ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಮೋಟೋ ಜಿ5 ಎಸ್ ಪ್ಲಸ್ ಮಾರುಕಟ್ಟೆಗೆ

ಲಿನೋವೋ ಮಾಲೀಕತ್ವದ ಮೋಟೋರೋಲಾ ಡಿವೈಸ್ ತನ್ನ ಹೊಚ್ಚ ಹೊಸ ಮೋಟೋ ಜಿ5 ಎಸ್ ಪ್ಲಸ್‌ನೊಂದಿಗೆ ಮಾರುಕಟ್ಟೆಗೆ ಅಡಿಇಡಲಿದ್ದು, ಇನ್ನಷ್ಟು ಅತ್ಯಾಧುನಿಕ ಫೀಚರ್‌ಗಳನ್ನೊಳಗೊಂಡು ಬರಲಿದೆ.

By Shwetha Ps
|

ಮೋಟೋರೋಲಾದ ಮೋಟೋ ಜಿ ಹೆಚ್ಚು ಜನಪ್ರಿಯವಾಗಿರುವ ಡಿವೈಸ್ ಎಂದೆನಿಸಿದ್ದು ಕಂಪೆನಿಯ ಲಾಭಕರ ಡಿವೈಸ್ ಎಂದೆನಿಸಿದೆ. ಅತ್ಯಾಧುನಿಕ ಮೋಟೋ ಜಿ5 ಮತ್ತು ಮೋಟೋ ಜಿ5 ಎಸ್ ಪ್ಲಸ್ ಅತ್ಯಾಧುನಿಕ ಸಾಫ್ಟ್‌ವೇರ್ ಅನ್ನು ಒದಗಿಸುತ್ತಿದ್ದು ಇದರಲ್ಲಿರುವ ಹಾರ್ಡ್‌ವೇರ್ ಕೂಡ ಫೋನ್ ಅನ್ನು ಆಂಡ್ರಾಯ್ಡ್‌ನ ಟಾಪ್ ಡಿವೈಸ್‌ಗಳಲ್ಲಿ ಒಂದಾಗಿಸಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಮೋಟೋ ಜಿ5 ಎಸ್ ಪ್ಲಸ್ ಮಾರುಕಟ್ಟೆಗೆ

ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಈ ಡಿವೈಸ್‌ಗಳು ಇದೀಗ ಲಭ್ಯವಿದೆ. ಲಿನೋವೋ ಮಾಲೀಕತ್ವದ ಕಂಪೆನಿಯು ಇನ್ನಷ್ಟು ಫೀಚರ್‌ಗಳನ್ನು ಫೋನ್‌ಗಳಲ್ಲಿ ಅಳವಡಿಸುವ ಮೂಲಕ ಫೋನ್ ಅನ್ನು ಇನ್ನಷ್ಟು ಅತ್ಯದ್ಭುತ ಉತ್ಪನ್ನವಾಗಿಸಲಿದೆ. ಹೊಸ ಕ್ಯಾಮೆರಾ ಹಾರ್ಡ್‌ವೇರ್ ಅನ್ನು ಪ್ರಸ್ತುತ ಡಿವೈಸ್‌ಗಳಲ್ಲಿ ಪ್ರಸ್ತುತಪಡಿಸಿದ್ದು ಬಜೆಟ್ ಶ್ರೇಣಿಗಳಲ್ಲಿ ಡಿವೈಸ್‌ಗಳನ್ನು ಪಡೆಯಬಹುದಾಗಿದೆ. ಚಿತ್ರದಲ್ಲಿ ಮೆಟಲ್ ವಿನ್ಯಾಸವನ್ನು ಬೆಂಬಲಿಸುವ ಡಿವೈಸ್ ಅನ್ನು ನಿಮಗೆ ಕಾಣಬಹುದಾಗಿದೆ.

ಇಂದು ಮೋಟೋ ಜಿ ಕುರಿತಂತೆ ಇನ್ನಷ್ಟು ಮಾಹಿತಿಗಳನ್ನು ನಾವು ಹಂಚಿಕೊಳ್ಳುತ್ತಿದ್ದೇವೆ. ಸ್ಲ್ಯಾಶ್‌ಲೀಕ್ಸ್ ನೀಡಿರುವ ವರದಿಯಂತೆ ಲಿನೋವೋ ಮೊಟೋ ಜಿ5 ಎಸ್ ಪ್ಲಸ್ ಅನ್ನು ಸ್ವಲ್ಪ ದೊಡ್ಡ ಡಿಸ್‌ಪ್ಲೇ, ಅಲ್ಯುಮಿನಿಯಂ ರಚನೆ ಮತ್ತು ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಲಾಂಚ್ ಮಾಡುವ ಯೋಜನೆಯಲ್ಲಿದೆ. 13 ಎಮ್‌ಪಿ + 13 ಎಮ್‌ಪಿ ಕ್ಯಾಮೆರಾವನ್ನು ಇದು ಹೊಂದಿದ್ದು ಆರ್‌ಜಿಬಿ ಮತ್ತು ಮೋನೋಕ್ರೋಮ್ ಸೆನ್ಸಾರ್ ಅನ್ನು ಇದು ಹೊಂದಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಮೋಟೋ ಜಿ5 ಎಸ್ ಪ್ಲಸ್ ಮಾರುಕಟ್ಟೆಗೆ

ಹ್ಯಾಂಡ್‌ಸೆಟ್ 5.5 ಇಂಚಿನ ಪೂರ್ಣ ಎಚ್‌ಡಿ (1080ಪಿ) ಡಿಸ್‌ಪ್ಲೇಯೊಂದಿಗೆ ಬಂದಿದ್ದು, ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 625 ಸಾಕ್ ಕ್ಲಬ್‌ಗೊಂಡಿರುವ 4 ಜಿಬಿ RAM ಅನ್ನು ಪಡೆದುಕೊಂಡಿದೆ. 64 ಜಿಬಿ ಆಂತರಿಕ ಸ್ಟೋರೇಜ್ ಅನ್ನು ಡಿವೈಸ್ ಒಳಗೊಂಡಿದೆ. ಆಂಡ್ರಾಯ್ಡ್ 7.1 ನಾಗಟ್ ಅನ್ನು ಈ ಫೋನ್ ಹೊಂದಿದೆ.
ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಮೋಟೋ ಜಿ5 ಎಸ್ ಪ್ಲಸ್ ಮಾರುಕಟ್ಟೆಗೆ

ಇನ್ನು ಫೋನ್‌ನ ಇತರ ಫೀಚರ್‌ಗಳತ್ತ ಗಮನಹರಿಸುವುದಾದರೆ ಇದು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದ್ದು ಎಲ್‌ಇಡಿ ಫ್ಲ್ಯಾಶ್ ಇರುವ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ ಮತ್ತು ಡಾಲ್ಬಿ ಅಟೋಮಸ್ ಆಡಿಯೊ ಬೆಂಬಲಿಸುತ್ತಿದೆ.

ಲಿನೋವೋ ನ್ಯೂಯಾರ್ಕ್‌ನಲ್ಲಿ ಜುಲೈ 25 ರಂದು ಈವೆಂಟ್ ಒಂದನ್ನು ಆಯೋಜಿಸಿದ್ದು, ಮೋಟೋ Z2 ಅನ್ನು ಇಲ್ಲಿ ಬಿಡುಗಡೆ ಮಾಡಲಿದೆ. ಡಿವೈಸ್ ಕುರಿತು ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ ಆದರೆ ಮುಂಬರುವ ದಿನಗಳಲ್ಲಿ ಈ ಡಿವೈಸ್ ಲಾಂಚ್ ಆಗಲಿದೆ.

ಮೋಟೋದ ಮುಂಬರುವ ಸುದ್ದಿಗಳ ಅಪ್‌ಡೇಟ್‌ಗಳನ್ನು ನಾವು ನಿಮಗೆ ನೀಡುತ್ತೇವೆ. ಗಿಜ್‌ಬಾಟ್ ಸುದ್ದಿಗಳನ್ನು ಓದುತ್ತಿರಿ.

Source

Best Mobiles in India

Read more about:
English summary
Moto G5S Plus likely to launch with a dual-camera setup

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X