ಮೊಟೋ ಇ5 ಪ್ಲಸ್ ಗೆ 3000ರೂ ರಿಯಾಯಿತಿ,ಮೋಟೋ ಎಕ್ಸ್4 ಗೆ 12,999 ರೂ- ಫ್ಲಿಪ್ ಕಾರ್ಟ್ ನಲ್ಲಿ ಭರ್ಜರಿ ರಿಯಾಯಿತಿ ಸೇಲ್

By Gizbot Bureau
|

ಫ್ಲಿಪ್ ಕಾರ್ಟ್ ನ ಮೊಬೈಲ್ ಬೊನಾನ್ಝ ಸೇಲ್ ಆರಂಭವಾಗಿದ್ದು ವಿಭಿನ್ನ ಬ್ರ್ಯಾಂಡ್ ನ ಹಲವು ಸ್ಮಾರ್ಟ್ ಫೋನ್ ಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಸೇಲ್ ನಲ್ಲಿ ಭಾಗವಹಿಸುತ್ತಿರುವ ಪ್ರಮುಖ ಬ್ರ್ಯಾಂಡ್ ಗಳಲ್ಲಿ ಮೊಟೋರೊಲಾ ಕೂಡ ಒಂದು. ಮೊಟೋ ಸ್ಮಾರ್ಟ್ ಫೋನ್ ಗಳಿಗೆ ವಿಭಿನ್ನ ಬೆಲೆಯನ್ನು ನಿಗದಿಗೊಳಿಸಲಾಗಿದೆ. ಗ್ರಾಹಕರು 50 ಶೇಕಡಾದವರೆಗೆ ಇದರ ರಿಯಾಯಿತಿ ಲಾಭವನ್ನು ಈ ಸೇಲ್ ನಲ್ಲಿ ಪಡೆದುಕೊಳ್ಳಬಹುದಾಗಿದೆ. ಈ ಸೇಲ್ ಈಗಾಗಲೇ ಆರಂಭವಾಗಿದದು ಫೆಬ್ರವರಿ 23,2019 ರ ವರೆಗೆ ನಡೆಯಲಿದೆ.

ಮೊಟೋ ಒನ್ ಪವರ್:

ಮೊಟೋ ಒನ್ ಪವರ್:

ಮೊಬೈಲ್ ಬೊನಾನ್ಝ ಸೇಲ್ ನಲ್ಲಿ ಮೂರು ಮೊಟೋರೊಲಾ ಸ್ಮಾರ್ಟ್ ಫೋನ್ ಗಳಿಗೆ ಭರ್ಜರಿ ರಿಯಾಯಿತಿ ಲಭ್ಯವಿದೆ. ಕಂಪೆನಿಯ ಹೆಚ್ಚು ಪ್ರಸಿದ್ಧವಾಗಿರುವ ಸ್ಮಾರ್ಟ್ ಫೋನ್ ಗಳ ಪಟ್ಟಿಯಲ್ಲಿರುವ ಮೊಟೋ ಒನ್ ಪವರ್ ನಿಗದಿತ ಬೆಲೆಗಿಂತ 2,000 ರುಪಾಯಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ ಮತ್ತು ಇದೀಗ 13,999 ರುಪಾಯಿ ಬೆಲೆಗೆ ಸಿಗುತ್ತದೆ. ಹಣದ ಬಗ್ಗೆ ಹೆಚ್ಚು ಜಾಗೃತೆ ವಹಿಸಿ ಖರೀದಿಸುವ ಖರೀದಿದಾರರಿಗೆ ಖಂಡಿತ ಇದು ಅತ್ಯುತ್ತಮ ಆಫರ್ ಆಗಿದೆ.

ಈ ಹ್ಯಾಂಡ್ ಸೆಟ್ ನಲ್ಲಿ ಅತೀ ದೊಡ್ಡ ಅಂದರೆ 5000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ. ಆಂಡ್ರಾಯ್ಡ್ ಒನ್ ಡಿವೈಸ್ ಇದಾಗಿದ್ದು ಈಗಾಗಲೇ ಆಂಡ್ರಾಯ್ಡ್ 9 ಪೈ ವರ್ಷನ್ ನಲ್ಲೇ ಲಭ್ಯವಿದೆ. ಒನ್ ಪವರ್ ಗೆ ಸೆಕ್ಯುರಿಟಿ ಪ್ಯಾಚಸ್ ಇದ್ದು ಲೈಫ್ ಸೈಕಲ್ ನಲ್ಲಿ ಇನ್ನೊಂದು OS ಅಪ್ ಡೇಟ್ ನ್ನು ಇದು ಕಾಣಲಿದೆ.

ಮೋಟೋ ಎಕ್ಸ್4:

ಮೋಟೋ ಎಕ್ಸ್4:

ಮತ್ತೊಂದು ಆಫರ್ ಇರುವ ಫೋನ್ ಎಂದರೆ ಅದು ಮೊಟೋ ಎಕ್ಸ್4 2017 ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಇದು ಬಿಡುಗಡೆಗೊಂಡಿದ. ಮೊಟೋ ಎಕ್ಸ್4 24,999 ರುಪಾಯಿ ಬೆಲೆಗೆ ಬಿಡುಗಡೆಗೊಂಡಿದೆ. ಫ್ಲಿಪ್ ಕಾರ್ಟ್ ನ ಮೊಬೈಲ್ ಬೊನಾನ್ಝ ಸೇಲ್ ನಲ್ಲಿ 6GB ವೇರಿಯಂಟ್ ನ ಮೊಟೋ ಎಕ್ಸ್4 12,999 ರುಪಾಯಿ ಬೆಲೆಗೆ ಸಿಗುತ್ತದೆ.ಇದು ಎಂಆರ್ ಪಿ ಬೆಲೆಗಿಂತ ಶೇಕಡಾ 50 ರ ರಿಯಾಯಿತಿಯಲ್ಲಿ ಸಿಗುತ್ತಿದೆ.

ಮೊಟೋ ಎಕ್ಸ್4 ಪ್ರೀಮಿಯಂ ಲುಕ್

ಮೊಟೋ ಎಕ್ಸ್4 ಪ್ರೀಮಿಯಂ ಲುಕ್

ಮೊಟೋ ಎಕ್ಸ್4 ಪ್ರೀಮಿಯಂ ಲುಕ್ ಇರುವ ಸ್ಮಾರ್ಟ್ ಫೋನ್ ಆಗಿದ್ದು 3D ಗ್ಲಾಸ್ ಬಾಡಿಯನ್ನು ಹೊಂದಿದೆ. ಇದು ಸ್ನ್ಯಾಪ್ ಡ್ರ್ಯಾಗನ್ 630 ಚಿಪ್ ಸೆಟ್ ನ್ನು ಹೊಂದಿದೆ ಮತ್ತು ನೂತನ ವರ್ಷನ್ ಆಂಡ್ರಾಯ್ಡ್ 9 ಪೈ ಆಪರೇಟಿಂಗ್ ಸಿಸ್ಟಮ್ ನ್ನು ಹೊಂದಿದೆ. ಈ ಹ್ಯಾಂಡ್ ಸೆಟ್ ಗೆ IP68 ನೀರು ಮತ್ತು ಧೂಳು ರಕ್ಷಣೆ ಮಾಡುವ ಬಾಡಿ ಇದೆ. ಹಳೆಯ ಡಿಸ್ಪ್ಲೇ ಆಗಿದ್ದರೂ ಕೂಡ 12-ಮೆಗಾಪಿಕ್ಸಲ್ + 8 ಮೆಗಾಪಿಕ್ಸಲ್ ನ ಡುಯಲ್ ಕ್ಯಾಮರಾ ಸೆಟ್ ಅಪ್ ನ್ನು ಇದು ಹಿಂಭಾಗದಲ್ಲಿ ಹೊಂದಿದೆ ಮತ್ತು ಮುಂಭಾಗದಲ್ಲಿ 16 ಮೆಗಾಪಿಕ್ಸಲ್ ನ ಸಿಂಗಲ್ ಸೆಲ್ಫೀ ಕ್ಯಾಮರಾವನ್ನು ಒಳಗೊಂಡಿದೆ.

ಮೋಟೋ ಇ5:

ಮೋಟೋ ಇ5:

ಕೊನೆಯದಾಗಿ, ಮೊಟೋ ಇ5 ಪ್ಲಸ್ ಕೂಡ ಸೇಲ್ ನ ಒಂದು ಭಾಗವಾಗಿದೆ. ಬಜೆಟ್ ಸ್ಮಾರ್ಟ್ ಫೋನ್ ಆಗಿರುವ ಇದಕ್ಕೂ ಕೂಡ 3000 ರುಪಾಯಿ ಬೆಲೆ ಇಳಿಕೆ ಇದ್ದು ಕೇವಲ 7,999 ರುಪಾಯಿ ಬೆಲೆಗೆ ಖರೀದಿಸುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ. ಇ5 ಪ್ಲಸ್ 6-ಇಂಚಿನ ಮ್ಯಾಕ್ ವಿಷನ್ ಡಿಸ್ಲ್ಪೇಯನ್ನು ಹೊಂದಿದೆ ನಾಚ್ ವ್ಯವಸ್ಥೆ ಇದರಲ್ಲಿ ಲಭ್ಯವಿಲ್ಲ. 5000mAh ಬ್ಯಾಟರಿ ಸೌಲಭ್ಯವಿದೆ ಮತ್ತು 10W ರ್ಯಾಪಿಡ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ. 12-ಮೆಗಾಪಿಕ್ಸಲ್ ನ ಹಿಂಭಾಗದ ಕ್ಯಾಮರಾವು ಹಿಂಭಾಗದಲ್ಲಿದೆ.

ಹೆಚ್ಚುವರಿ ರಿಯಾಯಿತಿ:

ಹೆಚ್ಚುವರಿ ರಿಯಾಯಿತಿ:

ಈ ಸೇಲ್ ನ ಭಾಗವಾಗಿ ಫ್ಲಿಪ್ ಕಾರ್ಟ್ ನಲ್ಲಿ ಆಕ್ಸಿಸ್ ಬ್ಯಾಂಕಿನ ಕ್ರೆಡಿಟ್ /ಡೆಬಿಟ್ ಕಾರ್ಡ್ ಮೂಲಕ ಖರೀದಿಸುವವರಿಗೆ ಹೆಚ್ಚುವರಿ 10% ರಿಯಾಯಿತಿ ಲಭ್ಯವಾಗುತ್ತದೆ ಮತ್ತು ಇಎಂಐ ಆಯ್ಕೆ ಕೂಡ ಲಭ್ಯವಿದೆ. ಸ್ಪೆಷಲ್ ಎಕ್ಸ್ ಚೇಂಜ್ ಆಫರ್ ಮತ್ತು ನೋ ಕಾಸ್ಟ್ ಇಎಂಐ ಆಯ್ಕೆಯನ್ನೂ ಕೂಡ ಗ್ರಾಹಕರು ಬಳಸಿಕೊಳ್ಳಬಹುದು.

Best Mobiles in India

English summary
Moto E5 Plus gets Rs 3000 discount, Moto X4 sells for Rs 12,999 after Rs 12,000 discount in Flipkart sale

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X