ಹೊಸ ವಾಚ್‌ ಪರಿಚಯಿಸಿದ ನಾಯ್ಸ್‌ ಕಂಪೆನಿ! ಸ್ಮಾರ್ಟ್‌ವಾಚ್‌ ಪ್ರಿಯರ ಮನಗೆಲ್ಲೊದು ಗ್ಯಾರಂಟಿ!

|

ಇಂದಿನ ಟೆಕ್‌ ಜಗತ್ತಿನಲ್ಲಿ ಸ್ಮಾರ್ಟ್‌ವಾಚ್‌ಗಳ ಆರ್ಭಟ ಜೋರಾಗಿದೆ. ಕೇವಲ ಸಮಯವನ್ನು ಸೂಚಿಸುವುದಕ್ಕೆ ಮಾತ್ರವಲ್ಲ ನಿಮ್ಮ ಆರೋಗ್ಯದ ಮಟ್ಟವನ್ನು ಕೂಡ ಅಳೆಯಬಲ್ಲ ಸ್ಮಾರ್ಟ್‌ವಾಚ್‌ಗಳ ಹಾವಳಿ ಸ್ವಲ್ಪ ಜಾಸ್ತಿನೇ ಇದೆ. ಅದರಲ್ಲೂ ಜನಪ್ರಿಯ ಬ್ರ್ಯಾಂಡ್‌ ಸ್ಮಾರ್ಟ್‌ವಾಚ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಕೂಡ ಇದೆ. ಈ ಸಾಲಿನಲ್ಲಿ ನಾಯ್ಸ್‌ ಕಂಪೆನಿಯ ಸ್ಮಾರ್ಟ್‌ವಾಚ್‌ಗಳು ಕೂಡ ಸೇರಿವೆ. ಅದರಂತೆ ಬಹು ನಿರೀಕ್ಷೆ ಹುಟ್ಟುಹಾಕಿದ್ದ ನಾಯ್ಸ್‌ಫಿಟ್‌ ಟ್ವಿಸ್ಟ್‌ ಸ್ಮಾರ್ಟ್‌ವಾಚ್‌ ಇದೀಗ ಭಾರತಕ್ಕೆ ಎಂಟ್ರಿ ನೀಡಿದೆ.

ನಾಯ್ಸ್‌

ಹೌದು, ನಾಯ್ಸ್‌ ಕಂಪೆನಿ ಭಾರತದಲ್ಲಿ ಹೊಸ ನಾಯ್ಸ್‌ಫಿಟ್‌ ಟ್ವಿಸ್ಟ್‌ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಮೆಟಾಲಿಕ್ ಯುನಿಬಾಡಿಯನ್ನು ಹೊಂದಿದ್ದು, IP68-ರೇಟೆಡ್ ಡಸ್ಟ್‌ ಮತ್ತು ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನು ಪಡೆದಿದೆ. ಇನ್ನು ಸ್ಮಾರ್ಟ್‌ವಾಚ್‌ 1.38 ಇಂಚಿನ LCD ಸ್ಕ್ರೀನ್‌ ಹೊಂದಿದೆ. ಇದು ಬ್ಲೂಟೂತ್ ಕಾಲ್‌ ಫೀಚರ್ಸ್‌ ಒಳಗೊಂಡಿದ್ದು, ಸಿಂಗಲ್‌ ಚಾರ್ಜ್‌ನಲ್ಲಿ ಸುಮಾರು ಏಳು ದಿನಗಳ ಬಾಳಿಕೆ ನೀಡಲಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ವಾಚ್‌ ಫೀಚರ್ಸ್‌ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನಾಯ್ಸ್‌ಫಿಟ್‌

ನಾಯ್ಸ್‌ಫಿಟ್‌ ಟ್ವಿಸ್ಟ್‌ ಸ್ಮಾರ್ಟ್‌ವಾಚ್‌ 1.38-ಇಂಚಿನ ಟಿಎಫ್‌ಟಿ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 550 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲಿಸಲಿದೆ. ಇದು 100 ಕ್ಕೂ ಹೆಚ್ಚು ಕಸ್ಟಮೈಸ್ಡ್‌ ವಾಚ್ ಫೇಸ್‌ಗಳೊಂದಿಗೆ ಬರುತ್ತದೆ. ಸ್ಮಾರ್ಟ್‌ವಾಚ್‌ ಮೆಟಾಲಿಕ್ ಯುನಿಬಾಡಿಯನ್ನು ಹೊಂದಿದ್ದು, ವೃತ್ತಾಕಾರದ ಡಯಲ್ ಅನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ದೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP68-ರೇಟೆಡ್ ಪ್ರಮಾಣಿಕರಣವನ್ನು ಹೊಂದಿದೆ.

ಮೈಕ್ರೊಫೋನ್

ಇನ್ನು ಸ್ಮಾರ್ಟ್‌ವಾಚ್‌ ವಾಚ್‌ನಲ್ಲಿ ಇನ್ ಬಿಲ್ಟ್ ಸ್ಪೀಕರ್ ಮತ್ತು ಮೈಕ್ರೊಫೋನ್ ಅನ್ನು ಕೂಡ ನೀಡಲಾಗಿದೆ. ಇದರಿಂದ ನೀವು ಬ್ಲೂಟೂತ್‌ ಕಾಲಿಂಗ್‌ ಅನ್ನು ಸಮರ್ಪಕವಾಗಿ ಬಳಸುವದಕ್ಕೆ ಸಾಧ್ಯವಾಗಲಿದೆ. ಬ್ಲೂಟೂತ್‌ ಕಾಲಿಂಗ್‌ ಮೂಲಕ ಕಾಲ್‌ ತೆಗೆದುಕೊಳ್ಳುವುದಕ್ಕೆ ಸಹಾಯವಾಗಲಿದೆ. ಇನ್ನು ಸ್ಮಾರ್ಟ್‌ವಾಚ್‌ನಲ್ಲಿ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಸಹ ನೀಡಲಾಗಿದೆ. ಇದರಲ್ಲಿ ಇನ್‌ಬಿಲ್ಟ್‌ ಕ್ಯಾಲ್ಕುಲೇಟರ್, ನೋಟಿಫಿಕೇಶನ್‌ ಡಿಸ್‌ಪ್ಲೇ , ವೆದರ್‌ ಮತ್ತು ಸ್ಟಾಪ್‌ ಅಪ್ಡೇಟ್‌, ಫೋಟೋಸ್‌ ಮತ್ತು ವೀಡಿಯೊಗಳಿಗಾಗಿ ಕ್ಯಾಮರಾಗೆ ರಿಮೋಟ್ ಪ್ರವೇಶ, ಮ್ಯೂಸಿಕ್‌ ಕಂಟ್ರೋಲ್‌ ಫೀಚರ್ಸ್‌ ಸೇರಿವೆ.

ಸ್ಮಾರ್ಟ್‌ವಾಚ್‌

ನಾಯ್ಸ್‌ಫಿಟ್‌ ಟ್ವಿಸ್ಟ್‌ ಸ್ಮಾರ್ಟ್‌ವಾಚ್‌ ಏಳು ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದೆ. ಇದು ಬ್ಲೂಟೂತ್‌ ಕರೆಗಾಗಿ ಟ್ರೂ ಸಿಂಕ್‌ ಟೆಕ್ನಾಲಜಿಯನ್ನು ಒಳಗೊಂಡಿದೆ. ಇದು ಸ್ಪೀಡ್‌ ಕನೆಕ್ಟಿವಿಟಿ, ತಡೆರಹಿತ ಕರೆ ಸಂಪರ್ಕಗಳು ಮತ್ತು ಕಡಿಮೆ ವಿದ್ಯುತ್ ಬಳಕೆಯನ್ನು ನೀಡುತ್ತದೆ. ಇದಲ್ಲದೆ ಸ್ಮಾರ್ಟ್‌ವಾಚ್‌ ಮೂಲಕ ನೀವು ತ್ವರಿತ ಪ್ರತ್ಯುತ್ತರ, ಸ್ಮಾರ್ಟ್ ಡಿಎನ್‌ಡಿ, ರಿಮೈಂಡರ್‌ ಫೀಚರ್ಸ್‌ಗಳನ್ನು ಕೂಡ ಕಾಣಬಹುದು. ಹಾಗೆಯೇ ಸಂಪರ್ಕಗಳು, ಕಾಲ್‌ ಹಿಸ್ಟರಿ ಮತ್ತು ಡಯಲ್ ಪ್ಯಾಡ್‌ಗೆ ಪ್ರವೇಶವನ್ನು ಸಹ ಅನುಮತಿಸುತ್ತದೆ. ಜೊತೆಗೆ ಈ ಡಿವೈಸ್‌ನಲ್ಲಿ ಹೃದಯ ಬಡಿತದ ಮಾನಿಟರಿಂಗ್, SpO2 ಸೆನ್ಸಿಂಗ್, ನಿದ್ರೆಯ ಮಾದರಿಗಳು ಮತ್ತು ಒತ್ತಡದ ಮಾನಿಟರಿಂಗ್ ಸೇರಿದಂತೆ 100ಕ್ಕೂ ಹೆಚ್ಚಿ ಸ್ಪೋರ್ಟ್ಸ್‌ ಮೋಡ್‌ಗಳನ್ನು ನೀಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ನಾಯ್ಸ್‌ಫಿಟ್‌ ಟ್ವಿಸ್ಟ್‌ ಸ್ಮಾರ್ಟ್‌ವಾಚ್‌ ಭಾರತದಲ್ಲಿ ಅಗ್ಗದ ಬೆಲೆಯಲ್ಲಿ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ವಾಚ್‌ನ ಬೆಲೆ ಕೇವಲ 1,999ರೂ. ಆಗಿದ್ದು, ಇದೇ ಜನವರಿ 12 ರಿಂದ ಬ್ರ್ಯಾಂಡ್‌ನ ಇ-ಸ್ಟೋರ್ ಮತ್ತು ಅಮೆಜಾನ್ ಮೂಲಕ ಮಾರಾಟವಾಗಲಿದೆ. ಇನ್ನು ಸ್ಮಾರ್ಟ್‌ವಾಚ್‌ ಗ್ರಾಹಕರಿಗೆ ಟ್ವಿಸ್ಟ್ ಜೆಟ್ ಬ್ಲಾಕ್, ಸಿಲ್ವರ್ ಗ್ರೇ, ರೋಸ್ ಪಿಂಕ್, ಸ್ಪೇಸ್ ಬ್ಲೂ ಮತ್ತು ಗೋಲ್ಡ್ ವೈನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

Best Mobiles in India

English summary
NoiseFit Twist With Bluetooth calling launched in India: Price, Specifications

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X