ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಭಾರೀ ಜಿಗಿದ ಮುಖೇಶ್ ಅಂಬಾನಿ!..ಈಗ ಆಸ್ತಿ ಎಷ್ಟು ಗೊತ್ತಾ?

|

ಪ್ರತಿವರ್ಷದಂತೆಯೇ ಈ ವರ್ಷವೂ ವಿಶ್ವದ ಟಾಪ್ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದ್ದು, ಪ್ರಖ್ಯಾತ ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿರುವ 2019 ನೇ ಸಾಲಿನ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಮೇಜಾನ್ ಸಂಸ್ಥಾಪಕ ಜೆಫ್ ಬೆಝೊಸ್ ಅವರು 131 ಬಿಲಿಯನ್ ಆಸ್ತಿಯೊಂದಿಗೆ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಭಾರತದ ದಿಗ್ಗಜ ಉದ್ಯಮಿ ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು 13 ನೇ ಸ್ಥಾನ ಪಡೆದುಕೊಂಡಿದ್ದಾರೆ.

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಭಾರೀ ಜಿಗಿದ ಮುಖೇಶ್ ಅಂಬಾನಿ!..ಆಸ್ತಿ ಎಷ್ಟು?

ದಶಕದ ಕಾಲ ವಿಶ್ವದ ಶ್ರೀಮಂತನಾಗೇ ಉಳಿದಿದ್ದ ಮೈಕ್ರೊಸಾಫ್ಟ್‌ ಸಹಸಂಸ್ಥಾಪಕ ಬಿಲ್‌ಗೇಟ್ಸ್ ಅವರು ಈ ವರ್ಷದ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 2 ನೇ ಸ್ಥಾನ ಪಡೆದಿದ್ದಾರೆ. ಇನ್ನು ಎಸ್ ಇನ್ವೆಸ್ಟರ್ ವಾರೆನ್ ಬಫೆಟ್ ಅವು 3 ನೇ ಸ್ಥಾನ ಪಡೆದುಕೊಂಡಿದ್ದರೆ, ಫೇಸ್‌ಬುಕ್ ಒಡೆಯ ಮಾರ್ಕ್ ಜ್ಯೂಕರ್ ಬರ್ಗ್ ಅವರು ಈ ಬಾರಿ 3 ಸ್ಥಾನ ಕುಸಿತ ಕಂಡು 8 ನೇ ಸ್ಥಾನಕ್ಕೆ ಇಳಿದಿರುವುದು ಶ್ರೀಮಂತರ ಪಟ್ಟಿಯಲ್ಲಿ ಆಗಿರುವ ಭಾರೀ ಬದಲಾವಣೆಯಾಗಿದೆ.

2018 ರಲ್ಲಿ 50 ಬಿಲಿಯನ್ ಯುಎಸ್ ಡಾಲರ್ ಆಸ್ತಿಯೊಂದಿಗೆ 19 ನೇ ಸ್ಥಾನ ಪಡೆದಿದ್ದ ಮುಖೇಶ್ ಅಂಬಾನಿ ಈ ವರ್ಷ 6 ಸ್ಥಾನ ಜಿಗಿತ ಕಂಡಿದ್ದಾರೆ. ಹಾಗಾದರೆ, 2019ನೇ ವರ್ಷದಲ್ಲಿ ವಿಶ್ವದ ಟಾಪ್ ಶ್ರೀಮಂತರು ಯಾರು?, ಅವರ ಆಸ್ತಿಯ ಒಟ್ಟು ಮೊತ್ತ ಎಷ್ಟು?, ಮುಖೇಶ್ ಅಂಬಾನಿ ತಮ್ಮ ಅನಿಲ್ ಅಂಬಾನಿ ಎಷ್ಟನೇ ಸ್ಥಾನದಲ್ಲಿದ್ದಾರೆ?, ಮುಖೇಶ್ ಅಂಬಾನಿ ನಂತರದ ಸ್ಥಾನದಲ್ಲಿರುವ ಮತ್ತೋರ್ವ ಭಾರತೀಯ ಯಾರು ಎಂಬ ಕುತೋಹಲದ ವಿಷಯಗಳನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ವಿಶ್ವದ ಶ್ರೀಮಂತ ಜೆಫ್ ಬೆಜೊಸ್

ವಿಶ್ವದ ಶ್ರೀಮಂತ ಜೆಫ್ ಬೆಜೊಸ್

ಕಳೆದ ವರ್ಷ ಬಿಲ್‌ಗೇಟ್ಸ್ ಅವರನ್ನು ಹಿಂದಿಕ್ಕಿ ವಿಶ್ವದ ಶ್ರೀಮಂತನ ಪಟ್ಟ ಪಡೆದಿದ್ದ ಅಮೇಜಾನ್ ಸಂಸ್ಥಾಪಕ ಜೆಫ್ ಬೆಜೊಸ್ ಅವರು ಈ ವರ್ಷವೂ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ವಿಶ್ವದ ಶ್ರೀಮಂತ ಜೆಫ್ ಬೆಜೊಸ್ ಅವರು ಒಟ್ಟು 131 ಬಿಲಿಯನ್‌ ಆಸ್ತಿಯೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪ್ರಖ್ಯಾತ ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿದೆ.

ಎರಡನೇ ಸ್ಥಾನದಲ್ಲಿ ಬಿಲ್‌ಗೇಟ್ಸ್

ಎರಡನೇ ಸ್ಥಾನದಲ್ಲಿ ಬಿಲ್‌ಗೇಟ್ಸ್

ವಿಶ್ವದ ಶ್ರೀಮಂತರಲ್ಲಿ ಜೆಫ್ ಬೆಜೊಸ್ ಅವರು ಮೊದಲ ಸ್ಥಾನದಲ್ಲಿದ್ದರೆ, ಬಿಲ್‌ಗೇಟ್ಸ್ ಅವರು ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಬಿಲ್‌ಗೇಟ್ಸ್ ಅವರ ಪ್ರಸ್ತುತ ಆಸ್ತಿ 96.5 ಬಿಲಿಯನ್‌ಗಳಾಗಿವೆ. ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಬಿಲ್‌ಗೇಟ್ಸ್ ಅವರು ಇಲ್ಲಿಯವರೆಗೂ ಒಟ್ಟು 38.5 ಬಿಲಿಯನ್‌ನಷ್ಟು ಆಸ್ತಿಯನ್ನು ದಾನ ಮಾಡಿದ್ದಾರೆ.

ಮೊದಲ 5 ಸ್ಥಾನ ಯಾರಿಗೆ?

ಮೊದಲ 5 ಸ್ಥಾನ ಯಾರಿಗೆ?

ಜೆಫ್ ಅವರು ವಿಶ್ವದ ಶ್ರೀಂತನಾಗಿ ಹೊರಹೊಮ್ಮಿದ್ದರೆ, ಬಿಲ್‌ಗೇಟ್ಸ್ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಒರಾಕಲ್ ಆಫ್ ಒಮಾ ಖ್ಯಾತಿಯ ವಾರನ್ ಬಫೆಟ್ ಅವರು ಇದ್ದರೆ, ನಾಲ್ಕನೇ ಸ್ಥಾನದಲ್ಲಿ ಬರ್ನಾರ್ಡ್ ಅರ್ನಾಲ್ಟ್ & ಕುಟುಂಬ ಸ್ಥಾನಪಡೆದಿದೆ. ಇನ್ನು ಐದನೇ ಸ್ಥಾನದಲ್ಲಿದ್ದ ಮಾರ್ಕ್ ಅನ್ನು ಹಿಂದಿಕ್ಕಿ ಕಾರ್ಲೋಸ್ ಸ್ಲಿಮ್ ಹಿಲು & ಕುಟುಂಬ ಮೇಲೆ ಬಂದಿದೆ.

ಕುಸಿದ ಫೇಸ್‌ಬುಕ್ ಮಾಲಿಕ

ಕುಸಿದ ಫೇಸ್‌ಬುಕ್ ಮಾಲಿಕ

2018ರಲ್ಲಿ ಐದನೇ ಸ್ಥಾನದಲ್ಲಿದ್ದ ಫೇಸ್‌ಬುಕ್‌ ಸಂಸ್ಥೆಯ ಮಾಲಿಕ ಮಾರ್ಕ್‌ ಜುಕರ್ ಬರ್ಗ್ ಅವರು 3 ಸ್ಥಾನ ಕುಸಿದು 8 ನೇ ಸ್ಥಾನ ಪಡೆದಿದ್ದಾರೆ. ಫೇಸ್‌ಬುಕ್ ಬಳಕೆದಾರರ ಮಾಹಿತಿ ದುರ್ಬಳಕೆ, ಸುಳ್ಳುಸುದ್ದಿಯಂತಹ ಹಲವು ಸಮಸ್ಯೆಗಳಿಗೆ ಈಡಾಗಿದ್ದ ಮಾರ್ಕ್ ಅವರು ಎರಡು ಬಿಲಿಯನ್‌ನಷ್ಟು ಆಸ್ತಿ ಕಳೆದುಕೊಂಡಿದ್ದು, ಪ್ರಸ್ತುತ 62.3 ಬಿಲಿಯನ್ ಆಸ್ತಿಯನ್ನು ಹೊಂದಿದ್ದಾರೆ.

ಮುಖೇಶ್ ಅಂಬಾನಿ 6 ಸ್ಥಾನ ಜಿಗಿತ!

ಮುಖೇಶ್ ಅಂಬಾನಿ 6 ಸ್ಥಾನ ಜಿಗಿತ!

3.5 ಲಕ್ಷ ಕೋಟಿ ರೂಪಾಯಿ ಆಸ್ತಿಯೊಂದಿಗೆ 6 ಸ್ಥಾನ ಜಿಗಿದಿರುವ ಅಂಬಾನಿ ಅವರು 13 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. 2018 ರಲ್ಲಿ ಅಂಬಾನಿ ಅವರು 50 ಬಿಲಿಯನ್‌ ಯುಎಸ್‌ ಡಾಲರ್‌ ಆಸ್ತಿಯೊಂದಿಗೆ 19 ನೇ ಸ್ಥಾನ ಪಡೆದಿದ್ದರು. 2016 ರಲ್ಲಿ ಜಿಯೋ ಸಿಮ್ ಮೂಲಕ ಭಾರತದ ಟೆಲಿಕಾಂ ಕ್ಷೇತ್ರದಲ್ಲಿನ ದರ ಸಮರಕ್ಕೆ ಅಂಬಾನಿ ಕಿಡಿ ಹಚ್ಚಿದ್ದರು ಎಂದು ಫೋರ್ಬ್ಸ್ ಹೇಳಿದೆ.

ಟಾಪ್ ನೂರರಲ್ಲಿ ಭಾರತೀಯರು!

ಟಾಪ್ ನೂರರಲ್ಲಿ ಭಾರತೀಯರು!

ಮುಖೇಶ್ ಅಂಬಾನಿ ನಂತರ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್‌ ಜಿ ಅವರು 36 ನೇ ಸ್ಥಾನ ಪಡೆದು 2 ನೇ ಶ್ರೀಮಂತ ಭಾರತೀಯ ಎನಿಸಿಕೊಂಡಿದ್ದಾರೆ. ಇವರು 22.6 ಬಿಲಿಯನ್‌ ಯುಎಸ್‌ ಡಾಲರ್‌ ಆಸ್ತಿ ಹೊಂದಿದ್ದಾರೆ. ಇನ್ನು ಎಚ್‌ಸಿಎಸ್ ಸಂಸ್ಥಾಪಕ ಶಿವ ನಾಡರ್ ಅವರು 82 ನೇ ಸ್ಥಾನ ಪಡೆದಿದ್ದರೆ, ಲಕ್ಷ್ಮೀ ಮಿತ್ತಲ್ ಅವರು 91 ನೇ ಸ್ಥಾನ ಪಡೆದಿದ್ದಾರೆ.

ಅನಿಲ್ ಅಂಬಾನಿಗೆ ಎಷ್ಟನೇ ಸ್ಥಾನ?

ಅನಿಲ್ ಅಂಬಾನಿಗೆ ಎಷ್ಟನೇ ಸ್ಥಾನ?

ಅಂದಹಾಗೆ ಮುಖೇಶ್ ಸಹೋದರ ಅನಿಲ್‌ ಅಂಬಾನಿ ಅವರು ಈ ಬಾರಿ 1.8 ಬಿಲಿಯನ್‌ ಯುಎಸ್‌ ಡಾಲರ್‌ ಆಸ್ತಿಯೊಂದಿಗೆ 1349 ನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನುಳಿದಂತೆ,ಕುಮಾರ್‌ ಬಿರ್ಲಾ 122 ನೇ ಸ್ಥಾನ, ಗೌತಮ್ ಅದಾನಿ 167, ಸುನಿಲ್‌ ಮಿತ್ತಲ್ 244 ನೇ ಸ್ಥಾನ, ಆಚಾರ್ಯ ಬಾಲಕೃಷ್ಣ ಅವರು 365 ನೇ ಸ್ಥಾನ ಪಡೆದುಕೊಂಡಿದ್ದಾರೆ.

'ರೆಡ್‌ಮಿ ನೋಟ್ 7 ಪ್ರೊ' ಎಫೆಕ್ಟ್!..'ನೋಟ್ 6 ಪ್ರೊ' ಬೆಲೆ ಊಹಿಸಲಾಗದಷ್ಟು ಇಳಿಕೆ!

'ರೆಡ್‌ಮಿ ನೋಟ್ 7 ಪ್ರೊ' ಎಫೆಕ್ಟ್!..'ನೋಟ್ 6 ಪ್ರೊ' ಬೆಲೆ ಊಹಿಸಲಾಗದಷ್ಟು ಇಳಿಕೆ!

ಭಾರತದ ಮೊಬೈಲ್ ಮಾರುಕಟ್ಟೆಗೆ ಶಿಯೋಮಿ ಕಂಪೆನಿಯ 'ರೆಡ್‌ಮಿ ನೋಟ್ 7' ಸರಣಿ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾದ ನಂತರ ಶಿಯೋಮಿ 'ರೆಡ್‌ಮಿ ನೋಟ್ 6 ಪ್ರೊ' ಸರಣಿ ಸ್ಮಾರ್ಟ್‌ಫೋನ್‌ಗಳ ಬೆಕೆ ಭಾರೀ ಇಳಿಕೆಯಾಗಿದೆ. ರೆಡ್‌ಮಿ ನೋಟ್ 7 ಪ್ರೊ ಬಿಡುಗಡೆಗೂ ಮುನ್ನವೇ ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಮಿಂಚಿನ ಸಂಚಾರ ನಡೆಸಿದ 'ರೆಡ್‌ಮಿ ನೋಟ್ 6' ಸ್ಮಾರ್ಟ್‌ಪೋನ್ ಮೇಲೆ 5,000 ರೂ.ವರೆಗೂ ಡಿಸ್ಕೌಂಟ್ಸ್ ನೀಡಿ ಶಿಯೋಮಿ ಕಂಪೆನಿ ಮೊಬೈಲ್ ಪ್ರಿಯರ ಗಮನಸೆಳೆದಿದೆ.

ತನ್ನ ಮೊದಲ ಫ್ಲಾಶ್‌ಸೇಲ್‌ನಲ್ಲಿಯೇ 6,00,000 ಮಾರಾಟ ಕಂಡಿದ್ದ 'ರೆಡ್‌ಮಿ ನೋಟ್ 6 ಪ್ರೊ' ಸ್ಮಾರ್ಟ್‌ಫೋನ್‌ ಒಂದೇ ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ಮಾರಾಟವಾಗಿ ಇತಿಹಾಸದ ದಾಖಲೆ ನಿರ್ಮಿಸಿತ್ತು. ಇದೀಗ ಮತ್ತೆ ಬೆಲೆ ಕಳೆದುಕೊಂಡು ಮೊಬೈಲ್ ಪ್ರಿಯರ ಕೈಸೇರಲು ತಯಾರಾಗಿದೆ. ಹಾಗಾದರೆ, ಭಾರತದ ಮೊಬೈಲ್ ಮಾರುಕಟ್ಟೆಯ ಇತಿಹಾಸದಲ್ಲಿ ಈಗಲೂ ದಾಖಲೆಯ ಒಡೆಯನಾಗಿರುವ'ರೆಡ್‌ಮಿ ನೋಟ್ 6 ಪ್ರೊ' ಸ್ಮಾರ್ಟ್‌ಫೋನ್ ಹೇಗಿದೆ?, ಪ್ರಸ್ತುತ ಸ್ಮಾರ್ಟ್‌ಫೋನ್ ದರಗಳು ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಸ್ಮಾರ್ಟ್‌ಪೋನ್ ವಿನ್ಯಾಸ ಹೇಗಿದೆ?

ಸ್ಮಾರ್ಟ್‌ಪೋನ್ ವಿನ್ಯಾಸ ಹೇಗಿದೆ?

ಆಪಲ್ ಐಫೋನ್ ಎಕ್ಸ್ ಮಾದರಿಯ ಡಿಸ್‌ಪ್ಲೇ ನೋಚ್, ನಾಲ್ಕು ಕ್ಯಾಮೆರಾಗಳು ಹಾಗೂ ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಹೊಂದಿರುವ 'ರೆಡ್‌ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನ್ ವಿನ್ಯಾಸ ಹೈ ಎಂಡ್ ಸ್ಮಾರ್ಟ್‌ಪೋನ್‌ಗಳಿಗೆ ಸೆಡ್ಡು ಹೊಡೆಯುತ್ತಿದೆ. ಈ ಸ್ಮಾರ್ಟ್‌ಫೋನಿನ ನಾಲ್ಕು ಬದಿಗಳಲ್ಲಿ ರೌಂಡೆಡ್ ಕಾರ್ನರ್ ಎಡ್ಜ್ ವಿನ್ಯಾಸವಿರುವುದು ಸ್ಮಾರ್ಟ್‌ಫೋನಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

ಸ್ಮಾರ್ಟ್‌ಪೋನ್ ಡಿಸ್‌ಪ್ಲೇ!

ಸ್ಮಾರ್ಟ್‌ಪೋನ್ ಡಿಸ್‌ಪ್ಲೇ!

ಈಗಾಗಲೇ ತಿಳಿದಿರುವಂತೆ, ರೆಡ್‌ಮಿ ನೋಟ್ 6 ಪ್ರೊ ಸ್ಮಾರ್ಟ್‌ಪೋನ್ 6.26-ಇಂಚಿನ ಪೂರ್ಣ ಹೆಚ್‌ಡಿ+ ಐಪಿಎಸ್ ಎಲ್ಸಿಡಿ (1080*2280p) ಡಿಸ್‌ಪ್ಲೇಯನ್ನು ಹೊಂದಿದೆ. 1080*2280 ಪಿಕ್ಸೆಲ್ ಸಾಮರ್ಥ್ಯದ ಡಿಸ್‌ಪ್ಲೇ ಶೇ. 86 ಪ್ರತಿಶತ ಸ್ಕ್ರೀನ್-ಟು-ಬಾಡಿಯನ್ನು ಹೊಂದಿದ್ದು, 19:9 ಆಕಾರ ಅನುಪಾತದಲ್ಲಿರುವುದರಿಂದ ಮಲ್ಟಿಮೀಡಿಯಾ ಪ್ರಿಯರಿಗೆ ಡಿಸ್‌ಪ್ಲೇ ಹೇಳಿ ಮಾಡಿಸಿದಂತಿದೆ. ಇನ್ನು ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಹೊಂದಿರುವುದು ಡಿಸ್‌ಪ್ಲೇ ಸುರಕ್ಷತೆಗೆ ಖಾತ್ರಿಯಾಗಿದೆ.

ಕ್ವಾಡ್ ಕ್ಯಾಮೆರಾ ಸ್ಮಾರ್ಟ್‌ಫೋನ್

ಕ್ವಾಡ್ ಕ್ಯಾಮೆರಾ ಸ್ಮಾರ್ಟ್‌ಫೋನ್

'ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನಿನ ಪ್ರಮುಖ ಆಕರ್ಷಣೆಯೇ ನಾಲ್ಕು ಕ್ಯಾಮೆರಾಗಳಲಾಗಿದ್ದು, 12MP + 5MP ಹಿಂಬದಿಯ ಕ್ಯಾಮರಾ, 20MP + 2MP ಸೆಲ್ಫಿ ಕ್ಯಾಮರಾಗಳನ್ನು ನೀಡಲಾಗಿದೆ. ಡ್ಯುಯಲ್ ಪಿಕ್ಸೆಲ್ ಆಟೋಫೋಕಸ್, 1.4-ಮೈಕ್ರಾನ್ ಪಿಕ್ಸೆಲ್‌ಗಳು, ಎಐ ಭಾವಚಿತ್ರ 2.0 ಮತ್ತು ಎಐ ಡೈನಾಮಿಕ್ ಬೊಕೆ ವೈಶಿಷ್ಟ್ಯಗಳಂತಹ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಶಿಯೋಮಿಯ ಮೊದಲ ಎಐ ಆಧಾರಿತ ಕ್ವಾಡ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಆಗಿ 'ರೆಡ್ ಮಿ ನೋಟ್ 6 ಪ್ರೊ' ಹೊರಹೊಮ್ಮಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನಿನಲ್ಲಿ ಕ್ಯಾಮೆರಾಗೆ ಹೆಚ್ಚು ಒತ್ತು ನೀಡಿರುವ ಶಿಯೋಮಿ ಕಂಪೆನಿ, ಈ ಸ್ಮಾರ್ಟ್‌ಫೋನಿನಲ್ಲಿ 'ರೆಡ್ ಮಿ ನೋಟ್ 5 ಪ್ರೊ'ನಲ್ಲಿ ನೀಡಲಾಗಿದ್ದ ಸ್ನ್ಯಾಪ್‌ಡ್ರಾಗನ್ 636 ಆಕ್ಟಕೋರ್ ಪ್ರೊಸೆಸರ್ ಅನ್ನೇ ನೀಡಿದೆ. ಕ್ವಾಲ್ಕಮ್ ಸ್ಪೆಕ್ಟ್ರಾ ಪ್ರೊಸೆಸರ್ ,ಅಡ್ರಿನೋ 509 ಜಿಪಿಯು, 4ಜಿಬಿ RAM ಮತ್ತು 64GB ಹಾಗೂ 6ಜಿಬಿ RAM ಮತ್ತು 64GB ಆಂತರಿಕ ಮೆಮೊರಿ ವೆರಿಯಂಟ್‌ಗಳಲ್ಲಿ ಸ್ಮಾರ್ಟ್‌ಫೋನ್ ಭಾರತದ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ.

MIUI 10 ಆಧಾರಿತ ಟಾಪ್ ಆಂಡ್ರಾಯ್ಡ್

MIUI 10 ಆಧಾರಿತ ಟಾಪ್ ಆಂಡ್ರಾಯ್ಡ್

ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನ್ MIUI 10 ಆಧಾರಿತ ಟಾಪ್ ಆಂಡ್ರಾಯ್ಡ್ ಮೂಲಕ ಕಾರ್ಯನಿರ್ವಹಣೆ ನೀಡಲಿದೆ. ಇದು ಶೇ. 30 ರಷ್ಟು ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ವೇಗವನ್ನು ಹೆಚ್ಚಿಸಲಿದೆ ಎಂದು ಶಿಯೋಮಿ ಕಂಪೆನಿ ಹೇಳಿಕೊಂಡಿದೆ. ಬ್ಯಾಟರಿ ಉಳಿತಾಯದಲ್ಲಿ MIUI 10 ಆಧಾರಿತ ಟಾಪ್ ಆಂಡ್ರಾಯ್ಡ್ ಸಾಮರ್ಥ್ಯ ಹೆಚ್ಚಿದೆಯಂತೆ. ಪ್ರಸ್ತುತ ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಣೆ ನೀಡುವ ಸ್ಮಾರ್ಟ್‌ಪೋನ್ ಆಂಡ್ರಾಯ್ಡ್ ಪೈಗೆ ಬಹುಬೇಗ ಅಪ್‌ಡೇಟ್ ಆಗಲಿದೆ ಎಂದು ಶಿಯೋಮಿ ಕಂಪೆನಿ ತಿಳಿಸಿದೆ.

4000mAh ಬ್ಯಾಟರಿ ಸಾಮರ್ಥ್ಯ!

4000mAh ಬ್ಯಾಟರಿ ಸಾಮರ್ಥ್ಯ!

ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನಿನಲ್ಲಿ 4,000 mAh ಬ್ಯಾಟರಿಯೊಂದಿಗೆ ಏಕೈಕ ಪೂರ್ಣ ಚಾರ್ಜನಲ್ಲಿ 2 ದಿನ ಬ್ಯಾಟರಿ ಬಾಳಿಕೆ ಅವಧಿಯ ಭರವಸೆಯನ್ನು ಶಿಯೋಮಿ ನೀಡಿದೆ. ವೇಗವಾಗಿ ಚಾರ್ಜಿಂಗ್‌ಗಾಗಿ ರೆಡ್‌ಮಿ ನೋಟ್ 6 ಪ್ರೊ ಕ್ವಿಕ್ ಚಾರ್ಜ್ 3.0 ಅನ್ನು ಬೆಂಬಲಿಸುತ್ತದೆ ಎಂದು ಕಂಪೆನಿ ತಿಳಿಸಿದೆ. ಶಿಯೋಮಿ ಮೊಬೈಲ್ ಪ್ರಿಯರು ಎದುರುನೋಡುತ್ತಿದ್ದ ಬಹುನಿರೀಕ್ಷಿತ ಕ್ವಿಕ್ ಚಾರ್ಜ್ ಫೀಚರ್ ಈಗ ಸಿಕ್ಕಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಇಷ್ಟೆಲ್ಲಾ ಮುಖ್ಯ ಫೀಚರ್ಸ್‌ಗಳನ್ನು ಹೊಂದಿರುವ 'ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನ್, 4-ಇನ್ -1 ಸೂಪರ್ ಪಿಕ್ಸೆಲ್ ಮತ್ತು ಎಐ ಫೇಸ್ ಅನ್ಲಾಕ್ ಸಾಮರ್ಥ್ಯಗಳನ್ನು ಹೊಂದಿರುವುದು ವಿಶೇಷತೆಯಾದರೆ, ಕ್ಯಾಮೆರಾ ತಂತ್ರಜ್ಞಾನದಲ್ಲಿ ಬಹಳಷ್ಟು ಮುಂದಿದೆ. ಎಐ ಆಧಾರಿತ ಕ್ಯಾಮೆರಾ ತಂತ್ರಜ್ಞಾನದಿಂದ ಅದ್ಬುತ ಕ್ಯಾಮೆರಾ ಸ್ಮಾರ್ಟ್‌ಫೋನ್ ಆಗಿ ಸ್ಮಾರ್ಟ್‌ಫೋನ್ ಹೊರಹೊಮ್ಮಿದೆ. ಇನ್ನು ಫೋನ್ ಡ್ಯುಯಲ್ ಸಿಮ್‌ಗಳನ್ನು ಹೊಂದಿದ್ದು, ಎರಡೂ ಸಿಮ್‌ಗಳು ವೋಲ್ಟ್ ಸೇವೆಗೆ ಲಭ್ಯವಿವೆ. ಜೊತೆಗೆ ಫೋನ್ ರಸ್ಟ್ ಪ್ರೊಟೆಕ್ಷನ್ ಹೊಂದಿದೆ.

Best Mobiles in India

English summary
Richest Indian Mukesh Ambani jumped six positions to rank 13th on Forbes World's Billionaire list released Tuesday that was again topped by Jeff Bezos. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X