ನಾಯ್ಸ್‌ ಕಂಪೆನಿಯ ಈ ಸ್ಮಾರ್ಟ್‌ವಾಚ್‌ನಿಂದ ಭಾರಿ ಸಂಚಲನ! ಏನಿದರ ವಿಶೇಷ!

|

ಟೆಕ್ನಾಲಜಿ ಮುಂದುವರೆದಂತೆ ಸ್ಮಾರ್ಟ್‌ವಾಚ್‌ಗಳ ವಿನ್ಯಾಸ ಸಾಕಷ್ಟು ಬದಲಾಗುತ್ತಿದೆ. ಗ್ರಾಹಕರು ಅಗತ್ಯಗಳಿಗೆ ಅನುಗುಣವಾದ ಮಲ್ಟಿ ಫಂಕ್ಷನ್‌ ಒಳಗೊಂಡ ಸ್ಮಾರ್ಟ್‌ವಾಚ್‌ಗಳು ಇಂದು ಬೇಡಿಕೆ ಪಡೆದುಕೊಂಡಿವೆ. ಇದಕ್ಕೆ ತಕ್ಕಂತೆ ಜನಪ್ರಿಯ ಬ್ರ್ಯಾಂಡ್‌ಗಳು ಕೂಡ ತಮ್ಮ ಸ್ಮಾರ್ಟ್‌ವಾಚ್‌ ವಿನ್ಯಾಸ ಹಾಗೂ ಫೀಚರ್ಸ್‌ಗಳಲ್ಲಿ ಸಾಕಷ್ಟು ಮಾರ್ಪಾಡು ಮಾಡಿದ್ದಾರೆ. ಇದೇ ಸಾಲಿಗೆ ನಾಯ್ಸ್‌ ಕಂಪೆನಿ ಕೂಡ ಸೇರಿದೆ. ಅದರಂತೆ ಇದೀಗ ನಾಯ್ಸ್‌ ಕಂಪೆನಿ ತನ್ನ ಮತ್ತೊಂದು ಹೊಸ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ.

ನಾಯ್ಸ್‌ ಕಂಪೆನಿಯ ಈ ಸ್ಮಾರ್ಟ್‌ವಾಚ್‌ನಿಂದ ಭಾರಿ ಸಂಚಲನ! ಏನಿದರ ವಿಶೇಷ!

ಹೌದು, ಭಾರತದಲ್ಲಿ ನಾಯ್ಸ್‌ಫಿಟ್‌ ಟ್ವಿಸ್ಟ್‌ ಸ್ಮಾರ್ಟ್‌ವಾಚ್‌ ಬಿಡುಗಡೆ ಯಾಗಿದೆ. ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲಿಂಗ್‌ ಫಿಚರ್ಸ್‌ ಅನ್ನು ಒಳಗೊಂಡಿದೆ. ಜೊತೆಗೆ ನೂರಕ್ಕೂ ಹೆಚ್ಚಿನ ಸ್ಪೋರ್ಟ್ಸ್‌ ಮೋಡ್‌ಗಳು, ವಾಚ್‌ ಫೇಸ್‌ಗಳನ್ನು ಪಡೆದುಕೊಂಡಿದೆ. ಇದಲ್ಲದೆ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಫೀಚರ್ಸ್‌ಗಳನ್ನು ಸಹ ನೀಡಲಾಗಿದೆ. ಹಾಗಾದ್ರೆ ನಾಯ್ಸ್‌ ಕಂಪೆನಿಯ ಈ ಹೊಸ ಸ್ಮಾರ್ಟ್‌ವಾಚ್‌ನ ವಿಶೇಷತೆ ಏನು? ಇದರಲ್ಲಿರುವ ಫೀಚರ್ಸ್‌ಗಳ ಕಾರ್ಯವೈಖರಿಯ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಾಯ್ಸ್‌ಫಿಟ್‌ ಟ್ವಿಸ್ಟ್‌ ಸ್ಮಾರ್ಟ್‌ವಾಚ್‌ ಅತ್ಯಾಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ 1.38 ಇಂಚಿನ TFT ರೌಂಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 240x240 ಫಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಡಿಸ್‌ಪ್ಲೇ 246 PPI ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿದೆ. ಇದಲ್ಲದೆ ಡಿಸ್‌ಪ್ಲೇ 550 ನಿಟ್ಸ್ ಬ್ರೈಟ್‌ನೆಸ್ ಅನ್ನು ನೀಡಲಿದೆ.

ನಾಯ್ಸ್‌ ಕಂಪೆನಿಯ ಈ ಸ್ಮಾರ್ಟ್‌ವಾಚ್‌ನಿಂದ ಭಾರಿ ಸಂಚಲನ! ಏನಿದರ ವಿಶೇಷ!

ಇನ್ನು ನಾಯ್ಸ್‌ಫಿಟ್‌ ಟ್ವಿಸ್ಟ್‌ ಸ್ಮಾರ್ಟ್‌ವಾಚ್‌ ಇನ್-ಬಿಲ್ಟ್ ಸ್ಪೀಕರ್‌ಗಳನ್ನು ಒಳಗೊಂಡಿದೆ. ಇದು ಮೈಕ್ರೊಫೋನ್‌ಗಳನ್ನು ಒಳಗೊಂಡಿದ್ದು, ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಅನ್ನು ಬೆಂಬಲಿಸಲಿದೆ. ಇದರಿಂದ ನೀವು ಕರೆಗಳನ್ನು ಸ್ವೀಕರಿಸಬಹುದು, ಅಲ್ಲದೆ ಮ್ಯೂಸಿಕ್‌ ಅನ್ನು ಕಂಟ್ರೋಲ್‌ ಮಾಡುವ ಅವಕಾಶವನ್ನು ನೀಡಲಾಗಿದೆ. ಹಾಗೆಯೇ ಡಯಲ್-ಪ್ಯಾಡ್‌ನಿಂದ ಕರೆ ಮಾಡಲು ಮತ್ತು ಇತ್ತೀಚಿನ ಕರೆಗಳ ಲಾಗ್‌ಗೆ ಪ್ರವೇಶವನ್ನು ಸಹ ನೀಡಲಿದೆ. ಈ ಸ್ಮಾರ್ಟ್‌ವಾಚ್‌ ಪ್ರವಾಸಕ್ಕೆ ಹೋಗುವವರಿಗೆ ಸೂಕ್ತವಾಗಿದೆ.

ನಾಯ್ಸ್‌ಫೀಟ್‌ ಟ್ವಿಸ್ಟ್‌ ಸ್ಮಾರ್ಟ್‌ವಾಚ್‌ ನೀರು ಮತ್ತು ದೂಳಿನಿಂದ ರಕ್ಷಣೆಗಾಗಿ IP68 ರೇಟಿಂಗ್‌ ಅನ್ನು ಪಡದಿದೆ. ಅಲ್ಲದೆ ಈ ಸ್ಮಾರ್ಟ್‌ವಾಚ್‌ ಇನ್‌ಬಿಲ್ಟ್‌ ನಾಯ್ಸ್ ಹೆಲ್ತ್ ಸೂಟ್ ಅನ್ನು ಹೊಂದಿದೆ. ಇದು SPO2 ಲೆವೆಲ್‌, ಹಾರ್ಟ್‌ಬೀಟ್‌ ಸೆನ್ಸಾರ್‌, ಸ್ಲಿಪ್‌ ಟ್ರ್ಯಾಕಿಂಗ್‌, ಬ್ರೀಥಿಂಗ್‌ ಮಾಡೆಲ್‌ ಮತ್ತು ಆಕ್ಟಿವಿಟಿ ಲೆವೆಲ್‌ಗಳನ್ನು ಟ್ರ್ಯಾಕ್‌ ಮಾಡುವ ಅವಕಾಶವನ್ನು ನೀಡಲಿದೆ. ಇದರೊಂದಿಗೆ ಈ ಸ್ಮಾರ್ಟ್‌ವಾಚ್‌ ಕಸ್ಟಮೈಸ್ ಮಾಡಿದ 100 ಸ್ಪೋರ್ಟ್ಸ್‌ ಮೋಡ್‌ಗಳು ಮತ್ತು 100+ ವಾಚ್ ಫೇಸ್‌ಗಳನ್ನು ಹೊಂದಿದೆ.

ನಾಯ್ಸ್‌ ಕಂಪೆನಿಯ ಈ ಸ್ಮಾರ್ಟ್‌ವಾಚ್‌ನಿಂದ ಭಾರಿ ಸಂಚಲನ! ಏನಿದರ ವಿಶೇಷ!

ಬೆಲೆ ಮತ್ತು ಲಭ್ಯತೆ
ನಾಯ್ಸ್‌ಫಿಟ್‌ ಟ್ವಿಸ್ಟ್‌ ಸ್ಮಾರ್ಟ್‌ವಾಚ್‌ ಭಾರತದಲ್ಲಿ 1,999ರೂ. ಬೆಲೆಯಲ್ಲಿ ಬರಲಿದೆ. ಇನ್ನು ಈ ಸ್ಮಾರ್ಟ್ ವಾಚ್ ಕಪ್ಪು, ವೈನ್, ಸಿಲ್ವರ್, ಮಿಡ್ನೈಟ್ ಬ್ಲೂ, ಗೋಲ್ಡ್ ಮತ್ತು ಪಿಂಕ್ ಬಣ್ಣದ ಆಯ್ಕೆಗಳಲ್ಲಿ ದೊರೆಯಲಿದೆ. ಇದು ಅಮೆಜಾನ್‌ ಮತ್ತು ನಾಯ್ಸ್‌ ಕಂಪೆನಿಯ ಅಧಿಕೃತ ವೆಬ್‌ಸೈಟ್‌ನಿಂದ ಖರೀದಿಗೆ ಲಭ್ಯವಾಗಲಿದೆ.

ಇದಲ್ಲದೆ ನಾಯ್ಸ್‌ ಕಂಪೆನಿ ಇತ್ತೀಚಿಗೆ ಹೊಸ ನಾಯ್ಸ್‌ ಬಡ್ಸ್‌ VS204 TWS ಇಯರ್‌ಫೋನ್‌ ಲಾಂಚ್‌ ಮಾಡಿದೆ. ಇದು ಇನ್‌ಸ್ಟಾಚಾರ್ಜ್ ಟಕ್ನಾಲಜಿಯನ್ನು ಹೊಂದಿದ್ದು, ವೇಗದ ಚಾರ್ಜಿಂಗ್ ಬೆಂಬಲಕ್ಕೆ ಮತ್ತೊಂದು ಹೆಸರಾಗಿದೆ. ಇನ್ನು ಈ ಇಯರ್‌ಬಡ್ಸ್‌ 13 ಎಂಎಂ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದಲ್ಲದೆ ಹೈಪರ್‌ಸಿಂಕ್ ಫೀಚರ್ಸ್‌ ಮುಚ್ಚಳವನ್ನು ತೆರೆದ ತಕ್ಷಣ ಸ್ಮಾರ್ಟ್‌ಫೋನ್‌ನೊಂದಿಗೆ ಇಯರ್‌ಫೋನ್‌ಗಳನ್ನು ಕನೆಕ್ಟ್‌ ಮಾಡಲಿದೆ. ಇದು ಅತ್ಯಂತ ಸುಧಾರಿತ ಮತ್ತು ನಿಮ್ಮನ್ನು ತಲ್ಲೀನಗೊಳಿಸುವ ಬಾಸ್ ಅನ್ನು ಪ್ರೊಡ್ಯೂಸ್‌ ಮಾಡಲಿದೆ.

Best Mobiles in India

English summary
Noisefit Twist launched in india under Rs 2000

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X