ಮೊಬೈಲ್‌ ವರ್ಲ್ಡ ಸಮ್ಮೇಳನಕ್ಕೂ ತಟ್ಟಿದ ಕೊರೊನಾ ವೈರಸ್‌ ಭೀತಿ!

|

ಸ್ಮಾರ್ಟ್‌ಫೋನ್‌ ಕಂಪೆನಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳ ವಿಶೇಷತೆಗಳ ಬಗ್ಗೆ ತಿಳಿಸುವ ಹಾಗೂ ಗ್ರಾಹಕರನ್ನು ಆಕರ್ಷಿಸಲು ಸಿಗುವ ಅತಿದೊಡ್ಡ ವೇದಿಕೆ ಅಂದರೆ ಅದು ಮೊಬೈಲ್‌ ವರ್ಲ್ಡ ಸಮ್ಮೇಳನ. ಈ ಸಮ್ಮೇಳನದಲ್ಲಿ ಈಗಾಗ್ಲೆ ಹಲವಾರು ಪ್ರತಿಷ್ಟಿತ ಸ್ಮಾರ್ಟ್‌ಫೋನ್‌ ಕಂಪೆನಿಗಳು ತಮ್ಮ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಲಿವೆ. ಆದರೆ ಈ ಬಾರಿಯ ಮೊಬೈಲ್‌ ವರ್ಲ್ಡ ಸಮ್ಮೇಳನದ ಮೇಲೆ ಕೊರೊನಾವೈರಸ್ ನ ಆತಂಕ ಕವಿದಿದ್ದು, ಕೆಲ ಕಂಪೆನಿಗಳು ಸಮ್ಮೇಳನದಿಂದ ಹೊರಗುಳಿಯುವ ಸಾಧ್ಯತೆ ಇದೆ.

ಹೌದು

ಹೌದು, ಸ್ಮಾರ್ಟ್‌ಫೋನ್‌ ಜಗತ್ತಿನ ಅತಿದೊಡ್ಡ ಸಮ್ಮೇಳನ MWC 2020 ಫೆಬ್ರವರಿ 24 ರಿಂದ ಫೆಬ್ರವರಿ 27, 2020 ರವರೆಗೆ ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆಯಲಿದೆ. ಈಗಾಗ್ಲೆ ಈ ಸಮ್ಮೇಳನದಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಲಿವೆ ಅನ್ನೊ ಕಾತುರದಲ್ಲಿದ್ದಾರೆ. ಆದರೆ ಈ ಸಮ್ಮೇಳನಕ್ಕೆ ಕೊರೊನಾವೈರಸ್ ನ ಕಾರ್ಮೋಡ ಕವಿದಿದ್ದು, ದೈತ್ಯ ಕಂಪೆನಿಗಳೇ ಸಮ್ಮೇಳನದಿಂದ ದೂರವುಳಿಯಲಿವೆ ಎನ್ನಲಾಗ್ತಿದೆ.

ಮೊಬೈಲ್ ವರ್ಲ್ಡ ಕಾಂಗ್ರೆಸ್

ಮೊಬೈಲ್ ವರ್ಲ್ಡ ಕಾಂಗ್ರೆಸ್

MWC 2020 ಸಮ್ಮೇಳನ, ಅಂದರೆ ಮೊಬೈಲ್‌ ವರ್ಲ್ಡ ಸಮ್ಮೇಳನ ಇದು ಜಾಗತಿಕ ಸ್ಮಾರ್ಟ್‌ಫೋನ್‌ ಉದ್ಯಮಿಗಳು ಒಂದೆಡೆ ಸೇರುವ ಸಮ್ಮೇಳನ. ಸ್ಮಾರ್ಟ್‌ಫೋನ್‌ ಕಂಪೆನಿಗಳು ತಮ್ಮ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಅಲ್ಲದೆ ಇದು ಜಾಗತಿಕ ಮೊಬೈಲ್ ಆಪರೇಟರ್‌ಗಳು, ಸ್ಮಾರ್ಟ್‌ಫೋನ್‌ ತಯಾರಕರು, ತಂತ್ರಜ್ಞಾನ ಪೂರೈಕೆದಾರರು, ಮಾರಾಟಗಾರರು ಮತ್ತು ವಿಷಯ ಮಾಲೀಕರನ್ನು ಪ್ರತಿನಿಧಿಸುವ ಸಮ್ಮೇಳನವಾಗಿದೆ. ಇನ್ನು ಈ ಸಮ್ಮೇಳನ 1987 ರಿಂದ ಶುರುವಾಗಿದ್ದು, ಪ್ರತಿವರ್ಷವೂ ನಡೆಯಲಿದೆ. ಅಲ್ಲದೆ ಕಳೆದ ವರ್ಷ 1,09,500 ಜನರು ಭಾಗವಹಿಸಿದ್ದರು.ಆದರೆ ಈ ಬಾರಿ ಕೊರೊನಾವೈರಸ್ ಭೀತಿ ಎಲ್ಲೆಡೆ ಆವರಿಸಿದ್ದು, ಸಮ್ಮೇಳನ ಯಶಸ್ವಿ ಆಗಲಿದೆಯಾ ಅನ್ನೊ ಪ್ರಶ್ನೆ ಮೂಡಿದೆ.

ಯಾವ ಕಂಪೆನಿಗಳು ಭಾಗವಹಿಸುತ್ತಿಲ್ಲ

ಯಾವ ಕಂಪೆನಿಗಳು ಭಾಗವಹಿಸುತ್ತಿಲ್ಲ

ಕೊರೊನಾವೈರಸ್ ಭೀತಿಯಿಂದ ಸ್ಮಾರ್ಟ್‌ಫೋನ್‌ ವಲಯದ ವಿಶ್ವದ ಅತಿದೊಡ್ಡ ಸಮ್ಮೇಳನಕ್ಕೆ ಕೆಲ ದೈತ್ಯ ಕಂಪೆನಿಗಳು ಹಾಜರಾಗದಿರಲು ನಿರ್ಧರಿಸಿವೆ. ಇವುಗಳಲ್ಲಿ ಪ್ರಮುಖವಾಗಿ
LG ಮತ್ತು ZTE, ಸ್ವೀಡಿಷ್ ಮೂಲದ ನೆಟ್‌ವರ್ಕಿಂಗ್ ಕಂಪನಿ ಎರಿಕ್ಸನ್‌,ಸೋನಿ, ಅಮೆಜಾನ್‌,ಎನ್‌ವಿಡಿಯಾ, ಕಂಪೆನಿಗಳು ಈಗಾಗ್ಲೆ ತನ್ನ ಉದ್ಯೋಗಿಗಳು ಮತ್ತು ಗ್ರಾಹಕರು ಈ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ದೃಡಪಡಿಸಿವೆ. ಆರೋಗ್ಯ ಮತ್ತು ಸುರಕ್ಷತೆಯು ಕಂಪನಿಯ ಮೊದಲ ಆದ್ಯತೆಯಾಗಿದೆ ಎಂದು ಎರಿಕ್ಸನ್ ಕಂಪೆನಿ ಹೇಳಿದ್ದು, MWC ಗಾಗಿ ರಚಿಸಲಾದ ಡೆಮೊಗಳಲ್ಲಿ "ಎರಿಕ್ಸನ್ ಅನ್‌ಭಾಕ್ಸ್ಡ್‌" ಎಂದು ಬದಲಾಯಿಸಿದೆ.

5G ಮಾದರಿ ನೆಟ್‌ವರ್ಕ್‌ ಸ್ಮಾರ್ಟ್‌ಫೋನ್‌ಗಳಿಗೆ ಹಿನ್ನಡೆ

5G ಮಾದರಿ ನೆಟ್‌ವರ್ಕ್‌ ಸ್ಮಾರ್ಟ್‌ಫೋನ್‌ಗಳಿಗೆ ಹಿನ್ನಡೆ

ಈ ಬಾರಿಯ MWC 2020 ಪ್ರಮುಖ ಆಕರ್ಷಣೆಯೆ 5G ಮಾದರಿಯ ಸ್ಮಾರ್ಟ್‌ಫೋನ್‌ಗಳ ಪ್ರದರ್ಶನ. ಅದರಲ್ಲೂ ಪ್ರಮುಖವಾಗಿ 5G ನೆಟ್‌ವರ್ಕ್‌ ಕ್ಷೇತ್ರದಲ್ಲಿ ಎರಿಕ್ಸನ್ ಪ್ರಮುಖ ಕಂಪೆನಿಯಾಗಿ ಗುರ್ತಿಸಿಕೊಂಡಿತ್ತು. ಆದರೆ ಎರಿಕ್ಸನ್ MWC 2020ಯಿಂದ ದೂರವುಳಿಯುತ್ತಿರೊದ್ರಿಂದ ಸಮ್ಮೇಳನದ ಪ್ರಮುಖ ಉದ್ದೇಶಕ್ಕೆ ಪೆಟ್ಟು ಬೀಳಲಿದೆ. ಅಲ್ಲದೆ ಈ ವರ್ಷ, MWC ಯಲ್ಲಿ ಪಾಲ್ಗೊಳ್ಳುವವರು ಪ್ರದರ್ಶನ ಮಳಿಗೆಗಳಲ್ಲಿ ಲಭ್ಯವಿರುವ ಕೆಲವು ತಾಂತ್ರಿಕ ಆವಿಷ್ಕಾರಗಳನ್ನು ನೋಡುವದಕ್ಕೆ ಅವಕಾಶ ಸಿಗುವುದು ಕಷ್ಟ ಎಂದೇ ಹೇಳಲಾಗ್ತಿದೆ.

ಸ್ಯಾಮ್‌ಸಂಗ್‌ ಕೂಡ ದೂರ ಉಳಿಯುತ್ತಾ?

ಸ್ಯಾಮ್‌ಸಂಗ್‌ ಕೂಡ ದೂರ ಉಳಿಯುತ್ತಾ?

ಇನ್ನು ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಈ ಬಾರಿಯ ಮೊಬೈಲ್‌ ವರ್ಲ್ಡ್‌ ಸಮ್ಮೇಳನದಲ್ಲಿ ಸ್ಯಾಮ್‌ಸಂಗ್‌ ತನ್ನ ಹೊಸ ಮಾದರಿಯ ಸ್ಮಾರ್ಟ್‌ಫೊನ್‌ಗಳನ್ನ ಲಾಂಚ್‌ ಮಾಡಲಿದೆ ಎನ್ನಲಾಗಿತ್ತು. ಆದರೆ ಕೊರೊನಾವೈರಸ್ ದಿನೇ ದಿನೇ ಜಗತ್ತನ್ನೇ ಆವರಿಸಿಕೊಳ್ಳುತ್ತಿರೊದ್ರಿಂದ ಸಮ್ಮೇಳನದಿಂದ ದುರ ಉಳಿಯುವ ಸಾಧ್ಯತೆ ಇದೆ. ಈಗಾಗ್ಲೆ ಜಾಗತಿಕವಾಗಿ ಟೆಕ್‌ ದೈತ್ಯ ಎನಿಸಿಕೊಂಡಿರುವ ಸ್ಯಾಮ್‌ಸಂಗ್‌ ಕೆಲವೇ ಕಲ ಸ್ಮಾರ್ಟ್‌ಫೋನ್‌ ಪ್ರದರ್ಶನಕ್ಕೆ ಸೀಮಿತ ಮಾಡಲಿದೆ. ಈಗಾಗಿ ನೋಕಿಯಾ , ರಿಯಲ್‌ಮಿ ಮತ್ತು ಇತರ ಸ್ಮಾರ್ಟ್‌ಫೋನ್‌ ಕಂಪೆನಿಗಳ ಮೇಲೆ ಜವಾಬ್ದಾರಿ ಹೆಚ್ಚಾಗಲಿದೆ.

MWC ಯಲ್ಲಿ ಭಾರಿ ಕಟ್ಟೆಚ್ಚರ

MWC ಯಲ್ಲಿ ಭಾರಿ ಕಟ್ಟೆಚ್ಚರ

ಕೆಲ ಕಂಪೆನಿಗಳು ಸಮ್ಮೇಳನದಿಂದ ದೂರ ಉಳಿಯುವ ಹೇಳಿಕೆಗಳನ್ನ ನೀಡುತ್ತಿದ್ದ ಹಾಗೇ MWC ಸಂಘಟಕರು ಎಚ್ಚರ ವಹಿಸಲು ಮುಂದಾಗಿದ್ದಾರೆ. ಈಗಾಗ್ಲೆ ಚೀನಾದ ಹುಬೈ ಪ್ರಾಂತ್ಯದ ಸಂದರ್ಶಕರನ್ನು MWC ಗೆ ನಿಷೇದ ಮಾಡಲಾಗಿದೆ. ಅಲ್ಲದೆ ಚೀನಾಕ್ಕೆ ತೆರಳಿದವರು ಈವೆಂಟ್‌ನಲ್ಲಿ ಭಾಗವಹಿಸಬೇಕಾದರೆ ಕನಿಷ್ಠ 14 ದಿನಗಳಾದರೂ ತಾವು ದೇಶದ ಹೊರಗೆ ಇದ್ದೇವೆ ಎಂದು ಸಾಬೀತುಪಡಿಸುವ ಅಗತ್ಯವಿದೆ. ಅಲ್ಲದೆ ಯಾರೊಬ್ಬರು ಕೂಡ ಕೈಕುಲುಕದಂತೆ ಹಾಜರಾಗುವಂತೆ ಸೂಚನೆ ನೀಡಿದೆ.

MWC 2020 ಮುಂದೂಡಿಕೆಯಾಗುತ್ತಾ.?

MWC 2020 ಮುಂದೂಡಿಕೆಯಾಗುತ್ತಾ.?

ಸದ್ಯ ಕೊರೊನಾವೈರಸ್ ಭೀತಿ ಆವರಿಸಿರೊದ್ರಿಂದ MWC 2020 ಕೆಲವು ವಾರಗಳ ಕಾಲ ವಿಳಂಬವಾಗಿ ಶುರುವಾಗಲಿ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಆದರೆ ಇದರ ಬಗ್ಗೆ ಇನ್ನು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈವೆಂಟ್‌ ಮುಂದೂಡಿಕೆ ಯಾಗುವ ಬಗ್ಗೆ ಯಾವುದೇ ಅಧಿಕೃತ ಸಂದೇಶಗಳು ಬಂದಿಲ್ಲ ಎಂದೇ ಹೇಳಲಾಗ್ತಿದೆ. ಅಷ್ಟೇ ಅಲ್ಲ ಈಗಲೂ ವೆಬ್‌ಸೈಟ್‌ನಲ್ಲಿ MWC 2020 ಎಂದಿನಂತೆ ನಡೆಯಲಿದೆ ಎಂದೇ ಹೇಳಲಾಗ್ತಿದೆ.

ದೈತ್ಯ ಕಂಪೆನಿಗಳು ಕೈಕೊಟ್ಟರೆ ನಷ್ಟ

ದೈತ್ಯ ಕಂಪೆನಿಗಳು ಕೈಕೊಟ್ಟರೆ ನಷ್ಟ

ಇನ್ನು ಕೊರೊನಾವೈರಸ್ ಪ್ರಭಾವದಿಂದಾಗಿ ಕೆಲ ಕಂಪೆನಿಗಳು ದೂರ ಉಳಿದರೆ MWC 2020 ಸಮ್ಮೇಳನ ಭಾರಿ ನಷ್ಟ ಅನುಭವಿಸಲಿದೆ. ಸಮ್ಮೇಳನಕ್ಕಾಗಿ ಕೆಲವು ತಿಂಗಳುಗಳ ಹಿಂದೆಯೆ ಸಿದ್ತೆ ಆರಂಭಿಸಿದ್ದು,ಎಲ್ಲಾ ರೀತಿಯ ವ್ಯವಸ್ಥೆಗಳನ್ನ ಮಾಡಲಾಗಿದೆ. ಜಾಗತಿಕವಾಗಿ ಎಲ್ಲಾ ಸ್ಮಾರ್ಟ್‌ಫೋನ್‌ ತಯಾರಕರು ಒಂದೆಡೆ ಸೇರುವುದರಿಂದ ಸಮ್ಮೇಳನ ಆಯೋಜಕರಿಗೆ ಲಾಭವಾಗುತ್ತಿತ್ತು. ಆದರೆ ಈ ಭಾರಿ ಲಾಭಕ್ಕಿಂತ ನಷ್ಟದ ಪ್ರಮಾಣವೇ ಹೆಚ್ಚಾಗಲಿದೆ ಎನ್ನಲಾಗ್ತಿದೆ. ನಷ್ಟದ ಪ್ರಮಾಣವನ್ನ ತಪ್ಪಿಸಲು ಸಮ್ಮೇಳನವನ್ನು ಮುಂದೂಡಲಾಗುತ್ತಾ.? ಇಲ್ಲವೇ ನಷ್ಟದಲ್ಲೂ ಸಮ್ಮೇಳನ ನಡೆಯುತ್ತಾ ಅನ್ನೊದನ್ನ ಕಾದು ನೊಡಬೇಕಿದೆ.

Best Mobiles in India

English summary
MWC 2020 is facing the possibility of a collapse due to tech companies deciding to drop out due to Coronavirus outbreak.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X