40 ಲಕ್ಷ ಜನರ ವೈಯಕ್ತಿಕ ಮಾಹಿತಿ ಕದ್ದ ಕಳ್ಳ ಆಪ್..ಫೇಸ್‌ಬುಕ್‌ನಿಂದ ನಿಷೇಧ!!

|

ಕೇಂಬ್ರಿಜ್ಜ್ ಅನಾಲಿಟಿಕಾ ಪ್ರಕರಣದ ನಂತರ ಎಚ್ಚೆತ್ತಿರುವ ಫೇಸ್‌ಬುಕ್ ಇದೀಗ ಫೇಕ್ ಆಪ್‌ಗಳನ್ನು ಹುಡುಕುವ ಯತ್ನದಲ್ಲಿದೆ. ಇದರ ಫಲವಾಗಿ, 'ಮೈಪರ್ಸನಾಲಿಟಿ' ಎಂಬ ಥರ್ಡ್ ಪಾರ್ಟಿ ಆಪ್‌ ಬರೋಬ್ಬರಿ 40 ಲಕ್ಷ ಜನರ ವೈಯಕ್ತಿಕ ಮಾಹಿತಿಯನ್ನು ದುರುಪಯೋಗ ಪಡಿಸಿಕೊಂಡಿದೆ ಎನ್ನುವ ಶಾಕಿಂಗ್ ಮಾಹಿತಿಯನ್ನು ಫೇಸ್‌ಬುಕ್‌ ನಡೆಸಿದ ತನಿಖೆ ಬಹಿರಂಗ ಪಡಿಸಿದೆ.

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?

ಹೌದು, 2012 ರಿಂದ ಸಕ್ರಿಯವಾಗಿದ್ದ 'ಮೈಪರ್ಸನಾಲಿಟಿ' ಆಪ್ ಅನ್ನು ನಿಷೇಧಿಸಿರುವುದಾಗಿ ಫೇಸ್‌ಬುಕ್‌ ಹೇಳಿದ್ದು, ಫೇಸ್‌ಬುಕ್ ಮುಖಾಂತರ ಬಳಕೆದಾರರ ಮಾಹಿತಿಯನ್ನು ಪಡೆದು ಸಂಶೋಧಕರು ಮತ್ತು ಕೆಲವು ಕಂಪನಿಗಳೊಂದಿಗೆ 'ಮೈ ಪರ್ಸನಾಲಿಟಿ' ಆಪ್‌ನ ನಿರ್ಮಾತೃಗಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದೆ.

40 ಲಕ್ಷ ಜನರ ವೈಯಕ್ತಿಕ ಮಾಹಿತಿ ಕದ್ದ ಕಳ್ಳ ಆಪ್..ಫೇಸ್‌ಬುಕ್‌ನಿಂದ ನಿಷೇಧ!!

ತನಿಖೆ ನಡೆಸಿರುವಂತೆ 40 ಲಕ್ಷ ಬಳಕೆದಾರರ ಡೇಟಾವನ್ನು ಮೈಪರ್ಸನಾಲಿಟಿ ಆಪ್ ದುರುಪಯೋಗಪಡಿಸಿಕೊಂಡಿದೆ. ಹಾಗಾಗಿ, 'ನಾವು ಮೈಪರ್ಸನಾಲಿಟಿ ಆಪ್ ಅನ್ನು ನಿಷೇಧಿಸಿದ್ದೇವೆ. ಇಂತಹ ಆಪ್‌ಗಳಿಗೆ ಕಡಿವಾಣ ಹಾಕಲು ನಾವು ಎಲ್ಲಾ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ, ವೈಯಕ್ತಿಕ ಮಾಹಿತಿಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದಾಗಿ ಫೇಸ್‌ಬುಕ್‌ ಹೇಳಿದೆ.

ಕಳೆದ ಮಾರ್ಚ್‌ನಲ್ಲಿ ಕೆಂಬ್ರಿಡ್ಜ್ ಅನಾಲಿಟಿಕಾ ಹಗರಣ ಬಯಲಾದ ಬಳಿಕ ಥರ್ಡ್‌ ಪಾರ್ಟಿ ಆಪ್‌ಗಳ ಪತ್ತೆಗೆ ಫೇಸ್‌ಬುಕ್‌ ತನಿಖೆಯನ್ನು ಕೈಗೊಂಡಿದೆ. ಅದರ ಫಲವಾಗಿ ಹೆಚ್ಚು ಬಳಕೆಯಲ್ಲಿರುವ ಮೈ ಪರ್ಸನಾಲಿಟಿ ಆಪ್ ಸುಮಾರು 40 ಲಕ್ಷ ಫೇಸ್‌ಬುಕ್ ಬಳಕೆದಾರರ ವಯಕ್ತಿಕ ಮಾಹಿತಿಯನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಮೊದಲ ಬಾರಿಗೆ ತನಿಖೆಯಲ್ಲಿ ತಿಳಿದುಬಂದಿದೆ.

40 ಲಕ್ಷ ಜನರ ವೈಯಕ್ತಿಕ ಮಾಹಿತಿ ಕದ್ದ ಕಳ್ಳ ಆಪ್..ಫೇಸ್‌ಬುಕ್‌ನಿಂದ ನಿಷೇಧ!!

ಇನ್ನು ಮೈಪರ್ಸನಾಲಿಟಿ ಆಪ್ ಅನ್ನು ಕೇಂಬ್ರಿಡ್ಜ್ ಸೈಕೋಮೆಟ್ರಿಕ್ಸ್ ಸೆಂಟರ್ ಅಭಿವೃದ್ದಿಪಡಿಸಿದೆ. ಇದು ಕೇಂಬ್ರಿಡ್ಜ್ ಅನಾಲಿಟಿಕಾಗೆ ಸಂಬಂಧಿಸಿಲ್ಲ, ಫೇಸ್‌ಬುಕ್ ಬಳಕೆದಾರರಿಂದ ವ್ಯಕ್ತಿತ್ವದ ರಸಪ್ರಶ್ನೆಗಳು ಮೂಲಕ ಮೂಲ ಡೇಟಾವನ್ನು ಸಂಶೋಧಕರು ರಚಿಸಿದ್ದಾರೆ ಎಂದು ತಿಳಿಸಿದೆ. ಇಂತಹ ಹಲವು ಆಪ್‌ಗಳು ಇನ್ನು ಇರಬಹುದು ಎಂದು ಅಂದಾಜು ಮಾಡಲಾಗಿದೆ.

Best Mobiles in India

English summary
myPersonality app misused 4 million users' personal data, removed from Facebook. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X