ನಾಯ್ಸ್‌ ಸಂಸ್ಥೆಯಿಂದ ಹೊಸ TWS ಇಯರ್‌ಬಡ್ಸ್‌ ಬಿಡುಗಡೆ! ಬೆಲೆ 1,599ರೂ.!

|

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸುವ ಬಹುತೇಕ ಮಂದಿ ಜೊತೆಗೊಂದು ಇಯರ್‌ಫೋನ್‌ ಹೊಂದುವುದಕ್ಕೆ ಬಯಸುತ್ತಾರೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಪ್ರತಿಷ್ಠಿತ ಬ್ರ್ಯಾಂಡ್‌ಗಳು ಕೂಡ ವಿವಿಧ ಮಾದರಿಯ ಇಯರ್‌ಬಡ್ಸ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇದರಲ್ಲಿ ನಾಯ್ಸ್‌ ಕಂಪೆನಿ ಕೂಡ ಒಂದಾಗಿದೆ. ನಾಯ್ಸ್‌ ಕಂಪೆನಿ ಈಗಾಗಲೇ ಅನೇಕ ಇಯರ್‌ಬಡ್ಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ತನ್ನ ಹೊಸ ಇಯರ್‌ಬಡ್ಸ್‌ ನಾಯ್ಸ್‌ ಬಡ್ಸ್‌ VS204 TWS ಅನ್ನು ಲಾಂಚ್‌ ಮಾಡಿದೆ.

ನಾಯ್ಸ್‌ ಬಡ್ಸ್‌ VS204 TWS

ಹೌದು, ನಾಯ್ಸ್‌ ಕಂಪೆನಿ ಹೊಸ ನಾಯ್ಸ್‌ ಬಡ್ಸ್‌ VS204 TWS ಅನ್ನು ಪರಿಚಯಿಸಿದೆ. ಇದು ಪಾಕೆಟ್‌ ಸ್ನೇಹಿ ಇಯರ್‌ಬಡ್ಸ್‌ ಆಗಿದ್ದು ಸಿಂಗಲ್‌ ಚಾರ್ಜ್‌ನಲ್ಲಿ ಒಟ್ಟು 50 ಗಂಟೆಗಳ ಪ್ಲೇಬ್ಯಾಕ್ ಮತ್ತು 10 ಗಂಟೆಗಳ ತಡೆರಹಿತ ಪ್ಲೇಟೈಮ್ ಅನ್ನು ನೀಡಲಿದೆ. ಇನ್ನು ಈ ಇಯರ್‌ಬಡ್ಸ್‌ ಎನ್ವಿರಾನ್‌ಮೆಂಟಲ್‌ ಸೌಂಡ್‌ ರಿಡಕ್ಷನ್‌ ಫೀಚರ್ಸ್‌ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಹೊಸ ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನಾಯ್ಸ್‌ ಬಡ್ಸ್‌ VS204

ನಾಯ್ಸ್‌ ಬಡ್ಸ್‌ VS204 ಟ್ರೂಲಿ ವಾಯರ್‌ಲೆಸ್‌ ಸ್ಟೀರಿಯೋ 13mm ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದು ಆಂಡ್ರಾಯ್ಡ್‌ ಮತ್ತು ಐಒಎಸ್‌ ಡಿವೈಸ್‌ನೊಂದಿಗೆ ಹೊಂದಿಕೊಳ್ಳಲಿದೆ. ಇನ್ನು ಈ ಇಯರ್‌ಬಡ್ಸ್‌ SBC ಮತ್ತು AAC ಕೊಡೆಕ್‌ಗಳನ್ನು ಬೆಂಬಲಿಸಲಿದ್ದು, ಕನೆಕ್ಟಿವಿಟಿಗಾಗಿ ಬ್ಲೂಟೂತ್ 5.3 ಬೆಂಬಲವನ್ನು ಹೊಂದಿದೆ. ಇದಲ್ಲದೆ ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್‌ ಅನ್ನು ಬೆಂಬಲವನ್ನು ಕೂಡ ಪಡೆದಿದೆ, ಇನ್ನು ಈ ಇಯರ್‌ಬಡ್ಸ್‌ನಲ್ಲಿ ವಾಲ್ಯೂಮ್, ಮ್ಯೂಸಿಕ್‌, ಕಾಲ್‌ ಕಂಟ್ರೋಲ್‌ಗಾಗಿ ಆನ್-ಇಯರ್ ಟಚ್ ಕಂಟ್ರೋಲ್ ಫೀಚರ್ಸ್‌ ಅನ್ನು ನೀಡಲಾಗಿದೆ.

ನಾಯ್ಸ್ ಬಡ್ಸ್ VS204

ಇನ್ನು ಹೊಸ ನಾಯ್ಸ್ ಬಡ್ಸ್ VS204 ನಾಯ್ಸ ಕ್ಯಾನ್ಸಲೇಶನ್‌ ಅನ್ನು ಹೊಂದಿದೆ. ಇದರಿಂದ ನಿಮಗೆ ತಲ್ಲೀನಗೊಳಿಸುವ ಮ್ಯೂಸಿಕ್‌ ಅನುಭವ ದೊರೆಯಲಿದೆ. ಅಲ್ಲದೆ ತಡೆರಹಿತ ಕರೆ ಮತ್ತು ಪ್ಲೇಬ್ಯಾಕ್‌ಗಾಗಿ ESRTM ವ್ಯವಸ್ಥೆಯನ್ನು ಕೂಡ ಈ ಇಯರ್‌ಬಡ್ಸ್‌ನಲ್ಲಿ ನೀಡಲಾಗಿದೆ. ಅಲ್ಲದೆ ನೀರು ಮತ್ತು ಬೆವರು ಪ್ರತಿರೋಧಕ್ಕಾಗಿ ಇದು IPX4 ಪ್ರಮಾಣೀಕರವನ್ನು ಪಡೆದಿದೆ ಎಂದು ಹೇಳಲಾಗಿದೆ. ಇನ್ನು ಈ ಇಯರ್‌ಬಡ್ಸ್‌ ಹೈಪರ್ ಸಿಂಕ್ TM ಅನ್ನು ಹೊಂದಿರುವುದರಿಂದ ಆಟೋಮ್ಯಾಟಿಕ್‌ ಆಗಿ ಡಿವೈಸ್‌ ಅನ್ನು ಕನೆಕ್ಟ್‌ ಆಗಲಿದೆ.

ನಾಯ್ಸ್‌ ಬಡ್ಸ್‌ VS204 ಸಿಂಗಲ್‌ ಚಾರ್ಜ್‌

ನಾಯ್ಸ್‌ ಬಡ್ಸ್‌ VS204 ಸಿಂಗಲ್‌ ಚಾರ್ಜ್‌ನಲ್ಲಿ ಒಟ್ಟು 50 ಗಂಟೆಗಳ ಪ್ಲೇಟೈಮ್ ಮತ್ತು 10 ಗಂಟೆಗಳವರೆಗಿನ ತಡೆರಹಿತ ಪ್ಲೇಟೈಮ್ ಅನ್ನು ನೀಡಲಿದೆ. ಇದು USB ಟೈಪ್-C ಚಾರ್ಜಿಂಗ್ ಕನೆಕ್ಟರ್‌ ಹೊಂದಿದ್ದು, 10-ನಿಮಿಷಗಳ ಚಾರ್ಜ್‌ನಲ್ಲಿ 120-ನಿಮಿಷ ಪ್ಲೇಟೈಮ್ ನೀಡಲಿದೆ. ಇದಕ್ಕಾಗಿ ಈ ಇಯರ್‌ಬಡ್ಸ್‌ನಲ್ಲಿ ಇನ್‌ಸ್ಟಾಚಾರ್ಜ್‌TM ಅನ್ನು ಅಳವಡಿಸಲಾಗಿದೆ. ಜೊತೆಗೆ ಇದು ಚಾರ್ಜಿಂಗ್ ಕೇಸ್‌ನಲ್ಲಿ ಹೆಚ್ಚುವರಿ 40 ಗಂಟೆಗಳ ಅವಧಿಯನ್ನು ಕೂಡ ನೀಡಲಿದೆ. ಒಟ್ಟಾರೆ ಈ ಇಯರ್‌ಬಡ್ಸ್‌ಗಳು ಫುಲ್‌ ಚಾರ್ಜ್‌ ಆಗುವುದಕ್ಕೆ 60 ನಿಮಿಷಗಳ ಅವಧಿಯನ್ನು ತೆಗೆದುಕೊಳ್ಳಲಿವೆ. ಆದರೆ ಕೇಸ್ ಅನ್ನು ಚಾರ್ಜ್ ಮಾಡಲು 90 ನಿಮಿಷಗಳ ಸಮಯ ಬೇಕಾಗುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ನಾಯ್ಸ್‌ ಬಡ್ಸ್‌ VS204 ಇಯರ್‌ಬಡ್ಸ್‌ ಭಾರತದಲ್ಲಿ 1,599 ರೂ.ಬೆಲೆಯಲ್ಲಿ ಬರಲಿದೆ. ಇದು ಜೆಟ್ ಬ್ಲಾಕ್, ಸ್ಪೇಸ್ ಬ್ಲೂ, ಸ್ನೋ ವೈಟ್ ಮತ್ತು ಮಿಂಟ್ ಗ್ರೀನ್ ಸೇರಿದಂತೆ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ಈ ಇಯರ್‌ಬಡ್ಸ್‌ ಇಂದಿನಿಂದ (ಸೆ.21)ಫ್ಲಿಪ್‌ಕಾರ್ಟ್‌, ಅಮೆಜಾನ್‌ ಮತ್ತು ಗೊನಾಯ್ಸ್‌.ಕಾಮ್‌ನಲ್ಲಿ ಸೇಲ್‌ಗೆ ಬರಲಿದೆ. ಇದು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸೇಲ್‌ಗಳಲ್ಲಿ ಡಿಸ್ಕೌಂಟ್‌ನಲ್ಲಿ ಲಭ್ಯವಾಗಲಿದೆ ಎಂದು ನಾಯ್ಸ್‌ ಕಂಪೆನಿ ಹೇಳಿಕೊಂಡಿದೆ.

Best Mobiles in India

Read more about:
English summary
Noise VS204 TWS with 50 hours of playtime launched in india

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X