ಮೋಟೋರೋಲಾ ಬಿಡುಗಡೆ ಮಾಡಲಿದೆ 4ಜಿ ಬೆಂಬಲಿತ ಸ್ಮಾರ್ಟ್‌ಫೋನ್

Posted By:

ಭಾರತ ಮತ್ತು ಬ್ರೆಜಿಲ್‌ನಲ್ಲಿ 2015 ಕ್ಕೆ ಮೋಟೋರೋಲಾ 4ಜಿ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುವ ನಿರ್ಧಾರದಲ್ಲಿದೆ. ಮೋಟೋ ಜಿ, ಮೋಟೋ ಜಿ (ಸೆಕೆಂಡ್ ಜನರೇಶನ್) ಮೋಟೋ ಎಕ್ಸ್ ಅನ್ನು ಲಾಂಚ್ ಮಾಡುವ ಮೂಲಕ ಭಾರತದ ಮಾರುಕಟ್ಟೆಯಲ್ಲಿ ವ್ಯವಹಾರವನ್ನು ಮಾಡುತ್ತಿದೆ.

ಮೋಟೋರೋಲಾದಿಂದ 4ಜಿ ಫೋನ್ ಶೀಘ್ರದಲ್ಲಿ!!!

4ಜಿ ಆದಷ್ಟು ಬೇಗನೇ ಭಾರತಕ್ಕೆ ಬರುತ್ತಿದ್ದು ಮೋಟೋರೋಲಾ ಅಭಿಮಾನಿಗಳಿಗೆ ಈ ಫೋನ್ ಅನ್ನು ಕೂಡಲೇ ಒದಗಿಸುವ ಇರಾದೆ ನಮ್ಮದಾಗಿದೆ ಎಂದು ಮೋಟೋರೋಲಾ ಅಧ್ಯಕ್ಷ ಮತ್ತು ಸಿಇಒ ರಿಕ್ ಓಸ್ಟೆರ್ಲೊ ತಿಳಿಸಿದ್ದಾರೆ.

ಇದನ್ನೂ ಓದಿ: ಐಫೋನ್‌ನಲ್ಲಿ ವಾಟ್ಸಾಪ್ ತೊಂದರೆಯನ್ನು ಹೀಗೆ ನಿವಾರಿಸಿ

ಐಡಿಸಿಎಲ್ ವರದಿ ಪ್ರಕಾರ, ಸ್ಯಾಮ್‌ಸಂಗ್ 23.7%, ಆಪಲ್ 11.7%, ಶ್ಯೋಮಿ 5.2% ಮತ್ತು ಲೆನೊವೊ 5.1% ಷೇರನ್ನು ಮಾರುಕಟ್ಟೆಯಲ್ಲಿ ಹೊಂದಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಮೋಟೋರೋಲಾ 5% ಷೇರನ್ನು ಹೊಂದಿ ಐದನೇ ಸ್ಥಾನದಲ್ಲಿದೆ. ಇನ್ನು ಇಲ್ಲಿಯದೇ ಫೋನ್ ಉತ್ಪನ್ನ ಕಂಪೆನಿಗಳಾದ ಮೈಕ್ರೋಮ್ಯಾಕ್ಸ್, ಲಾವಾ ಹಾಗೂ ಕಾರ್ಬನ್‌ಗೆ ಕಠಿಣ ಪೈಪೋಟಿಯನ್ನು ನೀಡಲಿದೆ.

ಇನ್ನು ಮೋಟೋರೋಲಾ ಮೋಟೋ E2 ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಈ ಬಜೆಟ್ ಫೋನ್ 4ಜಿ ನೆಟ್‌ವರ್ಕ್‌ಗೆ ಬೆಂಬಲವನ್ನು ಒದಗಿಸುತ್ತಿದೆ ಎಂಬುದು ವರದಿಗಳಿಂದ ತಿಳಿದು ಬಂದಿದೆ. ಇದು 1ಜಿಬಿ RAM, 400 ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್, 5ಎಮ್‌ಪಿ ರಿಯರ್ ಕ್ಯಾಮೆರಾ ಮತ್ತು ಆಂಡ್ರಾಯ್ಡ್ ಲಾಲಿಪಪ್ 5.0 ಓಎಸ್‌ನಲ್ಲಿ ಚಾಲನೆಯಾಗಲಿದೆ.

English summary
This article tells about Motorola is said to launch affordable 4G smartphone in India and Brazil by 2015 if a new Economic Times report is to be believed.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot