Subscribe to Gizbot

ಮೊಟೊ E5 ಸ್ಮಾರ್ಟ್ ಫೋನ್ ಮಾಹಿತಿ ಲೀಕ್: ಶೀಘ್ರವೇ ಮಾರುಕಟ್ಟೆಗೆ..!

Posted By: Lekhaka

ಲಿನೊವೊ ಒಡೆತನದ ಸ್ಮಾರ್ಟ್ ಪೋನ್ ತಯಾರಕ ಕಂಪನಿ ಮೊಟಾರೊಲಾ ಮಾರುಕಟ್ಟೆಗೆ ಹೊಸ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡುವ ಸನಿಹದಲಿದೆ. ಹೊಸದಾಗಿ ಮೊಟೊ G, ಮೊಟೊ E ಮತ್ತು ಮೊಟೊ Z ಸರಣಿ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಇದೇ ಹಿನ್ನಲೆಯಲ್ಲಿ ಮೊಟೊ E ಸರಣಿಯ ಮೊಟೊ E5 ಸ್ಮಾರ್ಟ್ ಫೋನ್ ಮಾಹಿತಿಯೂ ಲೀಕ್ ಆಗಿದೆ.

ಮೊಟೊ E5 ಸ್ಮಾರ್ಟ್ ಫೋನ್ ಮಾಹಿತಿ ಲೀಕ್: ಶೀಘ್ರವೇ ಮಾರುಕಟ್ಟೆಗೆ..!

ಮೊಟೊ E5 ಸ್ಮಾರ್ಟ್ ಫೋನ್ ಮುಂದಿನ ತಿಂಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ಮೊಟೊ E5, ಮೊಟೊ E5 ಪ್ಲಸ್ ಮತ್ತು ಮೊಟೊ E5 ಪ್ಲೇ ಸ್ಮಾರ್ಟ್ ಫೋನ್ ಗಳು ಲಾಂಚ್ ಆಗಲಿದ್ದು, ಸದ್ಯ ಮೊಟೊ E5 ಪ್ಲೇ ಸ್ಮಾರ್ಟ್ ಫೋನ್ ವೆಬ್ ಸೈಟ್ ನಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಮೊಟೊ ಆಕ್ಷನ್ ಫೀಚರ್ ನೊಂದಿಗೆ ಈ ಸ್ಮಾರ್ಟ್ ಫೋನ್ ಕಾಣಿಸಿಕೊಳ್ಳಲಿದ್ದು, 5.2 ಇಂಚಿನ ಡಿಸ ಪ್ಲೇಯನ್ನುಹೊಂದಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. 16:9 ಅನುಪಾತದ ಡಿಸ್ ಪ್ಲೇ ಇದಾಗಿರಲಿದ್ದು, HD ಗುಣಮಟ್ಟವನ್ನು ಹೊಂದಿರುವ ಸಾಧ್ಯತೆ ಇದೆ. ಅಲ್ಲದೇ ಹಿಂಭಾಗದಲ್ಲಿ 12 MP ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಇದಲ್ಲದೇ ಮೊಟೊ E5 ಸ್ಮಾರ್ಟ್ ಫೋನಿನಲ್ಲಿ ದೊಡ್ಡದಾದ 4000mAh ಬ್ಯಾಟರಿಯನ್ನ ಸಹ ನೀಡಲಾಗಿದೆ. ಇದಲ್ಲದೇ ಈ ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ. ಮೊಟೊ ಲೋಗೋ ಕೆಳಭಾಗದಲ್ಲಿ ಇದನ್ನು ಕಾಣಬಹುದು.ಇದಲ್ಲದೇ ಸೆಲ್ಫಿ ಫ್ಲಾಷ್ ಲೈಟ್ ಅನ್ನುಸಹ ಅಳವಡಿಸಲಾಗಿದೆ.

ಮೊಬೈಲ್, ಟಿವಿ ಖರೀದಿಸುವವರಿಗೆ ಇಂದು ಲಾಸ್ಟ್ ಚಾನ್ಸ್!..ನಾಳೆಯಿಂದ ಬೆಲೆಗಳು ಹೆಚ್ಚು!!

ಮೊಟೊ E5 ಸ್ಮಾರ್ಟ್ ಪೋನ್ ರೂ.9500ಕ್ಕೆ ಮಾರಾಟವಾಗಲಿದ್ದು, ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ ಹಲವು ಸ್ಮಾರ್ಟ್ ಪೋನ್ ಗಳಿಗೆ ಇದು ಸ್ಪರ್ಧೆಯನ್ನು ನೀಡಲಿದೆ ಎನ್ನುವ ಮಾಹಿತಿಯೂ ದೊರೆತಿದೆ. ಶೀಘ್ರವೇ ಲಾಂಚ್ ಆಗಲಿರುವ ಸ್ಮಾರ್ಟ್ ಫೋನ್ ಕುರಿತಂತೆ ಸಾಕಷ್ಟು ನಿರೀಕ್ಷೆಗಳು ಇದೆ.

English summary
The Moto E5 Play has now been spotted on Motorola's official website in the US. The search query for the Moto E5 displayed a document with the title 'Moto Actions - Moto e5 play'. This means, the Moto E5 will come with the 'Moto Actions' feature. Notably, this is the first time that we are expecting the Play variant in the E series.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot