (ಸುಮಾರು 11,150ರೂ) ಬೆಲೆಯನ್ನು ಪಡೆದಿದೆ. ಇದು ಆಸ್ಟ್ರೋ ಬ್ಲಾಕ್ ಮತ್ತು ಕ್ರಿಸ್ಟಲ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
ಇನ್ನು ಮೊಟೊ E22i ಫೋನ್‌ ಬೆಲೆ EUR 129.99 (ಸುಮಾರು 10,300ರೂ)ಗೆ ನಿಗದಿಪಡಿಸಲಾಗಿದೆ. ಇದು ಗ್ರ್ಯಾಫೈಟ್ ಗ್ರೇ ಮತ್ತು ವಿಂಟರ್ ವೈಟ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.
ಸದ್ಯ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಯುರೋಪ್, ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ಆಯ್ದ ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತವೆ ಎಂದು ಮೊಟೊರೊಲಾ ಹೇಳಿದೆ.

Best Mobiles in India

English summary
Moto E22 runs Android 12 and the Moto E22i runs Android 12 (Go edition).

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X