ಫ್ಲಿಪ್‌ಕಾರ್ಟ್‌ನಲ್ಲಿ ನಥಿಂಗ್‌ ಫೋನ್‌ (1) ಅರ್ಧಬೆಲೆಗೆ ಲಭ್ಯ! ಷರತ್ತುಗಳು ಅನ್ವಯ!

|

ವಿಶೇಷ ವಿನ್ಯಾಸದ ಮೂಲಕ ಗಮನಸೆಳೆದಿರುವ ನಥಿಂಗ್‌ ಫೋನ್‌ (1) ಇತ್ತೀಚಿಗೆ ಬೆಲೆ ಇಳಿಕೆ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡ್ತಿದೆ. ಇದೀಗ ಸ್ಮಾರ್ಟ್‌ಫೋನ್‌ ಪ್ರಿಯರು ನಥಿಂಗ್‌ ಫೋನ್‌ (1) ಅನ್ನು ಅದರ ಮೂಲಬೆಲೆಗಿಂತ ಅರ್ಧಬೆಲೆಯಲ್ಲಿ ಖರೀದಿಸುವ ಅವಕಾಶವಿದೆ. ಈ ಅವಕಾಶ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಲಭ್ಯವಿದ್ದು, ಇದಕ್ಕಾಗಿ ಕೆಲವು ಕ್ರಮಗಳನ್ನು ಅನುಸರಿಸಬೇಕಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿನ ರಿಯಾಯಿತಿ ಮೂಲಕ ಈ ಫೋನ್‌ ಅನ್ನು ನೀವು ನಿರೀಕ್ಷಿಸಿದ ಬೆಲೆಗೆ ಖರೀದಿಸಬಹುದಾಗಿದೆ.

ನಥಿಂಗ್‌

ಹೌದು, ನಥಿಂಗ್‌ ಫೋನ್‌ (1) ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ರಿಯಾಯಿತಿ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ 1,000ರೂ.ಗಳ ಫ್ಲಾಟ್‌ ರಿಯಾಯಿತಿ ಪಡೆದುಕೊಂಡಿದ್ದು, 32,999 ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಇದಲ್ಲದೆ ಬ್ಯಾಂಕ್‌ ಆಫರ್‌, ಕ್ರೆಡಿಟ್‌ ಕಾರ್ಡ್‌, ಎಕ್ಸ್‌ಚೇಂಜ್‌ ಆಫರ್‌ ಎಲ್ಲವನ್ನೂ ಸೇರಿಸಿ ಇದನ್ನು ಮೂಲಬೆಲೆಗಿಂತ ಅರ್ಧಬೆಲೆಗೆ ಖರೀದಿಸಬಹುದಾಗಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ನಲ್ಲಿ ನಥಿಂಗ್‌ ಫೋನ್‌ (1)ಅನ್ನು ಅತಿ ಕಡಿಮೆ ಬೆಲೆಗೆ ಖರೀದಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅತಿ ಕಡಿಮೆ ಬೆಲೆಗೆ ನಥಿಂಗ್‌ ಫೋನ್‌ ಖರೀದಿಸುವುದು ಹೇಗೆ?

ಅತಿ ಕಡಿಮೆ ಬೆಲೆಗೆ ನಥಿಂಗ್‌ ಫೋನ್‌ ಖರೀದಿಸುವುದು ಹೇಗೆ?

ಫ್ಲಿಪ್‌ಕಾರ್ಟ್‌ ನಥಿಂಗ್ ಫೋನ್ (1) ಮೇಲೆ ವಿಶೇಷ ಡಿಸ್ಕೌಂಟ್‌ಗಳನ್ನು ನೀಡುತ್ತಿದೆ. ಅದರಂತೆ ಈ ಫೋನ್‌ ಫ್ಲಾಟ್ 1,000ರೂ. ರಿಯಾಯಿತಿ ನೀಡುತ್ತಿದೆ. ಆದರಿಂದ ಈ ಫೋನ್‌ ನಿಮಗೆ 32,999ರೂ. ಆರಂಭಿಕ ಬೆಲೆಯಲ್ಲಿ ದೊರೆಯಲಿದೆ. ಇದರ ಜೊತೆಗೆ ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ಹೆಚ್ಚುವರಿ 5% ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದಲ್ಲದೆ, ತಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಎಕ್ಸ್‌ಚೇಂಜ್‌ ಮಾಡಿಕೊಂಡರೆ 17,500 ರೂ.ಗಳವರೆಗೆ (ಫೋನ್‌ಗಳ ಗುಣಮಟ್ಟದ ಮೇಲೆ) ರಿಯಾಯಿತಿ ಪಡೆಯಬಹುದು. ಇದರ ಪರಿಣಾಮ ಈ ಸ್ಮಾರ್ಟ್‌ಫೋನ್‌ ಮೇಲೆ ಸುಮಾರು 20,000 ರೂ ವರೆಗೆ ಬೆಲೆ ಕಡಿಮೆ ಆಗಲಿದೆ.

ಫೀಚರ್ಸ್‌ ಹೇಗಿದೆ?

ಫೀಚರ್ಸ್‌ ಹೇಗಿದೆ?

ನಥಿಂಗ್ ಫೋನ್ (1) 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ HDR10+ ಬೆಂಬಲ, 402 ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 5 ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಇದಲ್ಲದೆ ಹ್ಯಾಪ್ಟಿಕ್ ಟಚ್ ಮೋಟರ್‌ಗಳನ್ನು ಕೂಡ ಒಳಗೊಂಡಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಡ್ಯುಯಲ್‌ ಕ್ಯಾಮೆರಾ

ಡ್ಯುಯಲ್‌ ಕ್ಯಾಮೆರಾ

ನಥಿಂಗ್ ಫೋನ್ (1) ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮೊದಲನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೋನಿ IMX471 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಪನೋರಮಾ ನೈಟ್ ಮೋಡ್, ಪೋರ್ಟ್ರೇಟ್ ಮೋಡ್, ಸೀನ್ ಡಿಟೆಕ್ಷನ್, ಎಕ್ಸ್‌ಟ್ರೀಮ್ ನೈಟ್ ಮೋಡ್ ಮತ್ತು ಎಕ್ಸ್‌ಪರ್ಟ್ ಮೋಡ್ ಅನ್ನು ಹೊಂದಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಏನಿದೆ?

ಬ್ಯಾಟರಿ ಬ್ಯಾಕ್‌ಅಪ್‌ ಏನಿದೆ?

ನಥಿಂಗ್ ಫೋನ್ (1) ಸ್ಮಾರ್ಟ್‌ಫೋನ್‌ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೈರ್ಡ್ ಚಾರ್ಜಿಂಗ್, 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್‌ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, Wi-Fi 6 ಡೈರೆಕ್ಟ್, ಬ್ಲೂಟೂತ್ v5.2, NFC, GPS/A-GPS, ಗ್ಲೋನಾಸ್‌ ಮತ್ತು USB ಟೈಪ್-ಸಿ ಪೋರ್ಟ್ ಬೆಂಬಲಿಸಲಿದೆ.

Best Mobiles in India

English summary
Nothing phone (1) available at less than half price in flipkart

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X