ಮಹಿಳೆ ಕಳುಹಿಸಿದ ಮೆಸೆಜ್‌ಗೆ ಮರುಳಾಗಿ, ಈತ ಕಳೆದುಕೊಂಡಿದ್ದು ಎಷ್ಟು ಗೊತ್ತಾ?

|

ಸೊಶೀಯಲ್‌ ಮೀಡಿಯಾದಲ್ಲಿ ಬರುವ ಸಂದೇಶಗಳಿಗೆ ಮಾರುಹೋಗುವ ಬಳಕೆದಾರರೇ ಈ ಸ್ಟೋರಿಯನ್ನು ಓದಿರಿ. ಯಾಕಂದ್ರೆ ವ್ಯಕ್ತಿಯೊಬ್ಬ ಟೆಲಿಗ್ರಾಮ್‌ನಲ್ಲಿ ಬಂದ ಸಂದೇಶವನ್ನು ನಂಬಿ 37.80 ಲಕ್ಷ ರೂ. ಕಳೆದುಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ. ಕಮಿಷನ್‌ ಮೂಲಕ ಹಣ ಗಳಿಸುವ ಆಸೆಗೆ ಬಲಿಯಾದ ವ್ಯಕ್ತಿ ಮಹಿಳೆಯೊಬ್ಬಳು ಕಳುಹಿಸಿದ ಟೆಲಿಗ್ರಾಮ್‌ ಸಂದೇಶಕ್ಕೆ ಮರುಳಾಗಿ ಇದ್ದ ಹಣವನ್ನು ಕಳೆದುಕೊಂಡು ಮೋಸಹೋಗಿದ್ದಾನೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ನಲ್ಲಿ ಮಹಿಳೆಯೊಬ್ಬಳು ಕಳುಹಿಸಿದ ಸಂದೇಶಕ್ಕೆ ವ್ಯಕ್ತಿಯೊಬ್ಬ 37.80 ಲಕ್ಷ ರೂ. ಕಳೆದುಕೊಂಡಿದ್ದಾನೆ. ಆನ್‌ಲೈನ್‌ನಲ್ಲಿ ಹಣ ಗಳಿಸುವುದು ಹೇಗೆ? ನೀವು ಸುಲಭವಾಗಿ ಕಮಿಷನ್‌ ರೂಪದಲ್ಲಿ ಹಣ ಪಡೆಯುವುದಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ ಎಂದು ಹೇಳಿದ ಮಹಿಳೆ ಆತನಿಗೆ ಮೋಸ ಮಾಡಿದ್ದಾಳೆ. ಸದ್ಯ ಈ ಪ್ರಕರಣದ ಬಗ್ಗೆ ದಿ ಫ್ರೀ ಪ್ರೆಸ್‌ ಜರ್ನಲ್‌ ವರದಿ ಮಾಡಿದೆ. ಹಾಗಾದ್ರೆ ಮುಂಬೈನ 40 ವರ್ಷದ ವ್ಯಕ್ತಿ ಮೋಸ ಹೋಗಿದ್ದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೊಶೀಯಲ್‌

ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಂದರ ಮಹಿಳೆಯ ಫೋಟೋ ಹಾಕಿ ಜನರನ್ನು ವಂಚಿಸಿ ಹಣ ಪೀಕುವ ಪ್ರಕರಣಗಳು ಇದೇ ಮೊದಲಲ್ಲ. ಆದರೆ ಇಲ್ಲಿ ನಡೆದಿರುವುದು ಎಲ್ಲಾ ಪ್ರಕರಣಗಳಿಗಿಂತ ಭಿನ್ನವಾಗಿದೆ. ಇಲ್ಲಿ ಮೊದಲಿಗೆ ಮುಂಬೈನ 40 ವರ್ಷದ ವ್ಯಕ್ತಿಗೆ ಮಹಿಳೆಯೊಬ್ಬಳು ಟೆಲಿಗ್ರಾಮ್‌ನಲ್ಲಿ ಸಂದೇಶ ಕಳುಹಿಸಿದ್ದಾಳೆ. ಈ ಸಂದೇಶದಲ್ಲಿ ಆನ್‌ಲೈನ್‌ನಲ್ಲಿ ಹಣ ಗಳಿಸುವುದಕ್ಕೆ ಅವಕಾಶ ನೀಡುವುದಾಗಿ ಹೇಳಿದ್ದಾಳೆ. ಇದಕ್ಕಾಗಿ ನೀವು ತನ್ನ ಕಂಪೆನಿಯ ಉತ್ಫನ್ನಗಳಿಗೆ ಉತ್ತಮ ರೇಟಿಂಗ್‌ ನೀಡಬೇಕು. ಇದರಿಂದ ನಿಮಗೆ ಕಮಿಷನ್‌ ಸಿಗಲಿದೆ ಎಂಬ ಆಸೆ ತೋರಿದ್ದಾಳೆ.

ಮಾರುಹೋದ

ಮಹಿಳೆ ನೀಡಿದ ಕಮಿಷನ್‌ ಆಸೆ ಹಾಗೂ ಆಕೆಯ ಸಂದೇಶಗಳಿಗೆ ಮಾರುಹೋದ ವ್ಯಕ್ತಿ ಕೂಡಲೇ ಆಕೆ ಕಳುಹಿಸಿದ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದ್ದಾನೆ. ಲಿಂಕ್‌ ಕ್ಲಿಕ್‌ ಮಾಡಿದ ನಂತರ, ಮತ್ತೊಬ್ಬ ಮಹಿಳೆ ಅವನಿಂದ ವೆಬ್‌ಸೈಟ್‌ನಲ್ಲಿ ಕೆಲವು ಕಾರ್ಯಗಳನ್ನು ಪೂರ್ಣಗೊಳಿಸುವಂಯೆ ಮಾಹಿತಿ ನೀಡಿದ್ದಾಳೆ. ಆಕೆ ಹೇಳಿದಂತೆ ಈತನೂ ಕೂಡ ವೆಬ್‌ಸೈಟ್‌ ಲಿಂಕ್‌ ಕ್ಲಿಕ್‌ ಮಾಡಿ ಎಲ್ಲಾ ಮಾಹಿತಿಯನ್ನು ತುಂಬಿದ್ದಾನೆ. ಜೊತೆಗೆ ಆಕೆಯ ವೆಬ್‌ಸೈಟ್‌ಗೆ ಲಾಗಿನ್‌ ಕೂಡ ಆಗಿದ್ದಾನೆ. ಈತ ಲಾಗಿನ್‌ ಆದ ನಂತರ ನೀವು ರೇಟಿಂಗ್‌ ನೀಡಿದ ನಂತರ ನಿಮ್ಮ ಇ ವ್ಯಾಲೆಟ್‌ಗೆ ಹಣ ಕಳುಹಿಸುವುದಾಗಿ ಹೇಳಿದ್ದಾಳೆ.

ಮುಂಬೈನ

ಅದರಂತೆ ಮುಂಬೈನ ವ್ಯಕ್ತಿ ನವೆಂಬರ್ 28 ರಂದು ಆಕೆಯ ವೆಬ್‌ಸೈಟ್‌ನಲ್ಲಿ ನೀಡಲಾದ ಕಾರ್ಯಗಳನ್ನು ನಿರ್ವಹಿಸಲು ಪ್ರಾರಂಭಿಸಿದ್ದಾನೆ. ಇದರಲ್ಲಿ ಮಹಿಳೆ ತನ್ನದೆಂದು ಹೇಳಿದ ಕೆಲವು ಪ್ರಾಡಕ್ಟ್‌ಗಳಿಗೆ ಪೈವ್‌ ಸ್ಟಾರ್‌ ರೇಟಿಂಗ್‌ ನೀಡುವುದು ಈತನ ಕಾರ್ಯವಾಗಿತ್ತು. ಪ್ರತಿ ಬಾರಿಯೂ ಅವನು ರೇಟಿಂಗ್‌ ನೀಡಿದ ನಂತರ ಅದಕ್ಕಾಗಿ ಅವನು ಕೆಲವು ಪ್ರೀಮಿಯಂ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಅಲ್ಲದೆ ಈ ಶುಲ್ಕವನ್ನು ಇ-ವ್ಯಾಲೆಟ್‌ನಲ್ಲಿ ವಾಪಾಸ್‌ ಬರಲಿದೆ ಎಂದು ಸೂಚನೆ ಕೂಡ ನೀಡಲಾಗಿದೆ.

ಮಹಿಳೆ

ಮಹಿಳೆಯರ ಮಾತಿಗೆ ಮರುಳಾದ ವ್ಯಕ್ತಿ ಡಿಸೆಂಬರ್ 3 ರ ವೇಳೆಗೆ, ಒಟ್ಟು 37.80 ಲಕ್ಷ ರೂಪಾಯಿಗಳನ್ನು ವಿವಿಧ ಟಾಸ್ಕ್‌ಗಳಲ್ಲಿ ಹೂಡಿಕೆ ಮಾಡಿದ್ದಾನೆ. ಆದರೆ ಆತನ ಇ-ವ್ಯಾಲೆಟ್‌ನಲ್ಲಿ 41.50ರೂ. ಮಾತ್ರ ಬಂದಿದೆ. ತನ್ನ ಇ-ವ್ಯಾಲೆಟ್‌ನಲ್ಲಿ ತಾನು ಹೂಡಿಕೆ ಮಾಡಿದ ಹಣವನ್ನು ಜಮಾವಣೆ ಮಾಡುವಂತೆ ರಿಕ್ವೆಸ್ಟ್‌ ಮಾಡಿದರೂ ಯಾವುದೇ ರಿಪ್ಲೆ ಬಂದಿಲ್ಲ. ಅಲ್ಲದೆ ಆತನಿಗೆ ನೀಡಿದ್ದ ವೆಬ್‌ಸೈಟ್‌ ಲಿಂಕ್‌ ಮತ್ತು ಟೆಲಿಗ್ರಾಮ್‌ ಗ್ರೂಪ್‌ ಡಿಲೀಟ್‌ ಆಗಿರುವುದು ಗೊತ್ತಾಗಿದೆ. ಆಗ ಆತನಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ.

ಠಾಣೆಯಲ್ಲಿ

ವಂಚನೆ ಹೋಗಿರುವುದು ತಿಳಿದ ನಂತರ ಆತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಐಪಿಸಿಯ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66D (ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ವೈಯಕ್ತಿಕವಾಗಿ ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರಿಂದ ಸೊಶೀಯಲ್‌ ಮೀಡಿಯಾದಲ್ಲಿ ಬರುವ ಕಮಿಷನ್‌ ಆಸೆಯ ಲಿಂಕ್‌ಗಳ ಮೇಲೆ ಕ್ಲಿಕ್‌ ಮಾಡುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ.

Best Mobiles in India

English summary
Mumbai man clicked on Telegram link and lost over 37 lakh

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X