ಭಾರತದಲ್ಲಿ ನೋಕಿಯಾ 8210 4G ಫೀಚರ್‌ ಫೋನ್‌ ಬಿಡುಗಡೆ! ಬೆಲೆ ಎಷ್ಟು?

|

ಮೊಬೈಲ್‌ ಮಾರುಕಟ್ಟೆಯಲ್ಲಿ ನೋಕಿಯಾ ಕಂಪೆನಿ ಇಂದಿಗೂ ಎವರ್‌ಗ್ರೀನ್‌ ಬ್ರ್ಯಾಂಡ್‌ ಎನಿಸಿಕೊಂಡಿದೆ. ತನ್ನ ವಿಶೇಷ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಹಲವು ಆಕರ್ಷಕ ಫೀಚರ್ಸ್‌ ಫೋನ್‌ಗಳ ಮೂಲಕ ಗುರುತಿಸಿಕೊಂಡಿದೆ. ಸದ್ಯ ಭಾರತದಲ್ಲಿ ನೋಕಿಯಾ ಕಂಪೆನಿಯ ಹೊಸ ಫೀಚರ್ ಫೋನ್ ನೋಕಿಯಾ 8210 4G ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ HMD ಗ್ಲೋಬಲ್ ಹೊಸ ಕ್ಯಾಂಡಿ ಬಾರ್ ಫಾರ್ಮ್ಯಾಟ್ ಫೋನ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

ನೋಕಿಯಾ

ಹೌದು, ನೋಕಿಯಾ ಕಂಪೆನಿ ಭಾರತದಲ್ಲಿ ಹೊಸ ನೋಕಿಯಾ 8210 4G ಫೀಚರ್‌ ಫೋನ್‌ ಪರಿಚಯಿಸಿದೆ. ಈ ಮೂಲಕ ಫೀಚರ್‌ ಫೋನ್‌ ಮಾರುಕಟ್ಟೆಯಲ್ಲಿ ಮತ್ತೆ ಸಂಚಲನ ಸೃಷ್ಟಿಸಿದೆ. ಫೀಚರ್‌ ಫೋನ್‌ ಮಾರುಕಟ್ಟೆಯಲ್ಲಿ ಇಂದಿಗೂ ಮುಂಚೂಣಿಯಲ್ಲಿರುವ ನೋಕಿಯಾ ಕಂಪೆನಿ ನೋಕಿಯಾ 8210 4G ಫೀಚರ್‌ ಫೋನ್‌ ಮೂಲಕ ಸಖತ್‌ ಸೌಂಡ್‌ ಮಾಡ್ತಿದೆ. ಇನ್ನು ಈ ಫೀಚರ್‌ ಫೋನ್‌ ನೂತನವಾದ ವಿನ್ಯಾಸವನ್ನು ಹೊಂದಿದ್ದು ನೋಡುವುದಕ್ಕೆ ಆಕರ್ಷಕವಾಗಿದೆ. ಇದು ತೆಗೆಯಬಹುದಾದ ಬ್ಯಾಟರಿಯನ್ನು ಒಳಗೊಂಡ ಫೋನ್‌ ಆಗಿದೆ.

ನೋಕಿಯಾ 8210 4G ಫೀಚರ್‌ ಫೋನ್‌

ಇನ್ನು ನೋಕಿಯಾ 8210 4G ಫೀಚರ್‌ ಫೋನ್‌ ಸಿಂಗಲ್‌ ರಿಯರ್‌ ಕ್ಯಾಮೆರಾವನ್ನು ಒಳಗೊಂಡಿದೆ. ಕ್ಯಾಂಡಿ ಬಾರ್‌ ಫಾರ್ಮ್ಯಾಟ್‌ ಫೋನ್‌ ಇದಾಗಿದ್ದು, ಉತ್ತಮ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಈ ಫೋನಿನ ಬ್ಯಾಟರಿ ಸುಮಾರು ಒಂದು ತಿಂಗಳ ಸ್ಟ್ಯಾಂಡ್‌ ಬೈ ಟೈಂ ಅನ್ನು ನೀಡಲಿದೆ ಎಂದು ಹೇಳಲಾಗಿದೆ. ಇನ್ನು ನೋಕಿಯಾ 8210 4G ಫೀಚರ್‌ ಫೋನ್‌ ಯುನಿಸೋಕ್‌ SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಮೈಕ್ರೋ SD ಕಾರ್ಡ್ ಸ್ಲಾಟ್‌ಗೆ ಬೆಂಬಲವನ್ನು ನೀಡಲಿದೆ. ಇನ್ನುಳಿದಂತೆ ಈ ಫೀಚರ್‌ ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೋಕಿಯಾ 8210 4G ಫೋನ್‌ ಫೀಚರ್ಸ್‌

ನೋಕಿಯಾ 8210 4G ಫೋನ್‌ ಫೀಚರ್ಸ್‌

ನೋಕಿಯಾ 8210 4G ಫೀಚರ್‌ ಫೋನ್‌ 2.8 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ QVGA ರೆಸಲ್ಯೂಶನ್‌ ಅನ್ನು ಪಡೆದುಕೊಂಡಿದೆ. ಇನ್ನು ಈ ಫೀಚರ್‌ ಫೋನ್‌ Unisoc T107 SoC ಪ್ರೊಸೆಸರ್‌ ಬಲವನ್ನು ಹೊಂದಿದ್ದು, 30+ ಆಪರೇಟಿಂಗ್ ಸಿಸ್ಟಮ್‌ನಿಂದ ಚಾಲಿತವಾಗಿದೆ. ಹಾಗೆಯೇ 48 MB RAM ಮತ್ತು 128 MB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 32GB ವರೆಗೆ ಸ್ಟೋರೇಜ್‌ ಅನ್ನು ವಿಸ್ತರಣೆ ಮಾಡಬಹುದಾಗಿದೆ.

ನೋಕಿಯಾ

ಇನ್ನು ನೋಕಿಯಾ 8210 4G ಫೀಚರ್‌ ಫೋನ್‌ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದ್ದು, ಈ ಕ್ಯಾಮರಾ 0.3-ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಈ ಫೋನ್ FM ಸ್ಟ್ರೀಮಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು mp3 ಮೀಡಿಯಾ ಪ್ಲೇಯರ್‌ಗೆ ಬೆಂಬಲವನ್ನು ಸಹ ಪಡೆಯುತ್ತದೆ. MP3 ಪ್ಲೇಯರ್ ಪ್ಲೇಯರ್‌ ಮೂಲಕ ಮ್ಯೂಸಿಕ್‌ ಆಲಿಸಬೇಕಾದರೆ ನೀವು ಮೆಮೊರಿ ಕಾರ್ಡ್‌ ಅನ್ನು ಹೊಂದಿರಬೇಕಾಗುತ್ತದೆ. ಇಲ್ಲದೆ ಈ ಫೋನಿನಲ್ಲಿ FM ರೇಡಿಯೋ ಬೆಂಬಲವನ್ನು ಕೂಡ ನೀಡಲಾಗಿದ್ದು, ವೈರ್ಡ್‌ ಮತ್ತು ವಾಯರ್‌ಲೆಸ್‌ ಮೂಲಕ ಕೂಡ ನೀವು ಮ್ಯೂಸಿಕ್‌ ಅನ್ನು ಆಲಸಿಬಹುದು.

ನೋಕಿಯಾ

ನೋಕಿಯಾ 8210 4G ಫೀಚರ್‌ ಫೋನ್‌ 1,450mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 2.75 W ಚಾರ್ಜಿಂಗ್‌ ವೇಗವನ್ನು ಬೆಂಬಲಿಸಲಿದೆ. ಇನ್ನು ಈ ಬ್ಯಾಟರಿಯನ್ನು ನೀವು ತೆಗೆದುಹಾಕುವುದಕ್ಕೆ ಕೂಡ ಅವಕಾಶವನ್ನು ಹೊಂದಿದೆ. ಇದಲ್ಲದೆ ಈ ಬ್ಯಾಟರಿ ನಿಮಗೆ ಒಟ್ಟು 27 ದಿನಗಳ ಬ್ಯಾಟರಿ ಸ್ಟ್ಯಾಂಡ್‌ಬೈ ಟೈಂ ಅನ್ನು ಸಮಯವನ್ನು ಒದಗಿಸುತ್ತದೆ ಎನ್ನಲಾಗಿದೆ. ಅಂದರೆ ಸಿಂಗಲ್‌ ಚಾರ್ಜ್‌ನಲ್ಲಿ ಸರಿ ಸುಮಾರು ಒಂದು ತಿಂಗಳ ಸ್ಟ್ಯಾಂಡ್‌ಬೈ ಟೈಂ ಅನ್ನು ನೀಡಲಿದೆ. ಜೊತೆಗೆ ಈ ಫೋನ್‌ ಪವರ್, ನಂಬರ್‌ ಕೀಗಳು, ಫಂಕ್ಷನ್ ಕೀಗಳನ್ನು ಒಳಗೊಂಡಿದೆ.

ಫೀಚರ್‌

ನೋಕಿಯಾ 8210 4G ಫೀಚರ್‌ ಫೋನ್ 3.5 ಎಂಎಂ ಆಡಿಯೊ ಜಾಕ್ ಅನ್ನು ಸಹ ಒಳಗೊಂಡಿದೆ. ಈ ಡಿವೈಸ್‌ ಬ್ಲೂಟೂತ್ ಕನೆಕ್ಟಿಯನ್ನು ಸಹ ಬೆಂಬಲಿಸಲಿದೆ. ಜೊತೆಗೆ ಈ ಫೀಚರ್‌ ಫೋನ್‌ ಡ್ಯುಯಲ್-ಸಿಮ್ ಸ್ಲಾಟ್‌ಗಳನ್ನು ಸಹ ಹೊಂದಿದೆ. ಈ ಫೋನ್ ಅನ್ನು ಮೈಕ್ರೋ USB ಪೋರ್ಟ್ ಮೂಲಕ ಚಾರ್ಜಿಂಗ್ ಮಾಡಬಹುದಾಗಿದೆ. ಇನ್ನು ಈ ಫೀಚರ್‌ ಫೋನ್‌ ಅನ್ನು ನಿನ್ನೆಯಿಂದ ಪ್ರೇರಿತರಾಗಿ, ನಾಳೆಗಾಗಿ ನಿರ್ಮಿಸಲಾಗಿದೆ. ಈ ಫೋನ್‌ ಸ್ಫಟಿಕ-ಸ್ಪಷ್ಟ ಆಡಿಯೊ, ಬಿಗ್‌ ಸ್ಕ್ರೀನ್‌ ಮತ್ತು ಬಳಸಲು ಸುಲಭವಾದ ಇಂಟರ್ಫೇಸ್‌ ಅನ್ನು ನೀಡಲಿದೆ. ಅಲ್ಲದೆ ಟೆಕ್ಸ್ಟ್‌ ಮೆಸೇಜ್‌ ಕಳುಹಿಸುವುದು ಎಂದಿಗಿಂತಲೂ ಸುಲಭವಾಗಿದೆ.

ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ನೋಕಿಯಾ 8210 4G ಫೀಚರ್‌ ಫೋನ್‌ ಎಫ್‌ಎಂ ರೇಡಿಯೋವನ್ನು ಕೂಡ ಒಳಗೊಂಡಿದೆ. ಇದರಲ್ಲಿ ವೈರ್ಡ್ ಮತ್ತು ವಾಯರ್‌ಲೆಸ್ ಮೋಡ್ ಎರಡನ್ನೂ ಒಳಗೊಂಡಿರುವುದರಿಂದ ಎಫ್‌ಎಂ ರೇಡಿಯೋ ಕಾರ್ಯಕ್ರಮಗಳನ್ನು ಆಲಿಸುವುದು ಸುಲಭವಾಗಲಿದೆ. ಇದರಲ್ಲಿ ನಿಮ್ಮ ನೆಚ್ಚಿನ ಸ್ಪೋರ್ಟ್ಸ್‌, ಮ್ಯೂಸಿಕ್‌ ಮತ್ತು ಲೈವ್‌ಕಾಸ್ಟ್‌ಗಳನ್ನು ನೀವು ಮನೆಯಲ್ಲಿ ಅಥವಾ ಪ್ರಯಾಣಿಸುತ್ತಿರುವಾಗ ಆಲಿಸಬಹುದು. ಇದಲ್ಲದೆ ಈ ಫೀಚರ್‌ ಫೋನ್‌ ಕ್ಷಿಪ್ರ ಕನೆಕ್ಟಿವಿಟಿ ವೇಗವನ್ನು ಮತ್ತು ಉತ್ತಮ ಕರೆ ಗುಣಮಟ್ಟವನ್ನು ನೀಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ನೋಕಿಯಾ 8210 4G ಫೀಚರ್‌ ಫೋನ್‌ ಭಾರತದಲ್ಲಿ 3,999 ರೂ. ಬೆಲೆಯನ್ನು ಹೊಂದಿದೆ. ಈ ಫೋನ್‌ ಅನ್ನು ಸಿಂಗಲ್‌ ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಕೆಂಪು ಮತ್ತು ಗಾಢ ನೀಲಿ ಬಣ್ಣದ ಎರಡು ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಫೋನ್‌ ಇದೀಗ ಅಮೆಜಾನ್ ಇಂಡಿಯಾ ಮತ್ತು ನೋಕಿಯಾ ಇಂಡಿಯಾದ ಅಧಿಕೃತ ಅಂಗಡಿಯಲ್ಲಿ ಲಭ್ಯವಿದೆ.

ನೋಕಿಯಾ

ಇನ್ನು ನೋಕಿಯಾ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ನೋಕಿಯಾ C21 ಪ್ಲಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್‌ 6.5 ಇಂಚಿನ LCD ಡಿಸ್‌ಪ್ಲೇ ಅನ್ನು ಹೊಂದಿದೆ. ಇದು ಆಕ್ಟಾ ಕೋರ್ ಯುನಿಸಾಕ್ SC9863A ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಗೋ ಎಡಿಷನ್‌ ಓಎಸ್‌ ಸಪೋರ್ಟ್‌ ಪಡೆದುಕೊಂಡಿದೆ. ಇನ್ನು ನೋಕಿಯಾ C21 ಪ್ಲಸ್‌ ಸ್ಮಾರ್ಟ್‌ಫೋನ್‌ ವಾರ್ಮ್‌ ಗ್ರೇ ಹಾಗೂ ಡಾರ್ಕ್‌ ಗ್ಲೇ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

Best Mobiles in India

English summary
Nokia has introduced a new feature phone Nokia 8210 4G in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X