Subscribe to Gizbot

ನೋಕಿಯಾದಿಂದ ಈ ತಿಂಗಳಿನಲ್ಲಿ ಮೂರು ಹೊಸ ಸ್ಮಾರ್ಟ್ ಫೋನ್ ಲಾಂಚ್..!

Posted By: Precilla Dias

ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ ಅಬ್ಬರ ಹೆಚ್ಚಾಗಿದೆ. ಈಗಾಗಲೇ ಹಲವಾರು ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದಕ್ಕೆ ಇನ್ನೇರಡು ಹೊಸ ಸ್ಮಾರ್ಟ್ ಫೋನ್ ಸೇರಿಕೊಳ್ಳಲಿದೆ. ಇದೇ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಎರಡು ಫೋನ್ ಗಳು ಲಾಂಚ್ ಆಗಲಿದೆ.

ನೋಕಿಯಾದಿಂದ ಈ ತಿಂಗಳಿನಲ್ಲಿ ಮೂರು ಹೊಸ ಸ್ಮಾರ್ಟ್ ಫೋನ್ ಲಾಂಚ್..!

ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ನೋಕಿಯಾ 6 ಮತ್ತೊಮ್ಮೆ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದೆ. ಇದರೊಂದಿಗೆ ಆಂಡ್ರಾಯ್ಡ್ ಗೋ ಆವೃತ್ತಿಯ ನೋಕಿಯಾ 1 ಸ್ಮಾರ್ಟ್ ಫೋನ್ ಸಹ ಬಿಡುಗಡೆಯಾಗಲಿದೆ. ಇದಲ್ಲದೇ ಟಾಪ್ ಎಂಡ್ ಸ್ಮಾರ್ಟ್ ಫೋನ್ ನೋಕಿಯಾ 9 ಸಹ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್ ಪೋನ್ ಗಳೊಂದಿಗೆ ಸ್ಪರ್ಧೆಯನ್ನು ನೀಡುವ ಸಲುವಾಗಿ ನೋಕಿಯಾ 1 ಸ್ಮಾರ್ಟ್ ಪೋನ್ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದು, ಅತ್ಯಂತ ಕಡಿಮೆ ಬೆಲೆಗೆ ದೊರೆಯಲಿದೆ ಎನ್ನಲಾಗಿದೆ.

ಈ ಸ್ಮಾರ್ಟ್ ಫೋನ್ ಗಳು ಫೆಬ್ರವರಿ ಅಂತ್ಯದಲ್ಲಿ ಲಾಂಚ್ ಆಗಲಿದ್ದು, ಇದಾದ ನಂತರದಲ್ಲಿ ಈ ಸ್ಮಾರ್ಟ್ ಗಳು ಎಪ್ರಿಲ್ ನಲ್ಲ ಮಾರುಕಟ್ಟೆಯಲ್ಲಿ ಗ್ರಾಹಕರ ಖರೀದಿಗೆ ಮುಕ್ತವಾಗಲಿದೆ. ಈ ಮೂರು ಸ್ಮಾರ್ಟ್ ಪೋನ್ ಮೂರು ವಿಭಿನ್ನ ವರ್ಗದಾಗಿದೆ. ಬೆಲೆ ಹಾಗೂ ವಿಶೇಷತೆಯ ವಿಚಾರದಲ್ಲಿಯೂ ಭಾರೀ ಬದಲಾವಣೆಯನ್ನು ಹೊಂದಿವೆ.

ನೋಕಿಯಾ 9 ಟಾಪ್ ಎಂಡ್ ಫೋನ್ ಆಗಲಿದ್ದು, ಇದರಲ್ಲಿ 12 MP+ 13 MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಅಲ್ಲದೇ 55 ಇಂಚಿನ OLED ಡಿಸ್ ಪ್ಲೇಯನ್ನು ಅಳವಡಿಸಲಾಗಿದೆ. ವೇಗದ ಪ್ರೋಸೆಸರ್ ಮತ್ತು ದೊಡ್ಡ ಬ್ಯಾಟರಿಯನ್ನು ಸಹ ನಾವು ಇಲ್ಲಿ ನೋಡಬಹುದಾಗಿದೆ.

ಶಾಕಿಂಗ್ ನ್ಯೂಸ್!!..ವಿಶ್ವಕ್ಕೆ ತಿಳಿಯದಂತೆ ಭಾರತದಲ್ಲಿಯೇ ತಯಾರಾಗಿದೆ 'ರೆಡ್ ಮಿ ನೋಟ್ 5'!!

Read more about:
English summary
The three smartphones mentioned are Nokia 6 (2018), Nokia 1 and the Nokia 9, which will likely be the flagship smartphone of the year. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot