ಅರೇ! ಬರೇ 3 ಸೆಕೆಂಡ್‌ಗಳಲ್ಲಿ 1 ಜಿಬಿ ಫೈಲ್ ಡೌನ್‌ಲೋಡ್

Written By:

ಇಂಟರ್ನೆಟ್ ವೇಗದ ಕುರಿತಾಗಿ ಮೂಗು ಮುರಿಯುತ್ತಿದ್ದ ವೈಫೈ ಬಳಕೆದಾರರಿಗೆ ಇಲ್ಲಿದೆ ಶುಭ ಸುದ್ದಿ. ಸ್ಯಾಮ್‌ಸಂಗ್ ಕೊನೆಗೂ ಒಂದು ಪರಿಹಾರದೊಂದಿಗೆ ಬಂದಿದ್ದು ಬರೇ 3 ಸೆಕೆಂಡ್‌ಗಳಲ್ಲಿ ನಿಮಗೆ 1ಜಿಬಿ ಫೈಲ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಸ್ಯಾಮ್‌ಸಂಗ್ ಹೇಳುವಂತೆ 60GHZ ವೈಫೈ ತಂತ್ರಜ್ಞಾನವು ಐದು ಪಟ್ಟು ಹೆಚ್ಚುವರಿ ಇಂಟರ್ನೆಟ್ ವೇಗವನ್ನು ಪ್ರಸ್ತುತ ಬಳಕೆಗಿಂತ ಹೆಚ್ಚುವರಿಯಾಗಿ ನೀಡಲಿದೆ ಎಂಬುದಾಗಿದೆ.

ಓದಿರಿ: ನೀವು ಎಲ್ಲಿದ್ದರೂ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ?

ಈ ತಂತ್ರಜ್ಞಾನವು ಥಿಯಾಟ್ರಿಕಲ್ ಮತ್ತು ಮೂಲ ವೇಗದ ನಡುವಿನ ಅಂತವನ್ನು ನಿವಾರಿಸುವ ಮೂಲಕ ಪ್ರಸ್ತುತ ವೇಗಕ್ಕಿಂತಲೂ ಹೆಚ್ಚಿನ ಇಂಟರ್ನೆಟ್ ವೇಗವನ್ನು ದಯಪಾಲಿಸುವ ಮೂಲಕ ನಿಮ್ಮ ಇಂಟರ್ನೆಟ್ ಸಮಸ್ಯೆಯನ್ನು ದೂರಮಾಡಲಿದೆಯಂತೆ. ಬನ್ನಿ ಇಂದಿನ ನಮ್ಮ ಲೇಖನದಲ್ಲಿ ಸ್ಯಾಮ್‌ಸಂಗ್‌ನ ಈ ಕಮಾಲಿನ ತಂತ್ರಜ್ಞಾನದ ಕುರಿತಾಗಿ ಮಾಹಿತಿಯನ್ನು ನೀಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇಂಟರ್ನೆಟ್ ಸಮಸ್ಯೆ

ವೈಫೈ ಸಕ್ರಿಯ

ವೈಫೈ ಸಕ್ರಿಯಗೊಂಡಿರುವ ಹೆಚ್ಚುವರಿ ಡಿವೈಸ್‌ಗಳಿರುವ ಕೊಠಡಿಯಲ್ಲಿ ಇಂಟರ್ನೆಟ್ ಸಮಸ್ಯೆ ಇದೆ ಎಂದಾದಲ್ಲಿ ಅದನ್ನು ಪರಿಹರಿಸುವ ತಂತ್ರಜ್ಞಾನ ಇಲ್ಲಿದೆ.

ಶೀಘ್ರ ಮಾರುಕಟ್ಟೆಗೆ

ಸ್ಯಾಮ್‌ಸಂಗ್ ಅನ್ವೇಷಣೆ

ಸ್ಯಾಮ್‌ಸಂಗ್ ಈ ಹೊಸ ಅನ್ವೇಷಣೆಯನ್ನು ಶೀಘ್ರದಲ್ಲಿಯೇ ಮಾರುಕಟ್ಟೆಗೆ ಹೊರತರುವ ಯೋಜನೆಯಲ್ಲಿದ್ದು ಅಂತಿಮ ಹಂತದ ಪ್ರಯೋಗಗಳನ್ನು ನಡೆಸುತ್ತಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

ಆಂತರಿಕ ನೆಟ್‌ವರ್ಕ್‌ನ ಗುಣಮಟ್ಟ

ಬ್ರಾಡ್‌ಬ್ಯಾಂಡ್ ಸಂಪರ್ಕ

ನಿಮ್ಮ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಇದು ವೇಗಗೊಳಿಸುವುದಿಲ್ಲ ಬದಲಾಗಿ ನಿಮ್ಮ ಆಂತರಿಕ ನೆಟ್‌ವರ್ಕ್‌ನ ಗುಣಮಟ್ಟವನ್ನು ಇದು ಸುಧಾರಿಸುತ್ತದೆ.

ಟೈಮ್ ವಾರ್ನರ್ ಕೇಬಲ್

ತಂತ್ರಜ್ಞಾನ

ಟೈಮ್ ವಾರ್ನರ್ ಕೇಬಲ್ ಮತ್ತು ಇಂಟರ್ನೆಟ್ ಸರ್ವೀಸ್ ಪ್ರೊವೈಡರ್‌ನಿಂದ ಈ ತಂತ್ರಜ್ಞಾನವನ್ನು ಸಾಧಿಸಲಾಗುತ್ತಿದೆ.

ಟಿವಿ ಮತ್ತು ಡಿವೈಸ್‌ಗಳ ನಡುವೆ

ಫೈಲ್‌ ಹಂಚಿಕೆ

ಈ ತಂತ್ರಜ್ಞಾನವನ್ನು ಬಳಸಿಕೊಂಡು ನಿಮ್ಮ ಟಿವಿ ಮತ್ತು ಡಿವೈಸ್‌ಗಳ ನಡುವೆ ಫೈಲ್‌ಗಳನ್ನು ಹಂಚಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಅಳವಡಿಕೆ

ಮೆಡಿಕಲ್ ಡಿವೈಸ್‌

ಸೆಕೆಂಡ್‌ನಲ್ಲಿ ನೀವು 4.6 ಜಿಬಿ ವೇಗವನ್ನು ಹೊಂದಿದ್ದೀರಿ ಎಂದಾದಲ್ಲಿ ಈ ಅನ್ವೇಷಣೆಯಿಂದ ನೀವು 7ಜಿಬಿ ವೇಗವನ್ನು ಪಡೆದುಕೊಳ್ಳಲಿರುವಿರಿ. ಮೆಡಿಕಲ್ ಡಿವೈಸ್‌ಗಳಿಗೆ ಸ್ಯಾಮ್‌ಸಂಗ್ ಈ ತಂತ್ರಜ್ಞಾನವನ್ನು ಅಳವಡಿಸುವ ನಿಟ್ಟಿನಲ್ಲಿದೆ.

ಹೊಸ ತಂತ್ರಜ್ಞಾನದ ಬಳಸುವಿಕೆ

ಇಂಟರ್ನೆಟ್ ಸಂಬಂಧಿತ ವಿಷಯ

ಟೆಲಿಕಮ್ಯುನಿಕೇಶನ್ ಉಪಕರಣಗಳು, ಆಡಿಯೊ ವಿಶುವಲ್ ಗ್ಯಾಜೆಟ್‌ಗಳು ಸ್ಯಾಮ್‌ಸಂಗ್ ಸ್ಮಾರ್ಟ್‌ ಹೋಮ್ ಅಂತೆಯೇ ಇಂಟರ್ನೆಟ್ ಸಂಬಂಧಿತ ವಿಷಯಗಳಿಗೆ ಇದನ್ನು ಬಳಸಬಹುದು.

ಪ್ರಯೋಜನ

ಶೀಘ್ರ ಲಭ್ಯ

ಕಂಪೆನಿ ಹೇಳುವಂತೆ ಈ ಹೊಸ ಅನ್ವೇಷಣೆಯು ಬಳಕೆದಾರರಿಗೆ ಶೀಘ್ರದಲ್ಲೇ ದೊರಕಲಿದ್ದು ಸ್ಯಾಮ್‌ಸಂಗ್‌ನ ಮುಂದಿನ ಡಿವೈಸ್‌ಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
For all the Wi-Fi users who are complaining about Internet speed, Samsung has finally come up with the breakthrough that will allows users to download a file worth 1 GB under 3 seconds.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot