ಅನಗತ್ಯ ಡಿವೈಸ್‌ಗಳಲ್ಲಿ ನಿಮ್ಮ ನೆಟ್‌ಫ್ಲಿಕ್ಸ್ ಅಕೌಂಟ್‌ ಇದ್ರೆ ಚಿಂತೆ ಬೇಡ; ಯಾಕೆ ಗೊತ್ತಾ?

|

ಹೇ...ಮಗಾ ನಿನ್ನ ನೆಟ್‌ಫ್ಲಿಕ್ಸ್ ಅಕೌಂಟ್‌ ಕೊಡೋ ನಾನು ಸಿನಿಮಾ ನೋಡಬೇಕು ಎಂದು ನಿಮ್ಮ ಬಳಿ ಯಾರಾದರೂ ಕೇಳೇ ಇರ್ತಾರೆ. ನೀವೇನೋ ಸ್ನೇಹಿತ ಅಂತಾ ಕೊಟ್ಟಿರುತ್ತೀರಾ. ಅದರೆ, ಆ ಸ್ನೇಹಿತ ಒಂದು ಸಿನಿಮಾ ನೋಡಲು ಪಡೆದ ಅಕೌಂಟ್‌ ಮಾಹಿತಿಯನ್ನು ತಾನೇ ಸೇವ್‌ ಮಾಡಿಕೊಂಡು ಯಾವಾಗಲೂ ಬಳಕೆ ಮಾಡುತ್ತಿದ್ದರೆ ನಿಮಗೆ ಬೇಸರ ಆಗಬಹುದಲ್ಲದೇ, ಜೊತೆಗೆ ನಿಮ್ಮ ಸ್ನೇಹಿತನ ಬಳಿ ಅಕೌಂಟ್‌ ಡಿಲಿಟ್‌ ಮಾಡು ಎಂದು ಹೇಳಲು ಕೂಡ ಕಷ್ಟ. ಈ ಕಾರಣಕ್ಕೆ ನೆಟ್‌ಫ್ಲಿಕ್ಸ್ ಒಂದು ಆಕರ್ಷಕ ಫೀಚರ್ಸ್‌ ಪರಿಚಯಿಸಿದೆ.

ಓಟಿಟಿ

ಹೌದು, ಜನಪ್ರಿಯ ಓಟಿಟಿ ಆಪ್‌ಗಳಲ್ಲಿ ನೆಟ್‌ಫ್ಲಿಕ್ಸ್ ಪ್ರಮುಖ ಸ್ಥಾನ ಪಡೆದುಕೊಂಡಿದ್ದು, ಈ ಪ್ಲಾಟ್‌ಫಾರ್ಮ್‌ನಲ್ಲಿ ಆಕರ್ಷಕ ಫೀಚರ್ಸ್‌ ಪರಿಚಯಿಸಲಾಗಿದೆ. ಈ ಮೂಲಕ ನಿಮ್ಮ ಅಕೌಂಟ್‌ ಮಾಹಿತಿಯನ್ನು ಭದ್ರಪಡಿಸಿಕೊಳ್ಳಬಹುದು, ಜೊತೆಗೆ ನಿಮ್ಮ ಸ್ನೇಹಿತನಿಗೆ ಅರಿವಾಗದಂತೆ ಅಕೌಂಟ್‌ ಅನ್ನು ಆತನ ಫೋನ್‌ನಿಂದ ತೆಗೆಯಬಹುದು. ಇದು ಸ್ನೇಹಿತರ ಡಿವೈಸ್‌ನಲ್ಲಷ್ಟೇ ಅಲ್ಲದೆ ಯಾವುದೇ ಡಿವೈಸ್‌ನಿಂದಲೂ ಕೇವಲ ಒಂದು ಕ್ಲಿಕ್‌ನಿಂದ ಡಿಲಿಟ್‌ ಮಾಡಬಹುದು.

ನೆಟ್‌ಫ್ಲಿಕ್ಸ್

ನೆಟ್‌ಫ್ಲಿಕ್ಸ್ ತನ್ನ ಸೈಟ್‌ಗೆ ಹೊಸ ಆಡಳಿತಾತ್ಮಕ ಪ್ರವೇಶದ ಆಯ್ಕೆಯನ್ನು ಸೇರಿಸಿದೆ. ಇನ್ನು ಬೇರೊಬ್ಬರ ಡಿವೈಸ್‌ನಲ್ಲಿ ನಿಮ್ಮ ಖಾತೆ ಲಾಗ್ ಇನ್ ಆಗಿದ್ದಾಗ ನಂತರ ಅಲ್ಲದೆ ಲಾಗ್‌ಔಟ್‌ ಮಾಡಲು ಮರೆತಾಗ ಅಥವಾ ನಿಮ್ಮ ಸ್ನೇಹಿತ ಲಾಗ್‌ಔಟ್‌ ಆಗಲು ಮುಂದಾಗದೆ ಇದ್ದಾಗ ಈ ಫೀಚರ್ಸ್‌ ಕೆಲಸಕ್ಕೆ ಬರಲಿದೆ. ಈ ಫೀಚರ್ಸ್‌ ಮೂಲಕ ಬಳಕೆದಾರರು ತಮ್ಮ ಲಾಗ್ ಇನ್ ಸ್ಥಿತಿಯನ್ನು ಪರಿಶೀಲಿಸಬಹುದು. ಹಾಗೆಯೇ ಅನಗತ್ಯ ಗೆಸ್ಟ್‌ಗಳನ್ನು ಅದರಿಂದ ನೀವು ರಿಮೂವ್‌ ಮಾಡಬಹುದು.

ಹೋಟೆಲ್‌

ಬಹುಪಾಲು ಮಂದಿ ಕೆಲ ಸಮಯಕ್ಕೆ ಹೋಟೆಲ್‌ನಲ್ಲಿ ಉಳಿದಿರುತ್ತಾರೆ. ಆ ವೇಳೆ ನೀವು ಅಲ್ಲಿನ ಸ್ಮಾರ್ಟ್‌ಟಿವಿಗೆ ನೆಟ್‌ಪ್ಲಿಕ್ಸ್‌ ಖಾತೆ ಮೂಲಕ ಲಾಗ್‌ಇನ್‌ ಆಗಿದ್ದೀರಿ ಎಂದುಕೊಳ್ಳಿ. ಇದಾದ ಬಳಿಕ ಲಾಗ್‌ ಔಟ್‌ ಆಗದೆ ಹೋಟೆಲ್‌ ಬಿಟ್ಟು ನಿಮ್ಮ ಊರಿಗೆ ಮರಳಿದಾಗ ಸಮಸ್ಯೆ ಎದುರಾಗುತ್ತಿತ್ತು. ಆದರೆ, ಇನ್ಮುಂದೆ ಈ ಸಮಸ್ಯೆಯನ್ನು ನಿಮ್ಮ ಬೆರಳ ತುದಿಯಿಂದಲೇ ನಿವಾರಿಸಿಕೊಳ್ಳಬಹುದು.

ಈ ಫೀಚರ್ಸ್‌ ಬಳಕೆ ಹೇಗೆ?

ಈ ಫೀಚರ್ಸ್‌ ಬಳಕೆ ಹೇಗೆ?

ಪ್ರಸ್ತುತ ಈ ವಿಶೇಷ ಫೀಚರ್ಸ್ ಭಾರತದಲ್ಲಿ ಲಭ್ಯವಿದ್ದು, ಇದನ್ನು ನೀವು ಈ ರೀತಿಯಾಗಿ ಪರಿಶೀಲಿಸಬಹುದಾಗಿದೆ. ಮೊದಲು ಖಾತೆಗೆ ಲಾಗ್‌ ಇನ್‌ ಆದ ನಂತರ ಪ್ರೊಫೈಲ್ ಐಕಾನ್ ಕ್ಲಿಕ್ ಮಾಡಿ. ಬಳಿಕ ಅಕೌಂಟ್‌ ವಿಭಾಗಕ್ಕೆ ಹೋಗಿ ಮ್ಯಾನೇಜಿಂಗ್‌ ಆಕ್ಸೆಸ್‌ಆಂಡ್ ಡಿವೈಸ್‌ ಆಯ್ಕೆಯ ಮೇಲೆ ಟ್ಯಾಪ್‌ ಮಾಡಿ. ಅದರಲ್ಲಿ ಯಾವೆಲ್ಲಾ ಡಿವೈಸ್‌ಗಳಿಗೆ ಖಾತೆ ಲಾಗ್‌ ಇನ್‌ ಆಗಿದೆ ಎಂಬ ವಿವರ ಲಬ್ಯವಾಗುತ್ತದೆ. ಯಾವ ಡಿವೈಸ್‌ನಲ್ಲಿ ನಮ್ಮ ಖಾತೆಯನ್ನು ಡಿಲಿಟ್‌ ಮಾಡಬೇಕು ಎಂದುಕೊಂಡಿರುವಿರೋ ಅದನ್ನು ಈ ವಿಭಾಗದಲ್ಲಿ ಡಿಲಿಟ್‌ ಮಾಡಿ.

ರಜಾದಿನಗಳು

ನೆಟ್‌ಫ್ಲಿಕ್ಸ್ ಈ ಸಂಬಂಧ ಮಾಹಿತಿ ನೀಡಿದ್ದು, ರಜಾದಿನಗಳು ಸಮೀಪಿಸುತ್ತಿರುವಾಗ, ಅನೇಕರು ಕುಟುಂಬ ಮತ್ತು ಸ್ನೇಹಿತರನ್ನು ಭೇಟಿ ಮಾಡುತ್ತಾರೆ, ಅಲ್ಲಿ ಅವರು ಖಂಡಿತವಾಗಿಯೂ ನೆಟ್‌ಫ್ಲಿಕ್ಸ್‌ ಖಾತೆ ಮೂಲಕ ವಿಡಿಯೋ ವೀಕ್ಷಣೆ ಮಾಡುತ್ತಾರೆ. ಆದರೆ, ಆ ಸ್ಥಳಗಳನ್ನು ತೊರೆಯುವಾಗ ಅವರ ಡಿವೈಸ್‌ನಿಂದ ಲಾಗ್‌ಔಟ್‌ ಮಾಡಲು ಮರೆಯುವುದು ಸಾಮಾನ್ಯ. ಈ ಕಾರಣಕ್ಕೆ ನಾವು ಹೊಸ ಫೀಚರ್ಸ್‌ ಅನ್ನು ನೀಡಿದ್ದೇವೆ. ಬಳಕೆದಾರರು ತಾವು ಇದ್ದ ಸ್ಥಳದಲ್ಲಿಯೇ ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಅನಗತ್ಯ ಸಾಧನಗಳಿಂದ ನಿಮ್ಮ ಖಾತೆಯನ್ನು ಲಾಕ್ ಮಾಡಬಹುದು ಎಂದು ಹೇಳಿದೆ.

ಪ್ಲಾಟ್‌ಫಾರ್ಮ್‌

ಓಟಿಟಿ ಪ್ಲಾಟ್‌ಫಾರ್ಮ್‌ ವಿಭಾಗದಲ್ಲಿ ನೆಟ್‌ಫ್ಲಿಕ್ಸ್‌ ಪ್ರಮುಖವಾಗಿದ್ದರೆ ಇನ್ನೂ ಹಲವಾರು ಇದೇ ರೀತಿಯ ಆಪ್‌ಗಳು ಬಳಕೆದಾರರಿಗೆ ವಿಶೇಷ ಸೌಕರ್ಯ ನೀಡುತ್ತಾ ಬರುತ್ತಿವೆ. ಅದರಲ್ಲೂ ಈಗಂತೂ ಈ ಓಟಿಟಿ ಬಳಕೆ ಏರಿಕೆಯತ್ತ ಸಾಗುತ್ತಿದೆ. ನೆಟ್‌ಫ್ಲಿಕ್ಸ್ ನಂತೆಯೇ ಅಮೆಜಾನ್ ಪ್ರೈಮ್, ಡಿಸ್ನಿ+ ಹಾಟ್‌ಸ್ಟಾರ್‌ನಂತಹ ಪ್ರಮುಖ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ಈ ರೀತಿಯ ಫೀಚರ್ಸ್‌ಗಳನ್ನು ಪರಿಚಯಿಸಿಕೊಂಡು ಬರುತ್ತಿವೆ.

ಜಾಹೀರಾತು ಬೆಂಬಲಿತ ಯೋಜನೆ

ಜಾಹೀರಾತು ಬೆಂಬಲಿತ ಯೋಜನೆ

ನೆಟ್‌ಫ್ಲಿಕ್ಸ್‌ ಬೇಸಿಕ್ ವಿತ್ ಆಡ್‌ ಆಯ್ಕೆಯನ್ನೂ ಕೆಲವು ದಿನಗಳ ಹಿಂದೆ ಘೋಷಣೆ ಮಾಡಿದ್ದು, ಈ ಪ್ಲ್ಯಾನ್‌ನಲ್ಲಿ ಪ್ರತಿ ಗಂಟೆಗೆ ನಾಲ್ಕರಿಂದ ಐದು ಜಾಹೀರಾತುಗಳು ಪ್ರಸಾರ ಆಗುತ್ತವೆ. ಹಾಗೆಯೇ ಪ್ರತಿ ಜಾಹೀರಾತು 15 ರಿಂದ 30 ಸೆಕೆಂಡುಗಳವರೆಗೆ ಇರುತ್ತದೆ. ಅದರಂತೆ ಜಾಗತಿಕವಾಗಿ ನೆಟ್‌ಫ್ಲಿಕ್ಸ್ ಈ ಪ್ಲ್ಯಾನ್‌ ಸಂಬಂಧ ಮೈಕ್ರೋಸಾಫ್ಟ್ ಜೊತೆ ಕೈಜೋಡಿಸುತ್ತಿದೆ ಎಂದು ವರದಿಯಾಗಿದೆ.

Best Mobiles in India

English summary
Delete an account on another device, Netflix introduces new plans for users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X