ನೋಕಿಯಾ 5 ಮತ್ತು ನೋಕಿಯಾ 6 ಗೆ ಲಭಿಸಿದೆ ಆಂಡ್ರಾಯ್ಡ್ 8.1 ಓರಿಯೋ ಅಪ್ಡೇಟ್!

By Tejaswini P G

  HMD ಗ್ಲೋಬಲ್ ಸಂಸ್ಥೆಯ ನೋಕಿಯಾ 5 ಮತ್ತು ನೋಕಿಯಾ 6 ಸ್ಮಾರ್ಟ್ಫೋನ್ ಗಳು ಗೂಗಲ್ ನ ಇತ್ತೀಚಿನ ಆಂಡ್ರಾಯ್ಡ್ ಓಎಸ್ ನ ಆವೃತ್ತಿಯನ್ನು ಪಡೆಯಲು ಪ್ರಾರಂಭಿಸಿದೆ. HMD ಗ್ಲೋಬಲ್ ಸಂಸ್ಥೆಯು ಭಾರತವನ್ನೊಳಗೊಂಡಂತೆ ಇನ್ನೂ ಹಲವು ದೇಶಗಳಲ್ಲಿ ಈ ಸ್ಮಾರ್ಟ್ಫೋನ್ ಬಳಕೆದಾರರಿಗೆ ಆಂಡ್ರಾಯ್ಡ್ 8.1 ಓರಿಯೋ ಅಪ್ಡೇಟ್ ನೀಡಲು ಪ್ರಾರಂಭಿಸಿದೆ. ನ್ಯೂರಲ್ ನೆಟ್ವರ್ಕ್ಸ್ API, ಹ್ಯಾಮ್ಬರ್ಗರ್ ಇಮೋಜಿ ಫಿಕ್ಸ್, ಡೆವಲಪರ್ API ಗಳು(API ಲೆವೆಲ್ 27) ಅಲ್ಲದೆ ಇತ್ತೀಚಿನ ಆಪ್ಟಿಮೈಸೇಶನ್ ಗಳು, ಬಗ್ ಫಿಕ್ಸ್ ಗಳು, ಸೆಕ್ಯೂರಿಟಿ ಪ್ಯಾಚ್ ಗಳು ಮೊದಲಾದ ಹೊಸ ಫೀಚರ್ಗಳನ್ನು ಈ ನೂತನ ಆಂಡ್ರಾಯ್ಡ್ 8.1 ನಲ್ಲಿ ನೀಡಲಾಗಿದೆ.

  ನೋಕಿಯಾ 5 ಮತ್ತು ನೋಕಿಯಾ 6 ಗೆ ಲಭಿಸಿದೆ ಆಂಡ್ರಾಯ್ಡ್ 8.1 ಓರಿಯೋ ಅಪ್ಡೇಟ್!

  ಈ ಅಪ್ಡೇಟ್ ನಲ್ಲಿ ಬ್ಯಾಟರಿ ಉಳಿತಾಯ ಮಾಡುವ ನ್ಯಾವಿಗೇಶನ್ ಬಟನ್ಗಳು, ನೂತನ ಪವರ್ ಮೆನು, ಹೊಸ ಸೆಟ್ಟಿಂಗ್ಸ್ ಮೆನು, ಬ್ಲೂಟೂತ್ ಬ್ಯಾಟರಿ ಪರ್ಸೆಂಟೇಜ್ ಮೊದಲಾದ ಫೀಚರ್ಗಳನ್ನು ಕೂಡ ನೀಡಲಾಗಿದೆ ಎಂದು ಚೇಂಜ್ ಲಾಗ್ ಮೂಲಕ ತಿಳಿಯಬಹುದಾಗಿದೆ. ಈ ಆಂಡ್ರಾಯ್ಡ್ 8.1 ಅಪ್ಡೇಟ್ ನೋಕಿಯಾ 5 ಗೆ 866MB ಅಷ್ಟು ದೊಡ್ಡದಾಗಿದ್ದು ನೋಕಿಯಾ 6 ಗೆ 933MB ಗಾತ್ರವನ್ನು ಹೊಂದಿದೆ. ಅಲ್ಲದೆ ಈ ಅಪ್ಡೇಟ್ ಮಾರ್ಚ್ 2018 ರ ಸೆಕ್ಯೂರಿಟಿ ಅಪ್ಡೇಟ್ ಅನ್ನು ಕೂಡ ಜೊತೆಯಾಗಿ ಹೊಂದಿದೆ.

  ನೋಕಿಯಾ 5 ನ ಫೀಚರ್ಗಳನ್ನು ಮತ್ತೊಮ್ಮೆ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳೋಣ. 5.2 ಇಂಚ್ HD 720p IPS LCD ಡಿಸ್ಪ್ಲೇ ಹೊಂದಿರುವ ನೋಕಿಯಾ 5 ಅಂಡ್ರಾಯ್ಡ್ 7.0 ನುಗಾಟ್ ಓಎಸ್ ಮತ್ತು ಒಕ್ಟಾ-ಕೋರ್ ಸ್ನ್ಯಾಪ್ಡ್ರಾಗನ್ 430 SoC ಹೊಂದಿದೆ. ಈ ಪ್ರಾಸೆಸರ್ ಜೊತೆಗೆ 2GB RAM ಮತ್ತು 16GB ಸ್ಟೋರೇಜ್ ಸ್ಪೇಸ್ ಇದ್ದು, ಮೈಕ್ರೋSD ಕಾರ್ಡ್ ಬಳಸಿ ಇದನ್ನು 128GB ವರೆಗೆ ವಿಸ್ತರಿಸಬಹುದಾಗಿದೆ.

  ನೋಕಿಯಾ 5 ನ ಕ್ಯಾಮೆರಾ ಕುರಿತು ಹೇಳುವುದಾದರೆ ಇದರಲ್ಲಿದೆ 13MP ಪ್ರೈಮರಿ ಕ್ಯಾಮೆರಾ f/2.0 ಅಪರ್ಚರ್, PDAF ಮತ್ತು ಡ್ಯುಯಲ್-LED ಫ್ಲ್ಯಾಶ್ ಸಹಿತ. ಅಲ್ಲದೆ 8MP ಸೆಲ್ಫೀ ಕ್ಯಾಮೆರಾ ಇದ್ದು ಇದರ ಅಪರ್ಚರ್ ಕೂಡ f/2.0 ಆಗಿದೆ. ಇನ್ನು ಇದರ ಬ್ಯಾಟರಿ 3000mAh ಸಾಮರ್ಥ್ಯವನ್ನು ಹೊಂದಿದೆ.

  ನೋಕಿಯಾ 6 ಸ್ಮಾರ್ಟ್ಫೋನ್ 5.5ಇಂಚ್ FHD 1080p IPS LCD ಡಿಸ್ಪ್ಲೇ ಹೊಂದಿದೆ. ಒಕ್ಟಾ-ಕೋರ್ ಸ್ನ್ಯಾಪ್ಡ್ರಾಗನ್ 430 SoC ಹೊಂದಿರುವ ನೋಕಿಯಾ 6 ಜೊತೆಗೆ 2GB RAM ಮತ್ತು 32GB ಸ್ಟೋರೇಜ್ ಸ್ಪೇಸ್ ಹೊಂದಿದೆ. ಮೈಕ್ರೋSD ಕಾರ್ಡ್ ಬಳಸಿ ಇದನ್ನು 128GB ವರೆಗೆ ವಿಸ್ತರಿಸಬಹುದಾಗಿದೆ.

  How to Check Your Voter ID Card Status (KANNADA)
  ನೋಕಿಯಾ 6 ನಲ್ಲಿ 16MP ಪ್ರೈಮರಿ ಕ್ಯಾಮೆರಾ ಇದ್ದು,PDAF ಮತ್ತು ಡ್ಯುಯಲ್-LED ಫ್ಲ್ಯಾಶ್ ಹೊಂದಿದೆ.ಅಲ್ಲದೆ 8MP ಸೆಲ್ಫೀ ಶೂಟರ್ ಕೂಡ ಇದರಲ್ಲಿದೆ. ಈ ಎರಡೂ ಕ್ಯಾಮೆರಾ ಗಳ ಅಪರ್ಚರ್ f/2.0 ಆಗಿದೆ.

  ವಾಟ್ಸ್‌ಆಪ್ ಬಳಕೆದಾರರೇ ಎಚ್ಚರ ಮಾರುಕಟ್ಟೆಗೆ ಬಂದಿದೆ ನಕಲಿ ಆಪ್‌..!

  ಆಂಡ್ರಾಯ್ಡ್ 7.0 ನುಗಾಟ್ ಓಎಸ್ ಹೊಂದಿರುವ ನೋಕಿಯಾ 6 ಡ್ಯುಯಲ್ ಸ್ಪೀಕರ್ಗಳು, NFC, OTG , ಫಿಂಗರ್ಪ್ರಿಂಟ್ ಸೆನ್ಸರ್ ನಂತಹ ಫೀಚರ್ಗಳನ್ನು ಹೊಂದಿದೆ. ಅಲ್ಲದೆ ನೋಕಿಯಾ 6 3000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವನ್ನೂ ಇದು ಹೊಂದಿದೆ.

  ಅಷ್ಟೇ ಅಲ್ಲದೆ ಶೀಘ್ರದಲ್ಲಿಯೇ ನೋಕಿಯಾ 2 ಮತ್ತು ನೋಕಿಯಾ 3 ಮೊಬೈಲ್ಗಳೂ ಕೂಡ ಆಂಡ್ರಾಯ್ಡ್ 8.1 ಓರಿಯೋ ಅಪ್ಡೇಟ್ ಅನ್ನು ಪಡೆಯಲಿದೆ ಎಂದು HMD ಗ್ಲೋಬಲ್ ಸಂಸ್ಥೆಯು ತಿಳಿಸಿದೆ.

  English summary
  Nokia 5 and Nokia 6 have started receiving the latest iteration of Google's Android OS. HMD Global is now rolling out the Android 8.1 Oreo update for the smartphones' users in several countries including India. Android 8.1 brings a slew of new features such as Neural Networks API, hamburger emoji fix and developer APIs (API level 27), and many more.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more