ಭಾರತೀಯರೇ ಎಚ್ಚರ! ಮತ್ತೆ ಬಂದಿದೆ ಡ್ರಿನಿಕ್‌ ಆಂಡ್ರಾಯ್ಡ್‌ ಮಾಲ್‌ವೇರ್‌!

|

ಇಂದಿನ ಸ್ಮಾರ್ಟ್‌ ಜಗತ್ತಿನಲ್ಲಿ ಮಾಲ್‌ವೇರ್‌ಗಳ ಕಾಟ ತಪ್ಪಿದ್ದಲ್ಲ. ಎಷ್ಟೇ ಸುರಕ್ಷತೆ ಕ್ರಮವನ್ನು ಅನುಸರಿಸಿದರೂ ಕೂಡ ಹೊಸ ರೂಪದಲ್ಲಿ ಮಾಲ್‌ವೇರ್‌ಗಳು ಎಂಟ್ರಿ ನೀಡುತ್ತಲೇ ಇರುತ್ತವೆ. ಸದ್ಯ ಇದೀಗ ಡ್ರಿನಿಕ್‌ ಆಂಡ್ರಾಯ್ಡ್‌ ಮಾಲ್‌ವೇರ್‌ನ ಹೊಸ ಆವೃತ್ತಿ ಪತ್ತೆಯಾಗಿದೆ. ಈ ಮಾಲ್‌ವೇರ್‌ ಭಾರತೀಯ ಬಳಕೆದಾರರ ಕೆಲವು ಪ್ರಮುಖ ಬ್ಯಾಂಕ್‌ ವಿವರಗಳನ್ನು ಕದಿಯುತ್ತಿದೆ ಎನ್ನಲಾಗಿದೆ. ಇದು ಹಳೆಯ ಮಾಲ್‌ವೇರ್‌ ಆಗಿದ್ದು, ಇದೀಗ ಹೊಸ ರೂಪದಲ್ಲಿ ರೀ ಎಂಟ್ರಿ ನೀಡಿದೆ.

ಡ್ರಿನಿಕ್‌

ಹೌದು, 2016 ರಿಂದ ಸುದ್ದಿಯಲ್ಲಿರುವ ಡ್ರಿನಿಕ್‌ ಆಂಡ್ರಾಯ್ಡ್‌ ಟ್ರೋಜನ್‌ ಇದೀಗ ಹೊಸ ರೂಪದಲ್ಲಿ ಎಂಟ್ರಿ ನೀಡಿದೆ. ಆದಾಯ ತೆರಿಗೆ ಮರುಪಾವತಿ ಮಾಡುವವರನ್ನೇ ಟಾರ್ಗೆಟ್‌ ಮಾಡಿರುವ ಮಾಲ್‌ವೇರ್‌ ಬಳಕೆದಾರರ ಸೂಕ್ಷ್ಮ ಮಾಹಿತಿಯ್ನು ಕದಿಯುತ್ತಿದೆ ಎನ್ನಲಾಗಿದೆ. ಈ ಮಾಲ್‌ವೇರ್‌ ಬಗ್ಗೆ ಈ ಹಿಂದೆಯೂ ಕುಡ ಭಾರತ ಸರ್ಕಾರ ಎಚ್ಚರಿಸಿಕ ನೀಡಿದ್ದು, ಹೊಸ ರೂಪದಲ್ಲಿ ಬಂದಿರುವ ಈ ಮಾಲ್‌ವೇರ್‌ ಅನ್ನು ಸೈಬಲ್‌ ಗುರುತಿಸಿದೆ. ಹಾಗಾದ್ರೆ ಹೊಸ ಆವೃತ್ತಿಯ ಡ್ರಿನಿಕ್‌ ಆಂಡ್ರಾಯ್ಡ್‌ ಟ್ರೋಜನ್‌ನಿಂದಾಗುವ ಅಪಾಯಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸುಧಾರಿತ

ಸುಧಾರಿತ ಸಾಮರ್ಥ್ಯಗಳೊಂದಿಗೆ ಎಂಟ್ರಿ ನೀಡಿರುವ ಹೊಸ ಡ್ರಿನಿಕ್‌ ಆಂಡ್ರಾಯ್ಡ್‌ ಟ್ರೋಜನ್‌ ಮಾಲ್‌ವೇರ್‌ ಅನ್ನು ಸೈಬಲ್‌ ಪತ್ತೆ ಹಚ್ಚಿದೆ. ಇದು ಪ್ರಮುಖವಾಗಿ ಭಾರತದಲ್ಲಿನ ಬಳಕೆದಾರರನ್ನು ಟಾರ್ಗೆಟ್‌ ಮಾಡಿದ್ದು, ಭಾರತದಲ್ಲಿ 18 ನಿರ್ದಿಷ್ಟ ಬ್ಯಾಂಕ್‌ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ. ಇದರಲ್ಲಿ ಎಸ್‌ಬಿಐ ಬಳಕೆದಾರರು ಡ್ರಿನಿಕ್ ಮಾಲ್‌ವೇರ್‌ನ ಗುರಿಯಾಗಿದ್ದಾರೆ ಎಂದು ವರದಿಯಾಗಿದೆ. ಎಸ್‌ಎಂಸ್‌ ರೂಪದಲ್ಲಿ ಬರುವ APK ಫೈಲ್‌ನಲ್ಲಿ ಈ ಮಾಲ್‌ವೇರ್‌ ಪತ್ತೆಯಾಗಿದೆ.

ಡ್ರಿನಿಕ್ ಮಾಲ್‌ವೇರ್‌

ಡ್ರಿನಿಕ್ ಮಾಲ್‌ವೇರ್‌ iAssist ಎಂಬ ಅಪ್ಲಿಕೇಶನ್ ಅನ್ನು ಒಳಗೊಂಡಿದೆ. ಇದು ಭಾರತದ ಆದಾಯ ತೆರಿಗೆ ಇಲಾಖೆಯ ಅಧಿಕೃತ ತೆರಿಗೆ ನಿರ್ವಹಣಾ ಡಿವೈಸ್‌ ಮಾದರಿಯ ರೂಪದಲ್ಲಿದೆ. ಆದಾಯ ತೆರಿಗೆ ಪಾವತಿ ದಾರರನ್ನು ದಾರಿ ತಪ್ಪಿಸುವ ಕೆಲಸವನ್ನು ಇದ ಮಾಡಲಿದೆ. ಒಂದು ವೇಳೆ ಬಳಕೆದಾರರು ತಮ್ಮ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಈ ಅಪ್ಲಿಕೇಶನ್ ಅನ್ನು ಒಮ್ಮೆ ಇನ್‌ಸ್ಟಾಲ್‌ ಮಾಡಿದರೆ ಹಲವು ಕಾರ್ಯಗಳಿಗೆ ಅನುಮತಿ ಕೇಳಲಿದೆ. ನೀವು ಅನುಮತಿ ನೀಡಿದರೆ ನಿಮ್ಮ ಮೊಬೈಲ್‌ನಲ್ಲಿರುವ ಬ್ಯಾಂಕ್‌ ವಿವರಗಳನ್ನು ಕದಿಯಲಿದೆ.

ಅಪ್ಲಿಕೇಶನ್‌

ಇನ್ನು ಈ ಅಪ್ಲಿಕೇಶನ್‌ ಎಲ್ಲಾ ಅನುಮತಿಗಳನ್ನು ಪಡೆದುಕೊಂಡ ನಂತರ ಯಾವುದೋ ಫಿಶಿಂಗ್ ಪೆಜ್‌ ಲೋಡ್‌ ಮಾಡುವ ಬದಲು WebView ಮೂಲಕ ಭಾರತೀಯ ಆದಾಯ ತೆರಿಗೆ ವೆಬ್‌ಸೈಟ್ ಅನ್ನು ತೆರೆಯುತ್ತದೆ. ಸೈಟ್ ನೈಜವಾಗಿದ್ದರೂ, ಬಳಕೆದಾರರ ಲಾಗಿನ್ ರುಜುವಾತುಗಳಿಗೆ ಕೀಲಾಗ್ ಮಾಡುವ ಕಾರ್ಯದ ಜೊತೆಗೆ ಸ್ಕ್ರೀನ್ ರೆಕಾರ್ಡಿಂಗ್ ಅನ್ನು ಮಾಡಲಿದೆ. ಇದರಿಂದ ನಿಮ್ಮ ಆದಾಯ ತೆರಿಗೆ ವಿವರವನ್ನು ಸುಲಭವಾಗಿ ಕದಿಯಲಿದೆ.

ಡೇಟಾ

ಇದಷ್ಟೇ ಅಲ್ಲ ತಾನು ಕದಿಯುತ್ತರುವ ಡೇಟಾ ನಿಖರವಾಗಿದೆಯೇ ಅನ್ನೊದನ್ನ ಖಚಿತ ಪಡಿಸಿಕೊಳ್ಳುವ ಸಾಮರ್ಥ್ಯವನ್ನು ಕೂಡ ಹೊಂದಿದೆ. ಒಂದು ಭಾರಿ ನೀವು ಲಾಗ್-ಇನ್ ಮಾಡಿದ ನಂತರ, ಪರದೆಯ ಮೇಲೆ ನಕಲಿ ಡೈಲಾಗ್ ಬಾಕ್ಸ್ ಅನ್ನು ಪ್ರದರ್ಶಿಸಲಾಗುತ್ತದೆ. ಇದರಲ್ಲಿ ನಿಮ್ಮ ತೆರಿಗೆ ಪಾವತಿ ಬಗ್ಗೆ ತಪ್ಪು ವಿವರಗಳ್ನು ನೀಡಿ ಮರುಪಾವತಿ ಮಾಡುವಂತೆ ತೋರಿಸುತ್ತದೆ. ಇದನ್ನು ನಂಬಿ ನೀವೇನಾದರೂ ಮರುಪಾವತಿಗೆ ಒಕೆ ಮಾಡಿದರೆ ನಿಮ್ಮ ಹಣ ಹ್ಯಾಕರ್ಸ್‌ಗಳ ಪಾಲಾಗಲಿದೆ.

ಭಾರತದ

ಇದು ಭಾರತದ ಮೂಲ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಂತೆ ಕಾಣಲಿದೆ. ಅಲ್ಲದೆ ಇದರಲ್ಲಿ ಬಳಕೆದಾರರ ಖಾತೆ ಸಂಖ್ಯೆ, ಕ್ರೆಡಿಟ್ ಕಾರ್ಡ್ ಸಂಖ್ಯೆ, CVV ಮತ್ತು ಕಾರ್ಡ್ ಪಿನ್‌ನಂತಹ ಹಣಕಾಸಿನ ವಿವರಗಳನ್ನು ನಮೂದಿಸಲು ಕೇಳಲಾಗುತ್ತದೆ. ಬಳಕೆದಾರರು ನಮೂದಿಸುತ್ತಿದ್ದಂತೆ ಕಾಲ್‌ ಸ್ಕ್ರೀನಿಂಗ್‌ ಮೂಲಕ ಎಲ್ಲಾ ವಿವರಗಳನ್ನು ಕದಿಯುವುದಲ್ಲದೆ, ಅದೇ ವಿವರಗಳ ಮೂಲಕ ನಿಮ್ಮ ಖಾತೆಗಳಿಗೆ ಕನ್ನ ಹಾಕಲಿದೆ.

ಡ್ರಿನಿಕ್ ಆಂಡ್ರಾಯ್ಡ್‌ ವೈರಸ್‌ನಿಂದ ತಪ್ಪಿಸಿಕೊಳ್ಳುವುದು ಹೇಗೆ?

ಡ್ರಿನಿಕ್ ಆಂಡ್ರಾಯ್ಡ್‌ ವೈರಸ್‌ನಿಂದ ತಪ್ಪಿಸಿಕೊಳ್ಳುವುದು ಹೇಗೆ?

ಮೊದಲಿಗೆ ಥರ್ಡ್‌ ಪಾರ್ಟಿ ವೆಬ್‌ಸೈಟ್‌ಗಳಿಂದ ಯಾವುದೇ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡುವುದನ್ನು ನಿಲ್ಲಿಸಿ. ಅಲ್ಲದೆ ನಿಮಗೆ ಪರಿಚತವಲ್ಲದ ಸಂಖ್ಯೆಗಳಿಂದ ಬರುವ ಎಸ್‌ಎಂಎಸ್‌ ಲಿಂಕ್‌ಗಳನ್ನು ಟ್ಯಾಪ್‌ ಮಾಡಬೇಡಿ. ಇದಲ್ಲದೆ ನೀವು ಬ್ಯಾಂಕಿಂಗ್‌ಗೆ ಸಂಬಂಧಿಸಿದ ಪ್ರಮುಖ ಲಿಂಕ್, SMS ಅಥವಾ ಇಮೇಲ್ ಅನ್ನು ಪಡೆಯುತ್ತಿದ್ದರೆ, ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಅದನ್ನು ಎರಡು ಬಾರಿ ಪರಿಶೀಲಿಸುವುದು ಸೂಕ್ತವಾಗಲಿದೆ.

Best Mobiles in India

English summary
New android virus targets these bank users to steal card details

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X