ಇಂದು ಮೊಟೊ ಟ್ಯಾಬ್‌ G62 ಫಸ್ಟ್‌ ಸೇಲ್‌!..ಸಿಗುತ್ತೆ ಜಬರ್ದಸ್ತ್‌ ಆಫರ್‌!

|

ಭಾರತದಲ್ಲಿ ಮೊಟೊರೊಲಾ ಮೊಬೈಲ್‌ ಸಂಸ್ಥೆಯು ಈಗಾಗಲೇ ಹಲವು ಭಿನ್ನ ಶ್ರೇಣಿಯಲ್ಲಿ ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ಇತ್ತೀಚಿಗಷ್ಟೆ ಮೊಟೊ G ಸರಣಿಯಲ್ಲಿ ಬಿಡುಗಡೆ ಮಾಡಿರುವ ಮೊಟೊ ಟ್ಯಾಬ್‌ G62 ಟ್ಯಾಬ್‌ ಸಹ ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಇನ್ನು ಈ ಫೋನ್‌ ಇ ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ಮೂಲಕ ಇಂದು (ಆಗಷ್ಟ್‌ 22) ಫಸ್ಟ್‌ ಸೇಲ್‌ ಪ್ರಾರಂಭಿಸಲಿದೆ.

ಒಳಗೊಂಡಿದ್ದು

ಹೌದು, ಮೊಟೊ ಟ್ಯಾಬ್‌ G62 ಟ್ಯಾಬ್ಲೆಟ್ ಇಂದು ಮಧ್ಯಾಹ್ನ 12ಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ಫಸ್ಟ್‌ ಸೇಲ್‌ ಆರಂಭಿಸಲಿದೆ. ಇನ್ನು ಈ ಫೋನ್ 60Hz ರೀಫ್ರೇಶ್ ರೇಟ್ ಡಿಸ್‌ಪ್ಲೇ ಒಳಗೊಂಡಿದ್ದು, ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 680 SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದರೊಂದಿಗೆ 8 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಬಾಹ್ಯ ಮೆಮೊರಿಯನ್ನು ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ 1 TB ವರೆಗೂ ವಿಸ್ತರಿಸಬಹುದಾಗಿದೆ.

ಫ್ಲಿಪ್‌ಕಾರ್ಟ್‌

ಹಾಗೆಯೇ ಈ ಫೋನ್ ಟ್ಯಾಬ್‌ ಖರೀದಿಸುವ ಗ್ರಾಹಕರಿಗೆ 3 ತಿಂಗಳ ಯೂಟ್ಯೂಬ್ ಪ್ರಿಮಿಯಂ ಚಂದಾದಾರಿಕೆ ಲಭ್ಯವಾಗಲಿದೆ. ಹಾಗೆಯೇ ಫ್ಲಿಪ್‌ಕಾರ್ಟ್‌ ಆಕ್ಸಸ್‌ ಬ್ಯಾಂಕ್‌ ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿಸಿದರೇ, 5% ಕ್ಯಾಶ್‌ಬ್ಯಾಕ್‌ ಸಿಗಲಿದೆ. ಇನ್ನು ಈ ಟ್ಯಾಬ್‌ 7700 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಹಾಗಾದರೇ ಮೊಟೊ ಟ್ಯಾಬ್‌ G62 ಟ್ಯಾಬ್ಲೆಟ್ ನ ಇತರೆ ಫೀಚರ್ಸ್ ಏನು ಎಂಬುದನ್ನು ಮುಂದೆ ತಿಳಿಯೋಣ.

ಡಿಸ್‌ಪ್ಲೇ ರಚನೆ ಹಾಗೂ ಪ್ರೊಸೆಸರ್‌

ಡಿಸ್‌ಪ್ಲೇ ರಚನೆ ಹಾಗೂ ಪ್ರೊಸೆಸರ್‌

ಮೊಟೊ ಟ್ಯಾಬ್‌ G62 ಡಿವೈಸ್‌ ವಿಶಾಲ ಸ್ಕ್ರೀನ್‌ ಗಾತ್ರ ಒಳಗೊಂಡಿದ್ದು, 10.6 ಇಂಚಿನ IPS LCD ಡಿಸ್‌ಪ್ಲೇ ಅನ್ನು ಹೊಂದಿದ್ದು, ಡಿಸ್‌ಪ್ಲೇಯು 2K ರೆಸಲ್ಯೂಶನ್‌ ಅನ್ನು ಪಡೆದಿದೆ. ಹಾಗೆಯೇ ಈ ಟ್ಯಾಬ್‌ನ ಡಿಸ್‌ಪ್ಲೇಯು 60Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಈ ಸಾಧನವು ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 680 SoC ಅನ್ನು ಹೊಂದಿದ್ದು, ಆಂಡ್ರಾಯ್ಡ್ 12 ಓಎಸ್‌ ಸಪೋರ್ಟ್‌ ಸಹ ಪಡೆದಿದೆ.

ಕ್ಯಾಮೆರಾ ಮತ್ತು ಬ್ಯಾಟರಿ

ಕ್ಯಾಮೆರಾ ಮತ್ತು ಬ್ಯಾಟರಿ

ಮೊಟೊ ಟ್ಯಾಬ್‌ G62 ಡಿವೈಸ್‌ ಹಿಂಬದಿಯಲ್ಲಿ ಒಂದು ರಿಯರ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಅದು 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಮುಂಭಾಗದಲ್ಲಿ 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಈ ಟ್ಯಾಬ್‌ 7700 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 20W ಫಾಸ್ಟ್ ಚಾರ್ಜಿಂಗ್‌ ಸೌಲಭ್ಯವನ್ನು ಪಡೆದಿದೆ.

ಇತರೆ ಸೌಲಭ್ಯಗಳು

ಇತರೆ ಸೌಲಭ್ಯಗಳು

ಮೊಟೊ ಟ್ಯಾಬ್‌ G62 ಡಿವೈಸ್‌ ಟ್ಯಾಬ್ಲೆಟ್ ಉನ್ನತ ದರ್ಜೆಯ ಅಲ್ಯೂಮಿನಿಯಂ ಬಿಲ್ಡ್ ಮತ್ತು ಡ್ಯುಯಲ್-ಟೋನ್ ಬ್ಯಾಕ್ ಪ್ಯಾನೆಲ್ ಅನ್ನು ಹೊಂದಿದೆ. ಇದು ಡಾಲ್ಬಿ ಆಡಿಯೊದಿಂದ ಟ್ಯೂನ್ ಮಾಡಲಾದ ಕ್ವಾಡ್ ಸ್ಪೀಕರ್‌ಗಳನ್ನು ಹೊಂದಿದೆ. 4GB RAM ಮತ್ತು 64 GB ಆನ್‌ಬೋರ್ಡ್ ಸಂಗ್ರಹಣೆಯ ಆಯ್ಕೆ ಪಡೆದಿದ್ದು, ಜೊತೆಗೆ ಬಾಹ್ಯ ಮೆಮೊರಿಯನ್ನು ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ 1TB ವರೆಗೂ ವಿಸ್ತರಿಸಬಹುದಾಗಿದೆ. ಜೊತೆಗೆ ಟ್ಯಾಬ್ಲೆಟ್ ವಿಶೇಷ ರೀಡಿಂಗ್ ಮೋಡ್, ಬಹು ಬಳಕೆದಾರ ಖಾತೆಗಳು, ಗೂಗಲ್ ಕಿಡ್ಸ್ ಸ್ಪೇಸ್ ಇತ್ಯಾದಿ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಮೊಟೊ ಟ್ಯಾಬ್‌ G62 ಬೆಲೆ ಎಷ್ಟು? ಮತ್ತು ಲಭ್ಯತೆ?

ಮೊಟೊ ಟ್ಯಾಬ್‌ G62 ಬೆಲೆ ಎಷ್ಟು? ಮತ್ತು ಲಭ್ಯತೆ?

ಮೊಟೊ ಟ್ಯಾಬ್‌ G62 ಡಿವೈಸ್‌ ಮೂರು ವಿಭಿನ್ನ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಮೊಟೊ ಟ್ಯಾಬ್‌ G62 ಡಿವೈಸ್‌ Wi Fi ಮಾತ್ರ ವೇರಿಯಂಟ್‌ 4GB RAM ಮತ್ತು 64 GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. ಇದರ ಬೆಲೆ 15,999 ರೂ. ಆಗಿದೆ.

ಫ್ರಾಸ್ಟ್

ಹಾಗೆಯೇ ಮೊಟೊ ಟ್ಯಾಬ್‌ G62 ಡಿವೈಸ್‌ LTE ವೇರಿಯಂಟ್‌ ಬೆಲೆ 17,999 ರೂ. ಆಗಿದೆ. ಇನ್ನು ಈ ಡಿವೈಸ್‌ ಇದೇ ಆಗಸ್ಟ್ 22 ರಿಂದ (ಇಂದು) ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದ್ದು, ಫ್ರಾಸ್ಟ್ ಬ್ಲೂ ಬಣ್ಣ ದಲ್ಲಿ ಖರೀದಿಗೆ ಲಭ್ಯ.

Best Mobiles in India

English summary
Moto Tab G62 LTE First Sale in India Today: Price, offers, specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X