ನಾಯ್ಸ್‌ ಸಂಸ್ಥೆಯಿಂದ ಹೊಸ ಸ್ಮಾರ್ಟ್‌ವಾಚ್‌ ಲಾಂಚ್‌! 7 ದಿನಗಳ ಬ್ಯಾಟರಿ ಬ್ಯಾಕಪ್‌!

|

ಟೆಕ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ವಾಚ್‌ಗಳಿಗೂ ಕೂಡ ಉತ್ತಮ ಬೇಡಿಕೆ ಇದೆ. ಹೆಲ್ತ್‌ ಫೀಚರ್ಸ್‌ ಆಧಾರಿತ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಸೌಂಡ್‌ ಮಾಡುತ್ತಿವೆ. ಇದೇ ಕಾರಣಕ್ಕೆ ಹಲವು ಜನಪ್ರಿಯ ಬ್ರ್ಯಾಂಡ್‌ಗಳಯ ವೈವಿಧ್ಯಮಯ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ನಾಯ್ಸ್‌ ಕಂಪೆನಿ ಕೂಡ ಒಂದಾಗಿದೆ. ನಾಯ್ಸ್‌ ಕಂಪೆನಿ ತನ್ನ ವಿಶಿಷ್ಟ ಮಾದರಿಯ ಸ್ಮಾರ್ಟ್‌ವಾಚ್‌ಗಳಿಂದ ಗಮನಸೆಳೆದಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಹೊಸ ನಾಯ್ಸ್‌ ಕಲರ್‌ಫಿಟ್‌ ಅಲ್ಟ್ರಾ 2 Buzz ಸ್ಮಾರ್ಟ್ ವಾಚ್ ಲಾಂಚ್‌ ಮಾಡಿದೆ.

ಕಂಪೆನಿ

ಹೌದು, ನಾಯ್ಸ್‌ ಕಂಪೆನಿ ಭಾರತದಲ್ಲಿ ಹೊಸ ನಾಯ್ಸ್‌ ಕಲರ್‌ಫಿಟ್‌ ಅಲ್ಟ್ರಾ 2 Buzz ಸ್ಮಾರ್ಟ್ ವಾಚ್ ಬಿಡುಗಡೆ ಮಾಡಿದೆ. ಇದು ಅಮೋಲೆಡ್‌ ಡಿಸ್‌ಪ್ಲೇ ಮತ್ತು ಬ್ಲೂಟೂತ್ ಕಾಲ್‌ ಎರಡನ್ನು ಹೊಂದಿರುವ ಮೊದಲ ಸ್ಮಾರ್ಟ್‌ವಾಚ್‌ ಇದಾಗಿದೆ ಎಂದು ನಾಯ್ಸ್‌ ಕಂಪನಿ ಹೇಳಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ನಲ್ಲಿ ಕರೆಗಳಿಗೆ ಉತ್ತರಿಸಲು ಇಂಟರ್‌ಬಿಲ್ಟ್‌ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ಸಹ ಅಳವಡಿಸಲಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ನಲ್ಲಿ ಏನೆಲ್ಲಾ ಫೀಚರ್ಸ್‌ಗಳನ್ನು ನೀಡಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕಲರ್‌ಫಿಟ್‌

ನಾಯ್ಸ್‌ ಕಲರ್‌ಫಿಟ್‌ ಅಲ್ಟ್ರಾ 2 Buzz ಸ್ಮಾರ್ಟ್‌ವಾಚ್ 368x448 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 1.78-ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 500 ನಿಟ್ಸ್ ಬ್ರೈಟ್‌ನೆಸ್‌ ಒಳಗೊಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಡಿಸ್‌ಪ್ಲೇಯಲ್ಲಿರುವ AOD ಕಾರ್ಯವು ಬಳಕೆದಾರರಿಗೆ ಸ್ಕ್ರೀನ್ ಟಚ್‌ ಮಾಡದೇ ಸಮಯ, ದಿನಾಂಕ ಮತ್ತು ಸ್ಟೆಪ್ಸ್‌ ಮಾಡಲು ಅನುಮತಿಸುತ್ತದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್‌ v5.3 ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಅಲ್ಲದೆ ಸ್ಮಾರ್ಟ್‌ವಾಚ್‌ನಿಂದ ನೇರವಾಗಿ ಕರೆಗಳನ್ನು ಸ್ವೀಕರಿಸಲು, ತಿರಸ್ಕರಿಸಲು ಮತ್ತು ಸೈಲೆಂಟ್‌ ಆಗಿರಲಿ ಬಳಕೆದಾರರಿಗೆ ಅನುಮತಿಸಲಿದೆ.

ಸ್ಮಾರ್ಟ್‌ವಾಚ್‌

ಈ ಸ್ಮಾರ್ಟ್‌ವಾಚ್‌ ಆಪ್ಟಿಕಲ್ ಹಾರ್ಟ್‌ಬೀಟ್‌ ಸೆನ್ಸಾರ್‌ ಮತ್ತು SpO2 ಬ್ಲಡ್‌ ಆಕ್ಸಿಜನ್‌ ಸೆನ್ಸಾರ್‌ ಅನ್ನು ಹೊಂದಿದೆ. ಇನ್ನು ಈ ವಾಚ್‌ನಲ್ಲಿ ನಾಯ್ಸ್ ಹೆಲ್ತ್ ಸೂಟ್‌ ಅನ್ನು ಕೂಡ ನೀಡಲಾಗಿದೆ. ಇದು ಒತ್ತಡ ಮತ್ತು ನಿದ್ರೆಯ ಮೇಲ್ವಿಚಾರಣೆಯನ್ನು ಮಾಡಲಿದೆ. ಈ ಸ್ಮಾರ್ಟ್ ವಾಚ್ ಆಟೋ ಸ್ಪೋರ್ಟ್ಸ್ ಡಿಟೆಕ್ಷನ್ ಫೀಚರ್ಸ್‌ನೊಂದಿಗೆ 100 ಸ್ಪೋರ್ಟ್ಸ್ ಮೋಡ್‌ಗಳನ್ನು ಸಹ ಒಳಗೊಂಡಿದೆ. ಇದರಲ್ಲಿ ತ್ವರಿತ ಪ್ರತ್ಯುತ್ತರ, ಕರೆ ಮತ್ತು ಮೆಸೇಜ್‌ ನೋಟಿಫಿಕೇಶನ್‌, ಅಲಾರಮ್‌ಗಳು, ರಿಮೈಂಡರ್‌ಗಳು, ರಿಮೋಟ್ ಕ್ಯಾಮರಾ/ಮ್ಯೂಸಿಕ್‌ ಕಂಟ್ರೋಲ್‌ ಮತ್ತು ಸ್ಮಾರ್ಟ್ ಡು-ನಾಟ್-ಡಿಸ್ಟರ್ಬ್‌ನಂತಹ ಫೀಚರ್ಸ್‌ಗಳನ್ನು ಕಾಣಬಹುದು.

ವಾಚ್

ಇದಲ್ಲದೆ ಈ ವಾಚ್‌ನಲ್ಲಿ ಬಳಕೆದಾರರು 100 ಕ್ಕೂ ಹೆಚ್ಚು ಕಸ್ಟಮೈಸ್‌ ಮಾಡಬಹುದಾದ ವಾಚ್ ಫೇಸ್‌ಗಳನ್ನು ಆಯ್ಕೆ ಮಾಡಬಹುದು. ಇದರ ಹೊಸ UI ಮತ್ತು ಸ್ಮಾರ್ಟ್ ವಿಜೆಟ್‌ಗಳ ವೈಶಿಷ್ಟ್ಯವು ಬಳಕೆದಾರರಿಗೆ ತ್ವರಿತ ಶಾರ್ಟ್‌ಕಟ್‌ಗಳನ್ನು ಸೇರಿಸಲು ಅವಕಾಶ ನೀಡುತ್ತದೆ. ಇನ್ನು ಈ ಸ್ಮಾರ್ಟ್‌ವಾಚ್‌ ಇಂಟರ್‌ಬಿಲ್ಟ್‌ ಸ್ಪೀಕರ್ ಮತ್ತು ಮೈಕ್ರೊಫೋನ್ ಅನ್ನು ಒಳಗೊಂಡಿದೆ. ಇದು ಬಳಕೆದಾರರಿಗೆ ಡಯಲ್ ಪ್ಯಾಡ್ ಬಳಸಿ ಕರೆಗಳನ್ನು ಮಾಡಲು ಅನುಮತಿಸುತ್ತದೆ. ಜೊತೆಗೆ ಈ ಸ್ಮಾರ್ಟ್ ವಾಚ್ 290mAh ಸಾಮರ್ಥ್ಯದ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಅದು ಏಳು ದಿನಗಳವರೆಗೆ ಬ್ಯಾಕಪ್ ಅನ್ನು ಒದಗಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ನಾಯ್ಸ್‌ ಕಲರ್‌ಫಿಟ್‌ ಅಲ್ಟ್ರಾ 2 Buzz ಸ್ಮಾರ್ಟ್‌ವಾಚ್‌ 3,499ರೂ. ಬೆಲೆಗೆ ಲಭ್ಯವಿದೆ. ಇದನ್ನು ನೀವು ಅಮೆಜಾನ್‌ ಮತ್ತು ಗೋನಾಯ್ಸ್‌.ಕಾಮ್‌ ಮೂಲಕ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ವಾಚ್‌ ಷಾಂಪೇನ್ ಗ್ರೇ, ಜೆಟ್ ಬ್ಲಾಕ್, ಆಲಿವ್ ಗ್ರೀನ್ ಮತ್ತು ವಿಂಟೇಜ್ ಬ್ರೌನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

Read more about:
English summary
Noise ColorFit Ultra 2 Buzz With Bluetooth Calling Launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X