ಗೂಗಲ್ ಕ್ರೋಮ್ ಗಿಂತ ಈ ಇಂಟರ್ನೆಟ್ ಬ್ರೌಸರ್ ಹೆಚ್ಚು ಸುರಕ್ಷಿತವಂತೆ!

By Gizbot Bureau
|

ಗೂಗಲ್ ಕ್ರೋಮ್ ಇಂಟರ್ನೆಟ್ ಬ್ರೌಸರ್ ವಿಶ್ವದಾದ್ಯಂತ ಬಳಕೆಯಲ್ಲಿರುವ ಅತ್ಯಂತ ಪ್ರಸಿದ್ಧ ಇಂಟರ್ನೆಟ್ ಬ್ರೌಸರ್. ಆದರೆ ಜರ್ಮನ್ ಫೆಡರಲ್ ಆಫೀಸ್ ಫಾರ್ ಇನ್ಫರ್ಮೇಷನ್ ಸೆಕ್ಯುರಿಟಿಯ ಅಭಿಪ್ರಾಯದಂತೆ ನೀವು ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಕಾಳಜಿ ಇರುವವರಾದರೆ ಕ್ರೋಮ್ ನ್ನು ಬಳಕೆ ಮಾಡಬಾರದಂತೆ!

ಯಾವ ಬ್ರೌಸರ್ ಗಳೊಂದಿಗೆ ಹೋಲಿಕೆ:

ಯಾವ ಬ್ರೌಸರ್ ಗಳೊಂದಿಗೆ ಹೋಲಿಕೆ:

ಜರ್ಮನಿ ಸರ್ಕಾರದ ಏಜೆನ್ಸಿಯು ಮೊಝಿಲ್ಲಾ ಫೈಯರ್ ಫಾಕ್ಸ್ ನ್ನು ಅತ್ಯಂತ ಸುಭದ್ರ ಇಂಟರ್ನೆಟ್ ಬ್ರೌಸರ್ ಎಂದು ಹೇಳಿದ್ದು ಕ್ರೋಮ್, ಎಡ್ಜ್ ಮತ್ತು ಇಂಟರ್ನೆಟ್ ಎಕ್ಸ್ ಪ್ಲೋರರ್ ಗಿಂತ ಮೊಝಿಲ್ಲಾ ಸುರಕ್ಷಿತ ಎಂದು ಅಭಿಪ್ರಾಯ ಪಟ್ಟಿದೆ. ಆದರೆ ಈ ಏಜೆನ್ಸಿಯು ಸಫಾರಿ, ಒಪೆರಾ ಮತ್ತು ಇತರೆ ಬ್ರೌಸರ್ ಗಳನ್ನು ಇದರಲ್ಲಿ ಹೋಲಿಕೆ ಮಾಡಿಲ್ಲ.

ಏನೆಲ್ಲಾ ಸಮಸ್ಯೆಗಳಿವೆ?

ಏನೆಲ್ಲಾ ಸಮಸ್ಯೆಗಳಿವೆ?

ಈ ಏಜೆನ್ಸಿಯು ಜರ್ಮನಿಯ ಸರ್ಕಾರಿ ಕಛೇರಿಗಳಿಗೆ ಸೈಬರ್ ಭದ್ರತೆಯ ಅಪಾಯಗಳ ಬಗ್ಗೆ ಸಲಹೆಗಳನ್ನು ನೀಡುತ್ತದೆ ಮತ್ತು ಅಧಿಕಾರಿಗಳಿಗೆ ಫೈಯರ್ ಫಾಕ್ಸ್ ಬಳಕೆ ಮಾಡುವಂತೆ ಸೂಚಿಸಿದೆ. ಕ್ರೋಮ್,ಎಡ್ಜ್ ಮತ್ತು ಇಂಟರ್ನೆಟ್ ಬ್ರೌಸರ್ ಗಳು ಮಾಸ್ಟರ್ ಪಾಸ್ ವರ್ಡ್ ಮೆಕಾನಿಸಂಗೆ ನೀಡುವ ಅತ್ಯಂತ ಕಡಿಮೆ ಬೆಂಬಲ ಜೊತೆಗೆ ಇತರೆ ಹಲವು ಸಮಸ್ಯೆಗಳು ಉದಾಹರಣೆಗೆ ಇಂಟರ್ನೆಟ್ ಎಕ್ಸ್ ಪ್ಲೋರರ್ ನಲ್ಲಿ ಬಿಲ್ಟ್ ಇನ್ ಅಪ್ ಡೇಟ್ ಸಿಸ್ಟಮ್ ಇಲ್ಲದೇ ಇರುವುದು ಇತ್ಯಾದಿಗಳನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಎಲ್ಲಾ ಮೂರು ಬ್ರೌಸರ್ ಗಳಲ್ಲಿ ಟೆಲಿಮೆಟ್ರಿ ಕಲೆಕ್ಷನ್ ನ್ನು ಬ್ಲಾಕ್ ಮಾಡುವುದಕ್ಕೆ ಯಾವುದೇ ಅವಕಾಶವಿಲ್ಲದೇ ಇರುವುದು ಮತ್ತು ಸಾಂಸ್ಥಿಕ ಪಾರದರ್ಶಕತೆಯ ಕೊರತೆಯು ಈ ಬ್ರೌಸರ್ ಗಳಲ್ಲಿ ಅಧಿಕವಾಗಿದೆ ಎಂದು ಏಜೆನ್ಸಿ ಹೇಳಿದೆ.

ಎಲ್ಲದರಲ್ಲೂ ಪಾಸ್ ಆದ ಫೈಯರ್ ಫಾಕ್ಸ್:

ಎಲ್ಲದರಲ್ಲೂ ಪಾಸ್ ಆದ ಫೈಯರ್ ಫಾಕ್ಸ್:

ಇಂಟರ್ನೆಟ್ ಬ್ರೌಸರ್ ಗಳು ಸುರಕ್ಷಿತವಾಗಿರುವ ನಿಟ್ಟಿನಲ್ಲಿ ಇರಬೇಕಾದ ಪ್ರಮುಖ ಫೀಚರ್ ಗಳ ಪಟ್ಟಿಯನ್ನು ಜರ್ಮನ್ ಏಜೆನ್ಸಿ ನೀಡಿದೆ ಮತ್ತು ಫೈಯರ್ ಫಾಕ್ಸ್ ಈ ಎಲ್ಲಾ ಫೀಚರ್ ಗಳನ್ನು ಒಳಗೊಂಡಿದೆ ಎಂದು ಏಜೆನ್ಸಿ ಅಭಿಪ್ರಾಯ ಪಟ್ಟಿದೆ.

ಹೊಸ ವರ್ಷನ್ ಬಿಡುಗಡೆಗೊಳಿಸಿದ ಮೊಝಿಲ್ಲಾ:

ಹೊಸ ವರ್ಷನ್ ಬಿಡುಗಡೆಗೊಳಿಸಿದ ಮೊಝಿಲ್ಲಾ:

ಭಾರತದಲ್ಲಿ ಮೊಝಿಲ್ಲಾ ಇದೀಗ ಹೊಸ ವರ್ಷನ್ ನ್ನು ಕೂಡ ಪ್ರಕಟಿಸಿದೆ. ಈ ಬ್ರೌಸರ್ ಆಪ್ ಸ್ಮಾರ್ಟ್ ಫೋನ್ ಬಳಕೆದಾರರಿಗಾಗಿ ನಿರ್ಮಿಸಲಾಗಿದೆ ಮತ್ತು ಗೂಗಲ್ ಕ್ರೋಮ್ ಜೊತೆಗೆ ಸ್ಪರ್ಧಿಸುವ ಉದ್ದೇಶವನ್ನು ಇದು ಹೊಂದಿದೆ. ಆದರೆ ಖಂಡಿತ ಅದು ವಿಭಿನ್ನ ರೀತಿಯಲ್ಲಿ ಎಂಬುದು ಗಮನಾರ್ಹ ಸಂಗತಿ. ವಿಭಿನ್ನ ರೀತಿ ಯಾವುದೆಂದರೆ ಪ್ರಮುಖವಾಗಿ ಬ್ರೌಸರ್ ಮೊಬೈಲ್ ಡಾಟಾವನ್ನು ಬ್ರೌಸಿಂಗ್ ನ ಸಮಯದಲ್ಲಿ ಉಳಿತಾಯ ಮಾಡುವ ಮೂಲಕ ಗ್ರಾಹಕರಿಗೆ ಅನುಕೂಲ ಮಾಡುವ ಉದ್ದೇಶವನ್ನು ಮೊಝಿಲ್ಲಾ ಹೊಂದಿದೆ.

ಕಡಿಮೆ ತೂಕದ ಮೊಬೈಲ್ ಬ್ರೌಸರ್:

ಕಡಿಮೆ ತೂಕದ ಮೊಬೈಲ್ ಬ್ರೌಸರ್:

ಹೊಸ ಕಡಿಮೆ ತೂಕದ ಮೊಬೈಲ್ ಬ್ರೌಸರ್ ಸ್ಮಾರ್ಟ್ ಫೋನ್ ನಲ್ಲಿ ಕೇವಲ 4ಎಂಬಿಗಿಂತ ಕಡಿಮೆ ಜಾಗವನ್ನು ತೆಗೆದುಕೊಳ್ಳುತ್ತದೆ ಮತ್ತು ಸದ್ಯ ಆಂಡ್ರಾಯ್ಡ್ ಫೋನ್ ಗಳಲ್ಲಿ ಮಾತ್ರವೇ ಲಭ್ಯವಿದೆ. ಟರ್ಬೋ ಮೋಡ್, ಕಡಿಮೆ ಜಾಗದ ಬಳಕೆ ಮತ್ತು ಜಾಹೀರಾತು ಟ್ರ್ಯಾಕರ್ ಗಳಿಂದ ಸುರಕ್ಷತೆ ಇತ್ಯಾದಿ ಹಲವು ವೈಶಿಷ್ಟ್ಯತೆಗಳನ್ನು ಇದು ಒಳಗೊಂಡಿದೆ.

ಕಡಿಮೆ ಡಾಟಾ ಬಳಕೆ:

ಕಡಿಮೆ ಡಾಟಾ ಬಳಕೆ:

ಮೊಝಿಲ್ಲಾ ಫೈಯರ್ ಫಾಕ್ಸ್ ಲೈಟ್ ನಲ್ಲಿರುವ ಟರ್ಬೋ ಮೋಡ್ ಥರ್ಡ್ ಪಾರ್ಟಿ ಟ್ರ್ಯಾಕರ್ ಗಳನ್ನು ಬ್ಲಾಕ್ ಮಾಡುತ್ತದೆ ಆ ಮೂಲಕ ಕಡಿಮೆ ಡಾಟಾ ಬಳಕೆಯಾಗುತ್ತದೆ ಮತ್ತು ವೆಬ್ ಪೇಜ್ ಗಳು ಅತೀ ವೇಗವಾಗಿ ಲೋಡ್ ಆಗುತ್ತದೆ. ಇದು ಕಡಿಮೆ ತೂಕದ ಆಪ್ ಆಗಿರುವುದರಿಂದಾಗಿ ಅಂದರೆ ಕೇವಲ 4ಎಂಬಿಗಿಂತ ಕಡಿಮೆ (3.6ಎಂಬಿ) ಇರುವುದರಿಂದಾಗಿ ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಜಾಗವನ್ನು ಉಳಿತಾಯ ಮಾಡುತ್ತದೆ ಆದರೆ ಭವಿಷ್ಯದ ಅಪ್ ಡೇಟ್ ಗಳಲ್ಲೂ ಕೂಡ ಕಡಿಮೆ ಡಾಟಾವನ್ನು ಇದು ಬಳಕೆ ಮಾಡುತ್ತದೆ.

ಜಾಹೀರಾತು ಟ್ರ್ಯಾಕರ್ ಗಳಿಗೆ ಕಡಿವಾಣ:

ಜಾಹೀರಾತು ಟ್ರ್ಯಾಕರ್ ಗಳಿಗೆ ಕಡಿವಾಣ:

ಫೈಯರ್ ಫಾಕ್ಸ್ ಲೈಟ್ ನ ಪ್ರಮುಖ ಫೀಚರ್ ಎಂದರೆ ಗೌಪ್ಯವಾಗಿ ಬ್ರೌಸ್ ಮಾಡುವ ಸಾಮರ್ಥ್ಯವಿರುವುದು. ಹೌದು ಜಾಹೀರಾತು ಟ್ರ್ಯಾಕರ್ ಗಳು ಟ್ರೇಸ್ ಮಾಡುವುದಕ್ಕೆ ಯಾವುದೇ ಮಾಹಿತಿಯನ್ನೂ ಕೂಡ ನೀಡದೇ ಇರುವುದು ಇದರ ಪ್ರಮುಖ ವೈಶಿಷ್ಟ್ಯತೆಗಳಲ್ಲೊಂದೆನಿಸಿದೆ.

Best Mobiles in India

Read more about:
English summary
Mozilla Firefox rated to be safer than Google Chrome

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X