ನೆಟ್‌ಫ್ಲಿಕ್ಸ್‌ನ ಈ ನಿರ್ಧಾರದಿಂದ ನಿಮಗೆ ಬೇಸರವಾಗೋದು ಗ್ಯಾರಂಟಿ!

|

ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ ತನ್ನ ಬಳಕೆದಾರರಿಗೆ ಶಾಕಿಂಗ್‌ ನ್ಯೂಸ್‌ ಒಂದನ್ನು ನೀಡಿದೆ. ಒಂದೇ ಅಕೌಂಟ್‌ ಪಾಸ್‌ವರ್ಡ್‌ನಲ್ಲಿ ಸ್ನೇಹಿತರು, ಸಂಬಂಧಿಕರೆಲ್ಲರೂ ನೆಟ್‌ಫ್ಲಿಕ್ಸ್‌ ಪ್ಲಾಟ್‌ಫಾರ್ಮ್‌ ಪ್ರವೇಶಿಸುವುದಕ್ಕೆ ಇದ್ದ ಅವಕಾಶಕ್ಕೆ ಇದೀಗ ಬ್ರೇಕ್‌ ಹಾಕಿದೆ. ಅಂದರೆ ನಿಮ್ಮ ನೆಟ್‌ಫ್ಲಿಕ್ಸ್‌ ಅಕೌಂಟ್‌ ಪಾಸ್‌ವರ್ಡ್‌ ಅನ್ನು ನೀವು ಬೇರೆಯವರಿಗೆ ಶೇರ್‌ ಮಾಡುವುದಕ್ಕೆ ಅವಕಾಶವಿಲ್ಲದಂತೆ ಮಾಡಿದೆ. ಕುಸಿಯುತ್ತಿರುವ ಚಂದದಾರರ ಸಂಖ್ಯೆ ಹಾಗೂ ಒಂದೇ ಖಾತೆಯಲ್ಲಿ ಹಲವರು ಪಡೆಯುತ್ತಿದ್ದ ಉಪಯೋಗಗಳನ್ನು ತಡೆಯಲು ಈ ಕ್ರಮ ತೆಗೆದುಕೊಂಡಿದೆ.

ನೆಟ್‌ಫ್ಲಿಕ್ಸ್‌ನಲ್ಲಿ

ಹೌದು, ನೆಟ್‌ಫ್ಲಿಕ್ಸ್‌ನಲ್ಲಿ ನಿಮ್ಮದೊಂದು ಖಾತೆಯಿದೆಯಾ? ಹಾಗಂತ ನಿಮ್ಮ ಅಕೌಂಟ್‌ನ ಪಾಸ್‌ವರ್ಡ್‌ ಅನ್ನು ನಿಮ್ಮ ಸ್ನೇಹಿತರಿಗೂ ಶೇರ್‌ ಮಾಡೋಕೆ ಹೋಗಬೇಡಿ. ಯಾಕಂದ್ರೆ ನೆಟ್‌ಫ್ಲಿಕ್ಸ್‌ ಅಕೌಂಟ್‌ ಪಾಸ್‌ವರ್ಡ್‌ ಶೇರಿಂಗ್‌ ಅವಕಾಶಕ್ಕೆ ಸ್ಟಾಪ್‌ ಹಾಕಲಾಗಿದೆ. ಸದ್ಯ ಈ ಹೊಸ ನಿಯಮ ಮುಂದಿನ ವರ್ಷದ ಆರಂಭದಿಂದಲೇ ಪ್ರಾರಂಭವಾಗಲಿದೆ. ಹಾಗಾದ್ರೆ ನೆಟ್‌ಫ್ಲಿಕ್ಸ್‌ನ ಈ ನಿರ್ಧಾರಕ್ಕೆ ಕಾರಣ ಏನು? ಇದಕ್ಕಾಗಿ ನೆಟ್‌ಫ್ಲಿಕ್ಸ್‌ ಅನುಸರಿಸುತ್ತಿರುವ ಮಾರ್ಗಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೆಟ್‌ಫ್ಲಿಕ್ಸ್‌

ಚಂದಾದಾರರ ಸಂಖ್ಯೆಯ ಕುಸಿತವನ್ನು ತಡೆಗಟ್ಟುವ ನಿಟ್ಟಿನಲ್ಲಿ ನೆಟ್‌ಫ್ಲಿಕ್ಸ್‌ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಹಾದಿಯಲ್ಲಿ ಇದೀಗ ಒಬ್ಬರ ಪಾಸ್‌ವರ್ಡ್‌ ಅನ್ನು ಇನ್ನೊಬ್ಬರು ಬಳಸುವುದಕ್ಕೆ ಬ್ರೇಕ್‌ ಹಾಕುವುದಕ್ಕೆ ಮುಂದಾಗಿದೆ. ಇದರಿಂದ ನೀವು ನೆಟ್‌ಫ್ಲಿಕ್ಸ್‌ ಅಕೌಂಟ್‌ ಬಳಸಬೇಕಾದರೆ ನಿಮ್ಮದೇ ಸ್ವಂತ ಅಕೌಂಟ್‌ ಹೊಂದುವುದು ಅನಿವಾರ್ಯವಾಗಲಿದೆ. ಹೀಗೆ ಮಾಡಿದ್ರೆ ಚಂದಾದಾರಿಕೆ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ ಅನ್ನೊದು ನೆಟ್‌ಫ್ಲಿಕ್ಸ್‌ನ ಪ್ಲಾನ್‌ ಆಗಿದೆ.

ನೆಟ್‌ಫ್ಲಿಕ್ಸ್

ದಿ ವಾಲ್ ಸ್ಟ್ರೀಟ್ ಜರ್ನಲ್‌ ವರದಿಯ ಪ್ರಕಾರ ನೆಟ್‌ಫ್ಲಿಕ್ಸ್‌ 2023ರ ಆರಂಭದಿಂದ, ಬಳಕೆದಾರರು ತಮ್ಮ ಅಕೌಂಟ್‌ ಪಾಸ್‌ವರ್ಡ್‌ಗಳನ್ನು ಬೇರೆಯವರಿಗೆ ಶೇರ್‌ ಮಾಡೋದನ್ನು ಸ್ಟಾಪ್‌ ಮಾಡಲಿದೆ. ನೆಟ್‌ಫ್ಲಿಕ್ಸ್ ಚಂದಾದಾರಿಕೆಗಳನ್ನು ಪ್ರಾರಂಭಿಸಿದಾಗಿನಿಂದ ಪಾಸ್‌ವರ್ಡ್ ಶೇರ್‌ ಮಾಡುವ ಆಯ್ಕೆಯಿಂದ ಹೆಚ್ಚಿನ ಜನರು ಒಂದೇ ಅಕೌಂಟ್‌ ಬಳಸುವುದು ಸಾಮಾನ್ಯವಾಗಿದೆ. ಆದರೆ ಇದನ್ನು ತಡೆಗಟ್ಟದಿದ್ದರೆ ಚಂದಾದಾರಿಕೆ ಕುಸಿತವನ್ನು ತಡೆಯಲು ಸಾಧ್ಯವಿಲ್ಲ ಅನ್ನೊದು ನೆಟ್‌ಫ್ಲಿಕ್ಸ್‌ ಅಭಿಪ್ರಾಯವಾಗಿದೆ. ಇದೇ ಕಾರಣಕ್ಕೆ ಈ ವರ್ಷದ ಆರಂಭದಲ್ಲಿಯೇ, ನೆಟ್‌ಫ್ಲಿಕ್ಸ್ ಸಿಇಒ ರೀಡ್ ಹೇಸ್ಟಿಂಗ್ಸ್ ಪಾಸ್‌ವರ್ಡ್ ಶೇರ್‌ ಆಯ್ಕೆಯನ್ನು ನಿಲ್ಲಿಸುವುದಾಗಿ ಹೇಳಿದ್ದರು.

ನೆಟ್‌ಫ್ಲಿಕ್ಸ್‌

ಇದರಿಂದ ನೀವು ಬೇರೆಯವರು ನೆಟ್‌ಫ್ಲಿಕ್ಸ್‌ ಅಕೌಂಟ್‌ ಅನ್ನು ಬಳಸುವುದಕ್ಕೆ ಸಾಧ್ಯವಾಗುವುದಿಲ್ಲ. ಬದಲಿಗೆ ನಿಮ್ಮದೇ ಚಂದಾದಾರಿಕೆ ಪ್ಲಾನ್‌ ಮೂಲಕ ನೀವು ನೆಟ್‌ಫ್ಲಿಕ್ಸ್‌ ಪ್ರವೇಶಿಸಬೇಕಾಗುತ್ತದೆ. ಒಂದು ವೇಳೆ ನೀವು ನಿಮ್ಮ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಅನ್ನು ಶೇರ್‌ ಮಾಡಿದರೆ, ಆ ವ್ಯಕ್ತಿಯು ಪ್ರೊಫೈಲ್ ಅನ್ನು ಬಳಸಲು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ, ತಮ್ಮ ಸ್ನೇಹಿತರ ನೆಟ್‌ಫ್ಲಿಕ್ಸ್ ಪ್ರೊಫೈಲ್ ಅನ್ನು ಬಳಸುವುದಕ್ಕೂ ಕೂಡ ಶುಲ್ಕ ಪಾವತಿಸುವುದು ಅನಿವಾರ್ಯತೆ ಎದುರಾಗಲಿದೆ.

ನೆಟ್‌ಫ್ಲಿಕ್ಸ್

ನೆಟ್‌ಫ್ಲಿಕ್ಸ್ ಹೊಸ ಪಾಸ್‌ವರ್ಡ್ ಶೇರ್‌ ಶುಲ್ಕದ ಆಯ್ಕೆಯನ್ನು ಕೋಸ್ಟಾ ರಿಕಾ, ಚಿಲಿ, ಪೆರು ಮತ್ತು ಇನ್ನೂ ಕೆಲವು ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ಪರೀಕ್ಷಿಸುತ್ತಿದೆ. ಈ ದೇಶಗಳಲ್ಲಿ ಸ್ನೇಹಿತರ ನೆಟ್‌ಫ್ಲಿಕ್ಸ್ ಖಾತೆಯನ್ನು ಬಳಸಲು ಬಯಸುವ ಜನರು $3 (ಅಂದಾಜು 250ರೂ) ಶುಲ್ಕ ಪಾವತಿಸುವುದು ಅನಿವಾರ್ಯವಾಗಿದೆ. ಇದೇ ವಿಧಾನ ಭಾರತದಲ್ಲಿಯೂ ಕೂಡ ಜಾರಿಗೆ ಬರಲಿದ್ದು, ಇಲ್ಲಿ ಪ್ರತಿ ಪ್ರೊಫೈಲ್‌ಗೆ ಎಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ ಅನ್ನೊದು ಇನ್ನು ಬಹಿರಂಗವಾಗಿಲ್ಲ.

ನೆಟ್‌ಫ್ಲಿಕ್ಸ್

ಸದ್ಯ ಭಾರತದಲ್ಲಿ, ನೆಟ್‌ಫ್ಲಿಕ್ಸ್ ನಾಲ್ಕು ಯೋಜನೆಗಳನ್ನು ನೀಡುತ್ತಿದೆ. ಇದರಲ್ಲಿ 149ರೂ. ಬೆಲೆಯ ಮೊಬೈಲ್-ಓನ್ಲಿ ಪ್ಲಾನ್‌, 199ರೂ. ಬೆಲೆಯ ಬೇಸಿಕ್‌ ಪ್ಲಾನ್‌, 499ರೂ. ಬೆಲೆಯ ಸ್ಟ್ಯಾಂಡರ್ಡ್‌ ಪ್ಲಾನ್‌ ಮತ್ತು 649ರೂ. ಬೆಲೆಯ ಪ್ರೀಮಿಯಂ ಪ್ಲಾನ್‌ಗಳು ಸೇರಿವೆ. ಇವುಗಳಲ್ಲಿ ನೀವು ನಿಮ್ಮ ಆಯ್ಕೆಯ ಯಾವುದೇ ಪ್ಲಾನ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Netflix will not allow its users to share passwords with people outside: Report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X