Subscribe to Gizbot

ಮಾರುಕಟ್ಟೆಗೆ ಹೊಸ ನೋಕಿಯಾ ಸ್ಮಾರ್ಟ್ ಫೋನ್ ಗಳು ಲಾಂಚ್..!

Posted By: Precilla Dias

HMD ಗ್ಲೋಬಲ್ ಸಂಸ್ಥೆಯೂ ಮೊನ್ನೆ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಬಿಡುಗಡೆ ಮಾಡಿದ ನೋಕಿಯಾ 8110 4G ಫೀಚರ್ ಫೋನ್, ನೋಕಿಯಾ 1, ನೋಕಿಯಾ 6 (2018), ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 8 ಸಿರಿಕೋ ಸ್ಮಾರ್ಟ್ ಪೋನ್ ಗಳನ್ನು ಲಾಂಚ್ ಮಾಡಿತ್ತು. ಇದೇ ಮಾದರಿಯಲ್ಲಿ ನೋಕಿಯಾ 1 ಸ್ಮಾರ್ಟ್ ಫೋನ್ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಉಳಿದ ಫೋನ್ ಗಳು ಏಪ್ರಿಲ್ 4 ರಂದು ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗಲಿವೆ.

ಮಾರುಕಟ್ಟೆಗೆ ಹೊಸ ನೋಕಿಯಾ ಸ್ಮಾರ್ಟ್ ಫೋನ್ ಗಳು ಲಾಂಚ್..!

ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನೋಕಿಯಾ 8110, ನೋಕಿಯಾ 6, ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 8 ಸಿರಿಕೋ ಬಿಡುಗಡೆ ಮಾಡಲಿದೆ ಎನ್ನಲಾಗಿದ್ದು, ಈ ಸ್ಮಾರ್ಟ್ ಫೋನ್ ಗಳ ಬೆಲೆಗಳ ಕುರಿತು ಯಾವುದೇ ಮಾಹಿತಿಯೂ ಲಭ್ಯವಾಗಿಲ್ಲ. ಒಟ್ಟಿನಲ್ಲಿ ಸ್ಮಾರ್ಟ್ ಫೋನ್ ಲಾಂಚ್ ಬಗ್ಗೆ ಮಾಹಿತಿಯೂ ದೊರೆತಿದೆ.

ಒಟ್ಟಿನಲ್ಲಿ ಇವುಗಳಲ್ಲಿ ಕೆಲವು ಸ್ಮಾರ್ಟ್ ಫೋನ್ ಗಳಾದರು ಮಾರುಕಟ್ಟೆಯಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ. ಇವುಗಳಲ್ಲಿ ನೋಕಿಯಾ 8110 ಮತ್ತು ನೋಕಿಯಾ 8 ಸ್ಮಾರ್ಟ್ ಫೋನ್ ಗಳು ಲಾಂಚ್ ಆಗುವ ಸಾಧ್ಯತೆ ಕಡಿಮೆ ಇದೆ ಎಂದು ಮೂಲಗಳು ವರದಿ ಮಾಡಿವೆ.

ನೂತನ ನೋಕಿಯಾ 6 ಸ್ಮಾರ್ಟ್ ಫೋನ್ ಲಾಂಚ್ ಆಗುವುದು ಪಕ್ಕಾ ಆಗಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ನೋಕಿಯಾ 6 ಸ್ಮಾರ್ಟ್ ಫೋನ್ ಬೆಲೆಯಲ್ಲಿ ಇಳಿಕೆಯನ್ನು ಕಾಣಬಹುದಾಗಿದ್ದು, ಇದು ಹೊಸ ಸ್ಮಾರ್ಟ್ ಫೋನ್ ಸಿದ್ಧತೆಗಾಗಿ ನಡೆದಿದೆ ಎನ್ನಲಾಗಿದೆ. ಅಲ್ಲದೇ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಫೋನ್ ಬೇಡಿಕೆಯೂ ಹೆಚ್ಚಾಗಿದೆ.

ಹ್ಯಾಕರ್‌ಗಳಿಗೆ ಹೆಚ್ಚುತ್ತಿವೆ ಲಕ್ಷ ಲಕ್ಷ ಸಂಬಳದ ಉದ್ಯೋಗವಕಾಶಗಳು!!

ಇದಲ್ಲದೆ ನೋಕಿಯಾ 7 ಪ್ಲಸ್ ಸ್ಮಾರ್ಟ್ ಫೋನ್ ಮಾರುಕಟ್ಟೆಯ ಟ್ರೆಂಟ್ ಸೆಟ್ಟರ್ ಆಗಲಿದ್ದು, ಇದರಲ್ಲಿರುವ ವಿಶೇಷತೆಗಳು ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಒಂದೇ ಬಾರಿಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಎಲ್ಲಾ ನೋಕಿಯಾ ಸ್ಮಾರ್ಟ್ ಫೋನ್ ಗಳು ಹೊಸ ಅಲೆಯನ್ನು ಎಬ್ಬಿಸಲಿದೆ ಎನ್ನಲಾಗಿದೆ.

English summary
New Nokia 6 aka Nokia 6 (2018), Nokia 7 Plus, Nokia 8 Sirocco and Nokia 8110 feature phone have been listed on the official Nokia India website. These phones are expected to be launched in the country on April 4 as the company is hosting an event in New Delhi for the same. We can get further details at the launch event.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot