Subscribe to Gizbot

ಮಾರುಕಟ್ಟೆಯಲ್ಲಿ ನೋಕಿಯಾ 1 ಸ್ಮಾರ್ಟ್ ಫೋನ್ ಮಾರಾಟ ಶುರು..!

Posted By: Precilla Dias

ನೋಕಿಯಾ ಭಾರತೀಯ ಮಾರುಕಟ್ಟೆಗಾಗಿಯೇ ಸ್ಮಾರ್ಟ್ ಫೋನ್ ಗಳನ್ನು ನಿರ್ಮಿಸಲು ಮುಂದಾಗಿದ್ದು, ಈ ಹಿನ್ನಲೆಯಲ್ಲಿ ನೋಕಿಯಾ 1 ಅನ್ನು ಲಾಂಚ್ ಮಾಡಿದೆ, ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ಗೋ ನಲ್ಲಿ ಕಾರ್ಯನಿರ್ವಹಿಸಲಿದ್ದು, ರೂ..5499ಕ್ಕೆ ಮಾರಾಟವಾಗುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಗೋ ಆವೃತ್ತಿಯ ಸ್ಮಾರ್ಟ್ ಫೋನ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದು, ಇವುಗಳಿಗೆ ನೋಕಿಯಾ 1 ಸೆಡ್ಡು ಹೊಡೆಯಲಿದೆ.

ಮಾರುಕಟ್ಟೆಯಲ್ಲಿ ನೋಕಿಯಾ 1 ಸ್ಮಾರ್ಟ್ ಫೋನ್ ಮಾರಾಟ ಶುರು..!

ನೋಕಿಯಾ 1 ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ಒರಿಯೊ (ಗೋ ಆವೃತ್ತಿ)ಯಲ್ಲಿ ಕಾರ್ಯನಿರ್ವಹಿಸಲಿದ್ದು, 4G LTE ಸೌಲಭ್ಯವನ್ನು ಹೊಂದಿದೆ ಎನ್ನಲಾಗಿದೆ. ಇದರಲ್ಲಿ ಗೂಗಲ್ ಬಿಡುಗಡೆ ಮಾಡಿರುವ ಗೋ ಆವೃತ್ತಿಯ ಆಪ್ ಗಳನ್ನು ಕಾಣಬಹುದಾಗಿದ್ದು, ಲೈಟ್ ಆವೃತ್ತಿಯಲ್ಲಿ ಕಾರ್ಯನಿರ್ಹಿಸಲಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಶೇಷತೆಗಳು:

ವಿಶೇಷತೆಗಳು:

ನೋಕಿಯಾ 1 ಸ್ಮಾರ್ಟ್ ಫೋನ್ ನಲ್ಲಿ 4.5 FWVGA ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, 1.1 GHx ವೇಗದ ಮಿಡಿಯಾ ಟೆಕ್ MT6737M ಪ್ರೋಸೆಸರ್ ಅನ್ನು ಹೊಂದಿದೆ ಮತ್ತು 1GB RAM ಮತ್ತು 8GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳಲಿದೆ. ಇದಲ್ಲದೇ ಇದರಲ್ಲಿ ಆಡ್ರಿನೋ 304 ಜಿಪಿಯು ಸಹ ಅಳವಡಿಸಲಾಗಿದ್ದು, ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128 ಜಿಬಿ ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಇನ್ನು ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ 5 ಎಂಪಿ ಕ್ಯಾಮೆರಾವನ್ನು ನೀಡಲಾಗಿದ್ದು, ಮುಂಭಾಗದಲ್ಲಿ 2 ಎಂಪಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ 2150mAh ಬ್ಯಾಟರಿಯನ್ನು ಇದರಲ್ಲಿ ಕಾಣಬಹುದಾಗಿದೆ.

ಆಫರ್:

ಆಫರ್:

ಇದಲ್ಲದೇ ನೋಕಿಯಾ 1 ಸ್ಮಾರ್ಟ್ ಪೋನ್ ಮೇಲೆ ಜಿಯೋ ರೂ.2200 ಕ್ಯಾಷ್ ಬ್ಯಾಕ್ ನೀಡಲಿದ್ದು, ಇದರಿಂದಾಗಿ ಈ ಸ್ಮಾರ್ಟ್ ಪೋನ್ ರೂ.3299ಕ್ಕೆ ಮಾರಾಟವಾಗಲಿದೆ. ಅಲ್ಲದೇ ಇದಲ್ಲದೆ ಈ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಜಿಯೋ 60GB ಡೇಟಾವನ್ನು ಸಹ ಬಳಕೆಗೆ ನೀಡಲಿದೆ.

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?
ಬಣ್ಣ ಬಣ್ಣದ ಬ್ಯಾಕ್ ಕವರ್:

ಬಣ್ಣ ಬಣ್ಣದ ಬ್ಯಾಕ್ ಕವರ್:

ಇದರೊಂದಿಗೆ ನೋಕಿಯಾ 1 ಸ್ಮಾರ್ಟ್ ಫೋನ್ ಜೊತೆಗೆ ಎಕ್ಸಪ್ರೆಸ್ ಇಂಟರ್ ಜೆಂಜಬಲ್ ಬ್ಯಾಕ್ ಕವರ್ ಗಳನ್ನು ಕಾಣಬಹುದಾಗಿದ್ದು, ರೂ.450ಕ್ಕೆ ಈ ಬಣ್ಣ ಬಣ್ಣದ ಬ್ಯಾಕ್ ಕವರ್ ಗಳು ದೊರೆಯಲಿದೆ. ನಿಮ್ಮ ಇಷ್ಟದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಹುವಾವೆ P20 ಸ್ಮಾರ್ಟ್ ಫೋನ್ ಮಾಹಿತಿ ಲೀಕ್..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Nokia 1, the Android Oreo (Go Edition) smartphones unveiled at MWC 2018 in Barcelona last month has been launched in India for Rs. 5,499. The sale of the Nokia 1 will debut on March 28 with several attractive launch offers. There will be separate Xpress On polycarbonate covers at Rs. 450.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot