ಮ್ಯೂಸಿಕ್‌, ವಿಡಿಯೋ ವರ್ಗಾವಣೆಗೆ ಸ್ಟ್ರೀಮ್‌ ಟ್ರಾನ್ಸ್‌ಫರ್‌..! ಗೂಗಲ್‌ನಿಂದ ಹೊಸ ಫೀಚರ್‌..!

By Gizbot Bureau
|

ಗೂಗಲ್‌ ತನ್ನ ಗ್ರಾಹಕರಿಗಾಗಿ ಸ್ಟ್ರೀಮ್‌ ಟ್ರಾನ್ಸ್‌ಫರ್‌ ಎಂಬ ಹೊಸ ಸೇವೆಯೊಂದನ್ನು ಹೊರತಂದಿದೆ. ಗೂಗಲ್ ಹೋಮ್, ಕ್ರೋಮ್‌ಕಾಸ್ಟ್ ಮತ್ತು ನೆಸ್ಟ್ ಬಳಕೆದಾರರು ತಮ್ಮ ನೆಚ್ಚಿನ ಸಂಗೀತ ಟ್ರ್ಯಾಕ್‌ಗಳು, ವಿಡಿಯೋಗಳು ಅಥವಾ ಪಾಡ್‌ಕಾಸ್ಟ್‌ಗಳನ್ನು ತಮ್ಮ ಸಾಧನಗಳ ನಡುವೆ ಸುಲಭವಾಗಿ ವರ್ಗಾಯಿಸಲು 'ಸ್ಟ್ರೀಮ್ ಟ್ರಾನ್ಸ್‌ಫರ್' ಫೀಚರ್‌ ಉಪಯುಕ್ತವಾಗಿದೆ.

ಹೊಸ ಫೀಚರ್‌ ವಾಯ್ಸ್ ಬಳಕೆ

ಹೊಸ ಫೀಚರ್‌ ವಾಯ್ಸ್ ಬಳಕೆಯ ಜೊತೆಗೆ ಗೂಗಲ್ ಹೋಮ್ ಆಪ್‌ ಮತ್ತು ಗೂಗಲ್ ನೆಸ್ಟ್ ಸ್ಮಾರ್ಟ್ ಡಿಸ್‌ಪ್ಲೇಗಳ ಟಚ್‌ಸ್ಕ್ರೀನ್ ಮೂಲಕವೂ ಕಾರ್ಯನಿರ್ವಹಿಸುತ್ತದೆ. ಗೂಗಲ್ ಹೋಮ್, ಕ್ರೋಮ್‌ಕಾಸ್ಟ್ ಮತ್ತು ನೆಸ್ಟ್ ಸಾಧನಗಳ ನಡುವಿನ ಅಂತರವನ್ನು ಈ ಫೀಚರ್‌ ಕಡಿಮೆ ಮಾಡುತ್ತದೆ. ತಮ್ಮ ಮನೆಯಲ್ಲಿ ಅನೇಕ ಸ್ಮಾರ್ಟ್ ಟಿವಿಗಳು, ಸ್ಮಾರ್ಟ್ ಸ್ಪೀಕರ್‌ಗಳು ಅಥವಾ ಸ್ಮಾರ್ಟ್ ಡಿಸ್‌ಪ್ಲೇಗಳನ್ನು ಹೊಂದಿರುವ ಬಳಕೆದಾರರಿಗೆ ಈ ಫೀಚರ್‌ ಬಳಕೆಯನ್ನು ಸುಲಭಗೊಳಿಸುತ್ತದೆ.

ನೀವು ಮಾಡಬೇಕಿರುವುದು ಇಷ್ಟೇ..?

ನೀವು ಮಾಡಬೇಕಿರುವುದು ಇಷ್ಟೇ..?

ಗೂಗಲ್‌ನ ಸ್ಟ್ರೀಮ್‌ ಟ್ರಾನ್ಸ್‌ಫರ್‌ ಬಳಸಲು ನೀವು "ಹೇ ಗೂಗಲ್, ಮೂವ್‌ ಟೂ ಮ್ಯೂಸಿಕ್‌ ಟೂ ದು ಲಿವಿಂಗ್‌ ರೂಮ್ ಸ್ಪೀಕರ್‌" ಎಂದು ಹೇಳಿದರೆ ಸಾಕು. ಈ ಆಜ್ಞೆಯಿಂದ ನಿಮ್ಮ ಮ್ಯೂಸಿಕ್‌ನ್ನು Google ಹೋಮ್ ಸ್ಪೀಕರ್‌ನಿಂದ ಲಿವಿಂಗ್ ರೂಮ್ ಸ್ಪೀಕರ್‌ಗೆ ವರ್ಗಾಯಿಸಲು ಅನುವು ಮಾಡಿಕೊಡುತ್ತದೆ.

ಕ್ಯಾಸ್ಟ್‌ ಬಟನ್‌

ಕ್ಯಾಸ್ಟ್‌ ಬಟನ್‌

ಗೂಗಲ್‌ ಅಸಿಸ್ಟಂಟ್‌ ಅಲ್ಲದೇ, ಪರ್ಯಾಯವಾಗಿ ಗೂಗಲ್‌ ಹೋಮ್ ಆಪ್‌ನಲ್ಲಿನ ಕ್ಯಾಸ್ಟ್‌ ಬಟನ್‌ನಿಂದಲೂ ಮ್ಯೂಸಿಕ್‌ ಅಥವಾ ಪಾಡ್‌ಕ್ಯಾಸ್ಟ್‌ನ್ನು ಸಂಪರ್ಕಿತ ಸ್ಪೀಕರ್ ಅಥವಾ ಸ್ಮಾರ್ಟ್ ಡಿಸ್‌ಪ್ಲೇ ಅಥವಾ ಸಂಪರ್ಕಿತ ಸಾಧನಗಳ ಗುಂಪಿಗೆ ವರ್ಗಾಯಿಸಲು ಅನುಮತಿಸುತ್ತದೆ. ನಿಮ್ಮ ನೆಚ್ಚಿನ ಯೂಟ್ಯೂಬ್ ವೀಡಿಯೊವನ್ನು ಕ್ರೋಮ್‌ಕ್ಯಾಸ್ಟ್‌ ಸಂಪರ್ಕಿತ ಟಿವಿಗೆ ವರ್ಗಾಯಿಸಲು ಗೂಗಲ್ ತನ್ನ ನೆಸ್ಟ್ ಹಬ್ ಮತ್ತು ನೆಸ್ಟ್ ಹಬ್ ಮ್ಯಾಕ್ಸ್ ಸ್ಮಾರ್ಟ್ ಡಿಸ್ಪ್‌ಲೇಗಳನ್ನು ಸಕ್ರಿಯಗೊಳಿಸುತ್ತಿದೆ. ಇದಕ್ಕಾಗಿ "ಹೇ ಗೂಗಲ್, ಪ್ಲೇ ಇಟ್‌ ಆನ್‌ ಲಿವಿಂಗ್‌ ರೂಮ್" ಎಂದು ಹೇಳಬೇಕಾಗುತ್ತದೆ. ಈ ಕಮಾಂಡ್‌ನಿಂದ ನಿಮ್ಮ ಸ್ಮಾರ್ಟ್ ಡಿಸ್‌ಪ್ಲೇಯಿಂದ ಲಿವಿಂಗ್ ರೂಮ್ ಟಿವಿಗೆ ವಿಡಿಯೋವನ್ನು ಹಸ್ತಾಂತರಿಸುತ್ತದೆ.

ಗೂಗಲ್‌ ಹೋಮ್‌ ಆಪ್‌

ಗೂಗಲ್‌ ಹೋಮ್‌ ಆಪ್‌

ನೀವು ಗೂಗಲ್ ಹೋಮ್ ಆಪ್‌ ಮೂಲಕ ಗೂಗಲ್ ಹೋಮ್ ಸ್ಪೀಕರ್ ಅಥವಾ ಗೂಗಲ್ ನೆಸ್ಟ್ ಸ್ಮಾರ್ಟ್ ಡಿಸ್‌ಪ್ಲೇಗಳ ಗುಂಪನ್ನು ಸೆಟಪ್‌ ಮಾಡಬಹುದಾಗಿದೆ. ಗುಂಪನ್ನು ಸೆಟ್‌ ಮಾಡಿದ ನಂತರ ಒಂದೇ ಸ್ಪೀಕರ್‌ನಿಂದ ನೀವು ವಿಡಿಯೋವನ್ನು ವರ್ಗಾಯಿಸಬಹುದು ಅಥವಾ ಗುಂಪಿನ ಸಾಧನಗಲ್ಲಿ ಪ್ಲೇ ಮಾಡಬಹುದು.

ಬಳಕೆದಾರರಿಗೆ ಅನುಕೂಲ

ಬಳಕೆದಾರರಿಗೆ ಅನುಕೂಲ

ಸದ್ಯ ಲಕ್ಷಾಂತರ ಬಳಕೆದಾರರು ಅನೇಕ ಸ್ಮಾರ್ಟ್‌ ಟಿವಿ, ಸ್ಮಾರ್ಟ್ ಸ್ಪೀಕರ್‌ಗಳು ಮತ್ತು ಸ್ಮಾರ್ಟ್ ಡಿಸ್‌ಪ್ಲೇಗಳನ್ನು ಬಳಸುತ್ತಿದ್ದು, ಮನೆಯ ವಿವಿಧ ಕೋಣೆಗಳಲ್ಲಿ ವಿಭಿನ್ ಸ್ಮಾರ್ಟ್‌ ಉತ್ಪನ್ನಗಳನ್ನು ಬಳಸುತ್ತಾರೆ. ಆದ್ದರಿಂದ ಜನರು ಮನೆಯ ವಿವಿಧ ಭಾಗಕ್ಕೆ ಹೋದಾಗಲು ಮೀಡಿಯಾವನ್ನು ನಿಯಂತ್ರಿಸುವುದನ್ನು ಸುಲಭಗೊಳಿಸಿದ್ದು, ಬಳಕೆದಾರರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಉತ್ಪನ್ನ ನಿರ್ವಾಹಕ ಕ್ರಿಸ್ ಚಾನ್ ಗೂಗಲ್ ನೆಸ್ಟ್‌ನ ಬ್ಲಾಗ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Best Mobiles in India

English summary
Moving Music Is Now Easy With Google Stream Transfer

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X