ಪ್ರೊಫೈಲ್ ಟ್ರಾನ್ಸ್‌ಫರ್ ಫೀಚರ್ಸ್ ಪರಿಚಯಿಸಿದ ನೆಟ್‌ಫ್ಲಿಕ್ಸ್‌; ಬಳಕೆ ಹೇಗೆ?

|

ನೆಟ್‌ಫ್ಲಿಕ್ಸ್ ಎನ್ನುವುದು ಚಂದಾದಾರಿಕೆ ಆಧಾರಿತ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌‌ ಸೇವೆಯಾಗಿದ್ದು, ಜಾಹಿರಾತು ಮುಕ್ತ ವಿಡಿಯೋಗಳ ವೀಕ್ಷಣೆಗೆ ಅನುಮತಿಸುತ್ತದೆ. ಈಗಂತೂ ಹಲವಾರು ರೀತಿಯ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಲಭ್ಯವಿದ್ದು, ಒಂದಕ್ಕೊಂದು ಪೈಪೋಟಿಯಲ್ಲಿ ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನು ನೀಡುತ್ತಾ ಬರುತ್ತಿದೆ. ಅದರಂತೆ ಓಟಿಟಿ ಪ್ಲಾಟ್‌ಫಾರ್ಟ್‌ನಲ್ಲಿ ಪ್ರಮುಖ ಸ್ಥಾನ ಪಡೆದಿರುವ ನೆಟ್‌ಫ್ಲಿಕ್ಸ್‌ ಹೊಸ ಫೀಚರ್ಸ್‌ ಪರಿಚಯಿಸಿದೆ.

ಇಂಟರ್ನೆಟ್‌

ಹೌದು, ಇಂಟರ್ನೆಟ್‌ ಸಂಪರ್ಕದ ಮೂಲಕ ಬಳಕೆದಾರರಿಗೆ ಸಿನಿಮಾ ಹಾಗೂ ಇನ್ನಿತರೆ ಶೋಗಳ ಮೂಲಕ ಮನರಂಜನೆ ನೀಡುತ್ತಿರುವ ನೆಟ್‌ಫ್ಲಿಕ್ಸ್ ನಲ್ಲಿ ಹೊಸ ಫೀಚರ್ಸ್‌ ಲಭ್ಯ ಇದೆ. ಅದುವೇ ಪ್ರೊಫೈಲ್ ಟ್ರಾನ್ಸ್‌ಫರ್‌ ಆಯ್ಕೆ. ಈ ಫೀಚರ್ಸ್‌ ಮೂಲಕ ಇನ್ನು ಮುಂದೆ ಬಳಕೆದಾರರು ಪ್ರೊಫೈಲ್ ಅನ್ನು ನಿಯಂತ್ರಣ ಮಾಡಿಕೊಳ್ಳಬಹುದಾಗಿದೆ. ಹಾಗಿದ್ರೆ ಅದನ್ನು ಹೇಗೆ ಬಳಕೆ ಮಾಡುವುದು, ಕಂಪೆನಿ ಈ ಬಗ್ಗೆ ಏನು ಹೇಳಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಪಾಸ್‌ವರ್ಡ್

ಪಾಸ್‌ವರ್ಡ್ ಹಂಚಿಕೆಯನ್ನು ತಡೆಯಲು 'ಪ್ರೊಫೈಲ್ ಟ್ರಾನ್ಸ್‌ಫರ್' ಫೀಚರ್ಸ್‌ ಬಗ್ಗೆ ನೆಟ್‌ಫ್ಲಿಕ್ಸ್‌ ಇತ್ತೀಚೆಗೆ ಘೋಷಣೆ ಮಾಡಿತ್ತು. ಪ್ರೊಫೈಲ್ ಟ್ರಾನ್ಸ್‌ಫರ್‌ ಫೀಚರ್ಸ್‌ನಲ್ಲಿ ಬಳಕೆದಾರರು ತಮ್ಮ ಖಾತೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದರ ಜೊತೆಗೆ ಅಪ್ಲಿಕೇಶನ್ ಮತ್ತು ವೆಬ್‌ನಲ್ಲಿ ಪ್ರೊಫೈಲ್ ಟ್ರಾನ್ಸ್‌ಫರ್‌ ಅನ್ನು ಆಫ್ ಮಾಡಿಕೊಳ್ಳಬಹುದು ಎಂದು ನೆಟ್‌ಫ್ಲಿಕ್ಸ್‌ ಹೇಳಿದೆ. ಹಾಗೆಯೇ ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ನ ಈ ಸೇವೆ ಭಾರತದಲ್ಲಿ ಲಭ್ಯವಿದ್ದು, ಇದನ್ನು ಸಂಪೂರ್ಣವಾಗಿ ಸಕ್ರಿಯಗೊಳಿಸಲಾಗಿದೆ ಎಂದು ಉಲ್ಲೇಖಿಸಿದೆ.

ನೆಟ್‌ಫ್ಲಿಕ್ಸ್‌

ಇನ್ನು ಬಳಕೆದಾರರು ತಮ್ಮದೇ ನೆಟ್‌ಫ್ಲಿಕ್ಸ್‌ನಲ್ಲಿ ಸದಸ್ಯತ್ವವನ್ನು ಆರಂಭಿಸಿದಾಗ, ವೀಕ್ಷಣೆ ಇತಿಹಾಸ, ಮೈ ಲಿಸ್ಟ್‌, ಗೇಮ್‌ಗಳು ಸೇರಿದಂತೆ ಇತರೆ ಚಟುವಟಿಕೆಯನ್ನು ಹೊಸ ಖಾತೆಗೆ ಈ ಫೀಚರ್ಸ್‌ ಮೂಲಕ ವರ್ಗಾಯಿಸಬಹುದಾಗಿದೆ. ಇದಿಷ್ಟೇ ಅಲ್ಲದೆ, ಖಾತೆ ಹೊಂದಿರುವ ಗ್ರಾಹಕರು ಹೊಸ ಫೀಚರ್ಸ್‌ ಅಪ್‌ಗ್ರೇಡ್ ಮಾಡಲು ಇಮೇಲ್‌ಗಳನ್ನು ಈಗಾಗಲೇ ಸ್ವೀಕರಿಸುತ್ತಿದ್ದಾರೆ ಎಂದು ಹೇಳಿದೆ.

ಹಣ

'ನಾವು ನಿಮ್ಮ ಯಾವುದೇ ಹಣದ ಮಾಹಿತಿಯನ್ನು ಎಂದಿಗೂ ವರ್ಗಾಯಿಸುವುದಿಲ್ಲ. ಹಾಗೆಯೇ ಮಕ್ಕಳ ಪ್ರೊಫೈಲ್‌ಗಳನ್ನೂ ಸಹ ವರ್ಗಾಯಿಸಲಾಗುವುದಿಲ್ಲ. ಆದರೆ ಎಲ್ಲಾ ಗೇಮ್‌ಗಳನ್ನು ಹಾಗೂ ಇತರೆ ಚಟುವಟಿಕೆಯನ್ನು ಹೊಸ ಖಾತೆಗೆ ವರ್ಗಾಹಿಸುತ್ತೇವೆ' ಎಂದು ನೆಟ್‌ಫ್ಲಿಕ್ಸ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಜೊತೆಗೆ ಬಳಕೆದಾರರು ಯಾವಾಗಲೂ ತಮ್ಮ ಖಾತೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು. ಅವರು ತಮ್ಮ ಖಾತೆಗೆ ಸೈನ್ ಇನ್ ಮಾಡುವ ಮೂಲಕ ಅಪ್ಲಿಕೇಶನ್ ಮತ್ತು ವೆಬ್‌ನಲ್ಲಿ ಪ್ರೊಫೈಲ್ ವರ್ಗಾವಣೆಯನ್ನು ಆಫ್ ಮಾಡಬಹುದು ಎಂದು ಇದೇ ವೇಳೆ ಮಾಹಿತಿ ನೀಡಿದೆ.

ಬಳಕೆದಾರ

ಇದರ ನಡುವೆ ತನ್ನ ಬಳಕೆದಾರರಿಗೆ ಜಾಹೀರಾತು ಬೆಂಬಲಿತ ಪ್ಯಾಕೇಜ್‌ ಅನ್ನು ನೀಡುವ ಪ್ರಯತ್ನದಲ್ಲಿ ಕಂಪೆನಿಯು ನವೆಂಬರ್ 3 ರಂದು ಹಲವಾರು ದೇಶಗಳಲ್ಲಿ 'ಬೇಸಿಕ್ ವಿತ್ ಆಡ್ಸ್ ' ಎಂಬ ಹೆಸರಿನ ಸ್ಟ್ರೀಮಿಂಗ್ ಪ್ಲ್ಯಾನ್‌ ಅನ್ನು ಪರಿಚಯಿಸುವುದಾಗಿ ಘೋಷಿಸಿದೆ. ಇದರೊಂದಿಗೆ ನೆಟ್‌ಫ್ಲಿಕ್ಸ್ 2023 ರಿಂದ ಪಾಸ್‌ವರ್ಡ್ ಹಂಚಿಕೆಯನ್ನು ಭೇದಿಸಲು ಮುಂದಾಗಿದೆ.

ಟ್ರಾನ್ಸ್‌ಫರ್ ಪ್ರಕಿಯೆ ಹೇಗೆ?

ಟ್ರಾನ್ಸ್‌ಫರ್ ಪ್ರಕಿಯೆ ಹೇಗೆ?

ನೀವು ಪ್ರೊಫೈಲ್ ಟ್ರಾನ್ಸ್‌ಫರ್ ಫೀಚರ್ಸ್‌ ಬಳಕೆ ಮಾಡಲು ಬಯಸಿದರೆ ವೆಬ್ ಬ್ರೌಸರ್‌ನಲ್ಲಿ ಸೈನ್ ಇನ್ ಮಾಡಿ. ನಂತರ ನಿಮ್ಮ ನೆಟ್‌ಫ್ಲಿಕ್ಸ್ ಖಾತೆ ಪುಟಕ್ಕೆ ತೆರಳಿ ಅಲ್ಲಿ 'ಪ್ರೊಫೈಲ್ ಅಂಡ್ ಪೇರೆಂಟಲ್ ಕಂಟ್ರೊಲ್ಸ್ ಸೆಕ್ಷನ್' ಮೇಲೆ ಕ್ಲಿಕ್‌ ಮಾಡಿ ಬಳಿಕ ಆ ವಿಭಾಗದಲ್ಲಿ ನೀವು ಹೊಸ ಖಾತೆಯನ್ನು ಪ್ರಾರಂಭಿಸಲು ಬಯಸುವ ಪ್ರೊಫೈಲ್ ಅನ್ನು ಆಯ್ಕೆಮಾಡಿ. ಉದಾಹರಣೆಗೆ, ನೀವು ಒಂದು ಪ್ರೊಫೈಲ್ ಅನ್ನು ಇತರ ಮೂರು ಬಳಕೆದಾರರೊಂದಿಗೆ ಹಂಚಿಕೊಳ್ಳಲು ಮುಂದಾದರೆ ಅವರ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ ಆಯ್ಕೆ ಮಾಡಬೇಕು.

ಪ್ರೊಫೈಲ್

ಇದಾದ ಬಳಿಕ 'ಪ್ರೊಫೈಲ್ ಟ್ರಾನ್ಸ್‌ಫರ್' ಆಯ್ಕೆಯನ್ನು ಗುರುತಿಸಿ ಮತ್ತು 'ಟ್ರಾನ್ಸ್‌ಫರ್' ಆಯ್ಕೆ ಮೇಲೆ ಕ್ಲಿಕ್ ಮಾಡಿ. ಜೊತೆಗೆ ಇಲ್ಲೊಂದು ಪ್ರಮುಖ ವಿಷಯದ ಬಗ್ಗೆ ತಿಳಿದುಕೊಳ್ಳಬೆಕು ಅದೇನೆಂದರೆ, ನಿಮ್ಮ ಪ್ರೊಫೈಲ್‌ನಲ್ಲಿ ಈ ಫೀಚರ್ಸ್‌ ಆನ್ ಅದರೂ, ನೋಟಿಫಿಕೇಶನ್‌ ಸ್ವೀಕರಿಸಿದ ದಿನಾಂಕದಿಂದ 10 ದಿನಗಳವರೆಗೆ ವರ್ಗಾವಣೆ ಪ್ರಕ್ರಿಯೆ ನಡೆಯುವುದಿಲ್ಲ.

Best Mobiles in India

English summary
Netflix is a subscription-based video streaming platform service. It has meanwhile introduced a feature called 'Profile Transfer'!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X