ಭಾರತಕ್ಕೆ ಎಂಟ್ರಿ ಕೊಟ್ಟ ನಥಿಂಗ್ ಇಯರ್ ಸ್ಟಿಕ್ ಇಯರ್‌ಬಡ್ಸ್‌! ವಿನ್ಯಾಸ ಹೇಗಿದೆ ಗೊತ್ತಾ?

|

ಬಹುನಿರೀಕ್ಷಿತ ನಥಿಂಗ್‌ ಇಯರ್‌ ಸ್ಟಿಕ್‌ ಟ್ರೂ ವಾಯರ್‌ಲೆಸ್‌ ಇಯರ್‌ಬಡ್ಸ್‌ ಭಾರತದಲ್ಲಿ ಲಾಂಚ್‌ ಆಗಿದೆ. ನಥಿಂಗ್‌ ಫೋನ್‌ (1) ಮೂಲಕ ಸಂಚಲನ ಸೃಷ್ಟಿಸಿದ್ದ ನಥಿಂಗ್‌ ಕಂಪೆನಿ ನಥಿಂಗ್ ಇಯರ್ ಸ್ಟಿಕ್ ಅನ್ನು ಲಿಪ್‌ಸ್ಟಿಕ್‌ ಇನ್ಸ್‌ಪೈರ್ಡ್ ಚಾರ್ಜಿಂಗ್‌ ಕೇಸ್‌ ಒಳಗೊಂಡಿದೆ. ಇನ್ನು ನಥಿಂಗ್ ಇಯರ್ ಸ್ಟಿಕ್ ಇಯರ್‌ಬಡ್ಸ್‌ ಸಿಂಗಲ್‌ ಚಾರ್ಜ್‌ನಲ್ಲಿ 7 ಗಂಟೆಗಳ ಬ್ಯಾಟರಿ ಅವಧಿಯನ್ನು ಒದಗಿಸಲಿದೆ. ಇದಲ್ಲದೆ ನಥಿಂಗ್ ಇಯರ್ ಸ್ಟಿಕ್ ಕೇಸ್ 29 ಗಂಟೆಗಳ ಬ್ಯಾಟರಿ ಅವಧಿಯನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ.

ನಥಿಂಗ್‌

ಹೌದು, ನಥಿಂಗ್‌ ಕಂಪೆನಿ ಹೊಸ ನಥಿಂಗ್ ಇಯರ್ ಸ್ಟಿಕ್‌ ಇಯರ್‌ಬಡ್ಸ್‌ ಪರಿಚಯಿಸಿದೆ. ಇದು AAC ಮತ್ತು SBC ಆಡಿಯೊ ಕೊಡೆಕ್‌ಗಳಿಗೆ ಬೆಂಬಲವನ್ನು ನೀಡಲಿದೆ. ಜೊತೆಗೆ 12.6mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿವೆ. ಈ ಇಯರ್‌ಬಡ್‌ಗಳು ಪ್ರತಿಯೊಂದರಲ್ಲೂ ಮೂರು ಮೈಕ್ರೊಫೋನ್‌ಗಳನ್ನು ನೀಡಲಾಗಿದೆ. ಇನ್ನು ಈ ಇಯರ್‌ಬಡ್ಸ್‌ ಫ್ಲಿಪ್ ಓಪನಿಂಗ್‌ಗಿಂತ ಭಿನ್ನವಾಗಿ, ನಥಿಂಗ್ ಇಯರ್ ಸ್ಟಿಕ್ ಕೇಸ್ ಟ್ವಿಸ್ಟ್ ಓಪನಿಂಗ್‌ನೊಂದಿಗೆ ಬರುತ್ತದೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನಥಿಂಗ್ ಇಯರ್

ನಥಿಂಗ್ ಇಯರ್ ಸ್ಟಿಕ್‌ ಇಯರ್‌ಬಡ್ಸ್‌ ಹೊಸ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಫ್ಲಿಪ್ ಓಪನಿಂಗ್‌ಗಿಂತ ಭಿನ್ನವಾಗಿ, ನಥಿಂಗ್ ಇಯರ್ ಸ್ಟಿಕ್ ಕೇಸ್ ಟ್ವಿಸ್ಟ್ ಓಪನಿಂಗ್‌ನೊಂದಿಗೆ ಬರುತ್ತದೆ. ಈ ಇಯರ್‌ಬಡ್‌ಗಳು ಪ್ರತಿಯೊಂದರಲ್ಲೂ ಮೂರು ಮೈಕ್ರೋಫೋನ್‌ಗಳನ್ನು ಒಳಗೊಂಡಿವೆ. ಇದರಲ್ಲಿ ಒಂದು ಧ್ವನಿಯನ್ನು ಸೆರೆಹಿಡಿಯಲು, ಇನ್ನೊಂದು ಕರೆಗಳ ಸಮಯದಲ್ಲಿ ಬ್ಯಾಕ್‌ಗ್ರೌಂಡ್‌ ನಾಯ್ಸ್‌ ಕ್ಯಾನ್ಸಲ್‌ ಮಾಡಲಿದೆ. ಮೂರನೇಯದು ಇಯರ್‌ಬಡ್‌ನೊಳಗೆ ಇಯರ್‌ ಕ್ಯಾನಲ್‌ ಗಾತ್ರವನ್ನು ಅಳೆಯುವುದಕ್ಕೆ ಸೂಕ್ತವಾಗಿದೆ.

ಇಯರ್‌ಬಡ್ಸ್‌

ಇನ್ನು ಈ ಇಯರ್‌ಬಡ್ಸ್‌ನ ಮೈಕ್ರೋಫೋನ್‌ಗಳು ವಾಯ್ಸ್‌ ಕಾಲ್‌ ಸಮಯದಲ್ಲಿ ಗಾಳಿಯ ಶಬ್ದ ಮತ್ತು ಜನಸಂದಣಿಯ ಶಬ್ದವನ್ನು ಕೂಡ ಕೇಳದಂತೆ ಮಾಡಲಿದೆ ಎಂದು ನಥಿಂಗ್‌ ಕಂಪನಿ ಹೇಳಿಕೊಂಡಿದೆ. ಈ ಇಯರ್ (ಸ್ಟಿಕ್) "ಪ್ರೆಸ್ ಕಂಟ್ರೋಲ್" ಅನ್ನು ಒಳಗೊಂಡಿದ್ದು, ಒದ್ದೆ ಕೈಗಳಿಂದಲೂ ಕೂಡ ಕಾರ್ಯನಿರ್ವಹಿಸಲಿದೆ. ನಥಿಂಗ್ ಇಯರ್ ಸ್ಟಿಕ್ ಇಯರ್‌ಬಡ್‌ಗಳು 12.6mm ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿದ್ದು, ಧೂಳು, ನೀರು ಮತ್ತು ಬೆವರಿನಿಂದ ರಕ್ಷಿಸಲು IP54 ಪ್ರಮಾಣೀಕರಣವನ್ನು ಪಡೆದಿದೆ. ಈ ಇಯರ್‌ಬಡ್ಸ್‌ ಇನ್-ಇಯರ್ ಡಿಟೆಕ್ಷನ್ ಅನ್ನು ಒಳಗೊಂಡಿವೆ.

ನಥಿಂಗ್‌

ಇದಲ್ಲದೆ ನಥಿಂಗ್‌ ಇಯರ್ (ಸ್ಟಿಕ್) ಬಳಕೆದಾರರಿಗೆ 7 ಗಂಟೆಗಳ ಪ್ಲೇಬ್ಯಾಕ್‌ ಟೈಂ ನೀಡಲಿದೆ. ಚಾರ್ಜಿಂಗ್‌ ಕೇಸ್‌ನಲ್ಲಿ 29 ಗಂಟೆಗಳ ಆಲಿಸುವ ಸಮಯವನ್ನು ನೀಡಲಿದ್ದು, 12 ಗಂಟೆಗಳವರೆಗೆ ಟಾಕ್ ಟೈಮ್ ಅನ್ನು ಒದಗಿಸುತ್ತದೆ. ಜೊತೆಗೆ ಚಾರ್ಜಿಂಗ್ ಕೇಸ್ USB ಟೈಪ್-C ಕೇಬಲ್‌ನೊಂದಿಗೆ ಬರಲಿದೆ. ಇದು AAC ಮತ್ತು SBC ಆಡಿಯೊ ಕೊಡೆಕ್‌ಗಳಿಗೆ ಬೆಂಬಲವನ್ನು ನೀಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ನಥಿಂಗ್‌ ಇಯರ್ (ಸ್ಟಿಕ್) ಭಾರತದಲ್ಲಿ 8,499ರೂ. ಬೆಲೆಯನ್ನು ಪಡೆದಿದೆ. ಇದು ನವೆಂಬರ್ 4 ರಿಂದ ಭಾರತದಲ್ಲಿ ತನ್ನ ಮೊದಲ ಸೇಲ್‌ ಅನ್ನು ಪ್ರಾರಂಭಿಸಲಿದೆ. ಈ ಇಯರ್‌ಬಡ್ಸ್‌ ಪ್ರಸ್ತುತ ಬಿಳಿ ಬಣ್ಣದ ರೂಪಾಂತರದಲ್ಲಿ ಮಾತ್ರ ಲಭ್ಯವಿವೆ. ಇನ್ನು ಈ ಇಯರ್‌ಬಡ್ಸ್‌ ಭಾರತ ಮಾತ್ರವಲ್ಲದೆ ಯುಎಸ್, ಯುಕೆ, ಯುರೋಪ್ ಮತ್ತು ಏಷ್ಯಾ ಪೆಸಿಫಿಕ್ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿಯೂ ಕೂಡ ಬಿಡುಗಡೆಯಾಗಿದೆ. ಇದು ಯುರೋಪ್‌ ನಲ್ಲಿ EUR 119 (ಸುಮಾರು 9,800ರೂ)ಬೆಲೆ ಪಡೆದಿದೆ. ಆದರೆ US ನಲ್ಲಿ ಇದರ ಬೆಲೆಯನ್ನು $99 (ಸುಮಾರು 8,100ರೂ)ಗಳಿಗೆ ನಿಗದಿಪಡಿಸಲಾಗಿದೆ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಯಾವಾಗ ಸೇಲ್‌ ಅಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

Best Mobiles in India

Read more about:
English summary
Nothing Ear Stick Earbuds Launched in India: Details

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X