ನೂತನ ತಂತ್ರಜ್ಞಾನ ಅನಾವರಣಕ್ಕೆ ಗೂಗಲ್ ವೇದಿಕೆ ಸಜ್ಜು ; ಹೆಚ್ಚಿದ ನಿರೀಕ್ಷೆಗಳು!

|

ಟೆಕ್‌ ದೈತ್ಯ ಗೂಗಲ್ ಈ ವರ್ಷದ ಐಓ (i/o) ಸಮ್ಮೇಳನವನ್ನು (ಡೆವಲಪರ್ಸ್‌ಗಳ ವಾರ್ಷಿಕ ಸಮ್ಮೇಳನವನ್ನು) ಇದೇ ಮೇ 7 ರಂದು ಕ್ಯಾಲಿಫೊರ್ನಿಯದಲ್ಲಿ ನಡೆಸಲು ಸಜ್ಜಾಗಿದೆ. ಈ ಸಮ್ಮೇಳನ ನಡೆಯಲು ಇನ್ನೇನು ಕೆಲವೇ ದಿನಗಳು ಭಾಕಿ ಉಳಿದಿದ್ದು, ಪ್ರಸಕ್ತ ವರ್ಷದ ಸಮ್ಮೇಳನದಲ್ಲಿ ಯಾವೆಲ್ಲ ನೂತನ ತಂತ್ರಜ್ಞಾನಗಳು ಮಾರುಕಟ್ಟೆಗೆ ಪರಿಚಿತವಾಗಬಹುದು ಎಂಬ ಕುತೂಹಲ ಮೂಡಿರುವುದಂತು ನಿಜ.

ನೂತನ ತಂತ್ರಜ್ಞಾನ ಅನಾವರಣಕ್ಕೆ ಗೂಗಲ್ ವೇದಿಕೆ ಸಜ್ಜು ; ಹೆಚ್ಚಿದ ನಿರೀಕ್ಷೆಗಳು!

ಹೌದು, ಗೂಗಲ್ ಡೆವಲಪರ್ಸ್‌ ವಾರ್ಷಿಕ್‌ ಸಮ್ಮೇಳನವನ್ನು ಆಯೋಜಿಸಿದ್ದು, ಟೆಕ್ನಾಲಜಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಹೊಸತನಗಳ ಅನಾವರಣ ಆಗಲಿದೆ. 'ಇನ್ನೊವೇಶನ್‌ ಇನ್ ದಿ ಓಪನ' ಎಂಬುದು ಗೂಗಲ್ i/o ದ ಸ್ಲೋಗನ್ ಆಗಿದೆ. ಹಾಗಾದರೇ ಟೆಕ್‌ ಜಗತ್ತು ಈ ವರ್ಷದ ಗೂಗಲ್ ಐಓದಲ್ಲಿ ಏನೆಲ್ಲಾ ತಂತ್ರಜ್ಞಾನಗಳನ್ನು ನಿರೀಕ್ಷಿಸುತ್ತಿದೆ ಎಂಬ ಅವಲೋಕನದ ಕುರಿತು ತಿಳಿಯಲು ಮುಂದೆ ಓದಿರಿ.

ಅಂಡ್ರಾಯ್ಡ್‌ನಿಂದ ಅಸಿಸ್ಟಂಟ್

ಅಂಡ್ರಾಯ್ಡ್‌ನಿಂದ ಅಸಿಸ್ಟಂಟ್

ಗೂಗಲ್ ಈಗಾಗಲೇ ಸ್ಮಾರ್ಟ್‌ವಾಚ್‌, ಟಿವಿ, ಸ್ಮಾರ್ಟ್‌ಫೋನ್‌ ಹೀಗೆ ಹಲವು ಹೊಸತನಗಳನ್ನು ಪರಿಚಯಿಸಿದ್ದು, 2016ರಲ್ಲಿ ಗೂಗಲ್ ಅಸಿಸ್ಟಂಟ್ ಅನ್ನು ಪರಿಚಯಿಸಿ ದಿಕ್ಕನ್ನೆ ಬದಲಿಸಿದೆ. ವಾಯಿಸ್‌ ಕಮಾಂಡ್‌ ಮೂಲಕ ಕಾರ್ಯನಿರ್ವಹಿಸುವ ಅಸಿಸ್ಟಂಟ್ ಬಳಕೆದಾರಿಗೆ ತಂತ್ರಜ್ಞಾನದ ಹೊಸ ಅನುಭವ ನೀಡಿದೆ. ಮುಂಬರುವ ಸ್ಮಾರ್ಟ್‌ ಉತ್ಪನ್ನಗಳು ಅಸಿಸ್ಟಂಟ್‌ನಿಂದ ಕಾರ್ಯನಿರ್ವಹಿಸಲಿವೆ ಎನ್ನಲಾಗುತ್ತಿದೆ.

ಅಸಿಸ್ಟಂಟ್ ಬಳಕೆ

ಅಸಿಸ್ಟಂಟ್ ಬಳಕೆ

ಸದ್ಯ ಗೂಗಲ್ ಅಸಿಸ್ಟಂಟ್ ಹೆಚ್ಚಿನ ತಂತ್ರಜ್ಞಾನದೊಂದಿಗೆ ಎಲ್ಲ ಸ್ಮಾರ್ಟ್‌ ಡಿವೈಸ್‌ಗಳಿಗೆ ಬೆಂಬಲ ನೀಡಲಿದೆ. ಹಾಗೇ ಗೂಗಲ್ ಮ್ಯಾಪ್‌ನಲ್ಲಿಯೂ ಗೂಗಲ್ ಅಸಿಸ್ಟಂಟ್ ಪೂರ್ಣವಾಗಿ ಕಾರ್ಯನಿರ್ವಹಿಸಲಿದ್ದು, ಬಳಕೆದಾರರು ಮಾತಿನ ಮೂಲಕ ಕೆಲಸ ಆದೇಶ ನೀಡಬಹುದಾಗಿದ್ದು, ಡಿವೈಸ್‌ಗಳಲ್ಲಿ ನಿಮ್ಮ ಆದೇಶಗಳನ್ನ ಪಾಲಿಸಲಿದೆ. (Google Do it).

ಆಂಡ್ರಾಯ್ಡ್‌ Q

ಆಂಡ್ರಾಯ್ಡ್‌ Q

ಆಂಡ್ರಾಯ್ಡ್‌ ಆಪರೇಟಿಂಗ್ ಸಿಸ್ಟಮ್ ಆರಂಭದಿಂದ ಇಲ್ಲಿಯವರೆಗೂ ಹಲವು ಅಪ್‌ಡೇಟ್‌ಗಳನ್ನು ಪಡೆದುಕೊಳ್ಳುತ್ತಲೆ ಇದ್ದು, ಈಗ ಆಂಡ್ರಾಯ್ಡ್‌ ಪೈ ಚಾಲ್ತಿ ಇದೆ. ಗೂಗಲ್ ಆಂಡ್ರಾಯ್ಡ್‌ ಕ್ಯೂ ಜಾರಿಮಾಡಲಿದ್ದು, ಮುಂದಿನ ಸ್ಮಾರ್ಟ್‌ ಡಿವೈಸ್‌ಗಳಲ್ಲಿ ಈ ಆಪರೇಟಿಂಗ್ ಕೆಲಸ ಮಾಡಲಿದೆ. ಹಲವು ಅತ್ಯುತ್ತಮ ಫೀಚರ್ಸ್‌ಗಳನ್ನು ಆಂಡ್ರಾಯ್ಡ್‌ ಕ್ಯೂ ಓಎಸ್‌‌ ಹೊಂದಿದೆ ಎಂದು ಹೇಳಲಾಗುತ್ತಿದೆ.

ಪಿಕ್ಸಲ್ 3a

ಪಿಕ್ಸಲ್ 3a

ಗೂಗಲ್ ಪಿಕ್ಸಲ್ ಹೆಸರಿನ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಅವುಗಳ ಸಾಲಿಗೆ ಸೇರಲು ಸಿದ್ಧವಾಗಿರುವ ಪಿಕ್ಸಲ್ 3a ಸಮ್ಮೇಳನದಲ್ಲಿ ಲಾಂಚ್ ಆಗಲಿದೆ ಎನ್ನಲಾಗುತ್ತಿದೆ. ಗೂಗಲ್ ಪಿಕ್ಸಲ್ 3a ಸ್ಮಾರ್ಟ್‌ಫೋನ್ ಮಿಡ್‌ರೇಂಜ್‌ ಬೆಲೆಯಲ್ಲಿ ಲಾಂಚ್ ಆಗಲಿದೆ ಎಂಬ ಲೀಕ್‌ ಸಿದ್ದಿಗಳು ಗ್ರಾಹಕರ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿವೆ.

ಸ್ಮಾರ್ಟ್‌ ಹೋಮ್

ಸ್ಮಾರ್ಟ್‌ ಹೋಮ್

ಮನೆಗೆ ಉಪಯುಕ್ತವಾಗುವ ಸ್ಮಾರ್ಟ್‌ ಉತ್ಪನ್ನಗಳನ್ನು ಅನಾವರಣ ಮಾಡಲಿದ್ದು, ಅಮೆಜಾನ್ ಇಕೋ ಸಾಧನಕ್ಕೆ ಪ್ರತಿಯಾಗಿ ಹೊಸ ಡಿವೈಸ್‌ ಲಾಂಚ್ ಮಾಡಲಿದೆ ಎಂದು ಹೇಳಲಾಗುತ್ತಿದೆ. ಗೂಗಲ್ ಸ್ಮಾರ್ಟ್‌ ಹೋಮ್ ಹಬ್, ಸ್ಮಾರ್ಟ್‌ ಸ್ಪೀಕರ್ಸ್‌ಗಳು ಸೇರಿದಂತೆ ಇನ್ನೂ ಅದ್ಭುತ ಉತ್ಪನ್ನಗಳ ಪರಿಚಯವಾಗೋ ನಿರೀಕ್ಷೆ ಇದೆ.

ಗೂಗಲ್ ಕೋರಲ್

ಗೂಗಲ್ ಕೋರಲ್

ಗೂಗಲ್ ಕೋರಲ್ ಎಂಬುದು ಹಾರ್ಡ್‌ವೇರ್‌ ಮತ್ತು ಕ್ಲೌಡ್‌ ಉತ್ಪನ್ನವಾಗಿದ್ದು, ಸ್ಟಾರ್ಟ್‌ಅಪ್‌ ಕಂಪನಿಗಳಿಗೆ ಮತ್ತು ನವ ಉದ್ಯಮ ಕಂಪನಿಗಳಿಗೆ ಇದು ಅನುಕೂಲವಾಗಲಿದೆ. ಹಾಗೇ ಗೂಗಲ್ ಗೇಮಿಂಗ್‌ಗೆ ಪ್ಲಾಟ್‌ಫಾರ್ಮ್‌ ಸಂಭಂದಿತ ಸ್ಟಡಿಯಾ ಹಾರ್ಡ್‌ವೇರ್‌ ಅಭಿವೃದ್ದಿ ಮಾಡಲಿದೆ ಎನ್ನಲಾಗುತ್ತಿದೆ. ಯಾವ ರೀತಿ ಕೆಲಸ ನಿರ್ವಹಿಸಲಿವೆ ಎಂಬುದನ್ನು ಕಾದು ನೋಡಬೇಕಿದೆ.

Best Mobiles in India

English summary
New Android, Assistant, and hardware: What to expect from Google I/O 2019.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X