Subscribe to Gizbot

ಜಿಯೋ ಕಥೆ ಬಿಡಿ!..ವಿಶ್ವಕ್ಕೆ ಉಚಿತವಾಗಿ ಇಂಟರ್‌ನೆಟ್ ನೀಡಲು ಆನ್‌ಲೈನ್‌ ದಿಗ್ಗಜರು ರೆಡಿ!!

Written By:

ಗ್ರಾಹಕರನ್ನು ಅಂತರ್ಜಾಲಕ್ಕೆ ಸಂಪರ್ಕಿಸುವ ವ್ಯವಹಾರಗಳನ್ನು ನಿಯಂತ್ರಿಸುವ ನಿಯಮಗಳನ್ನು ಕೊನೆಗಾಣಿಸಲು ಅಮೆರಿಕಾದ ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ ಮತ ಚಲಾಯಿಸಿದೆ. ಹಾಗಾಗಿ, ಅಂತರ್ಜಾಲ ಆಧಾರಿತ ಸೇವೆಗಳು ಯಾವುದೇ ತೊಡಕು ಅಥವಾ ತಾರತಮ್ಯ ಇಲ್ಲದೆ ಎಲ್ಲರಿಗೂ ಲಭ್ಯವಾಗಬೇಕು ಎನ್ನುವ ಕಲ್ಪನೆ ನೆಟ್‌ ನ್ಯೂಟ್ರಾಲಿಟಿಗೆ ಮತ್ತೆ ಜೀವ ಬಂದಿದೆ.! ಆದರೆ, ಈ ನೆಟ್‌ ನ್ಯೂಟ್ರಾಲಿಟಿ ಇಂದು ಪರ ವಿರೋಧಗಳಿಗಳ ಜಂಜಾಟಕ್ಕೆ ಸಿಲುಕಿದ್ದು, ಭವಿಷ್ಯದ ಪ್ರಪಂಚದ ಬದಲಾವಣೆಗಾಗಿ ಸನ್ನದ್ದವಾಗಿ ನಿಂತಿದೆ.!!

ಹೌದು, ಉಚಿತ ಇಂಟರ್‌ನೆಟ್ ಮೂಲಕ ಜನರನ್ನು ತಲುಪಲು ಕಾರ್ಪೋರೇಟ್ ಕಂಪೆನಿಗಳ ಹೋರಾಟವಾದರೆ, ನೆಟ್‌ನ್ಯೂಟ್ರಾಲಿಟಿ ಕಲ್ಪನೆ ಜಾರಿಗೆ ಬಂದರೆ ಕೆಲವೇ ಕೆಲವು ಇಂಟರ್ ಸೇವಾಪೂರೈಕೆ ಕಂಪೆನಿಗಳು ಮತ್ತು ಐಟಿ ಕಂಪೆನಿಗಳು ಸೇರಿಕೊಂಡು ಇಡೀ ಇಂಟರ್‌ನೆಟ್‌ ಜಗತ್ತನ್ನು ನಿಯಂತ್ರಿಸುವ ವ್ಯವಸ್ಥೆ ನಿರ್ಮಾಣವಾಗುತ್ತದೆ ಎನ್ನುತ್ತಿವೆ ವರದಿಗಳು.!!

ಜಿಯೋ ಕಥೆ ಬಿಡಿ!..ವಿಶ್ವಕ್ಕೆ ಉಚಿತವಾಗಿ ಇಂಟರ್‌ನೆಟ್ ನೀಡಲು ಆನ್‌ಲೈನ್‌ ದಿಗ್ಗಜರು

ನೆಟ್‌ ನ್ಯೂಟ್ರಾಲಿಟಿಯಿಂದ ಗ್ರಾಹಕನಿಗೆ ಯಾವುದೇ ಆಯ್ಕೆ ಸ್ವಾತಂತ್ರ್ಯ ಇರುವುದಿಲ್ಲ ಎಂದು 2003ರಲ್ಲೇ ಕೊಲಂಬಿಯಾ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ಟಿಮ್‌ ವೂ ನೀಡಿದ್ದ ಇಂತಹದೊಂದು ಎಚ್ಚರಿಕೆ ಇಂದು ಕೂಡ ಗುನುಗುತ್ತಿದೆ.!! ಹಾಗಾದರೆ, ಏನಿದು ನೆಟ್‌ನ್ಯೂಟ್ರಾಲಿಟಿ? ನೆಟ್‌ನ್ಯೂಟ್ರಾಲಿಟಿಗೆ ವಿರೋಧ ಏಕೆ? ತಜ್ಞರ ಅಭಿಪ್ರಾಯ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇಂಟರ್ನೆಟ್ ಶುಲ್ಕವಿಲ್ಲದೆ ಸೇವೆ!!

ಇಂಟರ್ನೆಟ್ ಶುಲ್ಕವಿಲ್ಲದೆ ಸೇವೆ!!

ಮೊಬೈಲ್‌ನಲ್ಲಿ ಇಂಟರ್‌ನೆಟ್ ಬಳಕೆಯ ಸೇವೆಗಳಿಂದ ಬರುವ ವರಮಾನ ಆನ್‌ಲೈನ್ ಮತ್ತು ಟೆಲಿಕಾಂ ಕಂಪೆನಿಗಳಿಗೆ ಗಣನೀಯವಾಗಿ ಹೆಚ್ಚಿದೆ. ಹಾಗಾಗಿ, ಎರಡನೆಯ ಹಂತದಲ್ಲಿ ಇದನ್ನು ಇನ್ನಷ್ಟು ವ್ಯಾವಹಾರಿಕವಾಗಿ ವಿಸ್ತರಿಸಲು ಈ ಕಂಪನಿಗಳು ಯೋಜನೆ ರೂಪಿಸಿವೆ. ಆಯ್ದ ಜಾಲತಾಣಗಳನ್ನು ಅಥವಾ ತನ್ನದೇ ಜಾಲತಾಣಗಳನ್ನು ಇಂಟರ್ನೆಟ್ ಶುಲ್ಕವಿಲ್ಲದೆ ನೀಡಲು ಮುಂದಾಗಿವೆ.!!

ಫೇಸ್‌ಬುಕ್ ಮತ್ತು ಫ್ಲಿಪ್‌ಕಾರ್ಟ್ ಉದಾಹರಣೆ!!

ಫೇಸ್‌ಬುಕ್ ಮತ್ತು ಫ್ಲಿಪ್‌ಕಾರ್ಟ್ ಉದಾಹರಣೆ!!

ನಿಮಗೆ ಗೊತ್ತಿರಬಹುದು ವಿಶ್ವದ ಅತ್ಯಂತ ದೊಡ್ಡ ಜಾಲತಾಣ ಫೇಸ್‌ಬುಕ್ ಇಂದು ಯಶಸ್ಸಿನ ಉತ್ತುಂಗದಲ್ಲಿದೆ. ಆದರೆ, ಅದಕ್ಕೆ ತೊಡಕಾಗಿರುವುದು ಜನರಿಗೆ ಇಂಟರ್‌ನೆಟ್ ಲಭ್ಯವಾಗದಿರುವುದು.!! ಹಾಗಾಗಿ, ತಾನೇ ಇಂಟರ್‌ನೆಟ್‌ ಅನ್ನು ಜನರಿಗೆ ಉಚಿತವಾಗಿ ನೀಡಿದರೆ ಎನ್ನುವ ಕಲ್ಪನೆ ಫೇಸ್‌ಬುಕ್‌ನದ್ದು.!! ಇನ್ನು ಫ್ಲಿಪ್‌ಕಾರ್ಟ್ ಕಂಪನಿ ಸಹ ಏರ್‌ಟೆಲ್‌ನ ‘ಝೀರೊ' ಸೇವೆಯಡಿ ಮಾರುಕಟ್ಟೆ ಪ್ರಯೋಗಕ್ಕೆ ಮುಂದಾಗಿದ್ದು, ಇವುಗಳ ಭಾಗಗಳು.!!

ಮಾರುಕಟ್ಟೆ ತಂತ್ರ ಮಾತ್ರ!!

ಮಾರುಕಟ್ಟೆ ತಂತ್ರ ಮಾತ್ರ!!

ಮುಕ್ತ ಅಂತರ್ಜಾಲ ಪರಿಕಲ್ಪನೆಯನ್ನು ವೇದಿಕೆಯಾಗಿ ಬಳಸಿಕೊಂಡು ಮಧ್ಯಮ ಗಾತ್ರದ ಕಂಪನಿಗಳಿಗೆ ಮಾರುಕಟ್ಟೆ ವಿಸ್ತರಿಸಲು ನೆರವಾಗುವ ಪ್ರಯತ್ನ. ಅಂದರೆ, ಇಂಟರ್‌ನೆಟ್‌ ಸೇವಾ ಪೂರೈಕೆ ಕಂಪೆನಿಯು ಈ ಸಂಸ್ಥೆಗಳ ವೆಬ್‌ಸೈಟ್ ಹಾಗೂ ಇತರ ಇಂಟರ್ನೆಟ್‌ ಸೇವೆಗಳನ್ನು ಉಚಿತವಾಗಿ ಬಳಕೆದಾರರಿಗೆ ನೀಡುವುದರಿಂದ ಗ್ರಾಹಕರನ್ನು ಸೆಳೆಯುವ ಪ್ರಯತ್ನ!!

5 ಕಂಪನಿಗಳು ಆನ್‌ಲೈನ್‌ ಜಗತ್ತನ್ನು ಆಳುತ್ತಿವೆ!!

5 ಕಂಪನಿಗಳು ಆನ್‌ಲೈನ್‌ ಜಗತ್ತನ್ನು ಆಳುತ್ತಿವೆ!!

ಗೂಗಲ್, ಮೈಕ್ರೊಸಾಫ್ಟ್‌, ಅಮೆಜಾನ್‌, ಆಪಲ್‌ ಮತ್ತು ಫೇಸ್‌ಬುಕ್‌ ಈ ಐದು ಅಮೆರಿಕದ ಕಂಪನಿಗಳು ಸದ್ಯ ಆನ್‌ಲೈನ್‌ ಜಗತ್ತನ್ನು ಆಳುತ್ತಿವೆ. ಇಡೀ ಅಂತರ್ಜಾಲ ಮೂಲಸೌಕರ್ಯ ವ್ಯವಸ್ಥೆ ಈ ಕಂಪೆನಿಗಳ ಕೈಗಳಲ್ಲಿದೆ. ಇಂಟರ್‌ನೆಟ್‌ನ ಬಹುತೇಕ ಜಾಹೀರಾತು ವ್ಯವಹಾರವನ್ನು ಈ ಕಂಪನಿಗಳೇ ನಿಭಾಯಿಸುತ್ತವೆ.!! ಇವವೆಲ್ಲವೂ ಜತೆಯಾದರೆ ಮುಕ್ತ ಅಂತರ್ಜಾಲ ಎನ್ನುವ ಪರಿಕಲ್ಪನೆ ಕಾರ್ಪೊರೇಟ್‌ ನಿಯಂತ್ರಣವಾಗುತ್ತದೆ ಎಂದು ಟಿಮ್‌ ವೂ ಹೇಳಿದ್ದಾರೆ.!!

ನೆಟ್‌ ನ್ಯೂಟ್ರಾಲಿಟಿ ಪರಿಣಾಮ ಹೇಗಿರಲಿದೆ?

ನೆಟ್‌ ನ್ಯೂಟ್ರಾಲಿಟಿ ಪರಿಣಾಮ ಹೇಗಿರಲಿದೆ?

ನೆಟ್‌ ನ್ಯೂಟ್ರಾಲಿಟಿ ಭವಿಷ್ಯದಲ್ಲಿ ಮುಕ್ತ ಅಂತರ್ಜಾಲ ಪರಿಕಲ್ಪನೆ ಮುಕ್ತ ಮಾರುಕಟ್ಟೆ ಸ್ಪರ್ಧೆಗೆ ವಿರುದ್ಧವಾಗಲಿದೆ. ದಿಗ್ಗಜ ಕಂಪೆನಿಗಳು ಸಣ್ಣ ಕಂಪೆನಿಗಳನ್ನು ಮುಳುಗಿಸುತ್ತವೆ.! ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಪ್ರಪಂಚದ ಹಣವೆಲ್ಲಾ ಅಮೆರಿಕಾ ಪಾಲಾಗಿ ಇಂಟರ್‌ನೆಟ್ ಎಂಬ ಅಸ್ತ್ರದಿಂದ ಅಮೆರಿಕಾ ಇಡೀ ಪ್ರಪಂಚವನ್ನೇ ತನ್ನ ವಸವಹಾತನ್ನಾಗಿ ಮಾಡಿಕೊಂಡತಾಗುತ್ತದೆ ಎಂಬುದು ಸತ್ಯ ಸಂಗತಿ!!

ಓದಿರಿ:ಎಲಾನ್ ಮಸ್ಕ್ ಭವಿಷ್ಯ!..ಕೃತಕ ಬುದ್ಧಿಮತ್ತೆ ಮನುಷ್ಯರನ್ನು ನಾಶಮಾಡಲಿದೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
F.C.C. Repeals Net Neutrality Rules.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot