ಬರಲಿದೆ JBL ಆಡಿಯೋ ಟೆಕ್ನಾಲಜಿ ಬೆಂಬಲಿಸುವ ನೋಕಿಯಾದ 43 ಇಂಚಿನ ಸ್ಮಾರ್ಟ್‌ಟಿವಿ!

|

ಇತ್ತೀಚಿನ ದಿನಗಳಲ್ಲಿ ಟಿವಿ ಮಾರುಕಟ್ಟೆ ಸಾಕಷ್ಟು ವಿಸ್ತಾರವಾಗಿ ಬೆಳೆಯುತ್ತಿದೆ. ಅಷ್ಟೇ ಅಲ್ಲ ವಿಭಿನ್ನ ಂಆದರಿಯ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ ಸ್ಮಾರ್ಟ್‌ಟಿವಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಬಳಕೆದಾರರು ಕೂಡ ಸಾಕಷ್ಟು ಸ್ಮಾರ್ಟ್‌ಟಿವಿಗಳನ್ನೆ ಹೆಚ್ಚು ಹೆಚ್ಚು ಆಯ್ಕೆ ಮಾಡಿಕೊಳ್ಳುವತ್ತ ಮನಸ್ಸು ಮಾಡುತ್ತಿದ್ದಾರೆ. ಸದ್ಯ ಈಗಾಗ್ಲೆ ಹಲವು ಮಾದರಿಯ ಸ್ಮಾರ್ಟ್‌ಟಿವಿಗಳು ಲಬ್ಯವಿದ್ದು, ಹಲವು ಕಂಪೆನಿಗಳು ತಮ್ಮ ವೈವಿಧ್ಯಮಯ ಸ್ಮಾರ್ಟ್‌ಟಿವಿಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿವೆ. ಇವುಗಳಲ್ಲಿ ನೋಕಿಯಾ ಸಂಸ್ಥೆ ಕೂಡ ಸೇರಿದ್ದು ಭಿನ್ನ ಮಾದರಿಯ ಸ್ಮಾರ್ಟ್‌ಟಿವಿಗಳನ್ನ ಪರಿಚಯಿಸಿದೆ.

ಹೌದು

ಹೌದು, ಎವರ್‌ಗ್ರೀನ್‌ ಮೊಬೈಲ್‌ ಸಂಸ್ಥೆಯಾಗಿರುವ ನೋಕಿಯಾ ಕಂಪೆನಿ ಇದೀಗ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಟಿವಿಯನ್ನ ಮಾರುಕಟ್ಟೆಗೆ ಪರಿಚಯಿಸಲು ವೇದಿಕೆ ಸಿದ್ದಪಡಿಸಿಕೊಂಡಿದೆ. ಇದು ನೋಕಿಯಾದ 43 ಇಂಚಿನ ಸ್ಮಾರ್ಟ್ ಟಿವಿ ಆಗಿದ್ದು, JBL ಆಡಿಯೋ ಟೆಕ್ನಾಲಜಿಯನ್ನ ಒಳಗೊಂಡಿರಲಿದೆ ಎನ್ನಲಾಗ್ತಿದ್ದು. ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಆಗಲಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ ಈಗಾಗಲೇ ನೋಕಿಯಾ ಬ್ರ್ಯಾಮಡ್‌ ಜೊತೆ ಒಪ್ಪಂದ ಮಾಡಿಕೊಂಡಿರುವ ಫ್ಲಿಪ್‌ಕಾರ್ಟ್‌ನಲ್ಲಿ ಮೊದಲಿಗೆ ಬಿಡುಗಡೆ ಆಗಲಿದೆ ಎಂದು ಹೇಳಲಾಗ್ತಿದೆ. ಇನ್ನು ಈ ಸ್ಮಾರ್ಟ್‌ಟಿವಿಯ ವಿನ್ಯಾಸ ಹಾಗೂ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ನೋಡಿ.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿ 43ಇಂಚಿನ ಸ್ಕ್ರೀನ್‌ ಅನ್ನು ಹೊಂದಿರಲಿದೆ ಎನ್ನಲಾಗ್ತಿದ್ದು, ಹಾಗಂತ ನೋಕಿಯಾದ ಸ್ಮಾರ್ಟ್‌ಟಿವಿ ಇದೇ ಮೊದಲೇನಲ್ಲ. ಈಗಾಗಲೇ 55 ಇಂಚಿನ ನೋಕಿಯಾ ಟಿವಿ ಮಾರುಕಟ್ಟೆಯಲ್ಲಿ ಲಬ್ಯವಿದೆ. ಸದ್ಯ ಇದೀಗ ಬಿಡುಗಡೆಗೆ ಸಿದ್ದವಿರುವ 43 ಇಂಚಿನ ಸ್ಮಾರ್ಟ್‌ಟಿವಿ ಈ ಹಿಂದಿನ ಆವೃತ್ತಿಯ ಸ್ಮಾರ್ಟ್‌ಟಿವಿಯಂತೆಯೆ ಉತ್ತಮ ಅನುಭವ ನೀಡಲಿದೆ ಎನ್ನಲಾಗ್ತಿದೆ. ಇದಲ್ಲದೆ ಲಭ್ಯವಿರುವ ಮಾಹಿತಿ ಪ್ರಕಾರ ಈ ಸ್ಮಾರ್ಟ್ ಟಿವಿ ಈಗಾಗಲೇ ಲಭ್ಯವಿರುವ 55 ಇಂಚಿನ ಮಾದರಿಯಂತೆ ಪರದೆಯ ವಿನ್ಯಾಸ ಮತ್ತು ಸ್ಟ್ಯಾಂಡ್ ಅನ್ನು ಅನುಸರಿಸುತ್ತದೆ. ಜೊತೆಗೆ ಜೆಬಿಎಲ್ ಸೌಂಡ್‌ಬಾರ್ ಅನ್ನು ಒಳಗೊಂಡಿದೆ.

ಅಲ್ಲದೆ

ಅಲ್ಲದೆ ಈ ಸ್ಮಾರ್ಟ್‌ಟಿವಿಯಲ್ಲಿ "ಸೌಂಡ್ ಬೈ ಜೆಬಿಎಲ್" ಹೊರತುಪಡಿಸಿ ಇತರೆ ಯಾವುದೇ ವಿಶೇಷತೆಯನ್ನ ಇನ್ನು ಬಹಿರಂಗಗೊಳಿಸಿಲ್ಲವಾದರೂ 43 ಇಂಚಿನ ಮಾದರಿಯು ಫ್ಲಿಪ್‌ಕಾರ್ಟ್‌ನಲ್ಲಿ ಪ್ರಸ್ತುತ ರೂ. 41,999 ರೂ.ಗೆ ಲಭ್ಯವಾಗುವ ಸಾದ್ಯತೆ ಇದೆ. ಇನ್ನು 55 ಇಂಚಿನ ಮಾದರಿಯ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್ 9 ಬೆಂಬಲದೊಂದಿಗೆ ಕಾರ್ಯನಿರ್ವಹಿಸುವ 4 ಕೆ ಸ್ಮಾರ್ಟ್ ಟಿವಿ ಆಗಿದೆ. ಜೊತೆಗೆ ಎಲ್ಇಡಿ ಪ್ಯಾನಲ್‌ ಹೊಂದಿದ್ದು, 400 ನಿಟ್‌ಗಳ ಗರಿಷ್ಠ ಬ್ರೈಟ್‌ನೆಶ್‌ ಅನ್ನು ನೀಡಲಿದೆ. ಜೊತೆಗೆ ಗೂಗಲ್ ಪ್ಲೇ ಸ್ಟೋರ್ ಮತ್ತು ನೆಟ್‌ಫ್ಲಿಕ್ಸ್, ಯೂಟ್ಯೂಬ್, ಹಾಟ್‌ಸ್ಟಾರ್ ಮತ್ತು ಪ್ರೈಮ್ ವಿಡಿಯೋದಂತಹ ಅಪ್ಲಿಕೇಶನ್‌ಗಳಿಗೆ ಬೆಂಬಲವನ್ನು ಸಹ ನೀಡಲಿದೆ.

43

ಇನ್ನು 43 ಇಂಚಿನ ಸ್ಮಾರ್ಟ್‌ಟಿವಿ 3840x2160 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ 4K ಸ್ಕ್ರೀನ್‌ ಅನ್ನು ಹೊಂದಿರಲಿದೆ ಎನ್ನಲಾಗ್ತಿದೆ. ಜೊತೆಗೆ ಆಂಡ್ರಾಯ್ಡ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಸಹ ಹೇಳಲಾಗ್ತಿದೆ. ಅಲ್ಲದೆ ಡಿಟಿಎಸ್ ಟ್ರುಸರೌಂಡ್‌ಗೆ ಬೆಂಬಲ ನೀಡಲಿದೆಯಾ ಇಲ್ಲವೂ ತಿಳಿಯಬೇಕಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ ಮೂರು ಎಚ್‌ಡಿಎಂಐ ಪೋರ್ಟ್‌ಗಳನ್ನು ಹೊಂದರುವ ಸಾಧ್ಯತೆ ಇದ್ದು, ಯುಎಸ್‌ಬಿ 3.0 ಪೋರ್ಟ್ ಮತ್ತು ಯುಎಸ್‌ಬಿ 2.0 ಪೋರ್ಟ್ ಹಾಗೂ ಬ್ಲೂಟೂತ್ ವಿ 5.0 ಅನ್ನು ಬೆಂಬಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Best Mobiles in India

English summary
Nokia Smart TV With 43-Inch Screen, JBL Audio Technology Launching Soon in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X